wayground logo

Free Printable Worksheets

NEW

Font size

S
M
L
XL
Worksheets

ಎಸ್ ಎಸ್ ಎಲ್ ಸಿ ಪ್ರಥಮಭಾಷೆ ಕನ್ನಡ-ಕ್ವಿಜ್ ಸರಣಿ-24

Total questions: 40

Worksheet time: 20mins

Name
Class
Date
1.
ಭೂಮಿಜಾತೆ ಎಂದರೆ
a)
ಕೌಸಲ್ಯೆ
b)
ಸುಮಿತ್ರೆ
c)
ಸೀತೆ
d)
ಶಬರಿ
2.
ಶಬರಿಯ ತಂದೆಯ ಹೆಸರು
a)
ಮತಂಗ
b)
ಶಬರ
c)
ರಾಮ
d)
ದಶರಥ
3.
ಶಬರಿಯು ರಾಮಲಕ್ಷ್ಮಣರ ಕಣ್ಣಿಗೆ ಹೀಗೆ ಕಾಣುತ್ತಿದ್ದಾಳೆ
a)
ಸುಂದರಿಯಂತೆ
b)
ಮುದುಕಿಯಂತೆ
c)
ರಾಕ್ಷಸಿಯಂತೆ
d)
ಬುದ್ಧಿಹೀನಳಂತೆ
4.
ರಾಮನು "ದೊರೆವಳೆ ಸೀತೆ,... ಪೇಳಿರಿ ನಾನೆರೆವೆ"ಎಂದು ಯಾರಲ್ಲಿ ಕೇಳುತ್ತಾನೆ...
a)
ಶಬರಿಯನ್ನು
b)
ಗಿರಿವನಗಳನ್ನು
c)
ಲಕ್ಷ್ಮಣನನ್ನು
d)
ಸೂರ್ಯಚಂದ್ರರನ್ನು
5.
ಶಬರಿ ಗದ್ಯ ಭಾಗವು ಈ ಪ್ರಕಾರಕ್ಕೆ ಸೇರಿದೆ
a)
ಗೀತಾ ನಾಟಕ
b)
ದುರಂತ ನಾಟಕ
c)
ಅಸಂಗತ ನಾಟಕ
d)
ಆಧುನಿಕ ನಾಟಕ
6.
ಹಕ್ಕಿಯ ಪುಚ್ಚಗಳ ಬಣ್ಣವಿದು
a)
ಬಿಳಿ-ಹೊಳೆ
b)
ಕರಿನರೆ
c)
ಕೆನ್ನ ಹೊನ್ನ
d)
ನೀಲಿ ಕೆಂಪು
7.
ಹಕ್ಕಿಯ ಕಣ್ಣುಗಳಿವು...
a)
ತಾರೆ ಚಂದ್ರಮ
b)
ಮಂಗಳ ಶುಕ್ರ
c)
ಹಗಲು-ಇರುಳು
d)
ಸೂರ್ಯ ಚಂದ್ರ
8.
ಇದನ್ನು ಒಡೆಯಲು ಹಕ್ಕಿಯು ಹೊಂಚು ಹಾಕಿದೆ
a)
ಬ್ರಹ್ಮಾಂಡ
b)
ದಿಗ್ಮಂಡಲ
c)
ಸಾಮ್ರಾಜ್ಯ
d)
ಮೇಘ ಮಂಡಲ
9.
ಹಕ್ಕಿಯು ಆಡಲು, ಹಾಡಲು, ಹಾರಾಡಲು ಈ ಅಂಗಳಕ್ಕೆ ಹೋಗಲು ಇಷ್ಟವಾಗಿದೆ.
a)
ಬೆಳ್ಳಿಯ ಹಳ್ಳಿ
b)
ತಿಂಗಳಿನೂರು
c)
ಮಂಗಳ ಲೋಕ
d)
ಭೂಲೋಕ
10.
ಹೊಸಗಾಲದ ಇವರನ್ನು ಹರಸಿ ಹಕ್ಕಿಯು ಹಾರುತಿದೆ
a)
ಹಸಿದ ಮಕ್ಕಳು
b)
ಹಸು ಮಕ್ಕಳು
c)
ಹಸುವಿನ ಮಕ್ಕಳು
d)
ಹಸುರಿನ ಮಕ್ಕಳು
11.
