Worksheetsಅಧ್ಯಾಯ 1 ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Total questions: 15
Worksheet time: 30mins
1. ಕೆಳಗಿನವುಗಳಲ್ಲಿ ಯಾವುದು ಭೌತಿಕ ಬದಲಾವಣೆಯಲ್ಲ?
ನೀರನ್ನು ಆವಿಯಾಗುವಂತೆ ಕುದಿಸುವುದು
ಮಂಜುಗಡ್ಡೆ ಕರಗಿ ನೀರನ್ನು ನೀಡುವುದು
ನೀರಿನಲ್ಲಿ ಉಪ್ಪಿನ ಕರಗುವಿಕೆ
ದ್ರವೀಕೃತ ಪೆಟ್ರೋಲಿಯಂ (LPG)ನ ದಹಿಸುವಿಕೆ
ಕೆಳಗಿನ ಪ್ರತಿಕ್ರಿಯೆಯು ಯಾವ ಒಂದು ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ.
4NH3 (g) + 5O2 (g) → 4NO (g) + 6H2O (g)
(i) ಸ್ಥಳಾಂತರ ಪ್ರತಿಕ್ರಿಯೆ (ii) ಸಂಯೋಜನೆಯ ಪ್ರತಿಕ್ರಿಯೆ (iii) ರೆಡಾಕ್ಸ್ ಪ್ರತಿಕ್ರಿಯೆ (iv) ತಟಸ್ಥಗೊಳಿಸುವಿಕೆ ಪ್ರತಿಕ್ರಿಯೆ
(i) ಮತ್ತು (iv)
(ii) ಮತ್ತು (iii)
(i) ಮತ್ತು (iii)
(iii) ಮತ್ತು (iv)
ನೀಡಿದ ಪ್ರತಿಕ್ರಿಯೆಯ ಬಗ್ಗೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
3Fe (s) + 4H2O (g) → Fe3O4 (s) + 4H2 (g)
(i) ಕಬ್ಬಿಣ ಆಕ್ಸಿಡೀಕರಣಗೊಳ್ಳುತ್ತಿದೆ (ii) ನೀರು ಅಪಕರ್ಷಿಸಲ್ಪಟ್ಟಿದೆ.
(iii) ನೀರು ಅಪಕರ್ಷಕಾರಿಯಂತೆ ವರ್ತಿಸುತ್ತಿದೆ.
(iv) ನೀರು ಉತ್ಕರ್ಷಣಕಾರಿಯಂತೆ ಕಾರ್ಯನಿರ್ವಹಿಸುತ್ತಿದೆ
(i), (ii) ಮತ್ತು (iii)
(iii) ಮತ್ತು (iv)
(i), (ii) ಮತ್ತು (iv)
(ii) ಮತ್ತು (iv)
ಈ ಕೆಳಗಿನವುಗಳಲ್ಲಿ ಯಾವುದು ಬಹಿರುಷ್ಣಕ ಪ್ರಕ್ರಿಯೆಗಳು?
(i) ಸುಟ್ಟಸುಣ್ಣದೊಂದಿಗೆ ನೀರನ ಪ್ರತಿಕ್ರಿಯೆ (ii) ಆಮ್ಲವನ್ನು ದುರ್ಬಲಗೊಳಿಸುವುದು
(III) ನೀರಿನ ಬಾಷ್ಪೀಕರಣ (iv) ಕರ್ಪೂರದ ಉತ್ಪತನ
(i) ಮತ್ತು (ii)
(ii) ಮತ್ತು (iii)
(i) ಮತ್ತು (iv)
(iii) ಮತ್ತು (iv)
ಎ, ಬಿ ಮತ್ತು ಸಿ ಎಂದು ಹೆಸರಿಸಲಾದ ಮೂರು ಬೀಕರ್ ಗಳಲ್ಲಿ 25 mlನಷ್ಟು ನೀರನ್ನು ತೆಗೆದುಕೊಳ್ಳಲಾಗಿದೆ. ಅಲ್ಪ ಪ್ರಮಾಣದ NaOH, ಶುಷ್ಕ CuSO4 ಮತ್ತು NaCl ಎ, ಬಿ ಮತ್ತು ಸಿ ಬೀಕರ್ ಗೆ ಸೇರಿಸಲಾಯಿತು. ಅನುಕ್ರಮವಾಗಿ ಎ ಮತ್ತು ಬಿ ಬೀಕರ್ ಗಳಲ್ಲಿ ತಾಪದ ಹೆಚ್ಚಳ ಕಂಡುಬಂದಿದೆ ಆದರೆ ಸಿ ಯಲ್ಲಿ ತಾಪಮಾನದ ಇಳಿಕೆಯಾಗಿದೆ. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
(i) ಎ ಮತ್ತು ಬಿ ಬೀಕರ್ ಗಳಲ್ಲಿ, ಬಹಿರುಷ್ಣಕ ಪ್ರಕ್ರಿಯೆಯು ಸಂಭವಿಸಿದೆ.
