wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ kARTET ONLINE TESTS--ವ್ಯಾಪಕ ಮತ್ತು ನಿರಂತರ ಮೌಲ್ಯಮಾ

Total questions: 70

Worksheet time: 35mins

Name
Class
Date
1.

ವಿದ್ಯಾರ್ಥಿಯೊಬ್ಬ ಮುಂದಿನ ತರಗತಿಗೆ ತೇರ್ಗಡೆ ಹೊಂದಿ ಬಂದಾಗ ಅವನಲ್ಲಿ ನಿರೀಕ್ಷಿತ ಸಾಮರ್ಥ್ಯಗಳ ಕಲಿಕೆ ಆಗದಿದ್ದಲ್ಲಿ ಕೊರತೆಗಳನ್ನು ತುಂಬಲು ಮಾಡಬಹುದಾದ ಚಟುವಟಿಕೆ

a)

ಪರಿಹಾರ ಬೋಧನೆ

b)

ಮರು ಬೋಧನೆ

c)

ಕಂಠಪಾಠ ಮಾಡಿಸುವುದು

d)

ಹಿಂದಿನ ತರಗತಿಗೆ ಕಳಿಸುವುದು

2.

ಮಾನಸಿಕ ಕೌಶಲ್ಯ ಮತ್ತು ತಿಳುವಳಿಕೆಯ ಪರೀಕ್ಷೆಯನ್ನು ಮಾಡುವಲ್ಲಿ ಮೌಲ್ಯಯುತವಾದ ಪರೀಕ್ಷೆ

a)

ಬಹು ಆಯ್ಕೆ ಮಾದರಿ ಪರೀಕ್ಷೆಗಳು

b)

ಹೊಂದಿಸಿ ಬರೆಯುವ ಪರೀಕ್ಷೆಗಳು

c)

ಪ್ರಬಂಧ ಮಾದರಿಯ ಪರೀಕ್ಷೆಗಳು

d)

ವಾಕ್ಯ ಪೂರ್ಣಗೊಳಿಸುವ ಪರೀಕ್ಷೆಗಳು

3.

ವಸ್ತುನಿಷ್ಠ ಮಾದರಿ ಪರೀಕ್ಷೆಗಳು ಲಘು ಮಾದರಿ ಪರೀಕ್ಷೆ ಗಳಿಗಿಂತ ಹೆಚ್ಚು ಆದ್ಯತೆ ಪಡೆದಿವೆ ಏಕೆಂದರೆ

a)

ವ್ಯಕ್ತಿನಿಷ್ಠತೆಯನ್ನು ಕಡಿಮೆ ಮಾಡುತ್ತವೆ

b)

ರಚನೆ ಮಾಡುವಲ್ಲಿ ಸುಲಭವಾಗಿವೆ

c)

ವಿದ್ಯಾರ್ಥಿಗಳು ಇಷ್ಟಪಡುತ್ತಾರೆ

d)

ಸುಲಭವಾಗಿ ಹೆಚ್ಚು ಅಂಕ ಗಳಿಸಬಹುದು

4.

ಲಿಖಿತ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸಲು ಸೂಕ್ತವಾದ ಸಾಧನವೆಂದರೆ

a)

ವಸ್ತುನಿಷ್ಠ ಪ್ರಶ್ನೆ

b)

ಕಿರು ಉತ್ತರ ಪ್ರಶ್ನೆ

c)

ಪ್ರಬಂಧ ಮಾದರಿ ಪ್ರಶ್ನೆ

d)

ಹೊಂದಿಸಿ ಬರೆಯುವ ಪ್ರಶ್ನೆ

5.

ಕೆಳಕಂಡ ಯಾವುದು ರೂಪಣಾತ್ಮಕ ಮೌಲ್ಯಮಾಪನ ಪದ್ಧತಿ ಅಲ್ಲ

a)

ಬಹು ಆಯ್ಕೆ ಪ್ರಶ್ನೆಗಳು

b)

ಮೌಖಿಕ ಪರೀಕ್ಷೆಗಳು

c)

ಪ್ರಾಜೆಕ್ಟ್ ಗಳು

d)

ಸಂಭಾಷಣೆ ಕೌಶಲ್ಯ

6.

ನೈದಾನಿಕ ಪರೀಕ್ಷೆ ಗಳನ್ನು ಶಾಲೆಯಲ್ಲಿ ಬಳಸುವುದು ಏಕೆಂದರೆ

a)

ಶೈಕ್ಷಣಿಕ ಸಮಸ್ಯೆಗಳಿಗೆ ಕಾರಣಗಳನ್ನು ಪತ್ತೆಹಚ್ಚಲು

b)

ಆರೋಗ್ಯ ಸಮಸ್ಯೆಗಳಿಗೆ ಕಾರಣಗಳನ್ನು ಗುರುತಿಸಲು

c)

ಅವರ ಅನುಕೂಲತೆಗಳಿಗೆ ಅನುಗುಣವಾಗಿ

d)

ಸಹಪಠ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಗುರುತಿಸಲು

7.

ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಉದ್ದೇಶವೆಂದರೆ

a)

ನಿರಂತರ ಮೌಲ್ಯಮಾಪನ

b)

ಕಲಿಕೆಗಾಗಿ ಮೌಲ್ಯಮಾಪನ

c)

ಕಲಿಕೆಯ ಮೌಲ್ಯಮಾಪನ

d)

ವ್ಯಾಪಕ ಮೌಲ್ಯಮಾಪನ

8.

ರೂಪನಾತ್ಮಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು

a)

ವಿದ್ಯಾರ್ಥಿಗಳನ್ನು ವರ್ಗೀಕರಿಸುವುದು ಮತ್ತು ತೇರ್ಗಡೆಗೊಳಿಸುವುದು

b)

ಸೆಮಿಸ್ಟರ್ ಅಂತ್ಯದಲ್ಲಿ ನಡೆಯುವ ಒಂದು ಚಟುವಟಿಕೆ

c)

ಕೇವಲ ಹಿಮ್ಮಾಹಿತಿಯನ್ನು ಒದಗಿಸುವುದು

d)

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿದೆ

9.

