Font size
Worksheets10 ನೇ ತರಗತಿ ಅಧ್ಯಾಯ 10 ಬೆಳಕು -ಪ್ರತಿಫಲನ ಮತ್ತು ವಕ್ರೀಭವನ
Total questions: 10
Worksheet time: 24mins
ಬೆಳಕಿನ ಪ್ರತಿಫಲನದ ನಿಯಮಗಳನ್ನು ಗುರುತಿಸಿ
ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ
ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುವುದಿಲ್ಲ
ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನದ ಮೇಲ್ಮೈಗೆ ಎಳೆದ ಲಂಬ, ಈ ಮೂರೂ ಒಂದೇ ಸಮತಲದಲ್ಲಿರುತ್ತವೆ.
ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನದ ಮೇಲ್ಮೈಗೆ ಎಳೆದ ಲಂಬ, ಈ ಮೂರೂ ಒಂದೇ ಸಮತಲದಲ್ಲಿರುವುದಿಲ್ಲ
ಸತ್ಯ ಪ್ರತಿಬಿಂಬದ ಲಕ್ಷಣಗಳನ್ನು ಗುರುತಿಸಿ
ಸತ್ಯ ಪ್ರತಿಬಿಂಬ ದರ್ಪಣದ ಮುಂಭಾಗದಲ್ಲಿ
ಉಂಟಾಗುತ್ತದೆ.
ಸತ್ಯ ಪ್ರತಿಬಿಂಬ ತಲೆಕೆಳಗಾಗಿರುತ್ತದೆ.
ಸತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ
ಪಡೆಯಲು ಸಾಧ್ಯವಿಲ್ಲ
ಸತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ
ಪಡೆಯಬಹುದು.
ಸತ್ಯ ಪ್ರತಿಬಿಂಬ ನೇರವಾಗಿರುತ್ತದೆ.
ಮಿತ್ಯ ಪ್ರತಿಬಿಂಬದ ಲಕ್ಷಣಗಳನ್ನು ಗುರುತಿಸಿ
ಮಿತ್ಯ ಪ್ರತಿಬಿಂಬ ದರ್ಪಣದ ಹಿಂಭಾಗದಲ್ಲಿ
ಉಂಟಾಗುತ್ತದೆ.
ಮಿತ್ಯ ಪ್ರತಿಬಿಂಬ ತಲೆಕೆಳಗಾಗಿರುತ್ತದೆ.
ಮಿತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ
ಪಡೆಯಲು ಸಾಧ್ಯವಿಲ್ಲ
ಮಿತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ
ಪಡೆಯಬಹುದು.
ಮಿತ್ಯ ಪ್ರತಿಬಿಂಬ ನೇರವಾಗಿರುತ್ತದೆ.
ಗೋಳೀಯ ದರ್ಪಣದ ಪ್ರತಿಫಲಿಸುವ ಭಾಗವನ್ನು ಹೊಂದಿರುವ ಗೋಳದ ತ್ರಿಜ್ಯವನ್ನು ದರ್ಪಣದ ವಕ್ರತಾ ತ್ರಿಜ್ಯ ಎಂದು ಕರೆಯುವರು.(true/false)
(a)
ಗೋಳೀಯ ದರ್ಪಣದ ವಕ್ರತಾ ಕೇಂದ್ರ ಮತ್ತು ಧ್ರುವದ ಮೂಲಕ ಹಾದು ಹೋಗುವ ಸರಳರೇಖೆಯನ್ನು ಪ್ರಧಾನಾಕ್ಷ ಎನ್ನುವರು.(true/false)
(a)
ಗೋಳೀಯ ದರ್ಪಣದ ಧ್ರುವ ಮತ್ತು ಸಂಗಮ ಬಿಂದುಗಳ ನಡುವಿನ ದೂರವನ್ನು ಸಂಗಮದೂರ ಎನ್ನುವರು.(true/false)
(a)
ದರ್ಪಣದ ಪ್ರತಿಫಲಿಸುವ ಮೇಲ್ಮೈ (ವಲಯ) ಯನ್ನು ದ್ಯುತಿರಂಧ್ರಎನ್ನುವರು.(true/false)
(a)
ವಸ್ತು ಅನಂತ ದೂರದಲ್ಲಿ ಇದ್ದಾಗ, ನಿಮ್ನ ದರ್ಪಣದಿಂದ ಉಂಟಾಗುವ ಪ್ರತಿಬಿಂಬದ ರಚನೆ.
ಪ್ರತಿಬಿಂಬದ ಸ್ಥಾನ : ಪ್ರತಿಬಿಂಬ F ನಲ್ಲಿ ಉಂಟಾಗುತ್ತದೆ.
