wayground logo

Free Printable Worksheets

Font size

S
M
L
XL
Worksheets

ಸಾಮಾನ್ಯ ಕನ್ನಡ

Total questions: 41

Worksheet time: 21mins

Name
Class
Date
1.

ಎದೆ ತುಂಬಿ ಹಾಡಿದೆನು ಕವನ ಸಂಕಲನದ ಕರ್ತೃ

a)

ಜಿಎಸ್ ಶಿವರುದ್ರಪ್ಪ

b)

ಕೆ ಎಸ್ ನರಸಿಂಹಸ್ವಾಮಿ

c)

ಪಾಟೀಲ್ ಪುಟ್ಟಪ್ಪ

d)

ದ.ರಾ ಬೇಂದ್ರೆ

2.

ಗುಂಪಿಗೆ ಸೇರದ ಪದವಿದು

a)

ಗೌರ್ಮೆಂಟ್ ಬ್ರಾಹ್ಮಣ

b)

ದುಡಿತವೇ ನನ್ನ ದೇವರು

c)

ನೆನಪಿನ ದೋಣಿಯಲ್ಲಿ

d)

ಐಕ್ಯಗಾನ

3.

ಈ ಸಾಹಿತಿಯನ್ನು ಗುರುತಿಸಿ

a)

ದೇವನೂರು ಮಹಾದೇವ

b)

ಸಿದ್ದಲಿಂಗಯ್ಯ

c)

ಅರವಿಂದ ಮಾಲಗತ್ತಿ

d)

ಡಿಎಸ್ ಜಯಪ್ಪಗೌಡ

4.

ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಸಾದೃಶ ಸಂಪತ್ತನ್ನ ಹೇಳುವ ಅಲಂಕಾರ

a)

ಯಮಕಾಲಂಕಾರ

b)

ರೂಪಕಲಂಕಾರ

c)

ಉಪಮಾಲಂಕಾರ

d)

ಉತ್ಪ್ರೇಕ್ಷಾಲಂಕಾರ

5.

ಭರತನು ಹೇಳಿಲ್ಲದ ರಸ ಪ್ರಭೇದ

a)

ಅದ್ಭುತ

b)

ಶಾಂತ

c)

ಹಾಸ್ಯ

d)

ವೀರ

6.

ಅನುಪ್ರಾಸ ದಲ್ಲಿ ಎರಡು ಅಕ್ಷರಗಳು ಜೊತೆಜೊತೆಯಾಗಿ ಬಂದರೆ

a)

ವೃತ್ತಾನುಪ್ರಾಸ

b)

ಚಿತ್ರಾನುಪ್ರಾಸ

c)

ಛೇಕಾನು ಪ್ರಾಸ

d)

ಯಮಕಾನುಪ್ರಾಸ

7.

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

a)

ಸಂಸಾರದಲ್ಲಿ ಸಾಮರಸ್ಯವಿಲ್ಲ

b)

ಎತ್ತಿಗಿಂತ ಕೋಣ ಶಕ್ತಿಶಾಲಿ

c)

ಸಂಸಾರದಲ್ಲಿ ಸಾಮರಸ್ಯವಿದೆ

d)

ಕೋಣಕ್ಕೆ ಸೂಕ್ಷ್ಮ ಪ್ರಜ್ಞೆ ಇರದು

8.

ಸಿಂಗರಾರ್ಯನ ಕೃತಿ

a)

ಮಲೆದೇಗುಲ

b)

ದ್ರಾಕ್ಷಿ ದಾಳಿಂಬೆ

c)

ಮಿತ್ರಾವಿಂದ ಗೋವಿಂದ

d)

ಕಾವ್ಯಕುತೂಹಲ

9.

ಕಂಬಿ ಕೀಳು

a)

ಪಲಾಯನ ಮಾಡು

b)

ಬೇರೆ ಮಾಡು

c)

ಕಂಬಿಯನ್ನು ಕಿತ್ತುಹಾಕು

d)

ದೂರ ತಳ್ಳು

10.

ಮೈಮನಗಳ ಸುಳಿಯಲ್ಲಿ ಬರೆದವರು

a)

ಶಿವರಾಂ ಕಾರಂತ್

b)

ಚಂದ್ರಶೇಖರ ಕಂಬಾರ

c)

ದರಾಬೇಂದ್ರೆ

d)

ಯುಆರ್ ಅನಂತಮೂರ್ತಿ

11.

