NEW
Font size
Worksheetsಜೀವಶಾಸ್ತ್ರದ ರಸಪ್ರಶ್ನೆ ಶ್ರೀನಿವಾಸ್ ರೆಡ್ಡಿ ತುಮಕೂರು
Total questions: 20
Worksheet time: 11mins
ಉಸಿರಾಟ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಶಕ್ತಿಯ ಪ್ರಮಾಣವನ್ನು ಗ್ರಾಫ್ ನಲ್ಲಿ ಕೆಳಗೆ ತೋರಿಸಿದೆ A ವಕ್ರರೇಖೆ ಯು ಪ್ರತಿನಿಧಿಸುವ ಉಸಿರಾಟದ ವಿಧವನ್ನು ಗುರುತಿಸಿ.
ವಾಯುವಿಕ
ಅವಾಯುವಿಕ
ಆಮ್ಲಜನಕದ ಕೊರತೆಯ ಉಸಿರಾಟ
ಮೇಲಿನ ಎಲ್ಲವೂ
ಮೇಲಿನ ಚಿತ್ರವು ಜೀರ್ಣಾಂಗವ್ಯೂಹ ವನ್ನು ಸೂಚಿಸುತ್ತದೆ ಚಿತ್ರದಲ್ಲಿ D&E ಗಳು ಸೂಚಿಸುವ ಅಂಗಗಳು
ಜಠರ ಸಣ್ಣಕರಳು
ಸಣ್ಣ ಕರುಳು ದೊಡ್ಡ ಕರುಳು
ಪಿತ್ತಕೋಶ ಜಠರ
ಯಕೃತ್ ಜಠರ.
ಉಸಿರಾಟ ಕ್ರಿಯೆಯಲ್ಲಿ ಗಾಳಿಯನ್ನು ಹೊರಗೆ ಬಿಟ್ಟಾಗ ಆಗುವ ಬದಲಾವಣೆಗಳು.a) ಪಕ್ಕೆಲುಬುಗಳು ಕೆಳಕ್ಕೆ ಬರುವುದು.b )ವಪೆ ಚಪ್ಪಟೆ ಆಗುವುದು c) ಗಾಳಿ ಕಳೆದುಕೊಂಡು ಗಾಳಿ ಗೂಡುಗಳು ಕುಗ್ಗುವುದು.d) ವಪೆಯು ಉಬ್ಬುವುದು.
a & c
a & d
b & d
a & c
ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲದ ಉತ್ಪಾದನೆ ಆಗುವ ಸಂದರ್ಭ
ಆಕ್ಸಿಜನ್ ಅನುಪಸ್ಥಿತಿ.
ಆಕ್ಸಿಜನ್ ಕೊರತೆ
ಆಕ್ಸಿಜನ್ ಉಪಸ್ಥಿತಿ
ಮೇಲಿನ ಎಲ್ಲಾ ಸಂದರ್ಭಗಳಲ್ಲೂ.
ಅಯೋಡಿನ್ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುವ ಹಾರ್ಮೋನ್.
ಪಿಟ್ಯೂಟರಿ
ಥೈರಾಕ್ಸಿನ್
ಪ್ಯಾರಾಥರ್ಮೋನ್
ಕಾರ್ಟಿಸೋನ್.
ಜನನ ಗ್ರಂಥಿಗಳು ಲೈಂಗಿಕ ಹಾರ್ಮೋನುಗಳನ್ನು ಉತ್ಪಾದಿಸಲು ಚೋದಿಸುವ ಹಾರ್ಮೋನ್.
ಲ್ಯೂಟಿನೈಸಿಂಗ್ ಹಾರ್ಮೋನ್
ಆಕ್ಸಿಟೋಸಿನ್
ವಾಸೋಪ್ರೆಸ್ಸಿನ್
ಮೆಲನೋಸೈಟ್.
ಎರಡು ನರ ಕೋಶಗಳ ನಡುವಿನ ಸೂಕ್ಷ್ಮ ಅಂತರ.
ಸಂಸರ್ಗ
ಡೆಂಡ್ರೈಟ್
ಆಕ್ಸಾನ್
ಕಾಯಕೋಶ
ಒಬ್ಬ ವ್ಯಕ್ತಿಯು ಹಗ್ಗವನ್ನು ಹಾವೆಂದು ಭಾವಿಸಿ ಓಡಿಹೋಗುತ್ತಾನೆ ಈ ಸಮಯದಲ್ಲಿ ಬಿಡುಗಡೆ ಆಗುವ ಹಾರ್ಮೋನ್.
ಅಡ್ರಿನಲಿನ್
ಇನ್ಸುಲಿನ್
ಟೆಸ್ಟೊಸ್ಟಿರಾನ್
ಥೈರಾಕ್ಸಿನ್.
ಮೆದುಳಿನ ಪ್ರಮುಖ ಕಾರ್ಯ
ಆಲೋಚನೆ
ಹೃದಯ ಬಡಿತವನ್ನು ನಿಯಂತ್ರಿಸುವಿಕೆ
ದೇಹದ ಸಮತೋಲನ
ಮೇಲಿನ ಎಲ್ಲವೂ
ವೈದ್ಯರು ಒಬ್ಬ ವ್ಯಕ್ತಿಗೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ ಏಕೆಂದರೆ.