ಇದನ್ನು ಹಿಂಗಿಸುವುದು ವಿವೇಕಾನಂದರ ಮೊದಲ ಆದ್ಯತೆ.
a)
ಆತ್ಮದ ಹಸಿವು
b)
ದೈಹಿಕ ಹಸಿವು
c)
ವೇದಾಂತದ ಹಸಿವು
d)
ಧರ್ಮದ ಹಸಿವು
12.
ಇದು ಸಮಾಜದ ಒಂದು ಆಂತರಿಕ ಭಾಗವಾಗಿದೆ
a)
ಧರ್ಮ
b)
ಅಸ್ಪೃಶ್ಯತೆ
c)
ಜಾತಿ
d)
ಕೋಮು
13.
"ಆವುದೀ ಮರಳು?! ನಮ್ಮೆಡೆಗೆ ಬರುತಿಹುದು" ಎಂದು ಲಕ್ಷ್ಮಣ ರಾಮನಿಗೆ ಹೇಳಿದ್ದು
a)
ಶಬರಿಯನ್ನು ಮೊದಲ ಬಾರಿ ಕಂಡಾಗ
b)
ಶಬರಿಯನ್ನು ಬೀಳ್ಕೊಡುವಾಗ
c)
ಶಬರಿಯ ಆತಿಥ್ಯ ಪಡೆಯುವಾಗ
d)
ಶಬರಿಯ ನರ್ತನವನ್ನು ಕಂಡಾಗ
14.
"ಆರು, ಎತ್ತ, ಏಕೆ ಎನ್ನದೇ ಹಸುಳೆಯಂದದಿ ಒಲಿದಳು" ಈ ಮಾತನ್ನು ಹೇಳಿದವರು
a)
ರಾಮ
b)
ಲಕ್ಷ್ಮಣ
c)
ಶಬರಿ
d)
ಕೌಸಲ್ಯೆ
15.
"ರೂಪಕೂ ನಾಮ ಮಿಗಿಲಾತ್ಮ ಸುರಭಿಯದು" ಎಂದವರು
a)
ರಾಮ
b)
ಶಬರಿ
c)
ಲಕ್ಷ್ಮಣ
d)
ಮತಂಗ
16.
ಸೌಮಿತ್ರಿ ಎಂದರೆ
a)
ಸುಮಿತ್ರೆ
b)
ಶಬರಿ
c)
ಕೌಸಲ್ಯೆ
d)
ಲಕ್ಷ್ಮಣ
17.
ಹಕ್ಕಿಹಾರುತಿದೆ ನೋಡಿದಿರಾ' ಈ ಪದ್ಯದ ಕವಿ
a)
ಕುವೆಂಪು
b)
ಜಿಎಸ್ ಶಿವರುದ್ರಪ್ಪ
c)
ಬೇಂದ್ರೆ
d)
ಶಿವರಾಮ ಕಾರಂತ್
18.
ಹಕ್ಕಿಹಾರುತಿದೆ ನೋಡಿದಿರಾ' ಪದ್ಯವನ್ನು ಈ ಕೃತಿಯಿಂದ ಆರಿಸಲಾಗಿದೆ.
a)
ಗರಿ
b)
ಉಯ್ಯಾಲೆ
c)
ನಾದಲೀಲೆ
d)
ಮೇಘದೂತ
19.
"ರೆಕ್ಕೆಗಳೆರಡೂ ಪಕ್ಕದಲುಂಟು" ಇಲ್ಲಿ ರೆಕ್ಕೆ ಗಳಿರುವುದು ಇವರಿಗೆ...
a)
ತೀಕ್ಷ್ಣ ದೃಷ್ಟಿಯ ಹದ್ದಿಗೆ
b)
ಗಿಳಿ ಮೂಗಿನ ಮಾನವನಿಗೆ
c)
ಮುಗಿಲಿಗೆ ಹಾರುವ ವಿಮಾನಕ್ಕೆ
d)
ಕಾಲವೆಂಬ ಹಕ್ಕಿಗೆ
20.
ಬಾನುಲಿ ಕೇಂದ್ರದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಲೇಖಕರು
a)
ಪುತಿನ
b)
ಕುವೆಂಪು
c)
ಅಂಬಿಕಾತನಯದತ್ತ
d)
ಶ್ರೀನಿವಾಸ
21.
ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಇದು
a)
ಗರಿ
