NEW
Font size
Worksheetsವಿಜ್ಞಾನ
Total questions: 28
Worksheet time: 14mins
ಹಾಳೆಗಳನ್ನಾಗಿ ಮಾಡಬಹುದಾದ ಲೋಹಗಳ ಗುಣವನ್ನು ------ ಎನ್ನುವರು.
ತನ್ಯತೆ
ಶಾಬ್ಧನ
ಕುಟ್ಯತೆ
ಕ್ರಿಯಾಕಾರತ್ವ
ತಂತಿಗಳನ್ನಾಗಿ ಮಾಡಬಹುದಾದ ಲೋಹಗಳ ಗುಣವನ್ನು ------ ಎನ್ನುವರು.
ಆಮ್ಲೀಯತೆ
ಪ್ರತ್ಯಾಮ್ಲೀಯತೆ
ಉಭಯವರ್ತಿ
ತನ್ಯತೆ
ಕೊಠಡಿ ಉಷ್ಣತೆ (20–22 °C) ಯಲ್ಲಿ ದ್ರವರೂಪದ ಲೋಹ ------
ಚಿನ್ನ
ಪಾದರಸ
ಬೆಳ್ಳಿ
ತಾಮ್ರ
ಕೊಠಡಿ ಉಷ್ಣತೆ (20–22 °C) ಯಲ್ಲಿ ದ್ರವರೂಪದ ಅಲೋಹ ------------
ಬ್ರೋಮಿನ್
ಆಕ್ಸಿಜನ್
ಅಯೋಡಿನ್
ಗಂಧಕ
ಇದು ನೈಸರ್ಗಿಕವಾಗಿ ದೊರೆಯುವ ಅತ್ಯಂತ ಕಠಿಣ ವಸ್ತುವಾಗಿದ್ದು, ಇದರ ಕರಗುವ ಬಿಂದು ಮತ್ತು ಕುದಿ ಬಿಂದು ಅತೀ ಹೆಚ್ಚು. ಹಾಗಾದರೆ ಆ ವಸ್ತು -----
ಗ್ರಾಫೈಟ್
ಕಲ್ಲಿದ್ದಲು
ವಜ್ರ
ಫುಲರೀನ್
ಈ ಕೆಳಗಿನ ಯಾವ ಲೋಹಗಳು ಮೃದುವಾಗಿದ್ದು, ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದುವನ್ನು ಹೊಂದಿವೆ?
ಕ್ಲೋರಿನ್, ಬ್ರೋಮಿನ್ ಮತ್ತು ಅಯೋಡಿನ್
ನಿಯಾನ್, ಆರ್ಗಾನ್ ಮತ್ತು ಕ್ರಿಪ್ಟಾನ್
ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್
ಸೋಡಿಯಂ, ಪೊಟಾಷಿಯಂ ಮತ್ತು ಲೀಥಿಯಂ
ಆಮ್ಲ ಮತ್ತು ಪ್ರತ್ಯಾಮ್ಲಗಳ ಜೊತೆ ವರ್ತಿಸಿ, ನೀರು ಮತ್ತು ಲವಣಗಳನ್ನು ಉಂಟುಮಾಡುವ ಲೋಹದ ಆಕ್ಸೈಡ್ ಗಳಿಗೆ --------ಎನ್ನುವರು.
ಅಲೋಹದ ಆಕ್ಸೈಡ್
ಉಭಯವರ್ತಿ ಆಕ್ಸೈಡ್
ಆಮ್ಲೀಯ ಆಕ್ಸೈಡ್
ಪ್ರತ್ಯಾಮ್ಲೀಯ ಆಕ್ಸೈಡ್
ಈ ಕೆಳಗಿನ ಯಾವ ಲೋಹಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಡುವುದರಿಂದ ಗಾಳಿಯೊಂದಿಗೆ ಕ್ಷಿಪ್ರವಾಗಿ ವರ್ತಿಸುವುದನ್ನು ತಪ್ಪಿಸಬಹುದು?