ಸಿಸಿಇ (ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ) ಈ ಅಂಶದ ಮೇಲೆ ಕೇಂದ್ರೀಕೃತವಾಗಿಲ್ಲ

a)

ವಿದ್ಯಾರ್ಥಿಗಳ ಸಾಧನೆ

b)

ಶಿಕ್ಷಕರ ಸಾಧನೆ

c)

ಉದ್ದೇಶಗಳನ್ನು ಸಾಧಿಸಲು ಅವಶ್ಯಕತೆಗಳನ್ನು ವಿಸ್ತರಿಸುವುದು

d)

ವರ್ಷದ ಅಂತ್ಯದಲ್ಲಿ ಮಾತ್ರ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಲು

10.

ಒಬ್ಬ ಬುದ್ಧಿಮಾಂದ್ಯ ಮಗುವಿನ ಅವಧಾನ ಅವಧಿಯು ಕಡಿಮೆ ಇರುತ್ತದೆ ಏಕೆಂದರೆ

a)

ಮಗುವನ್ನು ಗಮನಿಸಲು ಶಿಕ್ಷಕರಿಗೆ ಸ್ವಲ್ಪ ಸಮಯ ಲಭ್ಯವಿರುವುದು

b)

ಮಗು ಬಹಳ ತುಂಟನಾಗಿರುವುದು

c)

ಅವನ ಸ್ನೇಹಿತರು ಅಡ್ಡಿಪಡಿಸುವರು

d)

ಹುಟ್ಟಿನಿಂದ ಬಂದ ಗುಣಗಳು

11.

ಈ ಕೆಳಗಿನವುಗಳಲ್ಲಿ ನ ಒಂದು ಅಂಶವು ವಿಕಾಸದ ಪ್ರಕ್ರಿಯೆಯನ್ನು ವಿವರಿಸುವುದಿಲ್ಲ

a)

ನಿರಂತರವಾದುದು

b)

ಸಮಗ್ರವಾದುದು

c)

ಅಳೆಯಬಹುದಾದದ್ದು

d)

ಗುಣಾತ್ಮಕವಾದದ್ದು

12.

ಶಿಕ್ಷಕರೊಬ್ಬರು ತನ್ನ ತರಗತಿಯಲ್ಲಿ ಕ್ರಿಯಾ ಸಂಶೋಧನೆಯನ್ನು ಕೈಗೊಳ್ಳಲು ನಿರ್ಧರಿಸುತ್ತಾರೆ ಏಕೆಂದರೆ

a)

ಇಲಾಖೆಯಿಂದ ಪ್ರಶಸ್ತಿ ಪತ್ರವನ್ನು ಪಡೆದುಕೊಳ್ಳಲು

b)

ಲೇಖನವನ್ನು ಪ್ರಕಟಿಸಲು

c)

ವಿದ್ಯಾರ್ಥಿಗಳ ಉಚ್ಚಾರಣೆಯ ದೋಷಕ್ಕೆ ಪರಿಹಾರ ಕಂಡುಕೊಳ್ಳಲು

d)

ಪಿ.ಎಚ್.ಡಿ ಪಡೆಯುವುದಕ್ಕಾಗಿ ಪ್ರೌಢ ಪ್ರಬಂಧ ಬರೆಯಲು

13.

ಕೆಳಗಿನವುಗಳಲ್ಲಿ ಯಾವುದು ನಿಗಮನ ಪದ್ಧತಿಯ ಪ್ರಯೋಜನವಾಗಿದೆ

a)

ವಿದ್ಯಾರ್ಥಿಯು ಸ್ವವೇಗದಲ್ಲಿ ಕಲಿಯಲು ಸಹಕಾರಿ

b)

ಬಾಯಿಪಾಠವನ್ನು ಪ್ರೋತ್ಸಾಹಿಸುತ್ತದೆ

c)

ತಾರ್ಕಿಕ ವಿವೇಚನೆಯನ್ನು ವೃದ್ಧಿಸುತ್ತದೆ

d)

ಉತ್ತಮ ಮಟ್ಟದ ಕೌಶಲಗಳನ್ನು ಬೆಳೆಸಲು ಸಹಕಾರಿ

14.

ಮುಖ್ಯಶಿಕ್ಷಕರು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಗಮನಿಸಬೇಕಾದ ಅಂಶಗಳೆಂದರೆ

a)

ಬೋಧನಾ ಶಿಸ್ತಿನ ನಿರ್ವಹಣೆ

b)

ಪಾಠದ ಉದ್ದೇಶಗಳು

c)

ಶಿಕ್ಷಕರ ಅನುಕೂಲ

d)

ಶೈಕ್ಷಣಿಕ ವರ್ಷದ ಒಟ್ಟಾರೆ ಕೆಲಸದ ದಿನಗಳು ಮತ್ತು ರಜಾ ದಿನಗಳು

15.

ಪರೀಕ್ಷೆಯನ್ನು ಯೋಜಿಸುವಾಗ ಶಿಕ್ಷಕರು ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು

a)

ತರಗತಿಯ ಗಾತ್ರ

b)

ಬೋಧನಾ ಮಾಧ್ಯಮ

c)

ನಿರೀಕ್ಷಿತ ಕಲಿಕಾ ಫಲಗಳು

d)

ಬೋಧನಾ ವಿಧಾನ

16.

