wayground logo

Free Printable Worksheets

Font size

S
M
L
XL
Worksheets

ಇ-7,ವ್ಯ.ಅ.-3

Total questions: 88

Worksheet time: 44mins

Name
Class
Date
1.

1878 ರಲ್ಲಿ ಲಾರ್ಡ್ ಲಿಟ್ಟನ್ ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದನು. ಏಕೆಂದರೆ

a)

ಭಾರತೀಯ ಕ್ರಾಂತಿಕಾರಿ ಬರಹಗಾರರನ್ನು ನಿಯಂತ್ರಿಸಲು

b)

ಇಂಗ್ಲೆಂಡಿನ ಬರಹಗಾರರನ್ನು ನಿಯಂತ್ರಿಸಲು

c)

ಪತ್ರಿಕೋದ್ಯಮದಲ್ಲಿ ಜನರನ್ನು ನಿಯಂತ್ರಿಸಲು

d)

ಬಂಗಾಳದ ಬರಹಗಾರರನ್ನು ನಿಯಂತ್ರಿಸಲು

2.

ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟ ಗವರ್ನರ್ ಜನರಲ್

a)

ಲಾರ್ಡ್ ಲಿಟ್ಟನ್

b)

ಲಾರ್ಡ್ ರಿಪ್ಪನ್

c)

ಲಾರ್ಡ್ ವಿಲಿಯಂ ಬೆಂಟಿಂಕ್

d)

ಲಾರ್ಡ್ ಕರ್ಜನ್

3.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕರು

a)

ಉಮೇಶಚಂದ್ರ ಬ್ಯಾನರ್ಜಿ

b)

ದಾದಾಬಾಯಿ ನವರೋಜಿ

c)

ಸುರೇಂದ್ರನಾಥ ಬ್ಯಾನರ್ಜಿ

d)

ಎ.ಓ.ಹ್ಯೂಮ್

4.

ಭಾರತೀಯರಲ್ಲಿ ರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ವೃದ್ಧಿಸಲು ಶ್ರಮಿಸಿದ ಸಂಸ್ಥೆ

a)

ಪೂನಾ ಸಾರ್ವಜನಿಕ ಸಭಾ

b)

ದಿ ಈಸ್ಟ್ ಇಂಡಿಯಾ ಅಸೋಸಿಯೇಷನ್

c)

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

d)

ದಿ ಇಂಡಿಯನ್ ಅಸೋಸಿಯೇಷನ್

5.

ಸಂಪತ್ತಿನ ಸೋರುವಿಕೆ ಸಿದ್ದಾಂತ ಪ್ರತಿಪಾದಿಸಿದವರು

a)

ಲಾಲ ಲಜಪತ ರಾಯ್

b)

ದಾದಾಬಾಯಿ ನವರೋಜಿ

c)

ಗೋಪಾಲಕೃಷ್ಣ ಗೋಖಲೆ

d)

ಸುರೇಂದ್ರನಾಥ ಬ್ಯಾನರ್ಜಿ

6.

ಮಂದಗಾಮಿಗಳ ಕಾಲವನ್ನು ಹೀಗೂ ಕರೆಯುತ್ತಾರೆ

a)

ಉದಾರ ರಾಷ್ಟ್ರವಾದದ ಕಾಲ

b)

ರಾಜಕೀಯ ಭಿಕ್ಷುಕರ ಕಾಲ

c)

ತೀವ್ರವಾದಿಗಳ ಕಾಲ

d)

ರಾಜಕೀಯ ಅಸಂತುಷ್ಟರ ಕಾಲ

7.

ಲಾರ್ಡ್ ಕರ್ಜನ್ನನು ಬಂಗಾಳ ವಿಭಜನೆಯ ಯೋಜನೆ ರೂಪಿಸಿದನು. ಏಕೆಂದರೆ

a)

ಒಡೆದು ಆಳುವ ನೀತಿ

b)

ಆಡಳಿತಾತ್ಮಕ ನೆಪವನ್ನು ಮುಂದಿಟ್ಟುಕೊಂಡು

c)

ಹಿಂದೂ ಮುಸ್ಲಿಮರನ್ನು ಎತ್ತಿ ಕಟ್ಟುವ ಉದ್ದೇಶ

d)

ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸಲು

8.