ವಿಗಡ ವಿಕ್ರಮರಾಯ ನಾಟಕದ ರಚನಾಕಾರ ಯಾರು

a)

ಸಂಸ

b)

ಚಂದ್ರಶೇಖರ ಕಂಬಾರ

c)

ಗಿರೀಶ್ ಕಾರ್ನಾಡ್

d)

ತ ರಾ ಸು

12.

ಹೊಸಗನ್ನಡದ ಅರುಣೋದಯ ಈ ಗ್ರಂಥದ ರಚನೆಕಾರರು

a)

ಗೋಪಾಲಕೃಷ್ಣ ಅಡಿಗ

b)

ಶ್ರೀನಿವಾಸ ಹಾವನೂರ

c)

ಬಿಎಂಶ್ರೀ

d)

ತೀನಂಶ್ರೀ

13.

ಕಲ್ಲು ಕರಗುವ ಸಮಯ ಕೃತಿ ಯಾವ ಸಾಹಿತ್ಯಪ್ರಕಾರದ್ದು

a)

ಕಾದಂಬರಿ

b)

ಕಥಾಸಂಕಲನ

c)

ಲಲಿತ ಪ್ರಬಂಧ

d)

ನಾಟಕ

14.

'ರಾವಣನು ದಶಶಿರನು; ಮಾನವನು ಶತಶಿರನು' ಎಂಬ ವಾಣಿ ಯಾರದ್ದು

a)

ಡಿ ವಿ ಗುಂಡಪ್ಪ

b)

ಚಂದ್ರಶೇಖರ್ ಕಂಬಾರ್

c)

ಪಿ ಲಂಕೇಶ್

d)

ಗಿರೀಶ್ ಕಾರ್ನಾಡ್

15.

ಇವರು ರತ್ನತ್ರಯರು

a)

ಜನ್ನ ಪೊನ್ನ ಪಂಪ

b)

ರನ್ನ ಜನ್ನ ಪಂಪ

c)

ಪಂಪ ಪೊನ್ನ ರನ್ನ

d)

ರನ್ನ ಜನ್ನ ಪೊನ್ನ

16.

ಈ ಕೆಳಗಿನವುಗಳಲ್ಲಿ ಸರಿಯಾದದ್ದು

a)

ಶಿಕ್ಷಣಕ್ಕಾಗಿ ದುಷ್ಟ ರಕ್ಷಣೆಗಾಗಿ ಶಿಷ್ಟ

b)

ಶಿಷ್ಟ ರಕ್ಷಣೆಗಾಗಿ ದುಷ್ಟ ಶಿಕ್ಷಣಕ್ಕಾಗಿ

c)

ದುಷ್ಟ ಶಿಕ್ಷಣಕ್ಕಾಗಿ ಶಿಷ್ಟ ರಕ್ಷಣೆಗಾಗಿ

d)

ದುಷ್ಟ ಉದ್ಯೋಗಕ್ಕಾಗಿ ಶಿಷ್ಟ ರಕ್ಷಣೆಗಾಗಿ

17.

"ಮೇಣಾಯ್ತು ಕೌರವಂಗವನೀತಳಂಮ" ಈ ಸಾಲು ಈ ಪದ್ಯದಲ್ಲಿ ಬರುತ್ತದೆ

a)

ಕೌರವೇಂದ್ರನ ಕೊಂದೆ ನೀನು

b)

ಕೆಮ್ಮನೆ ಮೀಸೆವೊತ್ತನೆ

c)

ವೀರಲವ

d)

ಛಲಮನೆ ಮೆರೆವೆಂ

18.

ಸರಿಯಾದ ಗಾದೆಯನ್ನು ಗುರುತಿಸಿ

a)

ಆಡ್ತಾ ಆಡ್ತಾ ಆಟ ಉಗುಳ್ತಾ ಉಗುಳ್ತಾ ರೋಗ

b)

ಇಟ್ಕೊಂಡು ಉಣ್ಣುವ ಜಾಗದಲ್ಲಿ ಕದ್ದುಕೊಂಡು ತಿಂದ್ರು

c)

ಅಕ್ಕರೆಯಿಲ್ಲದ ಉಪ್ಪರಿಗೆ ಗಿಂತ ಅಕ್ಕರೆ ಇರುವ ಮನೆ ಲೇಸು

d)

ಓದು ಒಕ್ಕಾಲು ಬುದ್ಧಿ ನಾಕಾಲು

19.