ಕಲಿಕೆಯು ಹೆಚ್ಚು ಪರಿಣಾಮಕಾರಿ ಆಗುವುದು ಯಾವಾಗ

a)

ಪ್ರಾಂಶುಪಾಲರು ಕಟ್ಟುನಿಟ್ಟಿನಿಂದ ಇದ್ದಾಗ

b)

ಪುನರ್ಬಲನ ಚಟುವಟಿಕೆ ನೀಡಿದಾಗ

c)

ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾದಾಗ

d)

ವಿದ್ಯಾರ್ಥಿಗಳು ನಿರಂತರವಾಗಿ ತರಗತಿಗೆ ಹಾಜರಾದಾಗ

17.

ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣ ಬೋಧನೆ ಮಾಡಲು ಇದು ಒಂದು ಸೂಕ್ತವಾದ ಪ್ರತ್ಯಕ್ಷ ವಿಧಾನವಾಗಿದೆ

a)

ಸಂಬಂಧಿಕರ ಮೂಲಕ

b)

ಚರ್ಚೆಗಳ ಮೂಲಕ

c)

ಸ್ನೇಹಿತರ ಮೂಲಕ

d)

ಮಾಧ್ಯಮಗಳ ಮೂಲಕ

18.

ಪರಿಣಾಮಕಾರಿ ಬೋಧನೆಗೆ ಸಹಕಾರಿ ಆಗುವ ಅಂಶ

a)

ಕಟ್ಟುನಿಟ್ಟಾಗಿ ರುವುದು

b)

ಶೈಕ್ಷಣಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ

c)

ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ಇರುವುದು

d)

ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದು

19.

ವರ್ತನೆ ಬದಲಾವಣೆ ಮತ್ತು ಹವ್ಯಾಸಗಳ ಬೆಳವಣಿಗೆ ಈ ಮೂಲಕ ಸಾಧ್ಯ

a)

ತರಬೇತಿಯಿಂದ

b)

ಅನುಬಂಧದಿಂದ

c)

ಸೂಚನೆಗಳನ್ನು ನೀಡುವುದರಿಂದ

d)

ವಿಷಯ ಹೇರಿಕೆಯಿಂದ

20.

ಬಹುತೇಕವಾಗಿ ಬರವಣಿಗೆಯ ಪರೀಕ್ಷೆಯು ಪರೀಕ್ಷಿಸುವುದು_______

a)

ಸೃಜನಶೀಲತೆಯನ್ನು

b)

ಬುದ್ಧಿವಂತಿಕೆಯನ್ನು

c)

ಸ್ಮರಣೆಯನ್ನು

d)

ಅನ್ವಯಿಕೆಯನ್ನು

21.

ಆಟಿಸಂ ಎಂಬುದು ಒಂದು ಬಗೆಯ

a)

ನರಸಂಬಂಧಿ ವರ್ತನಾ ರೋಗ ಸಮಷ್ಠಿ

b)

ವರ್ತನಾ ರೋಗ ಸಮಷ್ಠಿ

c)

ಸಾಮಾಜಿಕ ರೋಗ ಸಮಷ್ಠಿ

d)

ಭಾವನಾತ್ಮಕ ರೋಗ ಸಮಷ್ಠಿ

22.

ಮಗು ಇನ್ನೊಬ್ಬರ ಜೊತೆ ಸಂಭಾಷಣೆ ನಡೆಸಲು ಕಷ್ಟವಾಗುವ ಪರಿಸ್ಥಿತಿಯನ್ನು_______ಎನ್ನುವರು

a)

Dysgraphia

b)

Dysposia

c)

Dyslexia

d)

Dysponiya

23.

ಮಗುವಿನ ಪದಗಳ ಉಚ್ಛಾರಣೆಗೆ ಸಂಬಂಧಿಸಿದ ದೋಷವನ್ನು_________ಎನ್ನುವರು

a)

ಡಿಸ್ಲೇಕ್ಸಿಯಾ

b)

ಡಿಸ್ ಗ್ರಾಪಿಯಾ

c)

ಡಿಸ್ಪೊನಿಯಾ

d)

ಡಿಸ್ ಪಾಸಿಯಾ

24.

ಮಗು ಒಂದು ತರಗತಿಯಲ್ಲಿ WAR ಎಂಬುದನ್ನು RAW ಎಂದು BAD ಎಂಬುದನ್ನು DAD ಎಂಬುದಾಗಿಯೂ, ತಪ್ಪಾಗಿ ಓದುತ್ತಿದ್ದರೆ ಆಗ ಈ ಕಲಿಕಾ ನ್ಯೂನತೆ ಎಂದು ಗುರುತಿಸಲಾಗುವುದು

a)

ಡಿಸ್ಲೆಕ್ಸಿಯಾ

b)

ಡಿಸ್ ಗ್ರಾಪಿಯಾ

c)

ಡಿಸ್ಪೊನಿಯಾ

d)

ಡಿಸ್ ಪಾಸಿಯಾ

25.

ಸಫಲ ಬೋಧನೆಗೆ ಅತ್ಯಂತ ಮುಖ್ಯವಾದ ಅಂಶಗಳೆಂದರೆ

a)

ಅನೇಕ ಪದವಿಗಳು ಮತ್ತು ಗೌರವಗಳು

b)

ಒಳ್ಳೆಯ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆ

c)

ವಿಷಯದ ಬಗ್ಗೆ ಪ್ರಭುತ್ವ ಮತ್ತು ಒಳ್ಳೆಯ ಸಂವಹನ ಸಾಮರ್ಥ್ಯ

d)

ವಿದೇಶಿ ಯನ್ನು ಪಡೆಯಲು ಬಿಗಿ ಪ್ರವೃತ್ತಿ ಮತ್ತು ನಿಷ್ಠುರತೆ

26.

ಶೈಕ್ಷಣಿಕ ಪ್ರಕ್ರಿಯೆ ಒಳಗೊಂಡಿರುವುದು

a)

ಅಧ್ಯಾಪಕ ವಿದ್ಯಾರ್ಥಿ

b)

ವಿದ್ಯಾರ್ಥಿ ಅಧ್ಯಾಪಕ ವಿಷಯವಸ್ತು

c)

ಅಧ್ಯಾಪಕ ವಿಷಯವಸ್ತು

d)

ಮೇಲಿನ ಯಾವುದೂ ಅಲ್ಲ

27.