ಸ್ವದೇಶಿ ಚಳುವಳಿಯನ್ನು ದೇಶದಾದ್ಯಂತ ಕೊಂಡೊಯ್ದವರು

a)

ಮಂದಗಾಮಿಗಳು

b)

ತೀವ್ರವಾದಿಗಳು

c)

ಕ್ರಾಂತಿಕಾರಿಗಳು

d)

ಗಾಂಧಿವಾದಿಗಳು

9.

1911ರಲ್ಲಿ ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂಪಡೆಯಿತು. ಏಕೆಂದರೆ

a)

ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಿಂದ ಹಿಂಪಡೆದರು

b)

ಬಂಗಾಳದ ತುಂಬೆಲ್ಲ ಕೋಮುಗಲಭೆ ಸಂಭವಿಸಿದವು

c)

ಬಂಗಾಳದ ಜನರು ಇದನ್ನು ವಿರೋಧಿಸಿದರು

d)

ಬಂಗಾಳ ಸ್ವತಂತ್ರವಾಗಿರಲು ಬಯಸಿದ್ದರಿಂದ

10.

ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘೋಷಿಸಿದವರು

a)

ಭಗತ್ ಸಿಂಗ್

b)

ಲಾಲಾ ಲಜಪತರಾಯ

c)

ಬಿಪಿನ್ ಚಂದ್ರಪಾಲ

d)

ಬಾಲ ಗಂಗಾಧರ್ ತಿಲಕ್

11.

ಪೂರ್ಣ ಸ್ವರಾಜ್ಯವನ್ನು ಪಡೆಯುವುದು ಇವರ ಗುರಿಯಾಗಿತ್ತು

a)

ಮಂದಗಾಮಿಗಳು

b)

ತೀವ್ರವಾದಿಗಳು

c)

ಕ್ರಾಂತಿಕಾರಿಗಳು

d)

ಗಾಂಧಿವಾದಿಗಳು

12.

ತಿಲಕರು ಮರಾಠಿ ಭಾಷೆಯಲ್ಲಿ --------- ಮತ್ತು -----------------------ಇಂಗ್ಲಿಷ್ ಭಾಷೆಯಲ್ಲಿ ಪತ್ರಿಕೆಗಳನ್ನು ಪ್ರಕಟಿಸಿದರು

a)

ಕೇಸರಿ, ಸ್ವಾತಂತ್ರ್ಯ

b)

ಸ್ವಾತಂತ್ರ್ಯ, ಮರಾಠ

c)

ಕೇಸರಿ, ಮರಾಠ

d)

ಮರಾಠ, ಸ್ವರಾಜ್ಯ

13.

ತಿಲಕರು ಜೈಲಿನಲ್ಲಿದ್ದಾಗಲೇ ರಚಿಸಿದ ಕೃತಿ

a)

ಮರಾಠ

b)

ಕೇಸರಿ

c)

ಸ್ವರಾಜ್ಯ

d)

ಗೀತಾ ರಹಸ್ಯ

14.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದವರು

a)

ಮಂದಗಾಮಿಗಳು

b)

ತೀವ್ರವಾದಿಗಳು

c)

ಕ್ರಾಂತಿಕಾರಿಗಳು

d)

ಗಾಂಧಿವಾದಿಗಳು

15.

ಧಾರ್ಮಿಕ ಜಾಗೃತಿಗಾಗಿ ಗಾಯಿಡಿನ್ ಕಟ್ಟಿದ ಸಂಸ್ಥೆಯ ಹೆಸರು

a)

ಹರಕ್ಕಾ

b)

ಡರಕ್ಕಾ

c)

ಭರಕ್ಕಾ

d)

ಪರಕ್ಕಾ

16.

ಬ್ರಿಟಿಷರು ಜಾದೋನಾಂಗರನ್ನು ಗಲ್ಲಿಗೇರಿಸಿದ ದಿನ

a)

1931ರ ಆಗಸ್ಟ್ 25

b)

1931ರ ಆಗಸ್ಟ್ 27

c)

1931ರ ಆಗಸ್ಟ್ 29

d)

1931ರ ಆಗಸ್ಟ್ 22

17.

ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರಮುಖ ತಂತ್ರಗಳು

a)

ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹ

b)

ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹ

c)

ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯ

d)

ಪರೋಕ್ಷ ಪ್ರತಿರೋಧ, ಹಿಂಸೆ ಮತ್ತು ಸತ್ಯಾಗ್ರಹ

18.

