wayground logo

Free Printable Worksheets

Font size

S
M
L
XL
Worksheets

ಕವಿ ಪರಿಚಯ

Total questions: 40

Worksheet time: 11mins

Name
Class
Date
1.

ಈ ಕೆಳಗಿನವುಗಳಲ್ಲಿ ಆದೇಶ ಸಂಧಿಗೆ ಸೂಕ್ತ ಉದಾಹರಣೆಯಾಗದ ಪದ ಇದಾಗಿದೆ .

a)

ಧೃತಿಗೆಟ್ಟು

b)

ಮೆಲ್ವಾತು

c)

ನಡೆವೆಣ

d)

ಭೇದವಿಲ್ಲ

2.

ಇಮ್ಮಾವು ಪದವನ್ನು ವಿಗ್ರಹವಾಕ್ಯ ಮಾಡಿದಾಗ ಆಗುವ ಸರಿಯಾದ ರೂಪ ಇದಾಗಿದೆ .

a)

ಎರಡು + ಮಾವು

b)

ಇನಿತು + ಮಾವು

c)

ಇನಿದು + ಮಾವು

d)

ಇನಿಯನ + ಮಾವು

3.

ಉರ್ದು ಭಾಷೆಯಿಂದ ಕನ್ನಡ ಭಾಷೆಗೆ ಬಂದಿರುವ ಪದ ಇದಾಗಿದೆ

a)

ತರಬೇತು

b)

ತಕರಾರು

c)

ತಾರೀಖು

d)

ತಂಬಾಕು

4.

ಚಂದ್ಯಾನಾಯ್ಕನು ರಸ್ತೆಯ ಬದಿಯಲ್ಲಿ ಮಾರುತ್ತಿದ್ದ ಪಾನಿಪುರಿಯನ್ನು ತಿಂದನು. ಇಲ್ಲಿ ಪಾನಿಪುರಿ ಎಂಬ ಪದ ಈ ವ್ಯಾಕರಣದ ಅಂಶವಾಗಿದೆ .

a)

ದ್ವಿರುಕ್ತಿ

b)

ಜೋಡು ನುಡಿ

c)

ಅನುಕರಣ ವ್ಯಯ

d)

ಪರಿಮಾಣ ವಾಚಕ

5.

ಪಿ ಲಂಕೇಶ್ ಅವರು ರಚಿಸಿರುವ ಮುಸ್ಸಂಜೆಯ ಕಥಾ ಪ್ರಸಂಗ ಎಂಬುದು ಈ ಕನ್ನಡದ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ಕಾದಂಬರಿ

b)

ಕಥಾ ಸಂಗ್ರಹ

c)

ಅಂಕಣ ಬರಹ

d)

ಆತ್ಮ ಕಥೆ

6.

ಈ ಕೆಳಗಿನವುಗಳಲ್ಲಿ ರಗಳೆಯ ಸಾಮಾನ್ಯ ಲಕ್ಷಣ ಇದು ಅಲ್ಲ .

a)

ರಗಳೆಯೂ ಬಹು ಪಾದಗಳುಳ್ಳ ಪದ್ಯವಾಗಿದೆ

b)

ರಗಳೆಯು ಅಂಶಗಣ ಛಂದಸಿಗೆ ಸೇರಿದೆ

c)

ರಗಳೆಯ ಎಲ್ಲಾ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಸಮಾನವಾಗಿರುತ್ತವೆ

d)

ರಗಳೆಯಲ್ಲಿ ಎರಡೆರಡು ಪಾದಗಳಿಗೆ ಪ್ರಾಸಾಕ್ಷರ ವಿರುತ್ತದೆ

7.

ಮಾಡು ಧಾತುವಿನ ಸಂಭಾವನಾರ್ಥಕ ಕ್ರಿಯಾರೂಪದ ಬಹುವಚನ ರೂಪವಿದು .

a)

ಮಾಡಿಯಾನು

b)

ಮಾಡನು

c)

ಮಾಡಾರು

d)

ಮಾಡಿಯಾರು

8.

ಪ್ರತಿ ಪಾದದ ಒಂದೆರಡನೆಯ ಸ್ವರಗಳ ಪ್ರಾಸಾಕ್ಷರದ ಹಿಂದೆ ವಿಸರ್ಗ ವಿದ್ದರೆ ಅದು ಯಾವ ಪ್ರಾಸವಾಗುತ್ತದೆ ?

a)

ಸಿಂಹ ಪ್ರಾಸ

b)

ಅಜಪ್ರಾಸ

c)

ಗಜ ಪ್ರಾಸ

d)

ಹಯ ಪ್ರಾಸ

9.

