ವಿದ್ಯಾಶಾರದೆ ಕೋಚಿಂಗ್ GPSTR ಪರೀಕ್ಷೆಗೆ  ಸಂವಿಧಾನದ ವಿವರಣಾತ್ಮಕ ಪ್ರಶ್ನೆ

ವಿದ್ಯಾಶಾರದೆ ಕೋಚಿಂಗ್ GPSTR ಪರೀಕ್ಷೆಗೆ ಸಂವಿಧಾನದ ವಿವರಣಾತ್ಮಕ ಪ್ರಶ್ನೆ

Assessment

Quiz

Social Studies

University - Professional Development

Easy

Created by

Ravindra Lukk

Used 3+ times

FREE Resource

Student preview

quiz-placeholder

5 questions

Show all answers

1.

OPEN ENDED QUESTION

5 mins • 1 pt

ಲೋಕಸಭೆಯ ಸಭಾಪತಿಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ತಿಳಿಸಿ

Evaluate responses using AI:

OFF

Answer explanation

1) ಸದನದಲ್ಲಿ ಚರ್ಚಿಸಬೇಕಾದ ವಿಷಯಗಳ ನಿರ್ಧರಿಸುವರು

2) ಲೋಕಸಭೆಯ ಅಧಿವೇಶನಗಳ ಅಧ್ಯಕ್ಷತೆ ವಹಿಸುವರು

3) ಯಾವುದಾದರೂ ಮಸೂದೆಯು ಹಣಕಾಸಿನ ಮಸೂದೆ ಹೌದು ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವರು

4) ಸದನದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವರು

5)ಸದಸ್ಯರು ಸ್ಪೀಕರ್ ಅವರ ತೀರ್ಮಾನದ ಮೇಲೆ ಅನುಮತಿ ಪಡೆದು ಪ್ರಶ್ನೆಗಳನ್ನು ನಿರ್ಣಯಗಳನ್ನು ಹಾಗೂ ಮಸೂದೆಗಳನ್ನು ಮಂಡಿಸುವರು

2.

OPEN ENDED QUESTION

5 mins • 1 pt

ಸಂವಿಧಾನದ 52 ನೇ ತಿದ್ದುಪಡಿ ಕಾಯ್ದೆಯ ಪ್ರಕಾರ ಜಾರಿಗೆ ತಂದ ಪಕ್ಷಾಂತರ ನಿಷೇಧ ಕಾಯ್ದೆ ಕುರಿತು ಬರೆಯಿರಿ

Evaluate responses using AI:

OFF

Answer explanation

1) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಾರ್ಚ್ 1 1985 ರಂದು ಜಾರಿಗೆ ತರಲಾಯಿತು

2) 2003ರಲ್ಲಿ ಈ ಕಾಯ್ದೆಗೆ 91ನೇ ತಿದ್ದುಪಡಿಯ ಮೂಲಕ ಅನೇಕ ನಿಯಮಗಳನ್ನು ಸೇರಿಸಲಾಯಿತು

3) ಸಂಸತ್ತು ಶಾಸನಸಭೆಯ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಯಾವುದೇ ಸದನದ ಸದಸ್ಯರು ಈ ಕೆಳಕಂಡ ಕಾರಣಗಳಿಂದ ಅನರ್ಹಗೊಳ್ಳಬಹುದು--

ಅ) ಒಂದು ಪಕ್ಷದಿಂದ ಆಯ್ಕೆಯಾದ ಸದಸ್ಯರು ಬೇರೆ ಪಕ್ಷವನ್ನು ಸೇರಿದರೆ

ಆ)ನಾಮಕರಣಗೊಂಡ ಸದಸ್ಯರ ಆರು ತಿಂಗಳ ನಂತರ ಯಾವುದಾದರೂ ಪಕ್ಷವನ್ನು ಸೇರಿದರೆ ಅವರ ಸದಸ್ಯತ್ವವನ್ನು ಅನೂರ್ಜಿತಗೊಳಿಸಬಹುದು

ಇ) ಒಂದು ವೇಳೆ ಒಂದು ಪಕ್ಷದ 2/3 ರಷ್ಟು ಸದಸ್ಯರು ಪಕ್ಷ ತ್ಯಜಿಸಿದರೆ ಅಥವಾ ಮತ್ತೊಂದು ಪಕ್ಷದೊಂದಿಗೆ ವಿಲೀನಕ್ಕೆ ಸಮ್ಮತಿಸಿದರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ

3.

OPEN ENDED QUESTION

5 mins • 1 pt

ರಾಷ್ಟ್ರಪತಿಗಳು ಘೋಷಿಸುವ 3 ರೀತಿಯ ತುರ್ತು ಪರಿಸ್ಥಿತಿಗಳ ಬಗ್ಗೆ ಬರೆಯಿರಿ

Evaluate responses using AI:

OFF

Answer explanation

ಭಾರತ ಸಂವಿಧಾನದಲ್ಲಿ ತಿಳಿಸಿದಂತೆ ರಾಷ್ಟ್ರಪತಿಗಳು ಮೂರು ರೀತಿಯ ತುರ್ತು ಪರಿಸ್ಥಿತಿಗಳನ್ನು ಘೋಷಿಸಬಹುದು

1)352ರ ಪ್ರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ--ರಾಷ್ಟ್ರಕ್ಕೆ ಬಾಹ್ಯ ಅಥವಾ ಆಂತರಿಕ ಗಂಡಾಂತರದ ಒದಗಿದಾಗ ಅಂತಹ ಸಂದರ್ಭದಲ್ಲಿ ಈ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು

2)356ರ ರಾಜ್ಯ ತುರ್ತು ಪರಿಸ್ಥಿತಿ--ಯಾವುದೇ ರಾಜ್ಯದ ಆಡಳಿತ ಯಂತ್ರವು ಕುಸಿದು ಬಿದ್ದಾಗ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ ವಿಧಾನಸಭೆಯನ್ನು ವಿಸರ್ಜಿಸಿ ಈ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು. ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳ ಪರವಾಗಿ ಅಧಿಕಾರ ನಿರ್ವಹಿಸುವರು

3)360ರ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ--ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು ಇಲ್ಲಿಯವರೆಗೂ ಒಂದು ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲೊ

4.

