Wayground logo

Free Printable Worksheets

Font size

S
M
L
XL
Worksheets

cbse 10th kannada

Total questions: 97

Worksheet time: 49mins

Name
Class
Date
1.

ಸಂಕಲ್ಪ ಗೀತೆ ಕವನದ ಲೇಖಕರು ಯಾರು?

a)

ಕುವೆಂಪು

b)

ಬೇಂದ್ರೆ

c)

ಜಿ ಎಸ್ ಶಿವರುದ್ರಪ್ಪ

d)

ಮಾಸ್ತಿ ವೆಂಕಟೇಶ್ ಐಯಂಗಾರ್

2.

'ಸಂಕಲ್ಪ ಗೀತೆ ' ಪದ್ಯವನ್ನು ________ಕವನ ಸಂಕಲನದಿಂದ ಅರಿಸಿಕೊಳ್ಳಲಾಗಿದೆ.

a)

ಹಕ್ಕಿ ಹಾರುತಿದೆ ನೋಡಿದಿರಾ

b)

ಎದೆತುಂಬಿ ಹಾಡಿದೆನು

c)

ಪಕ್ಷಿಕಾಶಿ

d)

ಸಾಮಗಾನ

3.

ಕತ್ತಲೆಯೊಳಗೆ ಯಾವ ಹಣತೆಯನ್ನು ಹಚ್ಚೋಣ ಎಂದು ಕವಿ ಹೇಳಿದ್ದಾರೆ?

a)

ಸ್ನೇಹದ

b)

ದ್ವೇಷದ

c)

ಪ್ರೀತಿಯ

d)

ಜಾತಿಯ

4.

ಬರುದಾಗಿರುವೀ ಕಾಡುಮೆದುಗಳಿಗೆ __________ಆಗುತ ಮುಟ್ಟೋಣ.

a)

ಆಷಾಡ

b)

ಬೇಸಗೆ

c)

ವಸಂತ

d)

ಶ್ರಾವಣ

5.

ಬಿರುಗಾಳಿಗೆ ಹೊಯ್ದಡುವ __________ಎಚ್ಚರದಲಿ ಮುನ್ನಡೆಸೋಣ

a)

ಮನೆಯನ್ನು

b)

ಮನಸ್ಸನ್ನು

c)

ಮರಗಳನ್ನು

d)

ಹಡಗನ್ನು

6.

ವಸಂತ ಪದದ ಅರ್ಥ ___________?

a)

ವಾಸನೆ

b)

ಋಷಿ

c)

ದೇವತೆ

d)

ಸಮೃದ್ಧಿ

7.

'ಕಾರಕೂನ ' ಪದದ ಅರ್ಥ _______?

a)

ಸಿಪಾಯಿ

b)

ಗುಮಾಸ್ತ

c)

ಸಾಹೇಬ

d)

ಕಾರಸಾಹೇಬ

8.

ಕುಂಪಣಿ ಸರಕಾರ ಹೊರಡಿಸಿದ ಕಾಯಿದೆ (ಆದೇಶ ) ಯಾವುದು?

a)

ಶಸ್ತ್ರೀಕರಣ

b)

ನಿಶ್ಯಸ್ತ್ರೀಕರಣ

c)

ಕಂದಾಯ ಕಾಯಿದೆ

d)

ಕಬುಲ್ ಕಾಯಿದೆ

9.

ಹಲಗಲಿಯು ಇಂದಿನ ಯಾವ ಜಿಲ್ಲೆಯಲ್ಲಿದೆ?

a)

ವಿಜಯಪುರ

b)

ಮೈಸೂರು

c)

ಬಳ್ಳಾರಿ

d)

ಬಾಗಲಕೋಟೆ

10.

ಲಾವಣಿಕಾರರು ಅಂಕಿತಗೊಳಿಸಿರುವ ದೈವ ಯಾವುದು?

a)

ಕಲ್ಮೇಶ

b)

ಲಕ್ಷ್ಮೀಶ

c)

ಹನುಮೇಶ

d)

ರಾಮೇಶ

11.

ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ____________?

a)

ಗಾದೆ

b)

ಒಗಟು

c)

ಲಾವಣಿ

d)

ಕತೆ

12.

ಕವಿ ವಾಲ್ಮೀಕಿ ಯಾರನ್ನು ಪುರುಷೋತ್ತಮನೆಂದು ಕರೆದಿದ್ದಾನೆ?

a)

ರಾವಣನನ್ನು

b)

ರಾಮನನ್ನು

c)

ಲಕ್ಷ್ಮಣನನ್ನು

d)

ಆಂಜನೇಯನನ್ನು

13.

ಜಾನಕರಾಜನ ಮಗಳು ಯಾರು?

a)

ಸುಮಿತ್ರೆ

b)

ಕೌಸಾಲ್ಯೆ

c)

ಸೀತೆ

d)

ಕೈಕೆ

14.