ಗಾಂಧೀಜಿಯವರು ಆರಂಭಿಸಿದ ಪತ್ರಿಕೆಯ ಹೆಸರು

a)

ಯಂಗ್ ಇಂಡಿಯಾ

b)

ಕೇಸರಿ

c)

ಮರಾಠ

d)

ಮೂಕನಾಯಕ

19.

ಗಾಂಧೀಜಿಯವರ ಹೋರಾಟದ ಪ್ರಮುಖ ಅಸ್ತ್ರ

a)

ಅಹಿಂಸೆ

b)

ಪರೋಕ್ಷ ಪ್ರತಿರೋಧ

c)

ಸತ್ಯ

d)

ಸತ್ಯಾಗ್ರಹ

20.

ಬ್ರಿಟಿಷ್ ಸರ್ಕಾರವು ರೌಲತ್ ಕಾಯ್ದೆಯನ್ನು ಜಾರಿಗೆ ತಂದ ವರ್ಷ

a)

1918

b)

1919

c)

1929

d)

1909

21.

ಜಲಿಯನ್ ವಾಲಾಬಾಗ್ ದುರಂತದ ವಿಚಾರಣೆಗಾಗಿ ಸರ್ಕಾರ ನೇಮಿಸಿದ ಆಯೋಗ

a)

ನೆಹರು ಆಯೋಗ

b)

ಗಾಂಧೀಜಿ ಆಯೋಗ

c)

ಹಂಟರ್ ಆಯೋಗ

d)

ಮೌಂಟ್ ಬ್ಯಾಟನ್ ಆಯೋಗ

22.

ಭಾರತದಲ್ಲಿ ಮಹಮದ್ ಅಲಿ ಮತ್ತು ಶತಕತ್ರಯ ಅಲಿ ಆರಂಭಿಸಿದ ಚಳುವಳಿ

a)

ಸ್ವದೇಶಿ

b)

ಅಸಹಕಾರ

c)

ಖಿಲಾಪತ್

d)

ಉಪ್ಪಿನ ಸತ್ಯಾಗ್ರಹ

23.

ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಯಿತ್ತ ವರ್ಷ

a)

1925

b)

1906

c)

1919

d)

1920

24.

ಚೌರಿಚೌರ ಘಟನೆ ಜರುಗಿದ ವರ್ಷ

a)

1920

b)

1919

c)

1921

d)

1922

25.

1923ರಲ್ಲಿ ಸಿ ಆರ್ ದಾಸ್ ಮತ್ತು ಮೋತಿಲಾಲ್ ನೆಹರು ಸ್ಥಾಪಿಸಿದ ಪಕ್ಷ

a)

ಅಖಿಲ ಭಾರತೀಯ ಕಾಂಗ್ರೆಸ್

b)

ಸ್ವರಾಜ್ಯ ಪಕ್ಷ

c)

ಕಾಂಗ್ರೆಸ್ ಸಮಾಜವಾದಿ

d)

ಯುವ ಕಾಂಗ್ರೆಸ್

26.

ಬ್ರಿಟಿಷರು ಸೈಮನ್ ಆಯೋಗವನ್ನು ನೇಮಿಸಿದ ವರ್ಷ

a)

1927

b)

1925

c)

1922

d)

1928

27.

1929ರಲ್ಲಿ ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ ಎಂದು ಈ ಕಾಂಗ್ರೆಸ್ ಅಧಿವೇಶನದಲ್ಲಿ ಘೋಷಿಸಲಾಯಿತು

a)

ಅಮೃತಸರ

b)

ದೆಹಲಿ

c)

ಮುಂಬೈ

d)

ಲಾಹೋರ್

28.

ಅಲಿ ಸಹೋದರರು ಮುನ್ನಡೆಸಿದ ಚಳುವಳಿ

a)

ಅಸಹಕಾರ ಚಳುವಳಿ

b)

ಸ್ವದೇಶಿ ಚಳುವಳಿ

c)

ಉಪ್ಪಿನ ಸತ್ಯಾಗ್ರಹ

d)

ಖಿಲಾಫತ್ ಚಳುವಳಿ

29.

ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ ಎಂದು ಘೋಷಿಸಿದ ಲಾಹೋರ್ ಅಧಿವೇಶನದ 1929 ಅಧ್ಯಕ್ಷರು

a)

ಮೋತಿಲಾಲ್ ನೆಹರು

b)

ಮಹಾತ್ಮ ಗಾಂಧೀಜಿ

c)

ಸುಭಾಷ್ ಚಂದ್ರ ಬೋಸ್

d)

ಜವಾಹರ್ ಲಾಲ್ ನೆಹರು

30.