b)
ಅರಳು ಮರಳು
c)
ಸಾಹಿತ್ಯದ ವಿರಾಟ್ ಸ್ವರೂಪ
d)
ನಾಕುತಂತಿ
22.
ಇದು ಬೇಂದ್ರೆಯವರ ಕೃತಿಯಲ್ಲ
a)
ಕೃಷ್ಣಕುಮಾರಿ
b)
ಪಕ್ಷಿಕಾಶಿ
c)
ಉಯ್ಯಾಲೆ
d)
ಸೂರ್ಯಪಾನ
23.
ಪುತಿನ ರವರ ಕಾಲ
a)
1899
b)
1869
c)
1905
d)
1909
24.
ಮಂಡ್ಯ ಜಿಲ್ಲೆಯ ಮೇಲುಕೋಟೆಯ ಸಾಹಿತಿ ಇವರು
a)
ವಿ ಕೃ ಗೋಕಾಕ್
b)
ಬೇಂದ್ರೆ
c)
ಶಿವಕೋಟ್ಯಾಚಾರ್ಯ
d)
ಪು ತಿ ನರಸಿಂಹಾಚಾರ್
25.
ಪುತಿನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿಯಿದು...
a)
ಶಬರಿ
b)
ಶ್ರೀಹರಿಚರಿತೆ
c)
ಗಣೇಶ ದರ್ಶನ
d)
ಶಾರದಾ ಯಾಮಿನಿ
26.
ಕೋಟ್ಯಧೀಶ್ವರ : ಯಣ್ ಸಂಧಿ :: ಸೂರ್ಯೋದಯ:
a)
ವೃದ್ಧಿ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ಜಸ್ತ್ವ ಸಂಧಿ
27.
ಜಗಜ್ಜ್ಯೋತಿ : ಶ್ಚುತ್ವ ಸಂಧಿ :: ಅಷ್ಟೈಶ್ವರ್ಯ :
a)
ಯಣ್ ಸಂಧಿ
b)
ವೃದ್ಧಿ ಸಂಧಿ
c)
ಗುಣ ಸಂಧಿ
d)
ಜಸ್ತ್ವ ಸಂಧಿ
28.
ಹಣ್ಣು-ಹಂಪಲು : ಜೋಡುನುಡಿ :: ತುತ್ತತುದಿ :
a)
ಪ್ರಾಸ
b)
ದ್ವಿರುಕ್ತಿ
c)
ಅವ್ಯಯ
d)
ತದ್ದಿತಾಂತ
29.
ನೀನು ಜಾತ್ರೆಗೆ ಬರುವುದಿಲ್ಲವೇ ? ಇಲ್ಲಿರುವ ಸರ್ವನಾಮ ಪದ
a)
ಪ್ರಶ್ನಾರ್ಥಕ
b)
ಪ್ರಥಮ ಪುರುಷ
c)
ಮಧ್ಯಮ ಪುರುಷ
d)
ಉತ್ತಮ ಪುರುಷ
30.
ಆಹಾ ! : ಭಾವಸೂಚಕ ಅವ್ಯಯ :: ತಟ್ಟನೆ :
a)
ಅನುಕರಣಾವ್ಯಯ
b)
ಸಾಮಾನ್ಯ ಅವ್ಯಯ
c)
ಕ್ರಿಯಾರ್ಥಕಾವ್ಯಯ
d)
ಸಂಬಂಧಾರ್ಥಕ ಅವ್ಯಯ
31.
ಇವುಗಳಲ್ಲಿ ಸಂಬಂಧಾರ್ಥಕಾವ್ಯಯ ಇದಾಗಿದೆ...
a)
ಆದ್ದರಿಂದ
b)
ಅವನೇ
c)
ಅಹುದು
d)
ಅಂತು
32.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಸತಿಪತಿ
b)
ಕೆನೆಮೊಸರು
c)
ಹಾಲ್ಜೇನು
d)
ಬಟ್ಟಬಯಲು
33.