ಮೊಗ್ಗಾಗಿ ಅರಳುವದು ಪುಷ್ಪ ತಾನಲ್ಲ; ಸೂರ್ಯ ಕಿರಣಕ್ಕೂ ಅದು ಬಾಡುವುದಿಲ್ಲ

a)

ನೀರು

b)

ಗಾಳಿ

c)

ಕೊಡೆ

d)

ಮೇಲಿನ ಎಲ್ಲವೂ ಸರಿ

20.

ಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ

a)

ಸುಣ್ಣ

b)

ಬಣ್ಣ

c)

ಕಾಮನಬಿಲ್ಲು

d)

ಬಳೆ

21.

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ ಈ ಮುಂಡಿಗೆಯ ಅರ್ಥವಿದು

a)

ಯಮ

b)

ವಿಷ್ಣು

c)

ಶಿವ

d)

ಚಂದ್ರ

22.

ಬಡತನ ಬಂದಾಗ ಬಂಧುಗಳ ಮನೆಗೆ ಹೋಗಬಾರದೆಂದು ಮಾರ್ಮಿಕವಾಗಿ ಹೇಳಿದ ಕಿರ್ತನಕಾರ

a)

ಪುರಂದರದಾಸರು

b)

ಕನಕದಾಸರು

c)

ವ್ಯಾಸರಾಯರು

d)

ವಾದಿರಾಜರು

23.

ಅಜಗಣ್ಣ ಎಂಬುದು ಯಾರ ವಚನಗಳ ಅಂಕಿತ ನಾಮ

a)

ಮುಕ್ತಾಯಕ್ಕ

b)

ಚೆನ್ನಬಸವಣ್ಣ

c)

ಅಕ್ಕನಾಗಮ್ಮ

d)

ಗಂಗಾಂಬಿಕೆ

24.

ಇದು ಅರಬ್ಬೀ ಭಾಷೆಯ ಪದವಿದು

a)

ಗಲೀಜು

b)

ದರ್ಬಾರು

c)

ಇಲಾಖೆ

d)

ರಸೀದಿ

25.

ತತ್ಸಮವಲ್ಲದ ಪದವಿದು

a)

ಹಾವುಗೆ

b)

ಕಲಶ

c)

ಅರ್ಕ

d)

ದ್ಯೂತ

26.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವ ಅವ್ಯಯವಿದು

a)

ಕ್ರಿಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಸಾಮನ್ಯಾವ್ಯಯ

d)

ಸಂಬಂಧಾರ್ಥಕಾವ್ಯಯ

27.

'ಮಾತೆಂಬುದು ಜ್ಯೋತಿರ್ಲಿಂಗ' ಎಂಬ ಘೋಷಣೆಯನ್ನು ಹೊಂದಿರುವ ವಿಶ್ವವಿದ್ಯಾಲಯ

a)

ಬೆಂಗಳೂರು ವಿಶ್ವವಿದ್ಯಾಲಯ

b)

ಕರ್ನಾಟಕ ವಿಶ್ವವಿದ್ಯಾಲಯ

c)

ಕುವೆಂಪು ವಿಶ್ವವಿದ್ಯಾಲಯ

d)

ಕನ್ನಡ ವಿಶ್ವವಿದ್ಯಾಲಯ

28.

ಮಾತೃಪ್ರೇಮ ಹಾಗೂ ಅತಿಥಿ ಸತ್ಕಾರ ಮೌಲ್ಯಗಳನ್ನು ತಿಳಿಸುವ ಪಾಠವಿದು

a)

ಯುದ್ಧ

b)

ಶಬರಿ

c)

ಸುಕುಮಾರಸ್ವಾಮಿಯ ಕತೆ

d)

ವೀರಲವ

29.

ಅತ್ಯಾದರ ಪದದಲ್ಲಿರುವ ಸಂಧಿ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಯಣ್ ಸಂಧಿ

d)

ಲೋಪ ಸಂಧಿ

30.

ಹಸಿರೇ ಉಸಿರು

a)

ಹಸಿರಿನಲ್ಲಿ ಉಸಿರಿದೆ

b)

ಉಸಿರಿಗೆ ಹಸಿರುಬಣ್ಣ

c)

ಹಸಿರು ಜೀವಕ್ಕೆ ಆಧಾರ

d)

ಹಸಿರಿನಿಂದ ಮನಸ್ಸು ಹಗುರ

31.