ಕಾನೂನು ಭಂಗ ಚಳುವಳಿಯ ನೇತೃತ್ವ ವಹಿಸಿಕೊಂಡ ನಾಯಕರು

a)

ಜವಾಹರ್ ಲಾಲ್ ನೆಹರು

b)

ಮೋತಿಲಾಲ್ ನೆಹರು

c)

ಮಹಾತ್ಮ ಗಾಂಧೀಜಿ

d)

ಸುಭಾಷ್ ಚಂದ್ರ ಬೋಸ್

31.

ಗಾಂಧೀಜಿಯವರು ದಂಡಿ ಸತ್ಯಾಗ್ರಹವನ್ನು ಆರಂಭಿಸಿದ ವರ್ಷ

a)

1929

b)

1930

c)

1932

d)

1928

32.

ಗಾಂಧೀಜಿ ಮತ್ತು ಇರ್ವಿನ್ ಒಪ್ಪಂದ ಏರ್ಪಟ್ಟ ವರ್ಷ

a)

1929

b)

1930

c)

1932

d)

1931

33.

ಪೂನಾ ಒಪ್ಪಂದ ಏರ್ಪಡಲು ಕಾರಣರಾದ ನಾಯಕರು

a)

ಮಹಾತ್ಮ ಗಾಂಧೀಜಿ ಮತ್ತು ಡಾ ಬಿ.ಆರ್. ಅಂಬೇಡ್ಕರ್

b)

ಮಹಾತ್ಮ ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್

c)

ಮಹಾತ್ಮ ಗಾಂಧೀಜಿ ಮತ್ತು ಮೋತಿಲಾಲ್ ನೆಹರು

d)

ಮಹಾತ್ಮ ಗಾಂಧೀಜಿ ಮತ್ತು ಸಿ ಆರ್ ದಾಸ್

34.

ಪುನಾ ಒಪ್ಪಂದದ ಪ್ರಕಾರ

a)

ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರ ಸ್ಥಾಪಿಸಲಾಯಿತು

b)

ಅಸ್ಪೃಶ್ಯರಿಗೆ ಸಾಮಾನ್ಯ ಮತಕ್ಷೇತ್ರಗಳಲ್ಲಿಯೇ ಕೆಲವು ಕ್ಷೇತ್ರಗಳನ್ನು ಮೀಸಲಿಡಲಾಯಿತು

c)

ಅಸ್ಪೃಶ್ಯರಿಗೆ ಮೀಸಲಾತಿ ನೀಡಲಿಲ್ಲ

d)

ಅಸ್ಪೃಶ್ಯರಿಗೆ ಅಧಿಕ ಮತಕ್ಷೇತ್ರಗಳನ್ನು ಮೀಸಲಿಡಲಾಯಿತು

35.

ಮೂರನೇ ದುಂಡು ಮೇಜಿನ ಪರಿಷತ್ ಸಮಾವೇಶ ಜರುಗಿದ ವರ್ಷ

a)

1935

b)

1932

c)

1931

d)

1930

36.

ಭಾರತ ಒಕ್ಕೂಟ ರಚನೆ ಮತ್ತು ಸ್ವಾಯತ್ತತೆಯ ಅವಕಾಶಗಳನ್ನು ಕಲ್ಪಿಸಿದ ಶಾಸನ

a)

1929 ರ ಭಾರತ ಸರ್ಕಾರ ಶಾಸನ

b)

1932 ರ ಭಾರತ ಸರ್ಕಾರ ಶಾಸನ

c)

1925 ರ ಭಾರತ ಸರ್ಕಾರ ಶಾಸನ

d)

1935 ರ ಭಾರತ ಸರ್ಕಾರ ಶಾಸನ

37.

ಕ್ವಿಟ್ ಇಂಡಿಯಾ ಚಳುವಳಿಯ ಆಶಯ

a)

ಮಾಡು ಇಲ್ಲವೇ ಮಡಿ

b)

ಸಂಪೂರ್ಣ ಸ್ವರಾಜ್ಯ

c)

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ

d)

ಭಾರತ ಭಾರತೀಯರಿಗೆ

38.

ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯ (1942) ಸಂದರ್ಭದಲ್ಲಿ ದೇಶಬಾಂಧವರಿಗೆ ನೀಡಿದ ಕರೆ

a)

ಮಾಡು ಇಲ್ಲವೇ ಮಡಿ

b)

ಭಾರತ ನನ್ನ ಸ್ವದೇಶ

c)

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ

d)

ಭಾರತ ಮಾತೆ ಸ್ವತಂತ್ರಕ್ಕಾಗಿ ಶ್ರಮಿಸಿರಿ

39.

ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ನಾಯಕರ ಬಂಧನದಿಂದ ಚಳುವಳಿಯ ನೇತೃತ್ವವನ್ನು ವಹಿಸಿಕೊಂಡವರು

a)

ಮಹಾತ್ಮ ಗಾಂಧೀಜಿ

b)

ಜಯಪ್ರಕಾಶ್ ನಾರಾಯಣ

c)

ಅಬ್ದುಲ್ ಕಲಾಂ ಅಜಾದ್

d)

ರಾಜೇಂದ್ರ ಪ್ರಸಾದ್

40.

ಕಾಂಗ್ರೆಸ್ಸಿನ ಸಮಾಜವಾದಿ ಬಣದ ನಾಯಕರು

a)

ಮಹಾತ್ಮ ಗಾಂಧೀಜಿ

b)

ಜವಾಹರಲಾಲ್ ನೆಹರು

c)

ಸರ್ದಾರ್ ವಲ್ಲಭಭಾಯಿ ಪಟೇಲ್

d)

ಜಯಪ್ರಕಾಶ್ ನಾರಾಯಣ

41.

ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್ ಎಂಬ ದಾಖಲೆ ಮೂಲಕ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದವರು

a)

ಸಮಾಜವಾದಿಗಳು

b)

ಕಾಂಗ್ರೆಸ್ಸಿಗರು

c)

ಮುಸ್ಲಿಂ ಲೀಗ್ ಸದಸ್ಯರು

d)

ರೈತರು

42.

1827ರಲ್ಲಿ ಕಾರ್ಮಿಕರ ಹೋರಾಟ ಆರಂಭವಾದ ಸ್ಥಳ

a)

ಮುಂಬೈ

b)

ದೆಹಲಿ

c)

ಕೊಲ್ಕತ್ತಾ

d)

ಚೆನ್ನೈ

43.

ಭಾರತದ ಆದ್ಯ ಹೋರಾಟವೆಂದು ಗುರುತಿಸಲಾದ ಬುಡಕಟ್ಟು ದಂಗೆ

a)

ಮುಂಡ ಚಳುವಳಿ

b)

ಹಲಗಲಿ ಬೇಡರ ದಂಗೆ

c)

ಸಂತಾಲ ಬುಡಕಟ್ಟು ದಂಗೆ

d)

ಕಿರ್ಗಿಸ್ ಚಳುವಳಿ

44.

ಸುಭಾಷ್ ಚಂದ್ರ ಬೋಸ್ ರವರು ------- ಎಂದು ಜನಪ್ರಿಯರಾದರು

a)

ಲೋಕನಾಯಕ

b)

ಸರ್ದಾರ

c)

ನೇತಾಜಿ

d)

ಬಾಪೂಜಿ

45.

1934ರಲ್ಲಿ ಜವಾಹರಲಾಲ ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಪಕ್ಷ

a)

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

b)

ಸಮಾಜವಾದಿ

c)

ಕಾಂಗ್ರೆಸ್ ಸಮಾಜವಾದಿ

d)

ಜನತಾ ಪಕ್ಷ

46.

ಹರಿಪುರ ಮತ್ತು ತ್ರಿಪುರ (1938) ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು

a)

ಮಹಾತ್ಮ ಗಾಂಧೀಜಿ

b)

ನೆಹರು

c)

ಪಟ್ಟಾಭಿ ಸೀತಾರಾಮಯ್ಯ

d)

ಸುಭಾಷ್ ಚಂದ್ರ ಬೋಸ್

47.

ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದವರು

a)

ವಲ್ಲಭಭಾಯಿ ಪಟೇಲ್

b)

ಸುಭಾಷ್ ಚಂದ್ರ ಬೋಸ್

c)

ಸಿ ಆರ್ ದಾಸ್

d)

ಮೋತಿಲಾಲ್ ನೆಹರು

48.