ಚಿನ್ನ ಮತ್ತು ಬೆಳ್ಳಿ
ಸೋಡಿಯಂ ಮತ್ತು ಪೊಟಾಷಿಯಂ
ಸತು ಮತ್ತು ಸೀಸ
ಮೆಗ್ನೀಸಿಯಂ ಮತ್ತು ಅಲ್ಯೂಮಿನಿಯಂ
ಸೋಡಿಯಂ, ಪೊಟಾಷಿಯಂ ಮತ್ತು ಕ್ಯಾಲ್ಸಿಯಂ - ಇವುಗಳಲ್ಲಿ ಯಾವ ಧಾತುಗಳು ತಣ್ಣೀರಿನೊಂದಿಗೆ ರಭಸವಾಗಿ ವರ್ತಿಸುತ್ತವೆ?
ಸೋಡಿಯಂ
ಪೊಟಾಷಿಯಂ
ಕ್ಯಾಲ್ಸಿಯಂ
ಸೋಡಿಯಂ ಮತ್ತು ಪೊಟಾಷಿಯಂ
ಅಲ್ಯೂಮಿನಿಯಂ, ಸೀಸ, ಸತು ಮತ್ತು ಮೆಗ್ನೀಸಿಯಂಗಳನ್ನು ಗಾಳಿಗೆ ತೆರೆದಿಟ್ಟಾಗ ಅವುಗಳ ಮೇಲ್ಮೈನಲ್ಲಿ ತೆಳುವಾದ ಆಕ್ಸೈಡ್ ಪದರ ಉಂಟಾಗುತ್ತದೆ. ಹಾಗಾದರೆ ಆಕ್ಸೈಡ್ ಪದರದ ಮಹತ್ವ ಏನು?
ಎಲ್ಲವೂ ಸರಿ.
ಲೋಹವು ಶೀಘ್ರವಾಗಿ ನಶಿಸಿಹೋಗುವಂತೆ ಮಾಡುತ್ತದೆ.
ಹೊರಪದರವು ಇನ್ನಷ್ಟು ಉತ್ಕರ್ಷಣೆ ಹೊಂದುವುದನ್ನು ತಡೆಯುತ್ತದೆ.
ಹೊರಪದರದ ಉತ್ಕರ್ಷಣ ಕ್ರಿಯೆ ಮುಂದುವರಿಯುವಂತೆ ಮಾಡುತ್ತದೆ.
ಲೋಹಗಳು ನೈಟ್ರಿಕ್ ಆಮ್ಲದ ಜೊತೆ ವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ. ಕಾರಣ ನೈಟ್ರಿಕ್ ಆಮ್ಲ ಒಂದು -------
ಪ್ರಬಲ ಉತ್ಕರ್ಷಕ
ಪ್ರಬಲ ಅಪಕರ್ಷಕ
ಕಡಿಮೆ ಉತ್ಕರ್ಷಕ
ಕಡಿಮೆ ಅಪಕರ್ಷಕ
ಸಂಪೂರ್ಣ ಭರ್ತಿಯಾದ ವೇಲೆನ್ಸ್ ಕವಚಗಳನ್ನು ಹೊಂದುವ ಲೋಹಗಳ ಪ್ರವೃತ್ತಿಯನ್ನು -------- ಎನ್ನುವರು.
ಗ್ಯಾಲ್ವನೀಕರಣ
ಲೋಹಗಳ ಕ್ರಿಯಾಶೀಲತೆ
ಆನೋಡೀಕರಣ
ಅಪಕರ್ಷಣೆ
ಇಲೆಕ್ಟ್ರಾನುಗಳು ಲೋಹದಿಂದ ಅಲೋಹಕ್ಕೆ ವರ್ಗಾವಣೆಯಾಗುವುದರ ಮೂಲಕ ಉಂಟಾಗುವ ಸಂಯುಕ್ತಗಳಿಗೆ------ಎನ್ನುವರು.
ಸಾವಯವ ಸಂಯುಕ್ತಗಳು
ಕೋವೇಲೆಂಟ್ ಸಂಯುಕ್ತಗಳು
ಅಯಾನಿಕ ಸಂಯುಕ್ತಗಳು.
ನಿರವಯವ ಸಂಯುಕ್ತಗಳು
ಇವುಗಳಲ್ಲಿ ಕಾರ್ಬನ್ ನಿಂದ ಅಪಕರ್ಷಿಸಿ ಲೋಹೋದ್ಧರಣ ಮಾಡಬಹುದಾದ ಧಾತುಗಳನ್ನು ಗುರುತಿಸಿ.