ಚಿತ್ರಕೂಟ ಒಂದು ಪರ್ವತ. ಇದು ಉತ್ತರ ಭಾರತದ ಯಾವ ನದಿಯ ಪಕ್ಕದಲ್ಲಿದೆ?

a)

ಗಂಗಾ

b)

ಯಮುನಾ

c)

ನರ್ಮದಾ

d)

ಪಯೋಶನಿ

15.

'ದಿಟ್ಟಿ' ಪದದ ತತ್ಸಮ ರೂಪ __________?

a)

ತುಟಿ

b)

ದೃಷ್ಟಿ

c)

ಚಿಟ್ಟೆ

d)

ತಟ್ಟೆ

16.

ಕ ಗ : ಅಲ್ಪ ಪ್ರಾಣಕ್ಷರಗಳು :: ಛ ಝ ______________?

a)

ಸ್ವರಗಳು

b)

ಯೋಗವಾಹಗಳು

c)

ಹೃಸ್ವಸ್ವರ

d)

ಮಹಾಪ್ರನಾಕ್ಷರ

17.

'ಮೈದೋರು' ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಆಗಮಸಂಧಿ

b)

ಆದೇಶ ಸಂಧಿ

c)

ಲೋಪಸಂಧಿ

d)

ಸಾವರ್ಣದೀರ್ಘಸಂದಿ

18.

'ನಟರಾಜ ' ಸಾವಿತ್ರಿ ಇವು,__________ನಾಮಪದಕ್ಕೆ ಉದಾಹರಣೆಯಾಗಿವೆ

a)

ಅನ್ವರ್ಥಕ ನಾಮ

b)

ಭಾವನಾಮ

c)

ಅಂಕಿತನಾಮ

d)

ರೂಢನಾಮ

19.

ಆಕಾಶ, ಪರ್ವತ, ಇವು ಈ ನಾಮಪದಕ್ಕೆ ಉದಾಹರಣೆಯಾಗಿವೆ

a)

ಅನ್ವರ್ಥಕನಾಮ

b)

ರೂಢನಾಮ

c)

ಅಂಕಿತನಾಮ

d)

ಭಾವನಾಮ

20.

'ನೋಡಿದನು' ಈ ಪದವನ್ನು ನಿಷೇದಾರ್ಥಕ ಪದವಾಗಿ ಪರಿವರ್ತಿಸಿ

a)

ಸೋಡಿಯಾನು

b)

ನೋಡನು

c)

ನೋಡಲಿ

d)

ನೋಡಲಿಲ್ಲ

21.

ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ.......

a)

ಕೇಂದ್ರ ಸಾಹಿತ್ಯ ಅಕಾಡೆಮಿ

b)

ಭಾರತೀಯ ಭಾಷಾ ಪರಿಷತ್

c)

ನೃಪತುಂಗ ಪ್ರಶಸ್ತಿ

d)

ಪಂಪ ಪ್ರಶಸ್ತಿ

22.

ಯುದ್ಧ ಪಾಠ ಇದನ್ನು ಎತ್ತಿ ಹಿಡಿಯುತ್ತದೆ....

a)

ಶಿಕ್ಷಣದ ಮೌಲ್ಯ

b)

ದ್ವೇಷ

c)

ಮಾನವೀಯ ಮೌಲ್ಯ

d)

ಅಜ್ಞಾನದ ಮೌಲ್ಯ

23.

"ತಲೆಗೂದಲು ಬೆಳ್ಳಗಾದ ಮುದುಕಿ" ಇದು ಯಾರನ್ನು ಕುರಿತು ಹೇಳಿದ್ದು?

a)

ಸೀತೆ

b)

ಶಬರಿ

c)

ಮುದುಕಿ

d)

ಕುಂತಿ

24.

ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು.......

a)

ಮುದುಕಿ

b)

ರಾಹಿಲ್

c)

ಮುದುಕಿಯ ಸೊಸೆ

d)

ಸೈನಿಕರು

25.

ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ....

a)

ಸಂಪತ್ತಿನ ವಿಚಾರದಲ್ಲಿ

b)

ಆಹಾರದ ವಿಚಾರದಲ್ಲಿ

c)

ಯುದ್ದದ ಹೆಸರಿನಲ್ಲಿ

d)

ಕರೋನದ ಹೆಸರಿನಲ್ಲಿ

26.

ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು?

a)

ಉದ್ದವಾದ ಕೋಲು

b)

ಚಿಕ್ಕದೀಪ

c)

ಬಂದೂಕು

d)

ಖಿರ್ದಿ ಪುಸ್ತಕ

27.

ಇವುಗಳಲ್ಲಿ ಯಾವುದು ಸಾರ ಅಬೂಬಕ್ಕರ್ ಅವರ ಕೃತಿಯಲ್ಲ....

a)

ತಳ ಒಡೆದ ದೋಣಿಯಲ್ಲಿ

b)

ವಜ್ರಗಳು

c)

ಶಬರಿ

d)

ಚಂದ್ರಗಿರಿ ತೀರದಲ್ಲಿ

28.

ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು?

a)

ಬಂದೂಕುಗಳು

b)

ಸೈನಿಕ ಉಡುಪುಗಳು

c)

ಮದ್ದುಗುಂಡುಗಳು

d)

ಔಷಧ ಮತ್ತು ಶಸ್ತ್ರ ಚಿಕಿತ್ಸಾ ಪೆಟ್ಟಿಗೆ

29.

"ನನ್ನನ್ನು ರಕ್ಷಿಸಿ ನಾನಿನ್ನೂ ತಾಳಲಾರೆ"- ಎಂದವರು.......

a)

ಮುದುಕಿಯ ಸೊಸೆ

b)

ರಾಹಿಲ್

c)

ಸೈನಿಕರು

d)

ಮುದುಕಿ

30.

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು.....

a)

ರಾಹಿಲ್

b)

ಸೊಸೆ

c)

ಮುದುಕಿ

d)

ಪೈಲೆಟ್

31.

ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ....

a)

ಬೆಂಗಳೂರು

b)

ಕಾಸರಗೋಡು

c)

ಮಂಜೇಶ್ವರ

d)

ಕೊಪ್ಪಳ

32.

ರಾಹಿಲನಿಗೆ ಈಜಲು ಕಷ್ಟವಾಗಲು ಕಾರಣ.....

a)

ಸೈನಿಕ ಉಡುಪು ಧರಿಸಿದ್ದರಿಂದ

b)

ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ

c)

ನೀರು ಇಲ್ಲದಿದ್ದರಿಂದ

d)

ಈಜು ಬರುತ್ತಿರಲಿಲ್ಲ

33.

ಮಹಿಳೆಯ ಆರ್ತನಾದ ಯಾವುದನ್ನು ಬೇಧಿಸಿ ರಾಹಿಲನ ಕಿವಿಯೊಳಗೆ ಬಿದ್ದಿತು.......

a)

ಗುಡುಗು ಶಬ್ದ

b)

ವಿಮಾನದ ಶಬ್ದ

c)

ಬಾಂಬ್ ಶಬ್ದ

d)

ಮಳೆಯ ಶಬ್ದ

34.

ಇದು ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಲ್ಲ.......

a)

ಮೊಸರಿನ ಮಂಗಮ್ಮ

b)

ಚಪ್ಪಲಿಗಳು

c)

ಖೆಡ್ಡಾ

d)

ಪಯಣ

35.

ರಾಹಿಲನು ಯಾರು?

a)

ವೈದ್ಯ ಸೈನಿಕ

b)

ವಿಮಾನದ ಪೈಲೆಟ್

c)

ಮುದುಕಿಯ ಮಗ

d)

ಮುದುಕಿಯ ತಮ್ಮ

36.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು?

a)

ಬಟ್ಟೆ

b)

ಎಲೆ

c)

ಬಣ್ಣ

d)

ಕಾಗದ

37.

ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ

a)

1904

b)

1936

c)

1905

d)

1926

38.

"ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ" ಎಂದವರು.......

a)

ಮುದುಕಿ

b)

ಸೊಸೆ

c)

ರಾಹಿಲ್

d)

ಪೈಲೆಟ್

39.

ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದದ್ದು ಯಾವಾಗ?

a)

ಮುದುಕಿಯನ್ನು ನೋಡಿದಾಗ

b)

ಸಮುದ್ರ ತೀರ ಕಣ್ಣಿಗೆ ಬಿದ್ದಾಗ

c)

ಸೊಸೆಯನ್ನು ನೋಡಿದಾಗ

d)

ಒಂಟಿಮನೆ ನೋಡಿದಾಗ

40.

ಈ ಮಳೆಯಲ್ಲಿ ಕತ್ತಲಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು....

a)

ಸೈನಿಕರು

b)

ರಾಹಿಲ್

c)

ಮುದುಕಿಯ ಸೊಸೆ

d)

ಮುದುಕಿ

41.
ಸಾಹೇಬ ಕಾಗದ ಬರೆದು ಕಳುಹಿಸಿದ್ದು ಏಕೆ ?
a)
ವ್ಯಾಪಾರ ಮಾಡಲೆಂದು
b)
ದಂಡು ಬರಲಿ ಎಂದು
c)
ಬೇಡರು ಆಯುಧಗಳನ್ನು ಒಪ್ಪಿಸಿದರೆಂದು
d)
ಸಿಪಾಯಿ ಸತ್ತುಹೋದನೆಂದು
42.
ಮೂರು ನೂರು ಜನ ಸೈನಿಕರು ಯಾರ ಮೇಲೆ ಎರಗಿದರು.
a)
ರಾಮ
b)
ಬಾಲ
c)
ಹನುಮ
d)
ಜಡಗ
43.

ದ್ಯೂತದಲ್ಲಿ ಸೋತ ಪಾಂಡವರು ಸಂಪತ್ತು ಮರಳಿ ಕೊಡಲು ಕೌರವನು ಯಾವ ಷರತ್ತನ್ನು ಹಾಕಿದನು?

a)

೧೨ ವರ್ಷ ವನವಾಸ ಮತ್ತು ೧ ವರ್ಷ ಅಜ್ಹಾತವಾಸ

b)

ಮತ್ತೆ ಜೂಜು ಆಡಲು ಆಹ್ವಾವನಿಸಿದನು

c)

ಸಂಧಿ ಮೂಲಕ ಕೊಡಲು ಒಪ್ಪಿದ್ದು

d)

ಯುದ್ಧ ಮಾಡಿಯೇ ಪಡೆಯಲು ತಿಳಿಸಿದ್ದು

44.