ವಿದ್ಯಾರ್ಥಿಗಳಿಗೆ ಗುಂಪು ಕೆಲಸ ನಿಯೋಜಿಸುವ ಅಂಶವನ್ನು ಮುಖ್ಯವೆಂದು ಪರಿಗಣಿಸಬೇಕು

a)

ಸಮಾನ ಜಾತಿ

b)

ಸಮಾನ ಆಸಕ್ತಿ

c)

ಸಮಾನ ಧರ್ಮ

d)

ಸಮಾನ ವರ್ಗ

28.

ಶೈಕ್ಷಣಿಕ ಪ್ರಕ್ರಿಯೆಯನ್ನು________ಎಂದು ಪರಿಗಣಿಸಬಾರದು

a)

ಔಪಚಾರಿಕ ಪ್ರಕ್ರಿಯೆ

b)

ಸ್ಥಾಯಿ ಪ್ರಕ್ರಿಯೆ

c)

ಮುಂದುವರೆಯುವ ಪ್ರಕ್ರಿಯೆ

d)

ಗತಿಶೀಲ ಪ್ರಕ್ರಿಯೆ

29.

ಪೂರ್ವ ಪರೀಕ್ಷೆಕನಾಗಿ ಅಧ್ಯಾಪಕನಿಗೆ ಈ ಕೆಳಗಿನವುಗಳಲ್ಲಿ ಯಾವ ಲಕ್ಷಣವಿರುವುದು ಅಪೇಕ್ಷಣೀಯವಲ್ಲ

a)

ವಸ್ತುನಿಷ್ಠತೆ

b)

ನಿಖರತೆ

c)

ತೀರ್ಮಾನ

d)

ಧಾರಾಳತನ

30.

ನಿಧಾನವಾಗಿ ಕಲಿಯುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಗೆ ಈ ಕೆಳಗಿನ ಯಾವ ಅಂಶ ಕಾರಣವಾಗಿದೆ

a)

ಮೆದುಳಿನ ಬೆಳವಣಿಗೆ ಕುಂಠಿತವಾಗಿರುವುದು

b)

ದೃಷ್ಟಿದೋಷ ಶ್ರವಣ ದೋಷಗಳು

c)

ವಾಸಿಯಾಗದ ಕಾಯಿಲೆಗಳು

d)

ಮೇಲಿನ ಎಲ್ಲವೂ ಸರಿಯಾಗಿವೆ

31.

ಬಾಲಾಪರಾಧಿಗಳ ವಯಸ್ಸು

a)

18 ವರ್ಷದೊಳಗಿನ ಬಾಲಕ ಬಾಲಕಿಯರು

b)

16 ವರ್ಷದೊಳಗಿನ ಬಾಲಕ ಬಾಲಕಿಯರು

c)

16 ವರ್ಷದೊಳಗಿನ ಬಾಲಕ ಹಾಗೂ 18 ವರ್ಷದೊಳಗಿನ ಬಾಲಕಿಯರು ಆಗಿರುತ್ತಾರೆ

d)

ಬಾಲಕರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಹಾಗೂ ಬಾಲಕಿಯರ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇರಬೇಕು

32.

ವ್ಯಕ್ತಿ ಭಿನ್ನತೆ ಹಾಗೂ ಅದರ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡುವ ಮನೋವಿಜ್ಞಾನದ ಶಾಖೆ

a)

ವಿಭೇದಾತ್ಮಕ ಮನೋವಿಜ್ಞಾನ

b)

ಅಪಸಾಮಾನ್ಯ ಮನೋವಿಜ್ಞಾನ

c)

ವಿಕಾಸಾತ್ಮಕ ಮನೋವಿಜ್ಞಾನ

d)

ಬೆಳವಣಿಗೆ ಮನೋವಿಜ್ಞಾನ

33.

ನಿಧಾನವಾಗಿ ಕಲಿಯುವವರ ಗ್ರಹಿಕಾ ಸಾಮರ್ಥ್ಯ

a)

ಹೆಚ್ಚಾಗಿರುತ್ತದೆ

b)

ಕಡಿಮೆಯಾಗಿರುತ್ತದೆ

c)

ಅತಿವೇಗವಾಗಿ ಇರುತ್ತದೆ

d)

ಗರಿಷ್ಠ ಮಟ್ಟದಲ್ಲಿ ಇರುತ್ತದೆ

34.

ನಿಧಾನವಾಗಿ ಕಲಿಯುವ ಮಕ್ಕಳಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಹೆಚ್ಚು ಸೂಕ್ತವಾಗಿದೆ

a)

ಪ್ರತಿಭಾವಂತರೊಂದಿಗೆ ನಿಧಾನವಾಗಿ ಕಲಿಯುವವರನ್ನು ಗುಂಪು ಮಾಡುವುದು

b)

ಕಾಲಕಾಲಕ್ಕೆ ಪುನರಾವರ್ತನೆ ಮಾಡುವುದು

c)

ಚಟುವಟಿಕ ವಿಧಾನಗಳಂತಹ ಸರಳ ಬೋಧನಾ ವಿಧಾನ ಬಳಸುವುದು

d)

ಮೇಲಿನ ಎಲ್ಲವೂ ಸರಿಯಾಗಿವೆ

35.

ನಿಧಾನವಾಗಿ ಕಲಿಯುವವರ ಲಕ್ಷಣ ಯಾವುದು

a)

ಅಮೂರ್ತ ಆಲೋಚನೆ ಹೊಂದಿರುತ್ತಾರೆ

b)

ತಾರ್ಕಿಕತೆ ಹೆಚ್ಚಾಗಿರುತ್ತದೆ

c)

ವಿಮರ್ಶೆ ವಿಶ್ಲೇಷಣಾ ಗುಣ ಹೊಂದಿರುತ್ತಾರೆ

d)

ಸಾಮರ್ಥ್ಯ ಕಡಿಮೆ ಇರುತ್ತದೆ

36.

