wayground logo

Free Printable Worksheets

NEW

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 15

Worksheet time: 6mins

Name
Class
Date
1.

'ವೋಲ್ಟ್' ಎಂಬುದು ಇದರ SI ಏಕಮಾನವಾಗಿದೆ

a)

ವಿದ್ಯುದಾವೇಶ

b)

ವಿದ್ಯುತ್ ಸಾಮರ್ಥ್ಯ

c)

ವಿದ್ಯುತ್ ವಿಭವಾಂತರ

d)

ವಿದ್ಯುತ್ ಪ್ರವಾಹ

2.

ವಿದ್ಯುತ್ ಮಂಡಲದಲ್ಲಿ ಬಳಸುವ ಈ ಸಾಂಪ್ರದಾಯಿಕ ಚಿಹ್ನೆಯ ಹೆಸರೇನು ?

a)

ಅಮ್ಮೀಟರ್

b)

ರಿಯೋಸ್ಟ್ಯಾಟ್

c)

ಸೇರ್ಪಡೆ ಇಲ್ಲದೇ ದಾಟಿದ ತಂತಿ

d)

ರೋಧಕದ ರೋಧ

3.

ವಾಹಕದಲ್ಲಿ ಎಲೆಕ್ಟ್ರಾನುಗಳು ಚಲಿಸಲು ಇದು ಅವಶ್ಯಕ

a)

ವಿಭವಾಂತರ

b)

ಅಮ್ಮೀಟರ್

c)

ರಿಯೋಸ್ಟ್ಯಾಟ್

d)

ವಿದ್ಯುತ್ ರೋಧ

4.

12 V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 3 C ಆವೇಶಗಳು ಚಲಿಸಿದಾಗ ಆಗುವ ಕೆಲಸ ಎಷ್ಟು ?

a)

24 J

b)

36 J

c)

6 J

d)

4 J

5.

ವಿದ್ಯುತ್ಪ್ರವಾಹದ ಇರುವಿಕೆಯನ್ನು ಕಂಡುಹಿಡಿಯಲು ಬಳಸುವ ಸಾಧನ

a)

ಅಮ್ಮೀಟರ್

b)

ವೋಲ್ಟ್ ಮೀಟರ್

c)

ರಿಯೋಸ್ಟ್ಯಾಟ್

d)

ಗ್ಯಾಲ್ವನೋಮೀಟರ್

6.

ಈ ಕೆಳಗಿನವುಗಳಲ್ಲಿ ಯಾವುದು ಮಿಶ್ರಲೋಹಗಳ ಗುಣವಲ್ಲ

a)

ರೋಧಶೀಲತೆ ಕಡಿಮೆ

b)

ಸುಲಭವಾಗಿ ದಹಿಸುವುದಿಲ್ಲ

c)

ದೀರ್ಘ ಬಾಳಿಕೆ ಬರುತ್ತವೆ

d)

ರೋಧಶೀಲತೆ ಹೆಚ್ಚು

7.

ರೋಧಕಗಳ ಸರಣಿ ಕ್ರಮದ ಮಂಡಲಕ್ಕಿಂತ ಸಮಾಂತರ ಮಂಡಲವು ಹೆಚ್ಚು ಉಪಯುಕ್ತ ಏಕೆಂದರೆ -

a)

ಉಪಕರಣಗಳ ಮೂಲಕ ವಿದ್ಯುತ್ ಪ್ರವಾಹವನ್ನು ವಿಭಜಿಸುತ್ತದೆ.

b)

ಉಪಕರಣಗಳು ವಿಭಿನ್ನ ರೋಧವನ್ನು ಹೊಂದಿರುತ್ತವೆ.

c)

ವಿಭಿನ್ನ ಪ್ರಮಾಣದ ವಿದ್ಯುತ್ ಪ್ರವಾಹದ ಅಗತ್ಯತೆ ಇರುತ್ತದೆ.

d)

ಈ ಮೇಲಿನ ಎಲ್ಲವೂ

8.