ಶ್ರೀಕೄಷ್ಣ ಸಂಧಿಯ ನೆಪದಲ್ಲಿ ಕೌರವನ ಬಲವನ್ನು ಕುಗ್ಗಿಸಲು ಮೊದಲು ಯಾರ ಅರಮನೆಗೆ ಹೋದನು?

a)

ಶಕುನಿಯ ಮನೆಗೆ

b)

ವಿದುರನ ಮನೆಗೆ

c)

ಬಲರಾಮನ ಮನೆಗೆ

d)

ಕರ್ಣನ ಮನೆಗೆ

45.

ಕೄಷ್ಣನು ಕರ್ಣನನ್ನು ಬರಸೆಳೆದು ರಥದಲ್ಲಿ ಕುಳ್ಳಿರಿಸಿದಾಗ ಏನೆಂದು ಹೇಳಿದನು?

a)

ಭೇದವಿಲ್ಲೆಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ

b)

ಎನಗೆ ನಿಮ್ಮಡಿಗಳಲಿ ಸಮಸೇವನೆಯೆ ದೇವ ಮುರಾರಿಯಂಜುವೆ ಎಂದನು

c)

ಕೊರಳ ಸೆರೆ ಹಿಗ್ಗಿದವು ದೄಗುಜಲ ಉರವಣಿಸಿ ಕಡುನೊಂದನು

d)

ಏನು ಹೇಳೈ ಕರ್ಣ ಚಿತ್ತಗ್ಲಾನಿ ಯಾವುದು ಮನಕೆ

46.

ಕರ್ಣನು ತನ್ನ ಒಡೆಯನ ಋಣವನ್ನು ಹೇಗೆ ತೀರಿಸುವೆನೆಂದು ಹೇಳಿದನು?

a)

ರಣದಲಿ ಸುಭಟಕೋಟಿಯನು ಕೊಂದು

b)

ದಾನ ಮಾಡಿ

c)

ತಪಸ್ಸಿಗೆ ಹೋಗಿ

47.

ಪಾಂಡವರನ್ನು ನೋಯಿಸೆನು ಎಂದು ಕರ್ಣನು ಯಾರ ಮೇಲೆ ಆಣೆ ಮಾಡಿದನು?

a)

ಮುರಾರಿ ಮೇಲಾಣೆ

b)

ರಾಜೀವಸಖನಾಣೆ

c)

ಕುಂತೀಯ ಮೇಲಾಣೆ

d)

ಮಾದ್ರಿಯ ಮೇಲಾಣೆ

48.

'ಕಿಂಕರ' ಪದದ ಅರ್ಥ ;

a)

ಸೇವಕ

b)

ದೇವರು

c)

ಕೈಂಕರ್ಯ

d)

ರಾಜ

49.

'ನಕುಲಸಹದೇವ' ಪದದ ಸಮಾಸವಿದು ;

a)

ಕರ್ಮಧಾರೆಯ

b)

ದ್ವಿಗು

c)

ತತ್ಪುರುಷ

d)

ದ್ವಂದ್ವ

50.

ಕೃಷ್ಣನು ಕರ್ಣನಿಗೆ ಈ ರಾಜ್ಯದ ಘನತೆಯನು ಮಾಡುವುದಾಗಿ ಹೇಳಿದ ;

a)

ಅಯೋಧ್ಯೆ

b)

ಹಸ್ತಿನಾಪುರ

c)

ಮಥುರಾ

d)

ಇಂದ್ರಪ್ರಸ್ಥ

51.

"ನಿನ್ನ ಅಪದಸೆಯ ಬಯಸುವನಲ್ಲ "ಎಂದು ಹೇಳಿದವರು..

a)

ಕರ್ಣ....

b)

ಕೃಷ್ಣ..

c)

ಯಮ..

d)

ಅರ್ಜುನ.

52.

ಶ್ರೀ ಕೃಷ್ಣನ ಆಮಿಷಕ್ಕೆ ಕರ್ಣನ ಉತ್ತರ ಇದಾಗಿತ್ತು...

a)

ಮಹಿಯ ರಾಜ್ಯದ ಒಡೆಯನಾಗುವ ಆಸೆ ನನಗಿಲ್ಲ.

b)

ಸಾಮ್ರಾಜ್ಯ ಒಡೆಯನಾಗಬೇಕು.

c)

ಶ್ರೀ ಕೃಷ್ಣನ ಆಮಿಷಕ್ಕೆ ಕರ್ಣನು ಒಪ್ಪಿದನು.

d)

ಸಂತಸದಿಂದ ಓಡಾಡಿದನು.

53.