ಪ್ರತಿಬಿಂಬದ ಗಾತ್ರ : ಅತ್ಯಂತ ಚಿಕ್ಕದು (ಚುಕ್ಕೆ ಗಾತ್ರದಷ್ಟು)
ಪ್ರತಿಬಿಂಬದ ಗಾತ್ರ : ಅತ್ಯಂತ ದೊಡ್ಡದು
ಪ್ರತಿಬಿಂಬದ ಸ್ವಭಾವ : ಸತ್ಯ, ತಲೆಕೆಳಗಾದ ಪ್ರತಿಬಿಂಬ
ಪ್ರತಿಬಿಂಬದ ಸ್ವಭಾವ : ಮಿಥ್ಯ, ತಲೆಕೆಳಗಾದ ಪ್ರತಿಬಿಂಬ
ನಿಮ್ನ ದರ್ಪಣದ ಉಪಯೋಗಗಳನ್ನು ಗುರುತಿಸಿ
ನಿಮ್ನ ದರ್ಪಣಗಳನ್ನು ಸಾಮಾನ್ಯವಾಗಿ ಟಾರ್ಚ್‍ಗಳಲ್ಲಿ, ತಪಾಸಣಾದೀಪ ಮತ್ತು ವಾಹನಗಳ ಮುಂಭಾಗದ ದೀಪಗಳಲ್ಲಿ ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣ ಪುಂಜವನ್ನು ಪಡೆಯಲು ಬಳಸಲಾಗುತ್ತದೆ.
ವಾಹನದ ಹಿನ್ನೋಟದ ಕನ್ನಡಿಯಾಗಿ ಬಳಸುವರು
ದಂತವೈದ್ಯರು ರೋಗಿಗಳ ಹಲ್ಲುಗಳ ದೊಡ್ಡ ಪ್ರತಿಬಿಂಬಗಳನ್ನು ಪಡೆಯಲು ಬಳಸುವರು.
ಸೌರ ಕುಲುಮೆಗಳಲ್ಲಿ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು ದೊಡ್ಡ ನಿಮ್ನ ದರ್ಪಣಗಳನ್ನು ಬಳಸುವರು.
ಮುಖದ ದೊಡ್ಡ ಪ್ರತಿಬಿಂಬ ಪಡೆಯಲು ಕ್ಷೌರ ದರ್ಪಣ ಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ.
ಪೀನ ದರ್ಪಣದ ಉಪಯೋಗವನ್ನು ಗುರುತಿಸಿ
ಪೀನ ದರ್ಪಣಗಳನ್ನು ಸಾಮಾನ್ಯವಾಗಿ ಟಾರ್ಚ್‍ಗಳಲ್ಲಿ, ತಪಾಸಣಾದೀಪ ಮತ್ತು ವಾಹನಗಳ ಮುಂಭಾಗದ ದೀಪಗಳಲ್ಲಿ ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣ ಪುಂಜವನ್ನು ಪಡೆಯಲು ಬಳಸಲಾಗುತ್ತದೆ.
ಪೀನ ದರ್ಪಣಗಳನ್ನು ಸಾಮಾನ್ಯವಾಗಿ, ವಾಹನಗಳಲ್ಲಿ ಹಿನ್ನೋಟ ದರ್ಪಣವಾಗಿ ಬಳಸುತ್ತಾರೆ.
ಪೀನ ದರ್ಪಣಗಳನ್ನು ವಾಹನದ ಪಾಶ್ರ್ವಗಳಲ್ಲಿ, ವಾಹನ ಚಾಲಕನು ಹಿಂಬದಿಯಲ್ಲಿ ಬರುತ್ತಿರುವ ವಾಹನಗಳನ್ನು ವೀಕ್ಷಿಸಿ ಸುರಕ್ಷಿತ ಚಾಲನೆಗೆ ಅನುಕೂಲವಾಗುವಂತೆ ಜೋಡಿಸಿರುತ್ತಾರೆ.
ದಂತವೈದ್ಯರು ರೋಗಿಗಳ ಹಲ್ಲುಗಳ ದೊಡ್ಡ ಪ್ರತಿಬಿಂಬಗಳನ್ನು ಪಡೆಯಲು ಬಳಸುವರು.
ಸೌರ ಕುಲುಮೆಗಳಲ್ಲಿ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು ದೊಡ್ಡ ಪೀನ ದರ್ಪಣಗಳನ್ನು ಬಳಸುವರು.
ಮುಖದ ದೊಡ್ಡ ಪ್ರತಿಬಿಂಬ ಪಡೆಯಲು ಕ್ಷೌರ ದರ್ಪಣ ಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ.