ಬಾಲಾಪರಾಧಿಗಳಿಗೆ ಜೈಲುಶಿಕ್ಷೆ ಆದಾಗ ಅವರನ್ನು ಈ ಕೆಳಗಿನ ಯಾವ ವಿಧದಲ್ಲಿ ಪರಿಗಣಿಸಲಾಗುವುದು

a)

ಶಿಕ್ಷಿಸುವುದು

b)

ಶಿಕ್ಷಣ ನೀಡಿ ಪರಿವರ್ತಿಸುವುದು

c)

ದಂಡಿಸುತ್ತಾ ಪರಿವರ್ತಿಸುವುದು

d)

ಭಯ ಉಂಟಾಗುವಂತೆ ಮಾಡುವುದು

37.

ಮಾನಸಿಕವಾಗಿ ಹಿಂದುಳಿದ ಮಗುವಿನಲ್ಲಿ ಯಾವ ಅಂಗದ ಬೆಳವಣಿಗೆ ಕುಂಠಿತವಾಗಿರುತ್ತದೆ

a)

ಮೆದುಳು

b)

ಸ್ನಾಯು

c)

ಹೃದಯ

d)

ಪಂಚೇಂದ್ರಿಯ

38.

ಮಾನಸಿಕ ಹಿಂದುಳಿಯುವಿಕೆಗೆ ಈ ಕೆಳಗಿನ ಯಾವುದು ಕಾರಣವಾಗಿದೆ

a)

ಅನುವಂಶಿಯತೆ

b)

ಪರಿಸರ

c)

ರಾಸಾಯನಿಕಗಳ ಪ್ರಭಾವ

d)

ಮೇಲಿನ ಎಲ್ಲವೂ

39.

ಒಂದು ಮಗು ಮಾನಸಿಕವಾಗಿ ಹಿಂದುಳಿಯಲು ಯಾವುದು ಅನುವಂಶೀಯ ಕಾರಣವಾಗಿದೆ

a)

ಮಾದಕ ವಸ್ತುಗಳ ಸೇವನೆ

b)

ಅಪೌಷ್ಟಿಕ ಆಹಾರ ಸೇವನೆ

c)

ಸೋದರ ಸಂಬಂಧಿಗಳಲ್ಲಿ ವಿವಾಹ

d)

ಅಪಘಾತ ಅಥವಾ ಆಘಾತಗಳು

40.

ಆರ್ ಟಿ ಇ ಕಾಯ್ದೆ 2012 ರ ಪ್ರಕಾರ ಒಬ್ಬ ಶಿಕ್ಷಕ ಒಂದುವಾರದಲ್ಲಿ ತೆಗೆದುಕೊಳ್ಳಬಹುದಾದ ತರಗತಿಯ ಅವಧಿಗಳು ಎಷ್ಟು

a)

41

b)

42

c)

43

d)

45

41.

ಆರ್ ಟಿ ಇ ಕಾಯ್ದೆ 2012 ರ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಒಂದು ವರ್ಷದಲ್ಲಿ ನಡೆಯಬಹುದಾದ ಶಾಲಾ ದಿನಗಳ ಸಂಖ್ಯೆ

a)

205 ಕಿರಿಯ ಪ್ರಾಥಮಿಕ ಶಾಲೆ

220 ಹಿರಿಯ ಪ್ರಾಥಮಿಕ ಶಾಲೆ

b)

200 ಕಿರಿಯ ಪ್ರಾಥಮಿಕ ಶಾಲೆ

210 ಹಿರಿಯ ಪ್ರಾಥಮಿಕ ಶಾಲೆ

c)

190 ಕಿರಿಯ ಪ್ರಾಥಮಿಕ ಶಾಲೆ

200 ಹಿರಿಯ ಪ್ರಾಥಮಿಕ ಶಾಲೆ

d)

220 ಕಿರಿಯ ಪ್ರಾಥಮಿಕ ಶಾಲೆ

205 ಹಿರಿಯ ಪ್ರಾಥಮಿಕ ಶಾಲೆ

42.

ನಿಧಾನವಾಗಿ ಕಲಿಯುವರಿಗೆ ಈ ಕೆಳಗಿನ ಯಾವ ಕಾರ್ಯಕ್ರಮ ಸೂಕ್ತವಾಗಿದೆ

a)

ಅನ್ವೇಷಣೆ ವಿಧಾನ

b)

ಯೋಜನಾ ಪದ್ಧತಿ

c)

ಅಭ್ಯಾಸ ಪದ್ಧತಿ

d)

ವಿಶ್ಲೇಷಣಾ ವಿಧಾನ

43.

ನಿಧಾನವಾಗಿ ಕಲಿಯುವ ಮಗುವನ್ನು ಪ್ರತಿಭಾವಂತ ರೊಂದಿಗೆ ಹೋಲಿಕೆ ಮಾಡುವುದರಿಂದ ನಿಧಾನವಾಗಿ ಕಲಿಯುವ ಮಗುವಿಗೆ ಈ ಭಾವನೆ ಉಂಟಾಗುವುದು

a)

ಪ್ರೀತಿ

b)

ಸ್ನೇಹ

c)

ದ್ವೇಷ

d)

ವಾತ್ಸಲ್ಯ

44.

ಕೆಳಗಿನ ಯಾವ ಮಕ್ಕಳು ಅಸಾಧಾರಣ ಮಕ್ಕಳ ಗುಂಪಿಗೆ ಸೇರುತ್ತಾರೆ

a)

ನಿಧಾನವಾಗಿ ಕಲಿಯುವವರು

b)

ಪ್ರತಿಭಾವಂತ ಮಕ್ಕಳು

c)

ಮಾನಸಿಕವಾಗಿ ಹಿಂದುಳಿದವರು

d)

ಮೇಲಿನ ಎಲ್ಲರೂ

45.

