wayground logo

Free Printable Worksheets

NEW

Font size

S
M
L
XL
Worksheets

SSLC SOCIAL SCIENCE QUIZ CREATED BY NATARAJ ,AND BHAGWAT

Total questions: 10

Worksheet time: 5mins

Name
Class
Date
1.

) ಸಹಾಯಕಸೈನ್ಯಪದ್ಧತಿಗೆಸಂಬಂಧಿಸಿದಂತೆಈಕೆಳಗಿನಯಾವಹೇಳಿಕೆಸರಿಯಾಗಿರುವುದಿಲ್ಲ.

a)

ಅ) ಭಾರತೀಯ ರಾಜನು ಬ್ರಿಟಿಷ್ ಸೈನ್ಯದ ತುಕಡಿಯನ್ನು ತನ್ನ ಸೈನ್ಯದಲ್ಲಿ ಇರಿಸಿಕೊಳ್ಳುವುದು.

b)

ಬ) ಸೇನೆಯ ವೇತನ ಮತ್ತು ನಿರ್ವಹಣಾ ವೆಚ್ಚವನ್ನು ಆಶ್ರಿತ ರಾಜರೇ ಭರಿಸುವುದು

c)

ಕ) ಆಶ್ರಿತ ರಾಜರು ಸ್ವತಂತ್ರ್ಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದಿತ್ತು.

d)

ಡ) ಸಹಾಯಕ ಸೈನ್ಯಪದ್ಧತಿಯನ್ನು ಜಾರಿಗೆ ತಂದವನು ಲಾರ್ಡ್ವೆಲ್ಲೆಸ್ಲಿ.

2.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಎಂದರೆ

a)

ಅ) ದೇಶೀಯ ರಾಜರೇ ಆಳ್ವಿಕೆ ನಡೆಸುವುದು.

b)

ಬ) ಮಕ್ಕಳಿಲ್ಲದ ಭಾರತೀಯರಾಜನು ದತ್ತುಪಡೆದಂತಹ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲದಿರುವುದು.

c)

ಕ) ದತ್ತುಪುತ್ರನಿಗೆ ಅಧಿಕಾರ ಹಸ್ತಾಂತರಿಸಬಹುದು.

d)

ಡ) ಬ್ರಿಟಿಷ್ ಅಧಿಕಾರಿಯನ್ನು ಅಂತಹ ಸಂಸ್ಥಾನಗಳಿಗೆ ನೇಮಿಸ ಬಹುದಿತ್ತು.

3.

ಬ್ರಿಟಿಷರಿಂದ ಜಾರಿಗೊಳಿಸಲ್ಪಟ್ಟ ಯಾವ ಭೂಕಂದಾಯ ಪದ್ಧತಿಯು ಭೂಒಡೆತನದ ಹಕ್ಕನ್ನು ರೈತನಿಗೆ ದೃಢಪಡಿಸಿತ್ತು.

a)

ಅ) ರೈತವಾರಿಪದ್ಧತಿ

b)

ಬ) ಖಾಯಂಜಮೀನ್ದಾರಿಪದ್ಧತಿ

c)

ಕ) ಮಹಲ್ವಾರಿಪದ್ಧತಿ

d)

ಡ) ಮೇಲಿನಯಾವುದೂಅಲ್ಲ.

4.

1773ರ ರೆಗ್ಯುಲೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣ ಇದಾಗಿದೆ.

a)

ಅ)ಭಾರತದಲ್ಲಿ ಕ್ರೈಸ್ಥ ಮೆಷಿನರಿಗಳನ್ನು ಸ್ಥಾಪಿಸಲು ಅಧಿಕೃತವಾಗಿ ಅವಕಾಶ ನೀಡಲಾಯಿತು.

b)

ಬ) ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಗೆ ಅವಕಾಶ ನೀಡಲಾಯಿತು

c)

ಕ) ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ

d)

ಡ) ಮುಸ್ಲಿಮರಿಗೆ ಪ್ರತ್ಯೇಕ ಚುನಾವಣಾ ಮತಗಟ್ಟೆಗೆ ಅವಕಾಶ.

5.

ಶುದ್ಧಿ ಚಳುವಳಿಯ ಪ್ರಮುಖ ಉದ್ದೇಶ

a)

ಅ) ಭಾರತವನ್ನು ಜಾತಿ ಮುಕ್ತಗೊಳಿಸುವುದು.

b)

ಬ) ರಾಷ್ಟ್ರಪ್ರೇಮ ಜಾಗೃತ ಗೊಳಿಸುವುದು.

.

c)

ಕ) ದೇಹದ ಶುದ್ಧತೆಗೆ ಮಹತ್ವನೀಡುವುದು.

d)

ಡ)ಮುಸ್ಲಿಂ ಮತ್ತು ಕ್ರೈಸ್ಥಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದು.

6.

1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆಇದು ತಕ್ಷಣದ ಕಾರಣವೆನಿಸಿತ್ತು.

a)

ಅ) ಬ್ರಿಟಿಷರು ಹೊಸದಾಗಿ ಸೇನೆಗೆ ಪರಿಚಯಿಸಿದ ರಾಯಲ್ ಎನ್ ಫೀಲ್ಡ್ ಬಂದೂಕುಗಳು.

b)

ಬ.ಬಂದೂಕಿನ ತುಪಾಕಿಯನ್ನು ಬಳಸಲು ವಿರೋಧಿಸಿದ ಮಂಗಲಪಾಂಡೆಯನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು.

c)

ಕ) ಬ್ರಿಟೀಷ್ ಆಡಲಿತದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಶೋಚನೀಯವಾಗಿತ್ತು.

d)

ಡ) ದತ್ತುಮಕ್ಕಳಿಗೆಹಕ್ಕಿಲ್ಲನೀತಿಯನ್ನುಲಾರ್ಡ್ಡಾಲೌಸಿಜಾರಿಗೆತಂದಿದ್ದು.