OPEN ENDED QUESTION

5 mins • 1 pt

ಭಾರತ ಸಂವಿಧಾನದಲ್ಲಿ ನೀಡಲಾಗಿರುವ 11 ಮೂಲಭೂತ ಕರ್ತವ್ಯಗಳನ್ನು ತಿಳಿಸಿ

Evaluate responses using AI:

OFF

Answer explanation

ಭಾರತ ಸಂವಿಧಾನ ರಚನೆಯಾದಾಗ ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಇರಲಿಲ್ಲ. 1976 ರಲ್ಲಿ 42ನೇ ತಿದ್ದುಪಡಿ ಪ್ರಕಾರ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. 2002ರಲ್ಲಿ 86ನೇ ತಿದ್ದುಪಡಿ ಕಾಯ್ದೆ ಪ್ರಕಾರ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಯಿತು

1)ಸಂವಿಧಾನವನ್ನು ಪಾಲಿಸಬೇಕು. ಅದರ ಆದರ್ಶಗಳನ್ನು, ಸಂಸ್ಥೆಗಳನ್ನು ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಮುದ್ರೆಗಳನ್ನು ಗೌರವಿಸಬೇಕು

2) ರಾಷ್ಟ್ರ ರಕ್ಷಣೆಗೆ ಪ್ರತಿಯೊಬ್ಬರು ಸದಾ ಸಿದ್ಧರಾಗಿರಬೇಕು

3) ಭಾರತದ ಪರಮಾಧಿಕಾರ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವುದು

4) ನಮ್ಮ ಸಮ್ಮಿಶ್ರ ಸಂಸ್ಕೃತಿಯ, ಹೆಮ್ಮೆಯ ಪರಂಪರೆಯನ್ನು ಗೌರವಿಸಿ ಕಾಪಾಡುವುದು

5) ಸಾರ್ವಜನಿಕ ಆಸ್ತಿಪಾಸ್ತಿಗಳು ರಕ್ಷಿಸಬೇಕು ಹಾಗೂ ಹಿಂಸಾಚಾರವನ್ನು ತ್ಯಜಿಸಬೇಕು

6) ವೈಜ್ಞಾನಿಕ ಮನೋಭಾವನೆ, ಮಾನವೀಯತೆ ಹಾಗೂ ಸುಧಾರಣೆಯ ದೃಷ್ಟಿಯನ್ನು ವೃದ್ಧಿಸಿಕೊಳ್ಳಬೇಕು

7) ಅರಣ್ಯಗಳು ವನ್ಯಜೀವಿಗಳು ನದಿ ಸರೋವರಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕು

8)ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು

9)ತಂದೆ-ತಾಯಿಗಳು ಅಥವಾ ಪೋಷಕರು 6ರಿಂದ 14 ವರ್ಷದವರೆಗಿನ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಬೇಕು

5.

OPEN ENDED QUESTION

5 mins • 1 pt

ರಾಜ್ಯಸಭೆಯ ರಚನೆ ಹಾಗೂ ಅದರ ಸದಸ್ಯರ ಆಯ್ಕೆಯನ್ನು ಕುರಿತು ಬರೆಯಿರಿ

Evaluate responses using AI:

OFF

Answer explanation

# ಸಂವಿಧಾನದ 80 ನೇ ವಿಧಿಯು ರಾಜ್ಯಸಭೆಯ ರಚನೆಯ ಬಗ್ಗೆ ವಿವರಿಸುತ್ತದೆ. ರಾಜ್ಯಸಭೆಯನ್ನು ಮೇಲ್ಮನೆ ಹಾಗೂ ಹಿರಿಯರ ಸದನ ಎಂದು ಕರೆಯುತ್ತಾರೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ 2 250. ಇವರಲ್ಲಿ 225 ಸದಸ್ಯರನ್ನು ಆಯ ರಾಜ್ಯಗಳಿಂದ ಹಾಗೂ 8 ಸದಸ್ಯರನ್ನು ಕೆಲವು ಕೇಂದ್ರಾಡಳಿತ ಪ್ರದೇಶಗಳಿಂದ ಪರೋಕ್ಷ ಮತದಾನದ ಮೂಲಕ ಚುನಾಯಿಸಲಾಗುತ್ತದೆ. 12 ದಿನ ಸದಸ್ಯರನ್ನು ರಾಷ್ಟ್ರಪತಿಗಳು ವಿವಿಧ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ನಾಮಕರಣ ಮಾಡುತ್ತಾರೆ.

# ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ ಆರು ವರ್ಷಗಳಾಗಿದ್ದು, ಇವರಲ್ಲಿ ರಾಜ್ಯ ಸಭೆಯ 1/3 ರಷ್ಟು ಸದಸ್ಯರು ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಇದು ಶಾಶ್ವತ ಸಿದ್ಧವಾಗಿದ್ದು, ವಿಸರ್ಜನೆಗೊಳ್ಳುವುದಿಲ್ಲ. ಉಪರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಪತಿಒಗಳಾಗಿ ಕಾರ್ಯನಿರ್ವಹಿಸುತ್ತಾರೆ