wayground logo

Free Printable Worksheets

Font size

S
M
L
XL
Worksheets

ಕನ್ನಡ 3

Total questions: 25

Worksheet time: 13mins

Name
Class
Date
1.

ಮುದುಕಿಯ ಗಂಡನ ಊರಿಗೆ ಬಂದಾಗ ಯುದ್ಧವಾಗಿದ್ದುದಕ್ಕೆ ಪ್ರಮುಖ ಕಾರಣ :

a)

ವ್ಯಾಪಾರ

b)

ಗಡಿವಿವಾದ

c)

ಧರ್ಮ

d)

ಜಲವಿವಾದ

2.

ಮುದುಕಿಯು ತನ್ನ ಗಂಡನ ಊರಿಗೆ ಬಂದು ಎಷ್ಟು ವರ್ಷಗಳಾಗಿತ್ತು ?

a)

ಸುಮಾರು ೨೫ ವರ್ಷ

b)

ಸುಮಾರು ೭೫ ವರ್ಷ

c)

ಸುಮಾರು ೫೦ ವರ್ಷ

d)

ಸುಮಾರು ೧೫ ವರ್ಷ

3.
ಡಾಕ್ಟರ್ ರಾಹಿಲನು ಮುದುಕಿಯ ಸೊಸೆಗೆ ಹೆರಿಗೆ ಮಾಡಿಸಿದ ನಂತರ ಬದುಕುಳಿದಿದ್ದು :
a)
ಮಗು
b)
ತಾಯಿ
c)
ತಾಯಿ ಮತ್ತು ಮಗು
d)
ಇಬ್ಬರೂ ಬದುಕಲಿಲ್ಲ
4.
ರಾಹಿಲನು ಮನೆಯ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಾಗ ಮುದುಕಿಯು ಆತನನ್ನು ಏನೆಂದು ಕೇಳಿದಳು?
a)
ಯಾರಪ್ಪಾ ನೀನು? ಆ ದೇಶದ ಕಡೆಯವನು ತಾನೇ?
b)
ಯಾರಪ್ಪಾ ನೀನು? ನಮ್ಮ ಕಡೆಯವನು ತಾನೇ?
c)
ಕೂಡಲೇ ಹೋಗುವೆಯೋ ಇಲ್ಲವೋ?
d)
ಯಾರು ನೀನು? ಡಾಕ್ಟರ್ ತಾನೆ?
5.
ರಾಹಿಲನು ಮನೆ ಸೇರಿದ ರೀತಿ :
a)
ತೆವಳುತ್ತಾ
b)
ಕುಂಟುತ್ತಾ
c)
ಓಡುತ್ತಾ
d)
ನಡೆಯುತ್ತಾ
6.
ರಾಹಿಲನಿಗೆ ಎದ್ದು ನಿಲ್ಲಲು ಸಾಧ್ಯವಾಗದಿದ್ದುದಕ್ಕೆ ಕಾರಣ :
a)
ಕಾಲಿಗೆ ಪೆಟ್ಟಾಗಿದ್ದುದು
b)
ಸೈನಿಕ ಉಡುಪಿನಲ್ಲಿದ್ದುದು
c)
ಆಯಾಸವಾಗಿದ್ದುದು
d)
ಬೆನ್ನು ಮೂಳೆ ಮುರಿದಿದ್ದುದು
7.
ರಾಹಿಲನಿಗೆ ಈಜಲು ಕಷ್ಟವಾಗುತ್ತಿದ್ದುದಕ್ಕೆ ಕಾರಣ :
a)
ಕಾಲಿಗೆ ಪೆಟ್ಟಾಗಿದ್ದುದು
b)
ಸೈನಿಕ ಉಡುಪಿನಲ್ಲಿದ್ದುದು
c)
ಆಯಾಸವಾಗಿದ್ದುದು
d)
ಈ ಎಲ್ಲವೂ
8.
ಎಚ್ಚರಗೊಂಡಾಗ ರಾಹಿಲನು ಎಲ್ಲಿದ್ದನು?
a)
ನದಿದಡದಲ್ಲಿದ್ದನು
b)
ಮುದುಕಿಯ ಮನೆಯಲ್ಲಿದ್ದನು
c)
ನೀರಿನಾಳದಲ್ಲಿದ್ದನು
d)
ಸೈನಿಕರ ವಶದಲ್ಲಿದ್ದನು
9.

ಗ್ರೌಂಡಿನೊಡನೆ ಸಂಪರ್ಕ ಕಲ್ಪಿಸಲು ‍ಯಾವುದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಹಿಲನು ಡಾಕ್ಟರಿಗೆ ಹೇಳುತ್ತಾನೆ?

a)

ರೇಡಿಯೋ

b)

ವಿಮಾನದ ಇಂಜಿನ್

c)

ವೈರ್‌ಲೆಸ್ ಫೋನ್

d)