ಅವನ ರಕ್ತದೊತ್ತಡ ಕಡಿಮೆಯಾಗುತ್ತದೆ
ಅವನ ಹೃದಯ ಬಡಿತ ನಿಧಾನವಾಗಿದೆ
ಅವನಿಗೆ ಗಾಯಿಟರ್ ಕಾಯಿಲೆ ಇದೆ
ಅವನ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿದೆ
ಈ ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿಯಾದ ಆಯ್ಕೆಯನ್ನು ಆರಿಸಿ
a) ಗಾಳಿಯ ಮೂಲಕ ಪರಾಗಸ್ಪರ್ಶ ವಾಗುವ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಪರಾಗರೇಣುಗಳನ್ನು ಉತ್ಪತ್ತಿ ಮಾಡಬೇಕಾಗುತ್ತದೆ.
b) ಪರಕೀಯ ಪರಾಗಸ್ಪರ್ಶ ವಾದ ಹೂವಿನಿಂದ ಉತ್ಪತ್ತಿಯಾದ ಬೀಜಗಳು ಬಲಹೀನ ಹಾಗೂ ಆರೋಗ್ಯಕರವಲ್ಲದ ಗಿಡಗಳನ್ನು ಉತ್ಪತ್ತಿಮಾಡುತ್ತವೆ.
a ತಪ್ಪು, b ಸರಿ
a ಸರಿ b ತಪ್ಪು
a & b ಎರಡು ಸರಿ
a & b ಎರಡು ತಪ್ಪು
ಅಂಗಿಕ ರೀತಿಯಿಂದ ಸಂತಾನೋತ್ಪತ್ತಿ ನಡೆಸುವ ಜೀವಿಗಳು.a ) ಬಾಳೆಗಿಡ. b)ನಾಯಿ c) ಯಿಸ್ಟ್ d) ಅಮೀಬಾ.
a, b, c
b, c, d
a, c, d
ಮೇಲಿನ ಎಲ್ಲವು
ಅಂಡಾಶಯದಿಂದ ಗರ್ಭಕೋಶಕ್ಕೆ ಸಂಪರ್ಕ ಕಲ್ಪಿಸುವ ನಾಳ
ಯುಸ್ಟೇಶಿಯನ್ ನಾಳ
ವೀರ್ಯಾನಳ
ಫೆಲೋಫಿಯನ್ ನಾಳ
ಸಂಗ್ರಾಹಕ ನಾಳ
ಈ ಕೆಳಗಿನವುಗಳಲ್ಲಿ ಗರ್ಭನಿರೋಧಕ ಸಾಧನ ವಲ್ಲ
ವಂಕಿ
ಕಾoಡೋಮ್
ಕಾಪರ್ ಟಿ
ಮಸೂರ
ಹೂವಿನಲ್ಲಿ ಗಂಡುಲಿಂಗಾಣು ವನ್ನು ಅಂಡಾಶಯದ ಕಡೆ ಸಾಗಿಸುವ ಭಾಗ.
ಶಲಾಕ ನಳಿಕೆ
ಶಲಾಕಾಗ್ರ
ಕೇಸರ
ಅಂಡಾಶಯ
ಹೊಸ ಪ್ರಭೇದ ಒಂದರ ಉಗಮಕ್ಕೆ ಕಾರಣವಾದ ಅಂಶಗಳು
A) ನಿಸರ್ಗದ ಆಯ್ಕೆ.B) ಅನುವಂಶಿಯ ದಿಕ್ಚ್ಯುತಿ. C) ಭೌಗೋಳಿಕ ಬೇರ್ಪಡುವಿಕೆ.D) ಉತ್ಪರಿವರ್ತನೆ.
A, B, C
A B C D
A C D
B C D
ಮಂಡಲ್ ರವರ ಏಕತಳೀಕರಣ ಪ್ರಯೋಗದ ಜೀನ್ ನಮೂನೆಯ ಅನುಪಾತ.
3:1
2:1:1
1:2:1
1:3
ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆ ಕೊಳ್ಳುವ ಗುಣಗಳು
ಜೀವಿತಾವಧಿಯಲ್ಲಿ ಕಳೆದುಕೊಂಡ ದೃಷ್ಟಿ
ಅಕಸ್ಮಾತ್ ತುಂಡಾದ ಕೈ ಬೆರಳು
ಕಣ್ಣು ಮತ್ತು ಕೂದಲಿನ ಬಣ್ಣ
ಹಸಿವಿನಿಂದ ಜೀರುಂಡೆಯ ತೂಕವು ಕಡಿಮೆಯಾಗಿರುವುದು
ಕೆಳಗಿನವುಗಳಲ್ಲಿ ಜೈವಿಕ ವಿಘಟನೆ ಗೊಳ್ಳದ ತ್ಯಾಜ್ಯ
ಸಗಣಿ
ಗೊಬ್ಬರ
ಪ್ಲಾಸ್ಟಿಕ್
ತರಕಾರಿ ತ್ಯಾಜ್ಯ
ನೀವು ಹೆಚ್ಚು ಪರಿಸರಸ್ನೇಹಿ ಯಾಗಲು ನಿಮ್ಮ ಹವ್ಯಾಸಗಳಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು
A) 5 R ವಿಧಾನಗಳನ್ನು ಪಾಲಿಸುವುದು. B) ಅವಶ್ಯಕತೆ ಇಲ್ಲದಿದ್ದಾಗ ಫ್ಯಾನ್ ಮತ್ತು ವಿದ್ಯುದ್ದೀಪಗಳನ್ನು ಆರಿಸುವುದು.C) ಸಮೂಹ ಸಾರಿಗೆಯನ್ನು ಬಳಸುವುದು.D) ಲಿಫ್ಟ್ ಗಳ ಬದಲಿಯಾಗಿ ಮೆಟ್ಟಿಲುಗಳನ್ನು ಬಳಸುವುದು.E)ತಾಪದೀಪ್ತ ವಿದ್ಯುತ್ ದೀಪಗಳ ಬದಲಿಗೆ ಪ್ರತಿದೀಪ್ತ ವಿದ್ಯುದ್ದೀಪಗಳನ್ನು ಬಳಸುವುದು.
A B D E
A C D E
A B C D
A B C D E
