wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 25

Worksheet time: 13mins

Name
Class
Date
1.

ಒಂದು ಶಕ್ತಿಯ ಆಕಾರವು ಜೀವಿಯ ದೇಹದ ಹೊರಗಿನಿಂದ ಒಳಗೆ ವರ್ಗಾವಣೆಯಾವ ಪ್ರಕ್ರಿಯೆಯನ್ನು _______ಎನ್ನುವರು

a)

ಉಸಿರಾಟ

b)

ವಿಸರ್ಜನೆ

c)

ಆಹಾರ

d)

ಸಾಗಾಣಿಕೆ

2.

ದೇಹದ ಹೊರಭಾಗದಿಂದ ಆಕ್ಸಿಜನ್ ಅನ್ನು ಪಡೆದುಕೊಂಡು ಕೋಶೀಯ ಅಗತ್ಯಗಳಿಗಾಗಿ ಆಹಾರ ಪದಾರ್ಥಗಳನ್ನು ವಿಭಜಿಸಿ ಬಳಸಿಕೊಳ್ಳುವ ಪ್ರಕ್ರಿಯೆ _____ಎನ್ನುವರು

a)

ಉಸಿರಾಟ

b)

ವಿಸರ್ಜನೆ

c)

ಆಹಾರ

d)

ಸಾಗಾಣಿಕೆ

3.

ತ್ಯಾಜ್ಯ ಉತ್ಪನ್ನಗಳನ್ನು ದೇಹದಿಂದ ತೆಗೆದು ಹೊರ ಹಾಕುವ ಪ್ರಕ್ರಿಯೆ ____ಎನ್ನುವರು

a)

ಉಸಿರಾಟ

b)

ವಿಸರ್ಜನೆ

c)

ಆಹಾರ

d)

ಸಾಗಾಣಿಕೆ

4.

ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವುದು ಮತ್ತು ನೀರಿನ ಅಣುಗಳು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲ್ಪಡುವುದು ಇದು ಯಾವ ಪ್ರಕ್ರಿಯೆಯಾಗಿದೆ

a)

ದ್ಯುತಿ ಸಂಶ್ಲೇಷಣ ಕ್ರಿಯೆ

b)

ವಿಸರ್ಜನೆ ಕ್ರಿಯೆ

c)

ಉಸಿರಾಟ ಕ್ರಿಯೆ

d)

ವಿಸರಣ ಕ್ರಿಯೆ

5.

ಆಹಾರ ವಸ್ತುಗಳನ್ನು ದೇಹದ ಹೊರಗೆ ವಿಭಜಿಸಿ ನಂತರ ಅದನ್ನು ಹೇರಿಕೊಳ್ಳುವ ಜೀವಿಗಳು

a)

ಹಸು

b)

ಸಿoಹ

c)

ಜಿಗಣೆ

d)

ಯೀಸ್ಟ್

6.

ಲಾಲಾರಸ ಗ್ರಂಥಿಯಿಂದ ಸ್ರವಿಸಲ್ಪಡುವ ದ್ರವ

a)

ಲಾವಾರಸ

b)

ಲಾಲಾರಸ

c)

ಅಡ್ರಿನಾಲಿನ್

d)

ಥೈರಾಕ್ಸಿನ್

7.

ಲಾಲಾರಸದಲ್ಲಿರುವ ಕಿಣ್ವ

a)

ಪೆಪ್ಸಿನ್

b)

ರೆನೀನ್

c)

ಅಮೈಲೇಸ್

d)

ಇನ್ಸುಲಿನ್

8.

ಇವುಗಳಲ್ಲಿ ಯಾವುದು ಪರಾವಲಂಬಿ ಪೋಷಣ ತಂತ್ರವನ್ನು ಹೊಂದಿರುವ ಜೀವಿ ಅಲ್ಲ

a)

ಹೇನು

b)

ಜಿಗಣೆ

c)

ಲಾಡಿ ಹುಳು

d)

ಶಿಲೀಂದ್ರ

9.

ಮಾನವರ ಜಠರದಲ್ಲಿರುವ ಆಮ್ಲ ಯಾವುದು

a)

ನೈಟ್ರಿಕ್ ಆಮ್ಲ

b)

ಹೈಡ್ರೊಕ್ಲೋರಿಕ್ ಆಮ್ಲ

c)

ಸಲ್ಫ್ಯೂರಿಕ್ ಆಮ್ಲ

d)

ಸಿಟ್ರಿಕ್ ಆಮ್ಲ

10.