ಕೃಷ್ಣನು ಕರ್ಣನಿಗೆ ಯಾವುದಕ್ಕೆ ಕೈಯೊಡ್ಡುವುದು ಸರಿಯಲ್ಲ ಎಂದಿರುವುದು

a)

ದುರ್ಯೋಧನನ ಮಾತಿಗೆ

b)

ದುರ್ಯೋಧನನ ನಡತೆಗೆ

c)

ದುರ್ಯೋಧನನ ಬಾಯ್ದಂಬುಲಕೆ

d)

ದುರ್ಯೋಧನನ ರಾಜ್ಯಕ್ಕೆ

54.

ಕೃಷ್ಣನ ಆಮಿಷಗಳಿಗೆ ಕರ್ಣನ ಉತ್ತರ

a)

ಸಿರಿಯ ಸಂಪತ್ತಿಗೆ ಸೋಲುವವನಲ್ಲ

b)

ನಿನ್ನ ಮಾತಿಗೆ ನನ್ನ ಒಪ್ಪಿಗೆ ಇದೆ

c)

ನೀನು ಹೇಳುವುದು ಸರಿಯಾಗಿದೆ

d)

ಸಿರಿಯ ಸಂಪತ್ತಿಗೆ ಸೋಲುವೆನು

55.

ಕುಮಾರವ್ಯಾಸನ ಆರಾಧ್ಯದೈವ

a)

ಚೆನ್ನಮಲ್ಲಿಕಾರ್ಜುನ

b)

ಕೂಡಲಸಂಗಮ

c)

ವೀರನಾರಾಯಣ

d)

ಸೋಮೇಶ್ವರ

56.

ಕುಮಾರವ್ಯಾಸ ನಿಗಿರುವ ಬಿರುದು ಯಾವುದು

a)

ಕವಿರತ್ನ

b)

ಸರಸ್ವತಿ ಮಣಿಹರ

c)

ಉಪಮಾಲೋಲ

d)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

57.

ಕೌರವನು ಅವಮಾನಿತ ವಾದ ಸ್ಥಳ

a)

ಕುರುಕ್ಷೇತ್ರ

b)

ಧರ್ಮರಾಯನ ಮಯನಿರ್ಮಿತ ಅರಮನೆ

c)

ಮರಕೋತಿ ಆಟ ಆಡುವ ಸಂದರ್ಭ

d)

ಗುರುಕುಲದಲ್ಲಿ ಶಿಕ್ಷಣ ಪಡೆಯುವ ಸಂದರ್ಭ

58.

ಶ್ರೀಕೃಷ್ಣ ಸಂಧಿಯ ನೆಪದಲ್ಲಿ ಯಾರ ಬಲವನ್ನು ಯಾರ ಯುದ್ಧ ವಿಮುಖತೆ ಮುಖೇನ ಕುಗ್ಗಿಸುತ್ತಾನೆ ಮುಖೇನ

a)

ದುರ್ಯೋಧನ-ಕರ್ಣ

b)

ಭೀಷ್ಮ-ವಿದುರ

c)

ದುರ್ಯೋಧನ-ವಿದುರ

d)

ವಿದುರ-ಕರ್ಣ

59.

ಕೌರವನ ಸೈನ್ಯದಲ್ಲಿ ವಿದುರನನ್ನು ಹೊರತುಪಡಿಸಿ ಪಾಂಡವರನ್ನು ಕೊಲ್ಲಬಲ್ಲ ಮತ್ತೋರ್ವ ಸೇನಾನಿ ಯಾರಾಗಿದ್ದರು

a)

ಭೀಷ್ಮ

b)

ದ್ರೋಣ

c)

ಶಕುನಿ

d)

ಕರ್ಣ

60.

ಹಸಾದ ಪದವು ಯಾವ ಪದದ ತದ್ಭವ ರೂಪ ವಾಗಿದೆ

a)

ಹಸದ

b)

ಪ್ರಸಾದ

c)

ಪ್ರಸದ

d)

ಪ್ರಸುದ

61.

ತಲ್ಲಣ ಪದವು ಈ ಪದದ ಅರ್ಥ ವಗಿದೆ

a)

ಗ್ಲಾನಿ

b)

ಚಿತ್ತ

c)

ಸೋನು

d)

ಮುರಾರಿ

62.

ಕೃಷ್ಣ ಕರ್ಣನಿಗೆ ಮೇದಿನಿಪತಿ ನೀನು ಎಂದು ಹೇಳಲು ಕಾರಣವೇನು

a)

ಕರ್ಣ ಪಾಂಡವ ಮತ್ತು ಕೌರವರ ಹಿರಿಯ ಎನ್ನುವುದು.

b)

ಕರ್ಣ ಮೇದಿನಿಯ ಒಡೆಯನಾದದು

c)

ಮೇದಿನಿಯ ಗಂಡ

d)

ಇವು ಯಾವು ಅಲ್ಲ

63.

