NEW
Font size
Worksheets10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 02:By Nataraja &Bhagwat
Total questions: 10
Worksheet time: 5mins
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದ ನೀತಿ
ಸಹಾಯಕ ಸೈನ್ಯ ಪದ್ಧತಿ
ಹೊಸ ರಾಜ್ಯಗಳ ಮೇಲೆ ಯುದ್ಧಗಳು
ಕಂಪನಿಯ ಅಧೀನಕ್ಕೆ ಒಳಪ್ಪಟ್ಟಿರುವ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದು
ಕೊಟ್ಟಿರುವ ಎಲ್ಲಾ ಅಂಶಗಳು
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದ
ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿ
ದ್ವಿಮುಖ ಸರ್ಕಾರ
ಸಹಾಯಕ ಸೈನ್ಯ ಪದ್ಧತಿ
ಸಾಲ್ಬಾಯ್ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು:
ಭಾರತೀಯ ರಾಜನು ಬ್ರಿಟಿಷ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು. ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೆ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.
ರಾಜನ ಆಸ್ಥಾನದಲ್ಲಿ ಬ್ರಿಟಿಷ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು. ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ
ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ನ ಸಮ್ಮತಿ ಬೇಕು. ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
ಕೊಟ್ಟಿರುವ ಎಲ್ಲಾ ಅಂಶಗಳು
ಸಹಾಯಕ ಸೈನ್ಯ ಪದ್ಧತಿಯ ಪರಿಣಾಮವಾಗಿ
ಬ್ರಿಟಿಷರ ಸೈನಿಕ ನಿರ್ವಹಣೆ ಸುಲಭವಾಯಿತು
ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು.
ಭಾರತೀಯ ರಾಜ್ಯಗಳನ್ನು ಆರ್ಥಿಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು
ಕೊಟ್ಟಿರುವ ಎಲ್ಲಾ ಅಂಶಗಳು
ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ
ಸತಾರಾ
ಹೈದರಾಬಾದ್ ಸಂಸ್ಥಾನ
ತಂಜಾವೂರು,
ಮರಾಠ
ಎರಡನೇ ಆಂಗ್ಲೋ-ಮರಾಠ ಯುದ್ಧ (1803-1805): ಯುದ್ಧಕ್ಕೆ ಕಾರಣ
ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ,ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದನು
ಬ್ರಿಟೀಷರ ವಿಸ್ತರಣಾ ನೀತಿ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ನೀತಿ
ಕೊಟ್ಟಿರುವುದರಲ್ಲಿ ಎರಡನೇ ಆಂಗ್ಲೋ-ಮರಾಠ ಯುದ್ಧ (1803-1805): ಯುದ್ಧದ ಘಟನೆ &ಪರಿಣಾಮಗಳು
ಪೇಶ್ವೆಯು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು
ಪೇಶ್ವೆಯು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಭೋಂಸ್ಲೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು.
1803-1805ರವರೆಗೆ ಮರಾಠ ಮನೆತನಗಳ ಸೇನೆಯನ್ನು ವೆಲ್ಲೆಸ್ಲಿಯು ಅನೇಕ ಯುದ್ಧಗಳಲ್ಲಿ ಮಣಿಸಿದನು.
ಕೊಟ್ಟಿರುವ ಎಲ್ಲಾ ಅಂಶಗಳು
ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜಿನಾಮೆ ನೀಡಿ ಸ್ವದೇಶಕ್ಕೆ ಮರಳಿದನು ಏಕೆಂದರೆ
ಬ್ರಿಟೀಷರ ಸಾಮ್ರಾಜ್ಯ ವಿಸ್ತರಣೆ ಮುಗಿಯಿತು
ಅವನ ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು. ಇದರಿಂದ ತೀವ್ರ ಟೀಕೆಗೆ ಒಳಗಾಗಿ ಸ್ವದೇಶಕ್ಕೆ ಮರಳಿದನು
ಈಸ್ಟ್ ಇಂಡಿಯಾ ಆಳ್ವಿಕೆ ಮುಗಿಯಿತು
ವೆಲ್ಲೆಸ್ಲಿಗೆ ಸೋಲಾಯಿತು
ಬ್ರಿಟೀಷರ ವಿಸ್ತರಣಾ ನೀತಿಯ ಗುರಿಯನ್ನು ಸಾಧಿಸಲು ವೆಲ್ಲೆಸ್ಲಿಯು
ಮೂರು ವಿಧಾನಗಳನ್ನು ಅನುಸರಿಸಿದನು.ಅವುಗಳೆಂದರೆ
ಸಹಾಯಕ ಸೈನ್ಯ ಪದ್ಧತಿ
ಹೊಸ ರಾಜ್ಯಗಳ ಮೇಲೆ
ಯುದ್ಧಗಳು
ಈಗಾಗಲೇ ಕಂಪನಿಯ ಅಧೀನಕ್ಕೆ ಒಳಪ್ಪಟ್ಟಿರುವ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದು.
ಕೊಟ್ಟಿರುವ ಎಲ್ಲಾ ಅಂಶಗಳು
ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಕ ಮುಖಂಡನಾಗಿಸುವ ಮೂಲಕ
ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.
ಮರಾಠರ ಪ್ರಭಾವ ಹೆಚ್ಚಿಸಿದರು
ತಮ್ಮ ಅಧಿಕಾರ ಕಳೆದುಕೊಂಡರು
ಕೊಟ್ಟಿರುವ ಯಾವುದೂ ಅಲ್ಲ