(ii) ಎ ಮತ್ತು ಬಿ ಬೀಕರ್ ಗಳಲ್ಲಿ ಅಂತರುಷ್ಣಕ ಪ್ರಕ್ರಿಯೆಯು ಸಂಭವಿಸಿದೆ.
(iii) ಬೀಕರ್ ಸಿ ಯಲ್ಲಿ ಬಹಿರುಷ್ಣಕ ಪ್ರಕ್ರಿಯೆ ಸಂಭವಿಸಿದೆ.
(iv) ಬೀಕರ್ ಸಿ ಯಲ್ಲಿ ಅಂತರುಷ್ಣಕ ಪ್ರಕ್ರಿಯೆ ಸಂಭವಿಸಿದೆ.
(i) ಮಾತ್ರ
(ii) ಮಾತ್ರ
(i) ಮತ್ತು (iv)
(ii) ಮತ್ತು (iii)
ದುರ್ಬಲವಾದ ಫೆರಸ್ ಸಲ್ಫೇಟ್ ದ್ರಾವಣವನ್ನು ಆಮ್ಲೀಕೃತಗೊಳಿಸಿದ ಪರ್ಮಾಂಗನೇಟ್ ದ್ರಾವಣಕ್ಕೆ ನಿಧಾನವಾಗಿ ಸೇರಿಸಲಾಯಿತು.ತಿಳಿಯಾದ ನೇರಳೆ ಬಣ್ಣದ ದ್ರಾವಣ ಮಂಕಾಗಿ ಅಂತಿಮವಾಗಿ ಕಣ್ಮರೆಯಾಗುತ್ತದೆ. ಕೆಳಗಿನವುಗಳಲ್ಲಿ ಯಾವುದು ವೀಕ್ಷಣೆಗೆ ಸರಿಯಾದ ವಿವರಣೆಯಾಗಿದೆ?
KMnO4 ಉತ್ಕರ್ಷಣಕಾರಿ, ಇದು FeSO4 ನ್ನು ಉತ್ಕರ್ಷಿಸುತ್ತದೆ.
FeSO4 ಉತ್ಕರ್ಷಣಕಾರಿ ಮತ್ತು KMnO4 ನ್ನು ಉತ್ಕರ್ಷಿಸುತ್ತದೆ
ದುರ್ಬಲತೆಯಿಂದಾಗಿ ಬಣ್ಣವು ಕಣ್ಮರೆಯಾಗುತ್ತದೆ; ಯಾವುದೇ ಪ್ರತಿಕ್ರಿಯೆ ಒಳಗೊಂಡಿರುವುದಿಲ್ಲ
KMnO4 ಅಸ್ಥಿರವಾದ ಸಂಯುಕ್ತವಾದುದರಿಂದ FeSO4 ನ ಉಪಸ್ಥಿತಿಯಲ್ಲಿ ಬಣ್ಣವಿಲ್ಲದ ಸಂಯುಕ್ತವಾಗಿ ವಿಭಜನೆಯಾಗುತ್ತದೆ.
ಕೆಳಗಿನವುಗಳಲ್ಲಿ ಯಾವುವು ರಾಸಾಯನಿಕ ದ್ವಿ ಸ್ಥಾನಪಲ್ಲಟನೆ ಪ್ರತಿಕ್ರಿಯೆ (ಗಳು)?
(i) Pb + CuCl2 → PbCl2 + Cu
(ii) Na2 SO4 + BaCl2 → BaSO4 + 2NaCl
(iii) C + O2 → CO2
(iv) CH4 + 2O2 → CO2 + 2H2O
(i) ಮತ್ತು (iv)
(ii) ಮಾತ್ರ
(i) ಮತ್ತು (ii)
(iii) ಮತ್ತು (iv)
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ನಿಜ? ಬೆಳ್ಳಿ ಕ್ಲೋರೈಡ್ ನ್ನು ಸೂರ್ಯನ ಬೆಳಕಿನಲ್ಲಿ ದೀರ್ಘಾವಧಿಯವರೆಗೆ ತೆರೆದಿಟ್ಟಾಗ ಬೂದು ಬಣ್ಣಕ್ಕೆ ತಿರುಗುತ್ತದೆ ಕಾರಣ
(i) ಬೆಳ್ಳಿ ಕ್ಲೋರೈಡ್ ವಿಭಜನೆ ಮೂಲಕ ಬೆಳ್ಳಿಯ ಉತ್ಪತ್ತಿ.