ಪಿಷ್ಟ ಎಂಬ ಸಂಕೀರ್ಣ ಅಣುವನ್ನು ವಿಭಜಿಸಿ ಸಕ್ಕರೆಯನ್ನು ಬಿಡುಗಡೆ ಮಾಡುವ ಕಿಣ್ವ

a)

ಟ್ರಿಪ್ಸಿನ್

b)

ಪೆಪ್ಸಿನ್

c)

ಇನ್ಸುಲಿನ್

d)

ಅಮೈಲೇಸ್

11.

ಮಾನವನ ಜೀರ್ಣಾಂಗ ವ್ಯವಸ್ಥೆಯ ಯಾವ ಭಾಗದಲ್ಲಿ ಆಹಾರವು ಸಂಪೂರ್ಣ ಪಚನವಾಗುತ್ತದೆ

a)

ಅನ್ನನಾಳ

b)

ಜಠರ

c)

ಸಣ್ಣ ಕರುಳು

d)

ದೊಡ್ಡ ಕರುಳು

12.

ಜೀರ್ಣವಾದ ಆಹಾರವು ಕರಳಿನ ಗೋಡೆಗಳಿಂದ ಹೀರಲ್ಪಡುವ ಬಾಗ

a)

ವಿಲ್ಲೈ ಗಳು

b)

ಸ್ನಾಯುಗಳು

c)

ಜೀವಕೋಶಗಳು

d)

ಮೂತ್ರಪಿಂಡಗಳು

13.

ಎಮಲ್ಸೀಕರಣಗೊಂಡ ಕೊಬ್ಬನ್ನು ವಿಭಜಿಸಲು ಸಹಕಾರಿಯಾಗಿರುವ ಕಿಣ್ವ

a)

ಅಮಲೈಸ್

b)

ಲೈಪೇಸ್

c)

ಟ್ರಿಪ್ಸಿನ್

d)

ಇನ್ಸುಲಿನ್

14.

6ಕಾರ್ಬನ್ ಅಣುವಾದ ಗ್ಲುಕೋಸ್ ಅನ್ನು 3ಕಾರ್ಬನ್ ಅಣುವಾದ ಪೈರುವೇಟ್ ಆಗಿ ವಿಭಜಿಸುವ ಪ್ರಕ್ರಿಯೆ ಜೀವಕೋಶದ ಯಾವ ಭಾಗದಲ್ಲಿ ನಡೆಯುತ್ತದೆ

a)

ಕೋಶಕೇಂದ್ರ

b)

ಮೈಟೋಕಾಂಡ್ರಿಯಾ

c)

ಕೋಶದ್ರವ್ಯ

d)

ಗಾಲ್ಗಿ ಸಂಕೀರ್ಣ

15.

ನಮ್ಮ ಸ್ನಾಯು ಜೀವಕೋಶಗಳಲ್ಲಿ ಆಕ್ಸಿಜನ್ ಕೊರತೆ ಇದ್ದಾಗ ಪೈರುವೇಟ್ ವಿಭಜನೆಯಾಗಿ ________ಬಿಡುಗಡೆಯಾಗುತ್ತದೆ

a)

ಲ್ಯಾಕ್ಟಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಸಲ್ಫ್ಯೂರಿಕ್ ಆಮ್ಲ

d)

ಹೈಡ್ರೊಕ್ಲೋರಿಕ್ ಆಮ್ಲ

16.

ನಮ್ಮ ಸ್ನಾಯುಗಳ ಸೆಡೆತಕ್ಕೆ ಕಾರಣವೇನು

a)

ಸಿಟ್ರಿಕ್ ಆಮ್ಲ

b)

ಲ್ಯಾಕ್ಟಿಕ್ ಆಮ್ಲ

c)

ಹೈಡ್ರೊಕ್ಲೋರಿಕ್ ಆಮ್ಲ

d)

ಸಲ್ಫ್ಯೂರಿಕ್ ಆಮ್ಲ

17.

ಜಲಚರಗಳ ಉಸಿರಾಟದ ದರವು ನೆಲ ಜೀವಿಗಳಲ್ಲಿ ಕಂಡುಬರುವುದಕ್ಕಿಂತ ಸಾಕಷ್ಟು ವೇಗವಾಗಿರುತ್ತದೆ ಕಾರಣ ?

a)

ಗಾಳಿಯಲ್ಲಿರುವ ಆಕ್ಸಿಜನ್ ಪ್ರಮಾಣಕ್ಕೆ ಹೋಲಿಸಿದರೆ ನೀರಿನಲ್ಲಿ ಕರಗಿರುವ ಆಕ್ಸಿಜನ್ ಪ್ರಮಾಣ ಸಾಕಷ್ಟು ಕಡಿಮೆ ಇರುತ್ತದೆ

b)