ಸಿಸಿಇ [ CCE ] ಪದದ ವಿಸ್ತ್ರತ ರೂಪ

a)

Continuous comprehensive evaluation

b)

Combined comprehensive evaluation

c)

Continuous complete evaluation

d)

None of the above

46.

ಸರ್ಕಾರದ ವತಿಯಿಂದ ನಡೆಯುತ್ತಿರುವ ವಾಕ್ ಮತ್ತು ಶ್ರವಣ ದೋಷ ನಿವಾರಣಾ ಚಿಕಿತ್ಸಾಲಯ ಕರ್ನಾಟಕದಲ್ಲಿ ಎಲ್ಲಿದೆ

a)

ಬೆಂಗಳೂರು

b)

ದಾವಣಗೆರೆ

c)

ಮೈಸೂರ್

d)

ಧಾರವಾಡ

47.

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ನೀಡುವಾಗ ಶಿಕ್ಷಕರು ಈ ಕೆಳಗಿನ ಪರೀಕ್ಷೆಯನ್ನು ಅವರ ಮೇಲೆ ನಿರ್ವಹಿಸಿ ಫಲಿತಾಂಶವನ್ನು ಪರಿಗಣಿಸಬೇಕು

a)

ನೈದಾನಿಕ ಪರೀಕ್ಷೆ

b)

ಅಭಿಕ್ಷಮತೆ ಪರೀಕ್ಷೆ

c)

ವ್ಯಕ್ತಿತ್ವದ ಪರೀಕ್ಷೆ

d)

ಸೃಜನಶೀಲತೆಯ ಪರೀಕ್ಷೆ

48.

ಸಮಗ್ರ ಮೌಲ್ಯಮಾಪನ ಕಾರ್ಯಕ್ರಮವು ಈ ಕೆಳಗಿನ ಒಂದು ಗುಣಲಕ್ಷಣವನ್ನು ಸೂಚಿಸುತ್ತದೆ

a)

ವಿವಿಧ ವಿಷಯಗಳ ಕಲಿಕೆ

b)

ಕಲಿಕಾರ್ಥಿಗಳ ಒಟ್ಟು ವ್ಯಕ್ತಿತ್ವದ ಮಾಪನ ಮಾಡುವುದು

c)

ತರಗತಿ ಕೋಣೆಯ ಚಟುವಟಿಕೆಗಳ ಮೌಲ್ಯಮಾಪನ

d)

ಕಲಿಕಾರ್ಥಿಗಳಿಗೆ ಪರಿಣಾಮಕಾರಿ ಮಾಹಿತಿಯನ್ನು ನೀಡುವುದು

49.

ಪರೀಕ್ಷಾ ಸಂಬಂಧಿ ಒತ್ತಡವನ್ನು ನಿರ್ವಹಿಸಲು ಉತ್ತಮ ಮಾರ್ಗವೆಂದರೆ

a)

ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸದಿರುವುದು

b)

ಹೆಚ್ಚು ದೈಹಿಕ ವ್ಯಾಯಾಮವನ್ನು ಮಾಡುವುದು

c)

ಸಾಕಷ್ಟು ಮುನ್ನವೇ ಸಿದ್ಧತೆ ಮಾಡಿಕೊಂಡು ತಾಲೀಮು ಮಾಡುವುದು

d)

ಪರೀಕ್ಷೆ ಸಮೀಕ್ಷೆಯ ಸಮೀಪಿಸಿದಾಗ ಕೇವಲ ಬಾಯಿಪಾಠ ಮಾಡುವುದು

50.

ಗಣಿತ ಶಿಕ್ಷಕರು ವಾಕ್ಯ ರೂಪದಲ್ಲಿ ಲೆಕ್ಕ ಕೊಡುವಾಗ ಲೆಕ್ಕದ ಪ್ರತಿಯೊಂದು ಭಾಗದ ಸ್ಪಷ್ಟತೆ ಮತ್ತು ವಾಕ್ಯಗಳ ಜೋಡಣೆ ಬಗ್ಗೆ ಕಾಳಜಿ ವಹಿಸುವರು ಇದರಿಂದ ಆಗುವ ಅತಿಮುಖ್ಯ ಲಾಭವೆಂದರೆ

a)

ಲೆಕ್ಕ ಆಸಕ್ತಿದಾಯಕವಾಗುತ್ತದೆ

b)

ಪೂರ್ಣವಾಗಿ ಮತ್ತು ಅರ್ಥ ಸಹಿತ ಗ್ರಹಿಸಲು ಸಹಾಯಕವಾಗುತ್ತದೆ

c)

ಸುಲಭ ಕಲಿಕೆಗೆ ಅನುಕೂಲಕರವಾಗುವುದು

d)

ವೇಗವಾದ ಕಲಿಕೆ ಸಾಧ್ಯವಾಗುತ್ತದೆ

51.

ಕಲಿಕಾ ಸವಾಲಿನ ಬಹುಮಂದಿ ಮಕ್ಕಳು p ಮತ್ತು q, b ಮತ್ತು d, was ಮತ್ತು saw ಗಳನ್ನು ವ್ಯತ್ಯಾಸಿಕರಿಸಲು ಸೋಲುತ್ತಾರೆ. ಇದನ್ನು ಹೀಗೆನ್ನುವರು

a)

ಡಿಸ್ಲೆಕ್ಸಿಯಾ

b)

ಡಿಸ್ ಗ್ರಾಪಿಯಾ

c)

ಡಿಸ್ ಪಾಸಿಯಾ

d)

ಡಿಸ್ ಕ್ಯಾಲುಕುಲಿಯಾ

52.