7.

1858ರಲ್ಲಿ ಬ್ರಿಟಿಷ್ ರಾಣಿ ಹೊರಡಿಸಿದ ಘೋಷಣೆಯಲ್ಲಿ ಭಾರತೀಯ ಪರವಾದ ಒಪ್ಪಂದಗಳನ್ನು ಅಂಗೀಕರಿಸಲು ಪ್ರಮುಖ ಕಾರಣವೆನಿಸಿದ ಅಂಶ.

a)

ಅ) ಭಾರತೀಯರಬೆಂಬಲ ,ವಿಶ್ವಾಸಗಳಿಲ್ಲದೆ ಭಾರತದಲ್ಲಿ ಶಾಂತಿಯುತ ಆಳ್ವಿಕೆ ನಡೆಸುವುದು ಅಸಾಧ್ಯ ಎಂಬುದು ಮನದಟ್ಟಾಗಿತ್ತು.

b)

ಬ) ದಂಗೆಯಲ್ಲಿ ಭಾರತೀಯ ಆಶ್ರಿತ ರಾಜರು ಬ್ರಿಟಿಷರಿಗೆ ಬೆಂಬಲ ಸೂಚಿಸಿದ್ದರು.

c)

ಕ) ಭಾರತೀಯರಿಗೆ ಸ್ವಾತಂತ್ರ್ಯ ನೀಡುವ ಮಹತ್ವಾಕಾಂಕ್ಷೆ.

d)

ಡ) ಭಾರತೀಯರನ್ನು ಸಮಾನತೆಯಿಂದ ಕಾಣಬೇಕೆಂಬ ಮನಸ್ಥಿತಿ.

8.

ಸಂವಿಧಾನದವಿಧಿ 21 ಎಪ್ರಕಾರ

a)

ಅ) 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು

b)

ಬ) ಎಲ್ಲರಿಗೂಶಿಕ್ಷಣಸಿಗಬೇಕು.

c)

ಕ) ಸಾಮಾಜಿಕ ನ್ಯಾಯ ಮತ್ತು ಜನರ ಅಭಿವೃದ್ಧಿ ಅವಕಾಶಗಳನ್ನು ಸರ್ಕಾರ ಕಲ್ಪಿಸಬೇಕು.

d)

.

ಡ) ಮೇಲ್ಕಂಡ ಯಾವುದೂ ಅಲ್ಲ.

9.

ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುವಲ್ಲಿ ಹಾಗೂ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವಸಂಸ್ಥೆ.

a)

ಅ) ಪ್ರಧಾನಮಂತ್ರಿ ಆವಾಸ್ ಯೋಜನೆ

b)

ಬ) ಮಹಿಳಾ ಸ್ವಸಹಾಯ ಸಂಘಗಳು.

c)

ಕ) ಗ್ರಾಮ ಪಂಚಾಯ್ತಿಗಳು.

d)

ಡ) ಮಹಿಳಾ ಮೀಸಲಾತಿ ವ್ಯವಸ್ಥೆಗಳು.

10.

ಈ ಕೆಳಕಂಡ ನದಿಕಣಿವೆಯೋಜನೆಗಳನ್ನು ಸಂಬಂಧಿಸಿದ ನದಿಗಳೊಂದಿಗೆ ಜೋಡಿಸಲಾಗಿದೆ. ಸರಿಯಾದುದನ್ನು ಆರಿಸಿ ಬರೆಯಿರಿ.

a)

ಅ) ಹಿರಾಕುಡ್- ಮಹಾನದಿ, ಭಾಕ್ರಾನಂಗಲ್- ಸಟ್ಲೆಜ್, ನಾಗಾರ್ಜುನಸಾಗರ-ಕೃಷ್ಣಾ, ರಿಹಾಂದ್- ರಿಹಾಂದ್.

b)

ಬ) ಹಿರಾಕುಡ್- ರಿಹಾಂದ್, ಭಾಕ್ರಾನಂಗಲ್-ಕೃಷ್ಣಾ, ನಾಗಾರ್ಜುನಸಾಗರ-ಮಹಾನದಿ, ರಿಹಾಂದ್-ಸಟ್ಲೆಜ್.

c)

ಕ) ಹಿರಾಕುಡ್- ಕೃಷ್ಣಾ, ಭಾಕ್ರಾನಂಗಲ್- ಮಹಾನದಿ, ನಾಗಾರ್ಜುನಸಾಗರ-ಸಟ್ಲೆಜ್, ರಿಹಾಂದ್- ರಿಹಾಂದ್.

d)

ಡ) ಹಿರಾಕುಡ್- ಸಟ್ಲೆಜ್, ಭಾಕ್ರಾನಂಗಲ್-ರಿಹಾಂದ್, ನಾಗಾರ್ಜುನಸಾಗರ-ಕೃಷ್ಣಾ, ರಿಹಾಂದ್-ಮಹಾನದಿ