ಟರ್ಕಿ ದೇಶದಿಂದ "ಡಾಟರ್ ಆಫ್ ನೈಲ್" ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಸಿದ್ಧ ಮಹಿಳಾ ಸಾಹಿತಿ ಯಾರು ?

a)

ನೇಮಿಚಂದ್ರ

b)

ಕೆ. ನೀಲಾ

c)

ಇಂದುಮತಿ ಲಮಾಣಿ

d)

ಜಯಮಾಲಾ

10.

ಕೆಎಸ್ ನರಸಿಂಹಸ್ವಾಮಿ ಯವರ ಯಾವ ಕವನ ಸಂಕಲನಕ್ಕೆ ಪಂಪ ಪ್ರಶಸ್ತಿ ಲಭಿಸಿದೆ ?

a)

ಮೈಸೂರು ಮಲ್ಲಿಗೆ

b)

ಅಂಜುಮಲ್ಲಿಗೆ

c)

ದುಂಡು ಮಲ್ಲಿಗೆ

d)

ತೆರೆದ ಬಾಗಿಲು

11.

ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಯಾರು ?

a)

ಆದಿ ಕವಿ ಪಂಪ

b)

ನಯಸೇನ

c)

ಹರಿಹರ

d)

ಗೋವಿಂದ ಪೈ

12.

ಈ ಕೆಳಗಿನವುಗಳಲ್ಲಿ ಕನಕದಾಸರು ರಚಿಸದ ಕೃತಿ ಯಾವುದು ?

a)

ರಾಮಧ್ಯಾನ ಚರಿತೆ

b)

ಹರಿಭಕ್ತಿ ಸಾರ

c)

ಮೋಹನ ತರಂಗಿಣಿ

d)

ನಳ ಚರಿತ್ರೆ

13.

ದಾಸ ಪರಂಪರೆಯಲ್ಲಿ ಪ್ರಸಿದ್ಧರಾದ ವಿಜಯದಾಸರು ಜನಿಸಿದ ಸ್ಥಳ ಯಾವುದು ?

a)

ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮ

b)

ದೇವದುರ್ಗ ತಾಲ್ಲೂಕಿನ ಮೊಸರು ಕಲ್ಲು

c)

ಹಾವೇರಿ ಜಿಲ್ಲೆಯ ಬಾಡ ಗ್ರಾಮ

d)

ಮಾನ್ವಿ ತಾಲ್ಲೂಕಿನ ಚೀಕಲಪರಿವಿ

14.

ನವೋದಯ ಮತ್ತು ನವ್ಯ ಮಾರ್ಗಗಳ ಸಮನ್ವಯ ಸಾಧಿಸಿದ ಕವಿ ಎಂದು ಪ್ರಸಿದ್ಧರಾದವರು ಇವರು .

a)

ಚೆನ್ನವೀರ ಕಣವಿ

b)

ವಿಕೃ ಗೋಕಾಕ್

c)

ದಿನಕರ ದೇಸಾಯಿ

d)

ಕುವೆಂಪು

15.

ಅಲ್ಲಮನ ಪ್ರಕಾರ ತ್ರೇತಾಯುಗದಲ್ಲಿ ಶ್ರೀ ಗುರುವು ಶಿಷ್ಯನಿಗೆ ಬುದ್ಧಿಯನ್ನು ಹೀಗೆ ಕಲಿಸುತ್ತಿದ್ದರು .

a)

ಬಡಿದು

b)

ಬೈದು

c)

ಝಂಕಿಸಿ

d)

ವಂದಿಸಿ

16.

ಶ್ರೀರಾಮಾಶ್ವಮೇಧಂ ಎಂಬ ಕೃತಿಯನ್ನು ರಚಿಸಿದ ಮುದ್ದಣನ ಮಡದಿಯ ನಿಜವಾದ ಹೆಸರೇನು ?

a)

ಮನೋರಮೆ

b)

ಕೃಷ್ಣಾಬಾಯಿ

c)

ಸರೋಜಾಬಾಯಿ

d)

ಕಮಲಾಬಾಯಿ

17.

ಡಿವಿಜಿಯವರ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಎಂಬ ಮಂಕುತಿಮ್ಮನ ಕಗ್ಗದ ಸರಿಯಾದ ಸಾಲನ್ನು ಗುರುತಿಸಿ .

a)

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ

b)

ಮಳೆಯ ವಿಧಿ ಸುರಿಯೆ ಕಲ್ಲಾಗು ಕಷ್ಟಗಳ

c)

ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಯೆ

d)

ಕಷ್ಟಗಳ ಕಲ್ಲಾಗು ಮಳೆಯ ವಿಧಿ ಸುರಿಯೆ

18.

