wayground logo

Free Printable Worksheets

Font size

S
M
L
XL
Worksheets

2024 ಭೂ-1 ನಮ್ಮ ರಾಜ್ಯ - ಕರ್ನಾಟಕ - ಪ್ರಾಕೃತಿಕ ವಿಭಾಗಗಳು

Total questions: 35

Worksheet time: 18mins

Name
Class
Date
1.

ಕರಾವಳಿ ಮೈದಾನವು ಈ ಕೆಳಗಿನ ಪ್ರಾಕೃತಿಕ ವಿಭಾಗಗಳ ನಡುವೆ ಹಬ್ಬಿದೆ

a)

ಅರಬ್ಬಿ ಸಮುದ್ರ ಮತ್ತು ಮಲೆನಾಡು

b)

ಉತ್ತರ ಮೈದಾನ ಮತ್ತು ದಕ್ಷಿಣ ಮೈದಾನ

c)

ಮಲೆನಾಡು ಮತ್ತು ಉತ್ತರ ಮೈದಾನ

d)

ಅರಬ್ಬಿ ಸಮುದ್ರ ಮತ್ತು ದಕ್ಷಿಣ ಮೈದಾನ

2.

ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ ಕರಾವಳಿಯ ಉದ್ದ

a)

450 ಕಿಲೋಮೀಟರ್

b)

900 ಕಿಲೋಮೀಟರ್

c)

1800 ಕಿಲೋಮೀಟರ್

d)

320 ಕಿಲೋಮೀಟರ್

3.

ಕರ್ನಾಟಕ ಕರಾವಳಿಯನ್ನು ಹೀಗೂ ಕರೆಯುತ್ತಾರೆ

a)

ಕೋರಮಂಡಲ ತೀರ

b)

ಉತ್ತರ ಸರ್ಕಾರ ತೀರ

c)

ಕೊಂಕಣ ತೀರ

d)

ಕೆನರಾ ಕರಾವಳಿ

4.

ಕರ್ನಾಟಕದ ಅತಿ ದೊಡ್ಡ ಬಂದರು

a)

ಕಾರವಾರ

b)

ನವ ಮಂಗಳೂರು

c)

ಭಟ್ಕಳ

d)

ಕುಮಟಾ

5.

ಓಂ ಬೀಚ್ ಈ ನಗರದ ಹತ್ತಿರದಲ್ಲಿದೆ

a)

ಮುರುಡೇಶ್ವರ

b)

ಮಲ್ಪೆ

c)

ಗೋಕರ್ಣ

d)

ಮಂಗಳೂರು

6.

ದ್ವೀಪಗಳ ಗುಂಪಿಗೆ ಸೇರದೆ ಇರುವುದನ್ನು ಗುರುತಿಸಿರಿ

a)

ಸೇಂಟ್ ಮೇರಿಸ್ ದ್ವೀಪ ( ಕೋಕೋನಟ್ ದ್ವೀಪ)

b)

ಅಂಜದ್ವೀಪ

c)

ದೇವಗಡ

d)

ಓಂ ಬೀಚ್

7.

ಕರಾವಳಿ ಜನರ ಮುಖ್ಯ ವೃತ್ತಿ

a)

ವ್ಯವಸಾಯ

b)

ವ್ಯಾಪಾರ

c)

ಪಶುಪಾಲನೆ

d)

ಮೀನುಗಾರಿಕೆ

8.

ಕರಾವಳಿ ಜಿಲ್ಲೆಗಳಿಗೆ ಸಂಬಂಧ ಇಲ್ಲದ ಜಿಲ್ಲೆ

a)

ದಕ್ಷಿಣ ಕನ್ನಡ

b)

ಕೊಡಗು

c)

ಉತ್ತರ ಕನ್ನಡ

d)

ಉಡುಪಿ

9.

ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳನ್ನು ಈ ಹೆಸರಿನಿಂದ ಕರೆಯುವರು

a)

ಉತ್ತರದ ಮೈದಾನ

b)

ದಕ್ಷಿಣದ ಮೈದಾನ

c)

ಕರಾವಳಿ ಮೈದಾನ

d)

ಮಲೆನಾಡು

10.