ಮೌಲ್ಯಮಾಪನ ಮಾಡುವುದು ಎಂದರೆ___

a)

ಈ ಹಿಂದೆ ಕಲಿತ ವಿಚಾರಗಳನ್ನು ಸ್ಮರಿಸುವುದು

b)

ತಮ್ಮ ಸ್ವಂತ ಪದಗಳಲ್ಲಿ ವಿವರಿಸುವುದು

c)

ವಿವರಗಳನ್ನು ಪಟ್ಟಿ ಮಾಡುವುದು

d)

ವಿಚಾರಗಳ ಮೌಲ್ಯವನ್ನು ತೀರ್ಮಾನಿಸುವುದು

53.

ಸುಧಾರಿತ ಉಪಕರಣಗಳ ತಯಾರಿಕೆ ಇದನ್ನು ಒಳಗೊಂಡಿಲ್ಲ

a)

ಕಲಿಕೆಯ ಅನುಭವಗಳನ್ನು ನೀಡುವುದು

b)

ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆ

c)

ಶಿಕ್ಷಕರ ಅವಧಾನ ಬಯಸುವುದಿಲ್ಲ

d)

ಶಿಕ್ಷಕರ ಕೊರತೆಯನ್ನು ತಡೆಯುತ್ತದೆ

54.

ಸ್ವ ಕಲಿಕೆ ಸಾಮಾಗ್ರಿಗಳ ಬಳಕೆಯ ಮುಖ್ಯ ಉದ್ದೇಶವೆಂದರೆ____

a)

ವಿದ್ಯಾರ್ಥಿಯಲ್ಲಿ ಕಲಿಕೆ ಆರಂಭಿಸುವ ಗುಣವನ್ನು ಪ್ರೋತ್ಸಾಹಿಸುವುದು

b)

ಅಧ್ಯಯನದ ಹವ್ಯಾಸವನ್ನು ಹೆಚ್ಚಿಸುವುದಿಲ್ಲ

c)

ಶಿಕ್ಷಕರ ಅವಧಾನ ಬಯಸುವುದಿಲ್ಲ

d)

ಶಿಕ್ಷಕರ ಕೊರತೆಯನ್ನು ತಡೆಯುತ್ತದೆ

55.

ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಗಮನಿಸಬೇಕಾದ ಅಂಶವೆಂದರೆ

a)

ಬೋಧನಾ ಶಿಸ್ತಿನ ನಿರ್ವಹಣೆ

b)

ಶೈಕ್ಷಣಿಕ ವರ್ಷದ ಒಟ್ಟಾರೆ ಕೆಲಸದ ದಿನಗಳು ಮತ್ತು ರಜಾ ದಿನಗಳು

c)

ಪಾಠಗಳ ಉದ್ದೇಶಗಳು

d)

ಶಿಕ್ಷಕರ ಅನುಕೂಲ

56.

ಘಟಕ ಯೋಜನೆ ಇದನ್ನು ಒಳಗೊಂಡಿಲ್ಲ

a)

ವರ್ತನಾ ಉದ್ದೇಶಗಳು

b)

ಉಪ ಪರಿಕಲ್ಪನೆಗಳು

c)

ಅವಶ್ಯಕ ಪಾಠಗಳು

d)

ಬಳಸಬೇಕಾದ ಪರೀಕ್ಷಾ ಪ್ರಶ್ನೆಗಳು

57.

ಮೌಲ್ಯಮಾಪನ ಒಂದು___

a)

ನೈದಾನಿಕ ಸಾಧನ

b)

ದತ್ತಾಂಶ ಸಂಗ್ರಹಣಾ ಸಾಧನ

c)

ಮಾಪನ ಸಾಧನ

d)

ಮೇಲಿನ ಯಾವುದೂ ಅಲ್ಲ

58.

ಗಣಿತ ಸಾಮರ್ಥ್ಯವನ್ನು ಮಾಪನ ಮಾಡಲು ರಚಿಸಿರುವ ಪರೀಕ್ಷೆಯು ಮಗುವಿನ ಭಾಷಾ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತದೆ. ಈ ಪರೀಕ್ಷೆಯಲ್ಲಿ ಇಲ್ಲದಿರುವುದು

a)

ಸಮಂಜಸತೆ

b)

ವಿಶ್ವಸನೀಯತೆ

c)

ವಸ್ತುನಿಷ್ಠತೆ

d)

ಉಪಯುಕ್ತತೆ

59.

ಪರೀಕ್ಷೆಯನ್ನು ಯೋಚಿಸುವಾಗ ಶಿಕ್ಷಕರು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು

a)

ತರಗತಿಯ ಗಾತ್ರ

b)

ಬೋಧನಾ ಮಾಧ್ಯಮ

c)

ನಿರೀಕ್ಷಿತ ಕಲಿಕಾ ಫಲಗಳು

d)

ಬೋಧನಾ ವಿಧಾನ

60.

ಇದು ಅತ್ಯುತ್ತಮ ಮೂರ್ತ ಕಲಿಕಾ ಅನುಭವವಾಗಿದೆ

a)

ವಿದ್ಯಾರ್ಥಿಯನ್ನು ಕ್ಷೇತ್ರ ಬೇಟೆಗೆ ಕರೆದೊಯ್ಯುವುದು

b)

ಪ್ರಾತ್ಯಕ್ಷಿಕೆ ಮಾಡುವುದು

c)

ಚಲನಚಿತ್ರ ಪ್ರದರ್ಶನ

d)

ಚಿತ್ರ ಪಟಗಳ ಪ್ರದರ್ಶನ

61.

ಇದು ಮೂರು ಆಯಾಮದ ಬೋಧನಾ ವಿಧಾನವಾಗಿದೆ

a)

ಚಿತ್ರಪಟ

b)

ಮಾದರಿಗಳು

c)

ಆಲೇಖಗಳು

d)

ಸ್ಲೈಡುಗಳು

62.