'ತ್ರಿಪದಿ ಕನ್ನಡ ವೃತ್ತಗಳ ಗಾಯತ್ರಿ' ಎಂದವರು

a)

ದರಾ ಬೇಂದ್ರೆ

b)

ಎಲ್ ಬಸವರಾಜು

c)

ಬಿಎಂಶ್ರೀ

d)

ಕುವೆಂಪು

32.

ಕರತಲಾಮಲಕ ಎಂದರೆ

a)

ಅಂಗೈ ಮೇಲಿನ ಗಾಯ

b)

ಕೈ ಮೂಲಕ ತಲೆ

c)

ಅಂಗೈ ಮೇಲಿನ ನೆಲ್ಲಿಕಾಯಿ

d)

ಸುಲಭ

33.

ಇವುಗಳಲ್ಲಿ ಸವರ್ಣವಲ್ಲದ ವರ್ಣಗಳಿವು

a)

ಅ_ಆ

b)

ಉ_ಊ

c)

ಒ_ಓ

d)

ಐ_ಔ

34.

ಇವು ವಿಲೋಮ ಸ್ವರ್ಣ ಗಳು

a)

ಆಅ ಈಇ ಊಉ

b)

ಅ ಇ ಉ ಆ ಈ ಊ

c)

ಆ ಈ ಊ ಅ ಇ ಉ

d)

ಅಆ ಇಈ ಉಊ

35.

ಕೇಶಿರಾಜ ಹೇಳುವ ಕನ್ನಡದ ಅಸಾಧಾರಣ ಲಕ್ಷಣಗಳು

a)

10

b)

9

c)

5

d)

8

36.

'ಊರಿಗೆ ಊರೇ ಕಣ್ಣೀರು ಸುರಿಸಿತು'ಎಂಬಲ್ಲಿ ಬಳಕೆಯಾಗಿರುವ ಅರ್ಥ

a)

ವಾಚ್ಯಾರ್ಥ

b)

ಲಕ್ಷಾರ್ಥ

c)

ವ್ಯಂಗ್ಯಾರ್ಥ

d)

ಯಾವುದು ಅಲ್ಲ

37.

'ಮಮಿಂಕೆಯದದೊಳ್' ಎಂಬುದು ಈ ಪ್ರತ್ಯಯಗಳನ್ನು ಸೂಚಿಸುತ್ತದೆ

a)

ಅಖ್ಯಾತ ಪ್ರತ್ಯಯಗಳು

b)

ವಿಭಕ್ತಿ ಪ್ರತ್ಯಯಗಳು

c)

ತದ್ಧಿತ ಪ್ರತ್ಯಯಗಳು

d)

ಕಾಲಸೂಚಕ ಪ್ರತ್ಯಯಗಳು

38.

ಇವು ಚಂದ್ರಶೇಖರ ಕಂಬಾರರ ನಾಟಕಗಳು

a)

ಸಿರಿಸಂಪಿಗೆ ಮತ್ತು ತಲೆದಂಡ

b)

ಸಂಕ್ರಾಂತಿ ಮತ್ತು ನಾಗಮಂಡಲ

c)

ಸಂಗ್ಯಾ ಬಾಳ್ಯಾ ಮತ್ತು ಸಿರಿಸಂಪಿಗೆ

d)

ಸಂಗ್ಯಾಬಾಳ್ಯ ಮತ್ತು ತಲೆದಂಡ

39.

'ಆದರ್ಶ ರಾಜ್ಯ' ಇದು ಯಾರ ಕೃತಿ

a)

ಅರಿಸ್ಟಾಟಲ್

b)

ಪ್ಲೇಟೋ

c)

ಸಾಕ್ರೆಟಿಸ್

d)

ಲಾಂಜಿನಸ್

40.

ಒಬ್ಬನು ಇನ್ನೊಬ್ಬನಿಂದ ಕೆಲಸ ಮಾಡುವಂತೆ ಮಾಡುವುದು

a)

ನಿಷೇದಾರ್ಥ

b)

ಸಂಭವನಾರ್ಥಕ

c)

ವಿದ್ಯರ್ಥ

d)

ಪ್ರೇರಣಾರ್ಥ

41.

ಪೇಟೆಯಿಂದ ತಂದ ಹಣ್ಣುಗಳನ್ನು ತಿನ್ನಲಾಯಿತು.. ಈ ವಾಕ್ಯದಲ್ಲಿರುವ ಕರ್ತೃಪದ

a)

ಪೇಟೆ

b)

ಹಣ್ಣು

c)

ಕರ್ತೃಪದವಿಲ್ಲ

d)

ಕರ್ತೃವಿಲ್ಲ