ಕಂಪ್ಯೂಟರ್

10.
"ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ಧವಂತೆ, ಯುದ್ಧ!" ಇದು ಯಾರ ಅಭಿಪ್ರಾಯ?
a)
ರಾಹಿಲ
b)
ಮುದುಕಿ
c)
ಸೈನಿಕರು
d)
ಮುದುಕಿಯ ಸೊಸೆ
11.
ಮುದುಕಿಯ ಮಗನು ಎಲ್ಲಿಗೆ ಹೋಗಿದ್ದನು?
a)
ಸೈನಿಕರಿಗೆ ಚಿಕಿತ್ಸೆಕೊಡಲು ಹೋಗಿದ್ದನು
b)
ಬೇರೆ ದೇಶಕ್ಕೆ ಹೋಗಿದ್ದನು
c)
ವ್ಯಾಪಾರಕ್ಕೆ ಹೋಗಿದ್ದನು
d)
ಯುದ್ಧಕ್ಕೆ ಹೋಗಿದ್ದನು
12.
ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರುಸೈನಿಕರು ವೈಮಾನಿಕ ಧಾಳಿಮಾಡಲು ಅವಕಾಶವಾಗದಂತೆ ದೀಪ, ಬೆಂಕಿ ಉರಿಸದೆ ಕತ್ತಲಿನಲ್ಲಿರುವುದಕ್ಕೆ ಏನೆಂದು ಕರೆಯುವರು?
a)
ಚೆಕ್ ಔಟ್
b)
ಬ್ಯಾಕ್ ಔಟ್
c)
ಬ್ಲಾಕ್ ಔಟ್
d)
ಕಟ್‌ಔಟ್
13.
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಏನನ್ನು ಹಿಡಿದುಕೊಂಡಿದ್ದನು?
a)
ಬ್ಲ್ಯಾಕ್ ಬಾಕ್ಸ್
b)
ಶಸ್ತ್ರಚಿಕಿತ್ಸಾ ಪೆಟ್ಟಿಗೆ
c)
ಗೌಪ್ಯತಾ ಪೆಟ್ಟಿಗೆ
d)
ದಾಖಲೆಗಳ ಪೆಟ್ಟಿಗೆ
14.
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ :
a)
13
b)
10
c)
25
d)
5
15.
ಯ, ರ, ಲ, ವ, ಶ, ಷ, ಸ, ಹ, ಳ - ಅಕ್ಷರಗಳು ವರ್ಣಮಾಲೆಯ ಈ ಗುಂಪಿಗೆ ಸೇರುತ್ತವೆ :
a)
ಅಲ್ಪಪ್ರಾಣಾಕ್ಷರಗಳು
b)
ಮಹಾಪ್ರಾಣಾಕ್ಷರಗಳು
c)
ವರ್ಗೀಯ ವ್ಯಂಜನಗಳು
d)
ಅವರ್ಗೀಯ ವ್ಯಂಜನಗಳು
16.

ಅ, ಇ, ಉ, ಋ, ಎ, ಒ - ಅಕ್ಷರಗಳು ವರ್ಣಮಾಲೆಯ ಈ ಗುಂಪಿಗೆ ಸೇರುತ್ತವೆ :

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಹ್ರಸ್ವಸ್ವರಗಳು

d)

ದೀರ್ಘಸ್ವರಗಳು

17.
`ಹಂಬಲ' ಪದದ ಸಮಾನಾರ್ಥಕ ಪದ :
a)
ತೀವ್ರ ಆಸೆ
b)
ಹಂಪಲು
c)
ಹಣ್ಣು
d)
ಸಲ್ಲದ ಆಸೆ
18.
`ಸಾಂತ್ವನ' ಪದದ ಅರ್ಥ :
a)
ಶಂತನು
b)
ಸಾಧುತನ
c)
ಸ್ವಂತ
d)
ಸಮಾಧಾನ
19.
ಇವುಗಳಲ್ಲಿ ಗುಂಪಿಗೆ ಸೇರದ ಪದ :
a)
ಹತಾಶೆ
b)
ನಿರಾಶೆ
c)
ಆಶಾಭಂಗ
d)
ದುರಾಸೆ
20.
`ಕ್ರೌರ್ಯ' ಪದದ ಸಮಾನಾರ್ಥಕ ಪದ :
a)
ನಿರ್ದಯತೆ
b)
ನೋವು
c)
ಕೋರಿಕೆ
d)
ಪಕ್ಷಿ
21.
ಸೂಲಗಿತ್ತಿ ಪದದ ಸಮಾನಾರ್ಥಕ ಪದ
a)
ದಾದಿ
b)
ಹೆರಿಗೆ ಸಹಾಯಕಿ
c)
ಓಲೆಗಾರ್ತಿ
d)
ಬಾಣಂತಿ
22.
ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರಿಗೆ ದೊರೆತಿರುವ ಪ್ರಶಸ್ತಿ
a)
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ
b)
ಪದ್ಮವಿಭೂಷಣ ಪ್ರಶಸ್ತಿ
c)
ಪದ್ಮಭೂಷಣ ಪ್ರಶಸ್ತಿ
d)
ನೃಪತುಂಗ ಪ್ರಶಸ್ತಿ
23.
ಸಾರಾ ಅಬೂಬಕ್ಕರ್ ಅವರು ಹುಟ್ಟಿದ ಊರು
a)
ಕಾಸರಗೋಡು
b)
ಚಂದ್ರಗಿರಿ
c)
ಮೇಲುಕೋಟೆ
d)
ಶಿಕಾರಿಪುರ
24.
ಸಾರಾ ಅಬೂಬಕ್ಕರ್ ಅವರು ಹುಟ್ಟಿದ ದಿನಾಂಕ :
a)
೩೦ ಮೇ ೧೯೩೬
b)
೩೦ ಜೂನ್ ೧೯೩೬
c)
೩೦ ಜೂನ್ ೧೯೬೩
d)
೦೩ ಜೂನ್ ೧೯೩೬
25.
ಯುದ್ಧ ಪಾಠದ ಆಕರ ಗ್ರಂಥ :
a)
ಪಯಣ
b)
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
c)
ಚಪ್ಪಲಿಗಳು
d)
ಕದನ ವಿರಾಮ