Ag ಮತ್ತು Au
K ಮತ್ತು Na
Ca, Mg ಮತ್ತು Al
Zn, Fe, Pb ಮತ್ತು Cu
ಹೆಚ್ಚಿನ ಪ್ರಮಾಣದಲ್ಲಿ ನಿರ್ದಿಷ್ಟ ಲೋಹವನ್ನು ಹೊಂದಿರುವ ಖನಿಜಗಳಿಗೆ------------ಎನ್ನುವರು.
ಅದುರು
ಧಾತು
ಸಂಯುಕ್ತ
ದ್ರಾವಕ
ಅಧಿಕ ಪ್ರಮಾಣದ ಗಾಳಿ ಮತ್ತು ಹೆಚ್ಚಿನ ಉಷ್ಣತೆಯಲ್ಲಿ ಸಲ್ಫೈಡ್ ಅದುರನ್ನು ಆಕ್ಸೈಡನ್ನಾಗಿ ಪರಿವರ್ತಿಸುವ ಕ್ರಿಯೆಗೆ--------ಎನ್ನುವರು.
ಕಾಸುವಿಕೆ
ಸಾರವರ್ಧನೆ
ಹುರಿಯುವಿಕೆ
ವಿದ್ಯುದ್ವಿಭಜನೆ
ಲೋಹದ ಆಕ್ಸೈಡ್ ಗಳು ಅಲ್ಯೂಮಿನಿಯಂನೊಂದಿಗೆ ವರ್ತಿಸಿದಾಗ ಉಂಟಾಗುವ ಅತಿಬಹಿರುಷ್ಣಕ ಉತ್ಕರ್ಷಣ ಮತ್ತು ಅಪಕರ್ಷಣ ಸ್ಥಾನಪಲ್ಲಟ ಕ್ರಿಯೆಗೆ------ಎನ್ನುವರು.
ಅಪಕರ್ಷಿಸುವಿಕೆ
ಕಾಸುವಿಕೆ
ಥರ್ಮೈಟ್ ಕ್ರಿಯೆ
ಗ್ಯಾಲ್ವನೀಕರಣ
ಮುರಿದ ರೈಲ್ವೆ ಹಳಿ ಮತ್ತು ಮುರಿದ ಯಂತ್ರಗಳ ಭಾಗಗಳ ಜೋಡಣೆಯಲ್ಲಿ ಬಳಸುವ ಅತಿ ಬಹಿರುಷ್ಣಕ ಕ್ರಿಯೆ -----
ಗ್ಯಾಲ್ವನೀಕರಣ
ಥರ್ಮೈಟ್ ಕ್ರಿಯೆ
ಆನೋಡೀಕರಣ
ಪುಷ್ಟೀಕರಣ
ಅತ್ಯಂತ ಕ್ರಿಯಾಶೀಲ ಧಾತುಗಳಾದ ಸೋಡಿಯಂ, ಮೆಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂ ಲೋಹಗಳ ಆಕ್ಸೈಡ್ ಗಳನ್ನು ಕಾರ್ಬನ್ ನಿಂದ ಅಪಕರ್ಷಿಸಲು ಸಾಧ್ಯವಿಲ್ಲ. ಕಾರಣ------
ಈ ಲೋಹಗಳು ಕಾರ್ಬನ್ ಗಿಂತ ಆಕ್ಸಿಜನ್ ಕಡೆಗೆ ಹೆಚ್ಚು ಆಕರ್ಷಣೆ ಹೊಂದಿವೆ.
ಈ ಲೋಹಗಳು ಆಕ್ಸಿಜನ್ ಗಿಂತ ಕಾರ್ಬನ್ ಕಡೆಗೆ ಹೆಚ್ಚು ಆಕರ್ಷಣೆ ಹೊಂದಿವೆ.
ಈ ಲೋಹಗಳ ಕ್ರಿಯಾಶೀಲತೆ ಕಡಿಮೆ
ಕಾರ್ಬನ್ ಅಪಕರ್ಷಣಕಾರಿ ಅಲ್ಲ.
ಕ್ರಿಯಾಶೀಲತೆ ಸರಣಿಯ ಮೇಲ್ಭಾಗದಲ್ಲಿರುವ ಧಾತುಗಳನ್ನು ಯಾವ ವಿಧಾನದಿಂದ ಉದ್ಧರಣೆ ಮಾಡುತ್ತಾರೆ?