ನೀರಿನಲ್ಲಿರುವ ಆಕ್ಷಿಜೆನ್ ಪ್ರಮಾಣಕ್ಕೆ ಹೋಲಿಸಿದರೆ ಗಾಳಿಯಲ್ಲಿ ಆಕ್ಸಿಜನ್ ಪ್ರಮಾಣ ಸಾಕಷ್ಟು ಕಡಿಮೆ ಇರುತ್ತದೆ

c)

ಗಾಳಿ ಮತ್ತು ನೀರಿನಲ್ಲಿ ಆಕ್ಸಿಜನ್ ಪ್ರಮಾಣ ಸಮವಾಗಿರುತ್ತದೆ

d)

ಗಾಳಿ ಮತ್ತು ನಗರದಲ್ಲಿ ಆಕ್ಸಿಜನ್ ಪ್ರಮಾಣ ಸಾಕಷ್ಟು ಕಡಿಮೆ ಇದೆ

18.

ಮಾನವನ ಹೃದಯದ ಕಾರ್ಯವೇನು ?

a)

ರಕ್ತದ ಶುದ್ಧೀಕರಣ

b)

ರಕ್ತದ ಸಾಗಾಣಿಕೆ

c)

ರಕ್ತದ ವಿಸರಣೆ

d)

ರಕ್ತದ ಅಭಿಸರಣೆ

19.

ಶ್ವಾಸಕೋಶಗಳಿಂದ ಆಕ್ಸಿಜನ್ ಸಹಿತ ರಕ್ತವನ್ನು ಹೃದಯಕ್ಕೆ ತರುವ ರಕ್ತನಾಳ ಯಾವುದು ?

a)

ಪುಪ್ಪಸಕ ಅಪದಮನಿ

b)

ಉಚ್ಛ ಅಭಿಧಮನಿ

c)

ನೀಚ ಅಭಿದಮನಿ

d)

ಪುಪ್ಪಸಕ ಅಭಿಧಮನಿ

20.

ಆಕ್ಸಿಜನ್ ಸಹಿತ ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಜೀವಕೋಶಗಳಿಗೂ ಸಾಗಾಣಿಕೆ ಮಾಡುವ ರಕ್ತನಾಳ ಯಾವುದು ?

a)

ಪುಪ್ಪಸ ಕ ಅಪದಮನಿ

b)

ಪುಪ್ಪಸದ ಅಬಿದಮನಿ

c)

ಮಹಾಪದಮನಿ

d)

ಉಚ್ಚ ಅಭಿಧಮನಿ

21.

ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು ?

a)

ಸ್ಟಿಗ್ಮೋಮಾನೋಮೀಟರ್

b)

ಸ್ಟೆತೋಸ್ಕೋಪ್

c)

ಓಡೋಮೀಟರ್

d)

ಸ್ಪೀಡೋಮೀಟರ್

22.

ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ________ಎನ್ನುವರು

a)

ವಿಸ್ತರಣೆ

b)

ಅಭಿಸರಣೆ

c)

ವಸ್ತುಸ್ಥನಾoತರಣ

d)

ಬಾಷ್ಪ ವಿಸರ್ಜನೆ

23.

ನೆಫ್ರಾನ್ ಕಾರ್ಯವೇನು ?

a)

ರಕ್ತದ ಶುದ್ದಿಕರಣ

b)

ರಕ್ತದ ಸಾಗಾಣಿಕೆ

c)

ವಿಸರಣೆ

d)

ಅಬಿಸರಣೆ

24.

ರಕ್ತದಿಂದ ಯೂರಿಯಾ ಅಥವಾ ಯೂರಿಕ್ ಆಮ್ಲ ಗಳಂತಹ ನೈಟ್ರೋಜನ್ ಯುಕ್ತ ತಾಜ್ಯವಸ್ತುಗಳನ್ನು ಹೊರಹಾಕುವ ದೇಹದ ಭಾಗ ಯಾವುದು ?

a)

ಹೃದಯ

b)

ಅನ್ನನಾಳ

c)

ಮೂತ್ರಪಿಂಡ

d)

ಜಠರ

25.

ಸಸ್ಯಗಳಲ್ಲಿ ನೀರನ್ನು ಸಾಗಾಣಿಕೆ ಮಾಡುವ ಅಂಗಾಂಶ ಯಾವುದು ?

a)

ಕೈಲo

b)

ಫ್ಲೋಯಂ

c)

ಕೋಲಂಕೈಮ

d)

ಸ್ಕ್ಲೀರೆಂಕೈಮ