ಕಯ್ಯಾರ ಕಿಞ್ಣಣ್ಣ ರೈ ಅವರ ಆತ್ಮಚರಿತ್ರೆ ಯಾವುದು ?

a)

ಹೋರಾಟದ ಹಾದಿ

b)

ಮತ್ತೊಬ್ಬನ ಆತ್ಮಚರಿತ್ರೆ

c)

ದುಡಿತವೇ ನನ್ನ ದೇವರು

d)

ಹುಳಿ ಮಾವಿನ ಮರ

19.

ಡಾ. ಎಲ್ ಬಸವರಾಜು ಅವರ ಪೂರ್ಣ ಹೆಸರೇನು ?

a)

ಲೋಕನಾಥ ಬಸವರಾಜು

b)

ಲಕ್ಷ್ಮಣಪ್ಪ ಬಸವರಾಜು

c)

ಲಿಂಗಪ್ಪ ಬಸವರಾಜು

d)

ಲಿಂಗಸೂರು ಬಸವರಾಜು

20.

ಭಾರತ ಸರ್ಕಾರವು ರಾಧಾಕೃಷ್ಣನ್ಅವರ ಜನ್ಮದಿನವನ್ನು ಯಾವ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನವೆಂದು ಘೋಷಿಸಿ ಆಚರಿಸಿಕೊಂಡು ಬರುತ್ತಿದೆ ?

a)

೧೯೬೫

b)

೧೯೬೨

c)

೧೯೭೫

d)

೧೯೫೭

21.

ಅಣ್ವಸ್ತ್ರ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ. ?

a)

ಯಣ್ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಲೋಪ ಸಂಧಿ

22.

Memories of my working life ಎಂಬ ಕೃತಿಯನ್ನು "ನನ್ನ ವೃತ್ತಿ ಜೀವನದ ನೆನಪುಗಳು" ಎಂದು ಕನ್ನಡಕ್ಕೆ ಅನುವಾದಿಸಿದವರು ಯಾರು ?

a)

ಗೋಪಾಲಕೃಷ್ಣ ಉಡುಪ

b)

ಗಜಾನನ ಶರ್ಮ

c)

ಸರ್ ಎಂ ವಿಶ್ವೇಶ್ವರಯ್ಯ

d)

ಡಿ ವಿ ಗುಂಡಪ್ಪ

23.

ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನಮಾಡುವವರು

a)

ಭಾರತ ಸರ್ಕಾರ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಸಂಸ್ಥೆ

c)

ಸಾಹು ಶಾಂತಿ ಪ್ರಸಾದ್ ಜೈನ್ ಸಂಸ್ಥೆ

d)

ಭಾರತೀಯ ಸಾಹಿತ್ಯ ಪರಿಷತ್

24.

ಬೇಂದ್ರೆಯವರು ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಕವನವನ್ನು 1929 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಿದರು ?

a)

ಧಾರವಾಡ

b)

ಬೆಳಗಾವಿ

c)

ಶಿವಮೊಗ್ಗ

d)

ಬಿಜಾಪುರ

25.

ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಅದು ಈ ಅಲಂಕಾರ ಎನಿಸುವುದು.

a)

ದೃಷ್ಟಾಂತ ಅಲಂಕಾರ

b)

ಉತ್ಪ್ರೇಕ್ಷಾ ಅಲಂಕಾರ

c)

ಶ್ಲೇಷಾಲಂಕಾರ

d)

ಅರ್ಥಾಂತರಣ್ಯಸಾಲಂಕಾರ

26.

"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೆ" ಎಂದ ಸಾಹಿತಿ ಯಾರು ?

a)

ಶೇಕ್ಸ್ ಪಿಯರ್

b)

ವಿಲಿಯಂ ವರ್ಡ್ಸ್ವರ್ಥ್

c)

ಬೆಕನ್

d)

ಗೋಲ್ಡ್ ಸ್ಮಿತ್

27.

ಖ್ಯಾತ ಕರ್ನಾಟಕ ವೃತ್ತಗಳೊಂದಾದ ಮತ್ತೆಭ ವಿಕ್ರಿಡಿತ ವೃತ್ತದಲ್ಲಿ ಬರುವ ಅಕ್ಷರ ಗಣಗಳು ಇವಾಗಿವೆ .

a)

ಸ ಭ ರ ನ ಮ ಯ ಲ ಗು

b)

ಮ ರ ಭ ನ ಯ ಯ ಯ

c)

ನ ಜ ಭ ಜ ಜ ಜ ರ

d)

ಭ ರ ನ ಭ ಭ ರ ಲ ಗು

28.

ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರಿನ ದಿವಾನರಾಗಿದ್ದ ಕಾಲಾವಧಿ ಇದು

a)

1912-1918

b)

1907-1913

c)

1915-1920

d)

1924-1931

29.