ಗ್ಯಾಲ್ವನೀಕರಣ
ಉತ್ಕರ್ಷಣ
ಕಾಸುವಿಕೆ
ವಿದ್ಯುದ್ವಿಭಜನೆ
ವಿದ್ಯುದ್ವಿಭಜನೆ ಕ್ರಿಯೆಯಲ್ಲಿ ಶುದ್ಧ ಲೋಹ -------ನಲ್ಲಿ ಸಂಗ್ರಹವಾಗುತ್ತದೆ.
ಆನೋಡ್
ಧನಾಗ್ರ
ಕ್ಯಾಥೋಡ್
ದ್ರಾವಣ
ತಾಮ್ರವನ್ನು ಗಾಳಿಗೆ ತರೆದಿಟ್ಟಾಗ ಅದು ತನ್ನ ಹೊಳೆಯುತ್ತಿರುವ ಕಂದು ಪದರವನ್ನು ಕಳೆದುಕೊಂಡು ಹಸಿರು ಪದರವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಕಾರಣ------ಉಂಟಾಗಿರುವುದು.
ತಾಮ್ರದ ಕಾರ್ಬೋನೇಟ್
ತಾಮ್ರದ ಆಕ್ಸೈಡ್
ತಾಮ್ರದ ಸಲ್ಫೇಟ್
ತಾಮ್ರದ ಕ್ಲೋರೈಡ್
ಕಬ್ಬಿಣವನ್ನು ಗಾಳಿಗೆ ತೆರೆದಿಟ್ಟಾಗ ಕಂದುಬಣ್ಣದ ಚಕ್ಕೆಯಂತಹ ಪದರ ಉಂಟಾಗುತ್ತದೆ. ಇದಕ್ಕೆ ಕಾರಣ ಗಾಳಿಯಲ್ಲಿರುವ ------ ಮತ್ತು -------
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಆಕ್ಸಿಜನ್ ಮತ್ತು ನೀರು
ಹೈಡ್ರೋಜನ್ ಮತ್ತು ನೀರು
ನೈಟ್ರೋಜನ್ ಮತ್ತು ನೀರು
ಕಬ್ಬಿಣದ ಜಲೀಯ ಆಕ್ಸೈಡ್ ಅನ್ನು ------ ಎನ್ನುವರು.
ಮಡ್ಡಿ
ಅಮಾಲ್ಗಂ
ತುಕ್ಕು
ದ್ರಾವಣ
ಮಿಶ್ರ ಲೋಹವಾದ ಹಿತ್ತಾಳೆಯ ಘಟಕಗಳು ------- ಮತ್ತು -------
ತಾಮ್ರ ಮತ್ತು ತವರ
ಸೀಸ ಮತ್ತು ತವರ
ಸೀಸ ಮತ್ತು ಸತು
ತಾಮ್ರ ಮತ್ತು ಸತು
ತಾಮ್ರ ಮತ್ತು ತವರಗಳಿಂದ ಉಂಟಾದ ಮಿಶ್ರ ಲೋಹ--------
ಕಂಚು
ಬೆಸುಗೆ ಲೋಹ
ಹಿತ್ತಾಳೆ
ಉಕ್ಕು
ಎರಡು ಅಥವಾ ಹೆಚ್ಚು ಲೋಹ ಅಥವಾ ಅಲೋಹಗಳ ಸಮರೂಪದ ಮಿಶ್ರಣವನ್ನು ------- ಎನ್ನುವರು.
ಮಡ್ಡಿ
ಮಿಶ್ರ ಲೋಹ
ತುಕ್ಕು
ಬೆಸುಗೆ ಲೋಹ
ಉಕ್ಕು ಮತ್ತು ಕಬ್ಬಿಣವನ್ನು ತುಕ್ಕಿನಿಂದ ರಕ್ಷಿಸಲು ಮಾಡುವ ಸತುವಿನ ತೆಳುವಾದ ಲೇಪನಕ್ಕೆ ----- ಎನ್ನುವರು.
ಆನೋಡೀಕರಣ
ಪುಷ್ಟೀಕರಣ
ಗ್ಯಾಲ್ವನೀಕರಣ
ಥರ್ಮೈಟ್ ಕ್ರಿಯೆ