ಪತಿಯ ಅವಸರಕ್ಕೆ ಏನು ಮಾಡುವುದಾಗಿ ಕರ್ಣ ನುಡಿದನು

a)

ವೈರಿಗಳನ್ನು ಕೊಲ್ಲುವೆನೆಂದು

b)

ಪಾಂಡವರ ಸದೆಬಡೆಯುವ ನಿಂದು

c)

ನನ್ನ ಶರೀರವನ್ನು ನೂಕು ವೇನೆಂದು

d)

ಪಾಂಡವರಿಗೆ ಸಹಾಯಮಾಡುವೆ ನಲ್ಲಿ

64.

"ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ರಾಹಿಲನು ಒಂಟಿ ಮನೆಯಾಕೆಗೆ

b)

ಮುದುಕಿ ಸೊಸೆಗೆ

c)

ಸೈನಿಕರು ರಾಹುಲನಿಗೆ

d)

ಮುದುಕಿಯು ರಾಹಿಲನಿಗೆ

65.

"ತಾಯಿ ದಾರಿ ಗರಿಗೆ ಬೀಡಿಲ್ಲಿ ದೊರೆಯುವುದೇ?" ಯಾರು ಯಾರಿಗೆ ಹೇಳಿದ್ದಾರೆ

a)

ರಾಮನು ಲಕ್ಷ್ಮಣನಿಗೆ

b)

ಲಕ್ಷ್ಮಣನು ರಾಮನಿಗೆ

c)

ಶಬರಿಯು ರಾಮಲಕ್ಷ್ಮಣರಿಗೆ

d)

ರಾಮನು ಶಬರಿಗೆ

66.

ಕಂದಿದ :ಮಸುಕಾದ ::ಹಣತೆ:_______

a)

ದೀಪ

b)

ದೀವಿಗೆ

c)

ಪಣತಿ

d)

ಪ್ರಣತೆ

67.

ಪಥ:ದಾರಿ::ಹಡಗು:______

a)

ದೋಣಿ

b)

ನಾವಿಕ

c)

ನಾವೆ

d)

ತೆಪ್ಪ

68.

ಕವಿ ಯಾವ ಎಚ್ಚರದೂಳು ಬದುಕಬೇಕಿದೆ ಎಂದಿದ್ದಾರೆ ?

a)

ನಿದ್ರೆಯಿಂದ ಎಚ್ಚರಗೊಂಡು

b)

ಭವಿಷ್ಯದ ಎಚ್ಚರದೊಳು

c)

ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು

d)

ಭಯ ಸಂಶಯದ ಎಚ್ಚರದೊಳು

69.

ಕವಿ ಯಾವುದನ್ನು ಕೆಡವುತ ಸೇತುವೆಯಾಗೋಣ ಎಂದಿದ್ದಾರೆ ?

a)

ಮನೆಯನ್ನು

b)

ಮನುಜರ ನಡುವಿನ ಅಡ್ಡಗೋಡೆಗಳನ್ನು

c)

ಹಡಗನ್ನು

d)

ಬೆಟ್ಟಗುಡ್ಡಗಳನ್ನು

70.

ವಸಂತ ಪದದ ಅರ್ಥ

a)

ದೀಪ

b)

ದಾರಿ

c)

ಸಮೃದ್ಧಿ

d)

ಕಾಡು

71.

ಪಥ ಪದದ ಸಮನಾರ್ಥಕ ರೂಪ...

a)

ದಾರಿ

b)

ಮಾರ್ಗ

c)

ಹಾದಿ

d)

ಎಲ್ಲವೂ ಸರಿ

72.

'ಕಾಡುಮೇಡು' ಈ ಪದವು ಯಾವ ವ್ಯಾಕರಣಾಂಶಕ್ಕೆ ಸೇರಿದೆ ?

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ನುಡಿಗಟ್ಟು

d)

ಜೋಡುನುಡಿ

73.

ನಾವು ಹೋಗುವ ದಾರಿ ತಲುಪಬೇಕಾದರೆ ಇದು ಸ್ಪಷ್ಟವಾಗಿರಬೇಕು.

a)

ಗುರಿ

b)

ಆಸೆ

c)

ಜೀವನ

d)

ಮನಸ್ಸು

74.

ಎಷ್ಟೇ ತೊಡಕುಗಳು ಬಂದರೂ, ಅಡ್ಡಿಆತಂಕಗಳು ಎದುರಾದರೂ, ತನ್ನ ಕನಸನ್ನು ನನಸಾಗಿಸಿಕೊಳ್ಳುವವನೇ....

a)

ಸಾಧಕ

b)

ಕನಸುಗಾರ

c)

ಕಲೆಗಾರ

d)

ಯಾವುದು ಅಲ್ಲ

75.
ಪೆರೆ ಈ ಪದದ ಅರ್ಥ
a)
ಸೂರ್ಯ
b)
ಚಂದ್ರ
c)
ಮುಖ
d)
ಅನನ
76.

ಇವು ಭಾರತದ ಪ್ರಸಿದ್ಧ ಎರಡು ಮಹಾಕಾವ್ಯಗಳು

a)

ರಾಮಾಯಣ ಮತ್ತು ಶಬರಿ ನಾಟಕ

b)

ರಾಮಾಯಣ ಮತ್ತು ಜೈಮಿನಿ ಭಾರತ

c)

ರಾಮಾಯಣ ಮತ್ತು ಕುಮಾರವ್ಯಾಸ ಭಾರತ

d)

ಮಹಾಭಾರತ ಮತ್ತು ರಾಮಾಯಣ

77.