ಈ ಕೆಳಗಿನ ಧಾತುಗಳಲ್ಲಿ ಅಕರ್ಮಕ ಧಾತುವನ್ನು ಗುರುತಿಸಿ

a)

ಓಡು

b)

ಮಲಗಿಸು

c)

ಕೊಡು

d)

ತಿನ್ನು

30.

1957ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು ?

a)
b)
c)
d)
31.

ಕೃದಂತ ಭಾವ ನಾಮಕ್ಕೆ ಸೂಕ್ತ ಉದಾಹರಣೆಯಾದ ಪದ ಇದಾಗಿದೆ

a)

ನಗುವುದು

b)

ಮಾಡಲು

c)

ಬಾಳಲಿಕ್ಕೆ

d)

ಉಣ್ಣದೆ

32.

"ಯಾರ ಜಪ್ತಿಗೂ ಸಿಗದ ನವಿಲುಗಳು" ಪುಸ್ತಕವು ಈ ಸಾಹಿತಿ ಯನ್ನು ಕುರಿತಾದ ಪುಸ್ತಕವಾಗಿದೆ .

a)
b)
c)
d)
33.

ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ. ಎಂಬುದು ಈ ವಾಕ್ಯಪ್ರಭೇದ ವಾಗಿದೆ

a)

ಸಾಮಾನ್ಯ ವಾಕ್ಯ

b)

ಮಿಶ್ರವಾಕ್ಯ

c)

ಸಂಯೋಜಿತ ವಾಕ್ಯ

d)

ನೆಹರು ವಾಕ್ಯ

34.

ಅನಂತ ಮುರ್ತಿಯವರ ಅಮ್ಮ ಗದ್ಯ ಇರುವುದು

a)

೮ ನೆ ತರಗತಿಯಲ್ಲಿ

b)

೯ ನೆ ತರಗತಿಯಲ್ಲಿ

c)

೧೦ ನೆ ತರಗತಿಯಲ್ಲಿ

d)

೭ ನೆ ತರಗತಿಯಲ್ಲಿ

35.

ವಿಶ್ವೇಶ್ವರಯ್ಯ ಅವರು ಮೈಸೂರು ಬ್ಯಾಂಕನ್ನು ಸ್ಥಾಪಿಸಿದ ವರ್ಷ ಇದು

a)

೧೯೧೫

b)

೧೯೧೭

c)

೧೯೧೩

d)

೧೯೦೭

36.

ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು ಇವರು

a)

ಮಹಾತ್ಮ ಗಾಂಧೀಜಿ

b)

ಜವಾಹರಲಾಲ್ ನೆಹರು

c)

ಜೇಮ್ಸ್ ಬರ್ಕ್ಲಿ

d)

ಲಾರ್ಡ್ ಸಂಡ್ ಹರ್ಸ್ಟ್

37.

ವಿಶ್ವೇಶ್ವರಯ್ಯ ಅವರು ಪ್ರೌಢಶಿಕ್ಷಣವನ್ನು ಈ ಶಾಲೆಯಲ್ಲಿ ಪಡೆದರು

a)

ಬೆಂಗಳೂರಿನ ಸೆಂಟ್ರಲ್ ಕಾಲೇಜು

b)

ಬೆಂಗಳೂರಿನ ವೆಸ್ಲಿಯನ್ ಪ್ರೌಢಶಾಲೆ

c)

ಬೆಂಗಳೂರಿನ ಬ್ಯಾಸೆಲ್ ಸ್ಕೂಲ್

d)

ಚಿಕ್ಕಬಳ್ಳಾಪುರದ ನ್ಯೂಟನ್ ಸ್ಕೂಲ್

38.

ಈ ಕೆಳಗಿನವುಗಳಲ್ಲಿ ವಿಶ್ವೇಶ್ವರಯ್ಯ ಅವರು ರಚಿಸದ ಕೃತಿ ಯಾವುದು ?

a)

ರಿಕನ್ ಸ್ಟ್ರಕ್ಟಿಂಗ್ ಇಂಡಿಯಾ

b)

ಪ್ಲಾನೆಟ್ ಎಕಾನಮಿ ಫಾರ್ ಇಂಡಿಯಾ

c)

ಮೇಮೋರೀಸ್ ಅಫ್ ಮೈ ವರ್ಕಿಂಗ್ ಲೈಪ್

d)

ಇಂಡಿಯನ್ ಫೀಲಾಸಫಿ

39.

ಭಾರತ ಸರ್ಕಾರವು ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿದ ವರ್ಷ ಇದು

a)

೧೯೭೮

b)

೧೯೮೦

c)

೧೯೫೫

d)

೧೯೭೫

40.

ಇವುಗಳಲ್ಲಿ ಮಾರಿಕಣಿವೆ ಜಲಾಶಯದ ಭಾವಚಿತ್ರವಿದು ಆಗಿದೆ

a)
b)
c)
d)