ಮೌಲ್ಯಮಾಪನ ಪ್ರಕ್ರಿಯೆಯು ಒಳಗೊಂಡಿರುವುದು

a)

ಮಾಪನ + ಮೌಲಿಕರಿಸುವಿಕೆ

b)

ಮಾಪನ + ಕಿರುಪರೀಕ್ಷೆ

c)

ಕಿರುಪರೀಕ್ಷೆ + ಹಿಮ್ಮಾಹಿತಿ

d)

ಹಿಮ್ಮಾಹಿತಿ + ಪುನರ್ಮನನ

63.

ಕಾರ್ಯವಿಧಾನ ಉಪಕರಣಗಳು ಮತ್ತು ಅಂಕ ನೀಡುವಿಕೆ ಇವುಗಳನ್ನು ನಿಗದಿಪಡಿಸಿ ಬೇರೊಂದು ಸಮಯ ಮತ್ತು ಸ್ಥಳದಲ್ಲಿ ನೀಡಬಹುದಾದ ಪರೀಕ್ಷೆಯನ್ನು ಹೀಗೆ ಕರೆಯಲಾಗುತ್ತದೆ

a)

ಶಿಕ್ಷಕ ರಚಿತ ಪರೀಕ್ಷೆ

b)

ಅರ್ಥಾಧಾರಿತ ಪರೀಕ್ಷೆ

c)

ಪ್ರಾಮಾಣಿಕೃತ ಪರೀಕ್ಷೆ

d)

ಮಾನಕ ಆಧಾರಿತ ಪರೀಕ್ಷೆ

64.

ಪಠ್ಯಕ್ರಮವು ಈ ಬಗ್ಗೆ ಬೆಳಕು ಚೆಲ್ಲುತ್ತದೆ

a)

ಪಠ್ಯಭಾಗ

b)

ಚಟುವಟಿಕೆಗಳು

c)

ಪಠ್ಯಭಾಗ ಮತ್ತು ಚಟುವಟಿಕೆಗಳು

d)

ಯಾವುದು ಅಲ್ಲ

65.

ತರಗತಿಯ ಹೆಚ್ಚು ವಿದ್ಯಾರ್ಥಿಗಳು ನಿಧಾನಗತಿಯ ಕಲಿಕಾಧಾರರಾಗಿದ್ದಲ್ಲಿ ಶಿಕ್ಷಕರು ಹೀಗೆ ಮಾಡಬೇಕಾಗುತ್ತದೆ

a)

ತಮ್ಮ ಬೋಧನೆ ಬಗ್ಗೆ ಗಮನಹರಿಸಬೇಕು

b)

ನಿಧಾನಗತಿಯಲ್ಲಿ ಬೋಧಿಸಬೇಕು

c)

ಮೂಲಭೂತ ಪರಿಕಲ್ಪನೆಗಳನ್ನು ಬೋಧಿಸಬೇಕು

d)

ಹೆಚ್ಚೆಚ್ಚು ಪರೀಕ್ಷೆಗಳನ್ನು ನೀಡಬೇಕು

66.

ಬೋಧನಾ ಪ್ರಕ್ರಿಯೆಯ ನಿರ್ವಹಣೆಯ ಹಂತದಲ್ಲಿ ಮಾಡಬೇಕಾದ ಮೌಲ್ಯಮಾಪನದ ವಿಧ

a)

ನೈದಾನಿಕ ಮೌಲ್ಯಮಾಪನ

b)

ರೂಪಣಾತ್ಮಕ ಮೌಲ್ಯಮಾಪನ

c)

ಸಂಕಲನಾತ್ಮಕ ಮೌಲ್ಯಮಾಪನ

d)

ಪ್ರಮಾಣಿಕೃತ ಮೌಲ್ಯಮಾಪನ

67.

ವಿದ್ಯಾರ್ಥಿಯ ವರ್ತನೆಯ ಬದಲಾವಣೆಯನ್ನು ಸೂಚಿಸುವ ದಾಖಲೆ

a)

ಸಂಚಿತ ದಾಖಲೆ

b)

ನೈಜಪಥನಾ ದಾಖಲೆ

c)

ಪ್ರಗತಿಯ ದಾಖಲೆ

d)

ವೈದ್ಯಕೀಯ ದಾಖಲೆ

68.

ಕೆಳಗಿನವರಲ್ಲಿ ಯಾವುದು ಉತ್ತಮ ಪ್ರಶ್ನೆಪತ್ರಿಕೆಯ ಗುಣಲಕ್ಷಣ ಅಲ್ಲ

a)

ವಸ್ತುನಿಷ್ಠತೆ

b)

ಸಮಂಜಸತೆ

c)

ಸಂದೇಹಾರ್ಥತೆ

d)

ವಿಶ್ವಾಸಾರ್ಹತೆ ಮತ್ತು ವಿಶ್ವಸನೀಯತೆ

69.

ಸಾಧನಾ ಪರೀಕ್ಷೆಯ ಅವಶ್ಯಕತೆ

a)

ವಿದ್ಯಾರ್ಥಿಗಳ ವರ್ಗೀಕರಣ

b)

ವಿದ್ಯಾರ್ಥಿಗಳ ಕಲಿಕೆಯ ನಿರ್ದೇಶನ

c)

ವಿದ್ಯಾರ್ಥಿಗಳ ಕಲಿಕೆಯ ಉತ್ತೇಜನ

d)

ಮೇಲಿನ ಎಲ್ಲವೂ

70.

ನಿರಂತರ ಮತ್ತು ಸಮಗ್ರ ಮೌಲ್ಯಮಾಪನದಲ್ಲಿ ರಚನಾತ್ಮಕ ಮೌಲ್ಯಮಾಪನ (Formative assessment) ಮತ್ತು ಸಂಕಲನಾತ್ಮಕ ಮೌಲ್ಯಮಾಪನ (Summetive assessment) ಗಳು ಅನುಪಾತ

a)

50:50

b)

60:40

c)

40:60

d)

ಮೇಲಿನ ಯಾವುದೂ ಅಲ್ಲ