ಶಬರಿಯು ನೋಡುವುದಕ್ಕೆ ಹೀಗೆ ಕಾಣುತ್ತಿದ್ದಳು...

a)

ಬುದ್ಧಿಹೀನಳಂತೆ

b)

ಬುದ್ಧಿವಂತಯಂತೆ

c)

ಮಹಾರಾಣಿಯಂತೆ

d)

ಬೃಹನ್ನಳೆಯಂತೆ

78.

ನಿಂತಲ್ಲಿಯೇ ನಾ ನಿಂತಿರುವೆ| ರಾಮಾ ನೀನೆಂದೈತರುವೆ.... ಈ ಮಾತನ್ನು ಯಾರು ಯಾರಿಗೆ ಹೇಳಲಾಗಿದೆ....

a)

ಶ್ರೀರಾಮ ಶಬರಿಯನ್ನು ಕುರಿತು

b)

ಶಬರಿ ಶ್ರೀರಾಮನನ್ನು ಕುರಿತು

c)

ಶಬರಿ ಪುತಿನ ಕುರಿತು

d)

ಶಬರಿ ಸೀತೆಯನ್ನು ಕುರಿತು

79.

ದೊರೆವಳೇ ಸೀತೆ| ಭೂಮಿಜಾತೆ ಆತ್ಮ ಕಾಮಕಲ್ಪಲತೆ ದೊರೆವಳೇ ಚೆಲುವೆ?.... ಈ ಮಾತನ್ನು ಯಾರು ಯಾರನ್ನು ಕುರಿತು ಹೇಳಿದ್ದಾರೆ?

a)

ಶಬರಿ ಶ್ರೀರಾಮ ನನ್ನ ಕುರಿತು ಹೇಳಿದ್ದಾಳೆ

b)

ಶ್ರೀರಾಮ ಸೀತೆಯನ್ನು ಕುರಿತು ಹೇಳಿದ್ದಾನೆ

c)

ಶ್ರೀರಾಮ ಶಬರಿಯನ್ನು ಕುರಿತು ಹೇಳಿದ್ದಾನೆ

d)

ಶಬರಿ ಸೀತೆಯನ್ನು ಕುರಿತು ಹೇಳಿದ್ದಾಳೆ

80.

ಅವಳ ನೆನಪಿನ ಸೆಳೆತಕ್ಕೆನ್ನಾತ್ಮ ಸಿಲ್ಕೆ |ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ. ಈ ಮಾತನ್ನು ಯಾರನ್ನು ಕುರಿತು ಹೇಳಲಾಗಿದೆ?

a)

ಶಬರಿಯನ್ನು

b)

ಲಕ್ಷ್ಮಣನನ್ನು

c)

ಸೀತಾಮಾತೆಯನ್ನು

d)

ಶ್ರೀರಾಮನನ್ನು

81.

ಹಣ್ಣುಹಂಪಲು ಈ ಪದವು ಈ ಕೆಳಗಿನ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ..

a)

ದುರುಕ್ತಿ

b)

ಅನುಕರಣಾವ್ಯಯ

c)

ಜೋಡುನುಡಿ

d)

ನುಡಿಗಟ್ಟು

82.

ಹಿಂದೆ ವಿಕಾಸವಾಗುತ್ತಿದ್ದು ಇಂದು ಘನೀಭೂತವಾಗಿರುವ ಅಂಶ;

a)

ಧರ್ಮ

b)

ಕೋಮು

c)

ಕುಲ

d)

ಜಾತಿ

83.

ವಿವೇಕಾನಂದರು ಈ ಮಹಿಮೆಯನ್ನು ಎಂದಿಗೂ ಮರೆಯಬಬೇಡಿ ಎಂದು ಕರೆ ನೀಡಿದ್ದಾರೆ;

a)

ಜಾತಿಯ

b)

ಧರ್ಮದ

c)

ಮನುಷ್ಯತ್ವದ

d)

ಆಧ್ಯಾತ್ಮದ

84.

ಯಾವ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ.

a)

ಸದಾಶಯಗಳು.

b)

ಸಮಾನತೆಯ ಆಶಯಗಳು.

c)

ಶೈಕ್ಷಣಿಕ ಆಶಯಗಳು.

d)

ರಾಜಕೀಯ ಆಶಯಗಳು.

85.

.....................ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರಿಯುತ್ತಿತ್ತು.

a)

ಪಕ್ಷಾಂತರಿಯ

b)

ಸ್ವಾತಂತ್ರ್ಯತೆಯ

c)

ಧರ್ಮಾಂಧತೆಯ

d)

ವೈಜ್ಞಾನಿಕತೆಯ

86.