ವಿದ್ಯುತ್ ರೋಧಶೀಲತೆಯ SI ಏಕಮಾನ

a)

ವ್ಯಾಟ್

b)

ಓಮ್-ಮೀಟರ್

c)

ಕೂಲಮ್

d)

ಓಮ್

9.

ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ

a)

ಮಂಡಲದಲ್ಲಿ ವೋಲ್ಟ್ ಮೀಟರನ್ನು ಸಮಾಂತರವಾಗಿ ಜೋಡಿಸಬೇಕು.

b)

ಫ್ಯೂಸನ್ನು ವಿದ್ಯುತ್ ಸಾಧನಗಳೊಂದಿಗೆ ಸರಣಿ ಕ್ರಮದಲ್ಲಿ ಜೋಡಿಸಬೇಕು.

c)

ಮಂಡಲದಲ್ಲಿ ಅಮ್ಮೀಟರನ್ನು ಸರಣಿ ಕ್ರಮದಲ್ಲಿ ಜೋಡಣೆ ಮಾಡಬೇಕು.

d)

ಈ ಮೇಲಿನ ಎಲ್ಲವೂ ಸರಿ

10.

ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ

a)

ವ್ಯಾಟ್

b)

ಕಿಲೋ-ವ್ಯಾಟ್

c)

ಕಿಲೋ-ವ್ಯಾಟ್-ಗಂಟೆ

d)

ಕಿಲೋ-ವೋಲ್ಟ್-ಗಂಟೆ

11.

ವಾಹಕದ ರೋಧವು

a)

ಎಲೆಕ್ಟ್ರಾನುಗಳ ಚಲನೆಗೆ ಸಹಕಾರಿ

b)

ಎಲೆಕ್ಟ್ರಾನುಗಳ ಚಲನೆಗೆ ಅಡ್ಡಿ

c)

ವಾಹಕದ ಅಡ್ಡಕೊಯ್ತವನ್ನು ಅವಲಂಬಿಸಿಲ್ಲ

d)

ಈ ಮೇಲಿನ ಎಲ್ಲವೂ ಸರಿ

12.

ಒಂದು ವಾಹಕದಲ್ಲಿ 3000 ವಿದ್ಯುದಾವೇಶ ಕಣಗಳು 5 ನಿಮಿಷಗಳ ಕಾಲ ಹರಿದಾಗ ಅದರಲ್ಲಿನ ವಿದ್ಯುತ್ ಪ್ರವಾಹ ಎಷ್ಟು ?

a)

600 ಆಂಪಿಯರ್

b)

120 ಆಂಪಿಯರ್

c)

10 ಆಂಪಿಯರ್

d)

300 ಆಂಪಿಯರ್

13.

ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಬಳಸುವ ಸಾಧನ

a)

ವೋಲ್ಟ್ ಮೀಟರ್

b)

ಗ್ಯಾಲ್ವನೋಮೀಟರ್

c)

ರಿಯೋಸ್ಟ್ಯಾಟ್

d)

ಅಮ್ಮೀಟರ್

14.

ಈ ಕೆಳಗಿನವುಗಳಲ್ಲಿ ಕಡಿಮೆ ರೋಧಶೀಲತೆ ಹೊಂದಿರುವ ವಸ್ತು

a)

ನೈಕ್ರೋಮ್

b)

ಹಿತ್ತಾಳೆ

c)

ತಾಮ್ರ

d)

ಬೆಸುಗೆ ಲೋಹ

15.

ಎಲೆಕ್ಟ್ರಾನುಗಳ ಹರಿವನ್ನು --------- ಎನ್ನುವರು.

a)

ರೋಧಶೀಲತೆ

b)

ವಿಭವಾಂತರ

c)

ವಿದ್ಯುತ್ ರೋಧ

d)

ವಿದ್ಯುತ್ ಪ್ರವಾಹ