(ii) ಬೆಳ್ಳಿ ಕ್ಲೋರೈಡ್ ನ ಉತ್ಪತನ
(III) ಬೆಳ್ಳಿ ಕ್ಲೋರೈಡ್ ನಿಂದ ಕ್ಲೋರಿನ್ ಅನಿಲದ ವಿಭಜನೆ
(iv) ಬೆಳ್ಳಿ ಕ್ಲೋರೈಡ್ ನ ಉತ್ಕರ್ಷಣ
(i) ಮಾತ್ರ
(i) ಮತ್ತು (iii)
(ii) ಮತ್ತು (iii)
(iv) ಮಾತ್ರ
ಘನ ಕ್ಯಾಲ್ಸಿಯಂ ಆಕ್ಸೈಡ್ ನೀರಿನೊಂದಿಗೆ ತೀವ್ರವಾಗಿ ಪ್ರತಿಕ್ರಿಯಿಸಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಉತ್ಪತ್ತಿಯಾಗುವುದರೊಂದಿಗೆ ಶಾಖ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಗೆ ಸುಣ್ಣದ ಬಡಿಯುವುದು (slaking of lime ) ಎಂದು ಕರೆಯುತ್ತಾರೆ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನೀರಿನಲ್ಲಿ ಕರಗಿ ಸುಣ್ನದ ತಿಳಿ ನೀರನ್ನು ರೂಪಿಸುತ್ತದೆ. ಕೆಳಗಿನವುಗಳಲ್ಲಿ ಯಾವುದು (ಇವು) ಸುಣ್ಣವನ್ನು ಬಡಿಯುವ ಬಗ್ಗೆ ಮತ್ತು ರಚನೆಯು ರೂಪುಗೊಂಡಿದೆಯೇ?
(i) ಇದು ಅಂತರುಷ್ಣಕ ಪ್ರತಿಕ್ರಿಯೆಯಾಗಿದೆ
(ii) ಇದು ಒಂದು ಬಹಿರುಷ್ಣಕ ಪ್ರತಿಕ್ರಿಯೆಯಾಗಿದೆ
(iii) ಪರಿಣಾಮವಾಗಿ ದ್ರಾವಣದದ pH ಏಳುಕ್ಕಿಂತ ಹೆಚ್ಚಿನದಾಗಿರುತ್ತದೆ
(iv) ಪರಿಣಾಮವಾಗಿ ದ್ರಾವಣದ pH ಏಳುಕ್ಕಿಂತ ಕಡಿಮೆಯಿರುತ್ತದೆ
(i) ಮತ್ತು (ii)
(ii) ಮತ್ತು (iii)
(i) ಮತ್ತು (iv)
(iii) ಮತ್ತು (iv)
ಬೇರಿಯಂ ಕ್ಲೋರೈಡ್, ಅಮೋನಿಯಂ ಸಲ್ಫೇಟ್ ನೊಂದಿಗೆ ಪ್ರತಿಕ್ರಿಯಿಸಿ ಬೇರಿಯಂ ಸಲ್ಫೇಟ್ ಮತ್ತು ಅಮೋನಿಯಂ ಕ್ಲೋರೈಡ್ ರೂಪುಗೊಳ್ಳುತ್ತದೆ. ಕೆಳಗಿನವುಗಳಲ್ಲಿ ಯಾವುದು ಸರಿಯಾದ ಪ್ರತಿಕ್ರಿಯೆಯ ಪ್ರಕಾರವನ್ನು ಪ್ರತಿನಿಧಿಸುತ್ತದೆ? (i) ಸ್ಥಾನಪಲ್ಲಟ ಪ್ರತಿಕ್ರಿಯೆ (ii) ಪ್ರಕ್ಷೇಪಣ ಪ್ರತಿಕ್ರಿಯೆ
(III) ಸಂಯೋಜನೆಯ ಪ್ರತಿಕ್ರಿಯೆ (iv) ದ್ವಿ ಸ್ಥಾನಪಲ್ಲಟ ಪ್ರತಿಕ್ರಿಯೆ
(i) ಮಾತ್ರ
(ii) ಮಾತ್ರ
(iv) ಮಾತ್ರ
(ii) ಮತ್ತು (iv)
ನೀರಿನ ವಿದ್ಯುದ್ವಿಭಜನೆಯು ವಿಭಜನೆಯ ಪ್ರತಿಕ್ರಿಯೆಯಾಗಿದೆ. ನೀರಿನ ವಿದ್ಯುದ್ವಿಭಜನೆಯ ಸಮಯದಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಮ್ಲಜನಕ ಅನಿಲಗಳ ಮೋಲ್ ಅನುಪಾತ
1: 1
2: 1
4: 1
1: 2
ಈ ಕೆಳಗಿನವುಗಳಲ್ಲಿ ಯಾವುದು ಅಂತರುಷ್ಣಕ ಪ್ರಕ್ರಿಯೆ (ಗಳು)?