ವಿವೇಕಾನಂದರ ಮೊದಲ ತತ್ವ.

a)

ದೀನ-ದಲಿತರ ಉದ್ಧಾರ.

b)

ಶ್ರೀಮಂತರ ಕಾಳಜಿ.

c)

ಮೇಲ್ವರ್ಗದವರ ಸ್ನೇಹ.

d)

ಧರ್ಮಪ್ರಚಾರ.

87.
'ಶಿಖರ ಚಿಂತಕ' ಎಂದು ಯಾರನ್ನು ಕರೆಯಲಾಗಿದೆ ?
a)
ಕುವೆಂಪು
b)
ಸ್ವಾಮಿ ವಿವೇಕಾನಂದರು
c)
ವರ್ತಕ
d)
ರಾಜಕುಮಾರ
88.
ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು ?
a)
ಶ್ರೀಮಂತರು ಮತ್ತು ವರ್ತಕರು ಬಗ್ಗೆ
b)
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ
c)
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯ ಬಗ್ಗೆ
d)
ಶಾನುಭೋಗರ ಬಗ್ಗೆ
89.
ಯಾರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ ?
a)
ಶ್ರೀಮಂತರ ಪರವಾದ ಆದ್ಯತೆಗಳು
b)
ಬಡಜನರ ಪರವಾದ ಆದ್ಯತೆಗಳು
c)
ಸ್ತ್ರೀಯರ ಪರವಾದ ಆದ್ಯತೆಗಳು
d)
ವರ್ತಕರ ಪರವಾದ ಆದ್ಯತೆಗಳು
90.
ಕತ್ತಲೆ ಗವ್ವೆನ್ನುವ ಗುಡಿಸಲೊಳಗೆ ಬರಲು ಹೆದರಿದವರು ಯಾರು ?    
a)
ಪುಟ್ಟ ಪೋರಿ
b)
ನೇಕಾರ
c)
ವಸಂತ
d)
ಒಡೆಯ
91.
ಪುಟ್ಟಿಯ ಪ್ರಕಾರ ವಸಂತ ಮರುಗಿದ್ದು         
a)
ರಂಗೋಲಿ ಕಂಡು
b)
ಚಿಂದಿ ಬಟ್ಟೆಗಳ ಕಂಡು
c)
ಬಾಲರವಿಯ ಕಂಡು
d)
ಒಡೆಯನನ್ನು ಕಂಡು
92.
ಮಾವಿಮರ : ಮೈತುಂಬಿ ನಿಂತಿವೆ :: ಕೋಗಿಲೆಗಳು :----------------
a)
ಮುಸುರೆ ತಿಕ್ಕುತ್ತಿವೆ
b)
ಮನದುಂಬಿ ಹಾಡಿವೆ
c)
ಥಳಥಳ ಹೊಳೆಯುತ್ತಿವೆ
d)
ಗುಡಿಸಲೊಳಗೆ ಬರಲು ಹೆದರುತ್ತಿವೆ
93.
ಹಾಲು ಗಲ್ಲದ ಹಸುಳೆ ಏನು ಮಾಡುತ್ತಿದ್ದಾಳೆ ?
a)
ಮುಸುರೆ ತಿಕ್ಕುತ್ತಿದ್ದಾಳೆ
b)
ಚಿಟ್ಟೆಯ ಚಿತ್ರ ಬಿಡಿಸುತ್ತಿದ್ದಳು
c)
ರಂಗೋಲಿ ಹಾಕುತ್ತಿದ್ದಾಳೆ
d)
ಮನದುಂಬಿ ಹಾಡುತ್ತಿದ್ದಾಳೆ
94.
ಯಾರ ಬದುಕು ಇಂದಿಗೂ ಹಸನಾಗಿ ಇಲ್ಲ      
a)
ಕಾರ್ಮಿಕರು, ಮಾಲೀಕರು
b)
ಬಡವರು, ಶ್ರಮಿಕರು
c)
ಮಹಿಳೆಯರು, ಮಕ್ಕಳು
d)
ಮುದುಕರು ,ವಯಸ್ಕರು
95.
ಯಾವುದಕ್ಕೆ ಕಡಲುಕ್ಕಿ ಹರಿಯುವ ಸಂಭ್ರಮ ಉಂಟಾಗಿದೆ ?
a)
ಬೆಳೆಗೆ 
b)
ಇಳೆಗೆ 
c)
ಮುಗಿಲಿಗೆ 
d)
ಕಡಲಿಗೆ
96.
ತೂತು ಬಿದ್ದ ಸೀರೆಯಲ್ಲಿ ಸೊರಗಿರುವರು ಯಾರು ?   
a)
ಪುಟ್ಟ ಪೋರಿ 
b)
ಕಮ್ಮಾರ
c)
ಪುಟ್ಟ ಪೋರಿಯ ಅಮ್ಮ
d)
ಬಾಲರವಿ 
97.
ಗೋಡೆಗಳು ಏನನ್ನು ಕಾಣದೆ ಮುಖ ಮುಚ್ಚಿಕೊಂಡಿವೆ ? 
a)
ಬಣ್ಣ 
b)
ಸುಣ್ಣ
c)
ಸಿಮೆಂಟು
d)
ಇಟ್ಟಿಗೆ