ಇವುಗಳಲ್ಲಿ ಅನುಕರಣ ಅವ್ಯಯವನ್ನು ಗುರುತಿಸಿ.
a)
ದೊಡ್ಡ ದೊಡ್ಡ
b)
ಅಬ್ಬಬ್ಬಾ
c)
ನಡೆನಡೆ
d)
ಚುರುಚುರು
34.
ಇವುಗಳಲ್ಲಿ ಕನ್ನಡ ವ್ಯಂಜನ ಸಂಧಿ ಯನ್ನು ಗುರುತಿಸಿ
a)
ಲೋಪ
b)
ಗುಣ
c)
ಆದೇಶ
d)
ಆಗಮ
35.
ಕಂದ ಪದ್ಯದಲ್ಲಿ 4 ಮಾತ್ರೆಯ ಒಟ್ಟು ಇಷ್ಟು ಗಣಗಳಿರುತ್ತವೆ.
a)
16
b)
14
c)
12
d)
8
36.
ಷಟ್ಪದಿಯ ಮೂರು ಮತ್ತು ಆರನೇ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರು ಗುರು ಎಂದೇ ಪರಿಗಣಿಸಬೇಕು .
a)
ಹೇಳಿಕೆ ಸರಿಯಾಗಿದೆ
b)
ಹೇಳಿಕೆ ತಪ್ಪಾಗಿದೆ
c)
ಗುರು ವಾಗಿದ್ದರೆ ಮಾತ್ರ ಗುರುವೆಂದು ಗುರುತಿಸಬೇಕು
d)
ಕೆಲವು ಸಂದರ್ಭಗಳಲ್ಲಿ ಮಾತ್ರ ಅನ್ವಯ
37.
ಐದೈದು ಮಾತ್ರೆಯ ಗಣಗಳು ಬರುವ ಛಂದೋ ಪ್ರಕಾರ ವಿದು...
a)
ಭಾಮಿನಿ ಷಟ್ಪದಿ
b)
ವಾರ್ಧಕ ಷಟ್ಪದಿ
c)
ಕಂದಪದ್ಯ
d)
ಸಾಂಗತ್ಯ
38.
ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವು ಪದ್ಯದ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಪುನರಾವರ್ತನೆ ಗೊಂಡಿರೆ...
a)
ವೃತ್ತ್ಯಾನುಪ್ರಾಸ
b)
ಛೇಕಾನುಪ್ರಾಸ
c)
ಯಮಕ
d)
ಚಿತ್ರಕವಿತ್ವ
39.
ಅಳಿರಿಯುತಿಪ್ಪ ಎಮ್ಮ ಒಡಲ ಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಮಿತ್ರ' ಇಲ್ಲಿರುವ ಅಲಂಕಾರ
a)
ಅರ್ಥಾಂತರನ್ಯಾಸಾಲಂಕಾರ
b)
ದೃಷ್ಟಾಂತ ಅಲಂಕಾರ
c)
ಉಪಮಾಲಂಕಾರ
d)
ರೂಪಕಾಲಂಕಾರ
40.
ಒಂದು ವಿಶೇಷ ಅರ್ಥವನ್ನು ವ್ಯಕ್ತಪಡಿಸುವುದಕ್ಕೆ ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ಎರಡು ಬಾರಿ ಪ್ರಯೋಗ ಮಾಡುವುದಕ್ಕೆ ಹೀಗೆನ್ನುತ್ತಾರೆ...
a)
ಅನುಕರಣಾವ್ಯಯ
b)
ದ್ವಿರುಕ್ತಿ
c)
ಅನುಪ್ರಾಸ
d)
ಜೋಡುನುಡಿ