ಪಶ್ಚಿಮ ಘಟ್ಟಗಳನ್ನು ಈ ಹೆಸರಿನಿಂದ ಕರೆಯುತ್ತಾರೆ

a)

ಸಹ್ಯಾದ್ರಿ ಬೆಟ್ಟಗಳು

b)

ನೀಲಗಿರಿ ಬೆಟ್ಟಗಳು

c)

ಅರಾವಳಿ ಬೆಟ್ಟಗಳು

d)

ಪೂರ್ವ ಘಟ್ಟಗಳು

11.

ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಗಿರಿ-ಶಿಖರ

a)

ಕುದುರೆಮುಖ

b)

ಮೆರ್ತಿಗುಡ್ಡ

c)

ಪುಷ್ಪಗಿರಿ

d)

ಮುಳ್ಳಯ್ಯನಗಿರಿ

12.

ಪೂರ್ವದ ಮೈದಾನದಿಂದ ಪಶ್ಚಿಮ ಘಟ್ಟಗಳನ್ನು ದಾಟಿ ಕರಾವಳಿ ಮೈದಾನಕ್ಕೆ ಹೋಗುವ ಮಾರ್ಗಗಳನ್ನು ಹೀಗೆಂದು ಕರೆಯುತ್ತಾರೆ

a)

ಪರ್ವತ ಘಾಟಿ ಅಥವಾ ಘಟ್ಟ ಮಾರ್ಗ

b)

ಕರಾವಳಿ ಮಾರ್ಗ

c)

ಇಳಿಜಾರು ಮಾರ್ಗ

d)

ಮೈದಾನ ಮಾರ್ಗ

13.

ಘಟ್ಟ ಮಾರ್ಗಗಳು ಸಂಪರ್ಕಿಸುವ ಸ್ಥಳಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಚಾರ್ಮಾಡಿ ಘಾಟಿ - ( ಮಂಗಳೂರು ಮತ್ತು ಚಿಕ್ಕಮಗಳೂರು)

b)

ಶಿರಾಡಿ ಘಾಟಿ - ( ಹಾಸನ ಮತ್ತು ಮಂಗಳೂರು)

c)

ಆಗುಂಬೆ ಘಾಟಿ - ( ಶಿವಮೊಗ್ಗ ಮತ್ತು ಉಡುಪಿ)

d)

ಹುಲಿಕಲ್ ಘಾಟಿ - ( ಶಿವಮೊಗ್ಗ ಮತ್ತು ಮಂಗಳೂರು)

14.

ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಅರಣ್ಯಗಳ ವಿಧ

a)

ಎಲೆ ಉದುರಿಸುವ ಕಾಡುಗಳು

b)

ನಿತ್ಯಹರಿದ್ವರ್ಣ ಕಾಡುಗಳು

c)

ಮ್ಯಾಂಗ್ರೋವ್ ಅರಣ್ಯಗಳು

d)

ಶೋಲಾ ಕಾಡುಗಳು

15.

ಕಾಫಿ ನಾಡು ಎಂದು ಈ ಜಿಲ್ಲೆಯನ್ನು ಕರೆಯುತ್ತೇವೆ

a)

ಹಾಸನ

b)

ಕೊಡಗು

c)

ಚಿಕ್ಕಮಗಳೂರ

d)

ಚಿಕ್ಕಬಳ್ಳಾಪುರ

16.

ಚಿಕ್ಕಮಗಳೂರನ್ನು ಕಾಫಿ ನಾಡು ಎಂದು ಕರೆಯಲು ಮುಖ್ಯ ಕಾರಣ

a)

ಅಧಿಕ ಕಾಫಿ ಕುಡಿಯುವುದರಿಂದ

b)

ಅಧಿಕ ಕಾಫಿ ಬೆಳೆಯುವುದರಿಂದ

c)

ಅಧಿಕ ಕಾಫಿ ರಫ್ತು ಮಾಡುವುದರಿಂದ

d)

ಅಧಿಕ ಕಾಫಿ ಬಳಕೆ ಮಾಡುವುದರಿಂದ

17.

ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಜಿಲ್ಲೆ

a)

ಕೊಡಗು

b)

ಮಂಡ್ಯ

c)

ಶಿವಮೊಗ್ಗ

d)

ಚಿಕ್ಕಮಗಳೂರು

18.

ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲು ಮುಖ್ಯ ಕಾರಣ

a)

ತಂಪಾದ ವಾತಾವರಣವಿರುವುದರಿಂದ

b)

ಇದು ಕಾಶ್ಮೀರದ ಆಕಾರ ಹೋಲುವುದರಿಂದ

c)

ಇಲ್ಲಿ ನದಿಗಳು ಮಂಜುಗಡ್ಡೆ ಯಾಗಿರುವುದರಿಂದ

d)

ಅತಿಯಾದ ಬಿಸಿಲು ಇರುವುದರಿಂದ

19.

ಕಿತ್ತಲೆ ನಾಡು ಎಂದು ಕರೆಯಲ್ಪಡುವ ಜಿಲ್ಲೆ

a)

ಕೋಲಾರ

b)

ಕೊಡಗು

c)

ಶಿವಮೊಗ್ಗ

d)

ಚಿಕ್ಕಮಗಳೂರು

20.

ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯಲು ಮುಖ್ಯಕಾರಣ

a)

ಕಿತ್ತಳೆ ಹಣ್ಣು ಹೆಚ್ಚಾಗಿ ಬೆಳೆಯುವುದರಿಂದ

b)

ಕಿತ್ತಳೆ ಹಣ್ಣು ಹೆಚ್ಚಾಗಿ ಬಳಸುವುದರಿಂದ

c)

ಕಿತ್ತಳೆ ಹಣ್ಣು ಹೆಚ್ಚಾಗಿ ವ್ಯಾಪಾರ ಮಾಡುವುದರಿಂದ

d)

ಕಿತ್ತಳೆ ಹಣ್ಣು ವಿದೇಶಕ್ಕೆ ಸಾಗಾಟ ಮಾಡುವುದರಿಂದ

21.

ಜೀವಿವೈವಿಧ್ಯತಾ ವಲಯವೆಂದು ಕರೆಯಲ್ಪಡುವ ಪ್ರಾಕೃತಿಕ ವಿಭಾಗ

a)

ಕರಾವಳಿ ಮೈದಾನ

b)

ಉತ್ತರ ಮೈದಾನ

c)

ದಕ್ಷಿಣ ಮೈದಾನ

d)

ಮಲೆನಾಡು ಪ್ರದೇಶ

22.

ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಚಿಕ್ಕಮಗಳೂರು

b)

ಚಿಕ್ಕಬಳ್ಳಾಪುರ

c)

ಶಿವಮೊಗ್ಗ

d)

ಕೊಡಗು

23.

ಉತ್ತರದ ಮೈದಾನ ಈ ಮಣ್ಣಿನಿಂದ ಕೂಡಿದೆ

a)

ಮೆಕ್ಕಲು ಮಣ್ಣು

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಕರಾವಳಿ ಮೆಕ್ಕಲು ಮಣ್ಣು

24.

ಘಟಪ್ರಭಾ ನದಿಯ ಮೇಲಿರುವ ಜಲಪಾತದ ಹೆಸರು

a)

ಜೋಗ ಜಲಪಾತ

b)

ಛಾಯಾಭಗವತಿ ಜಲಪಾತ

c)

ಕಾರಂಜ ಜಲಪಾತ

d)

ಗೋಕಾಕ್ ಜಲಪಾತ

25.

ಬಿಸಿಲನಾಡು ಎಂದು ಕರೆಯಲ್ಪಡುವ ಪ್ರಾಕೃತಿಕ ವಿಭಾಗ

a)

ಮಲೆನಾಡು

b)

ಉತ್ತರದ ಮೈದಾನ

c)

ದಕ್ಷಿಣದ ಮೈದಾನ

d)

ಕರಾವಳಿ ಮೈದಾನ

26.

ಉತ್ತರದ ಮೈದಾನವನ್ನು ಬಿಸಿಲನಾಡು ಎಂದು ಕರೆಯಲು ಮುಖ್ಯ ಕಾರಣ

a)

ಇಲ್ಲಿಯ ಜನರು ಬಿಸಿಲು ಇಷ್ಟಪಡುವುದರಿಂದ

b)

ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ಇರುವುದರಿಂದ

c)

ಸಮುದ್ರ ಮಟ್ಟದಿಂದ ಬಹಳ ಎತ್ತರವಿರುವುದರಿಂದ

d)

ದಕ್ಷಿಣ ಮೈದಾನಕ್ಕಿಂತ ಇಲ್ಲಿ ಅಧಿಕ ಬಿಸಿಲು ಇರುವುದರಿಂದ

27.

ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಏಕಶಿಲಾ ಬೆಟ್ಟದ ಹೆಸರು

a)

ಮಧುಗಿರಿ ಬೆಟ್ಟ

b)

ಮುಳ್ಳಯ್ಯನಗಿರಿ ಬೆಟ್ಟ

c)

ಬಿಳಿಗಿರಿರಂಗನ ಬೆಟ್ಟ

d)

ಚಾಮುಂಡಿ ಬೆಟ್ಟ

28.

ದಕ್ಷಿಣ ಮೈದಾನವು ಪ್ರಧಾನವಾಗಿ ಈ ಮಣ್ಣಿನಿಂದ ಕೂಡಿದೆ

a)

ಕಪ್ಪು ಮಣ್ಣು

b)

ಮೆಕ್ಕಲು ಮಣ್ಣು

c)

ಎರೆ ಮಣ್ಣು

d)

ಕೆಂಪು ಮಣ್ಣು

29.

ಕರುನಾಡು ಪದದ ಅರ್ಥ

a)

ಎತ್ತರದ ಭೂಮಿ

b)

ಕಪ್ಪುಮಣ್ಣಿನ ನಾಡು

c)

ಎರೆಮಣ್ಣಿನ ಭೂಮಿ

d)

ವಿಸ್ತಾರವಾದ ನಾಡು

30.

ಕರ್ನಾಟಕದ ಉಲ್ಲೇಖವನ್ನು ತಮಿಳಿನ ಈ ಕೃತಿಯಲ್ಲಿ ಕಾಣುತ್ತೇವೆ

a)

ಶಿಲಪ್ಪದಿಕಾರಂ

b)

ಮಣಿಮಕಲೈ

c)

ರಂಗಾಯಣಂ

d)

ಮುದ್ರಾರಾಕ್ಷಸಂ

31.

ತಮಿಳಿನ ಶಿಲಪ್ಪದಿಗಾರಂ ಕೃತಿಯಲ್ಲಿ ಬಳಸಿದ ಕರುನಾಟ್ ಪದದ ಅರ್ಥ

a)

ಫಲವತ್ತಾದ ಭೂಮಿ

b)

ವಿಸ್ತಾರವಾದ ನಾಡು

c)

ಉನ್ನತ ಅಥವಾ ಎತ್ತರದಲ್ಲಿರುವ ನಾಡು

d)

ಎರಡು ನದಿಗಳ ನಡುವಿನ ನಾಡು

32.

ಕರ್ನಾಟಕ ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹಬ್ಬಿತ್ತೆಂದು ತಿಳಿಸುವ ಕೃತಿ

a)

ಗಾಥಾಸಪ್ತಶತಿ

b)

ಕರ್ನಾಟಕದ ವೈಭವ

c)

ಕನ್ನಡ ಕಸ್ತೂರಿ

d)

ಕವಿರಾಜಮಾರ್ಗ

33.

ತಮಿಳುನಾಡಿನ ಶಿಲಪ್ಪದಿಕಾರಂ ಕೃತಿಯಲ್ಲಿ ಕರ್ನಾಟಕವನ್ನು ಈ ಹೆಸರಿನಿಂದ ಕರೆಯಲಾಗಿದೆ

a)

ಕರುನಾಡು

b)

ಕರುನಾಟ್

c)

ಎರೆ ಮಣ್ಣಿನ ನಾಡು

d)

ಕನ್ನಡಿಗರ ನಾಡು

34.

ಕರುನಾಟ್ ಪದದ ಅರ್ಥ

a)

ಉನ್ನತ ಅಥವಾ ಎತ್ತರದಲ್ಲಿರುವ ನಾಡು

b)

ಕಪ್ಪು ಮಣ್ಣಿನ ನಾಡು

c)

ಕನ್ನಡಿಗರು ವಾಸಿಸುವ ನಾಡು

d)

ಕರುನಾಡು

35.

ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ವರ್ಷ

a)

1956 ಜನವರಿ 1

b)

1956 ಜನವರಿ 26

c)

1956 ಆಗಸ್ಟ್ 15

d)

1956 ನವೆಂಬರ್ 1