(i) ಸಲ್ಫ್ಯೂರಿಕ್ ಆಮ್ಲದ ದುರ್ಬಲಗೊಳಿಸುವಿಕೆ (ii) ಶುಷ್ಕ ಮಂಜುಗಡ್ಡೆಯ ಉತ್ಪತನ
(iii) ನೀರಿನ ಆವಿಯ ಘನೀಕರಣ (iv) ನೀರಿನ ಬಾಷ್ಪೀಕರಣ
(i) ಮತ್ತು (iii)
(ii) ಮಾತ್ರ
(iii) ಮಾತ್ರ
(ii) ಮತ್ತು (iv)
ಜಲೀಯ ಪೊಟಾಸಿಯಂ ಅಯೋಡೈಡ್ ಮತ್ತು ಜಲೀಯ ಸೀಸದ ನೈಟ್ರೇಟ್ ನಡುವಿನ ದ್ವಿಸ್ಥಾನಪಲ್ಲಟ ಕ್ರಿಯೆಯಲ್ಲಿ ಹಳದಿ ಬಣ್ಣದ ಸೀಸದ ಅಯೋಡೈಡ್ ಪ್ರಕ್ಷೇಪಗೊಳ್ಳುತ್ತದೆ. ಈ ಚಟುವಟಿಕೆ ನಡೆಸುವಾಗ ಲೆಡ್ ನೈಟ್ರೇಟ್ ಇಲ್ಲದಿದ್ದರೆ ಇದರ ಬದಲಿಗೆ ಈ ಕೆಳಗಿನ ಯಾವ ಸಂಯುಕ್ತವನ್ನು ಬಳಸಬಹುದು?
ಲೆಡ್ ಸಲ್ಫೇಟ್ (ಕರಗದ)
ಲೆಡ್ ಅಸಿಟೇಟ್
ಅಮೋನಿಯಂ ನೈಟ್ರೇಟ್
ಪೊಟ್ಯಾಸಿಯಮ್ ಸಲ್ಫೇಟ್
ದೀರ್ಘಕಾಲದವರೆಗೆ ಎಣ್ಣೆಯ ಮಾದರಿ ತಾಜಾ ಸಂಗ್ರಹಣೆಗೆ ಯಾವ ಕೆಳಗಿನ ಅನಿಲಗಳನ್ನು ಬಳಸಬಹುದು?
ಕಾರ್ಬನ್ ಡೈಆಕ್ಸೈಡ್ ಅಥವಾ ಆಮ್ಲಜನಕ
ನೈಟ್ರೋಜನ್ ಅಥವಾ ಆಮ್ಲಜನಕ
ಕಾರ್ಬನ್ ಡೈಆಕ್ಸೈಡ್ ಅಥವಾ ಹೀಲಿಯಂ
ಹೀಲಿಯಂ ಅಥವಾ ಸಾರಜನಕ
ಕೆಳಗಿನ ಪ್ರಕ್ರಿಯೆಗಳಲ್ಲಿ ಯಾವುದು ರಾಸಾಯನಿಕ ಪ್ರತಿಕ್ರಿಯೆಯನ್ನು ಒಳಗೊಂಡಿದೆ?
ಆಮ್ಲಜನಕ ಅನಿಲವನ್ನು ಗ್ಯಾಸ್ ಸಿಲೆಂಡರಲ್ಲಿ ಒತ್ತಡದಲ್ಲಿ ಸಂಗ್ರಹಣೆ
ಗಾಳಿಯ ದ್ರವೀಕರಣ
ಪಿಂಗಾಣಿ ಪಾತ್ರೆಯಲ್ಲಿ ಮುಕ್ತವಾಗಿ ಪೆಟ್ರೋಲ್ ಅನ್ನು ಇಟ್ಟುಕೊಳ್ಳುವುದು
ತಾಮ್ರದ ತಂತಿಯನ್ನು ಹೆಚ್ಚಿನ ತಾಪಮಾನದಲ್ಲಿ ಗಾಳಿಯ ಸನ್ನಿವೇಶದಲ್ಲಿ ಬಿಸಿ ಮಾಡುವುದು