ಅಜಾದ್ ಹಿಂದ್ ರೇಡಿಯೋ ಮೂಲಕ ತಮ್ಮ ಭಾಷಣಗಳನ್ನು ಭಾರತೀಯರಿಗೆ ಪ್ರಸರಣ ಮಾಡಿದವರು

a)

ಗಾಂಧೀಜಿ

b)

ನೆಹರು

c)

ಹಿಟ್ಲರ್

d)

ಸುಭಾಷ್ ಚಂದ್ರ ಬೋಸ್

49.

ಟೋಕಿಯೋದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗನ ಸ್ಥಾಪಕರು

a)

ಸುಭಾಷ್ ಚಂದ್ರ ಬೋಸ್

b)

ಸತ್ಯೇಂದ್ರನಾಥ ಬೋಸ್

c)

ರಾಸ್ ಬಿಹಾರಿ ಭೋಸ್

d)

ಜಗದೀಶ್ ಚಂದ್ರ ಬೋಸ್

50.

ದೆಹಲಿ ಚಲೋ ಎಂದು ಕರೆಯನ್ನು ನೀಡಿದವರು

a)

ನೆಹರು

b)

ಗಾಂಧೀಜಿ

c)

ಸರ್ದಾರ್ ವಲ್ಲಭಬಾಯಿ ಪಟೇಲ್

d)

ಸುಭಾಷ್ ಚಂದ್ರ ಬೋಸ್

51.

ಟೋಕಿಯೋದಲ್ಲಿ ಸ್ಥಾಪಿಸಲಾದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗನ ಸೇನಾ ವಿಭಾಗವನ್ನು ---------------------ಎಂದು ಕರೆಯುತ್ತಿದ್ದರು

a)

ಭಾರತೀಯ ರಾಷ್ಟ್ರೀಯ ಸೇನೆ

b)

ಭಾರತದ ಸೇನೆ

c)

ರಾಷ್ಟ್ರೀಯ ಸೇನೆ

d)

ವಿದೇಶದಲ್ಲಿನ ಭಾರತದ ಸೇನೆ

52.

'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡಲು ಪ್ರಮಾಣಿಸುತ್ತೇನೆ' ಎಂದು ಕರೆ ನೀಡಿದವರು

a)

ಡಾ ಬಿ. ಆರ್ ಅಂಬೇಡ್ಕರ್

b)

ಸುಭಾಷ್ ಚಂದ್ರ ಬೋಸ್

c)

ಜವಾಹರ ಲಾಲ್ ನೆಹರು

d)

ವಲ್ಲಭಬಾಯಿ ಪಟೇಲ್

53.

ಭಾರತೀಯ ರಾಷ್ಟ್ರೀಯ ಸೇನೆಯಲ್ಲಿದ್ದ ಝಾನ್ಸಿ ರೆಜಿಮೆಂಟ್ ವಿಭಾಗದ ನೇತೃತ್ವ ವಹಿಸಿದವರು

a)

ಕ್ಯಾಪ್ಟನ್ ಲಕ್ಷ್ಮಿ

b)

ಕ್ಯಾಪ್ಟನ್ ಧನಲಕ್ಷ್ಮಿ

c)

ಕ್ಯಾಪ್ಟನ್ ಜಯಲಕ್ಷ್ಮಿ

d)

ಕ್ಯಾಪ್ಟನ್ ವಿಜಯಲಕ್ಷ್ಮಿ

54.

ಮಹಾಡ್ ಮತ್ತು ಕಾಲಾರಾಂ ದೇವಾಲಯ ಚಳುವಳಿಗಳನ್ನು ರೂಪಿಸಿದವರು

a)

ಅಂಬೇಡ್ಕರ್

b)

ಜ್ಯೋತಿಬಾ ಪುಲೆ

c)

ನಾರಾಯಣ ಗುರು

d)

ಪೆರಿಯಾರ್

55.

ಮೂರು ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳಲ್ಲಿ ಭಾಗವಹಿಸಿದ ನಾಯಕರು

a)

ಜವಾಹರಲಾಲ್ ನೆಹರು

b)

ಮೋತಿಲಾಲ್ ನೆಹರು

c)

ಮಹಾತ್ಮ ಗಾಂಧೀಜಿ

d)

ಡಾ. ಬಿ ಆರ್ ಅಂಬೇಡ್ಕರ್

56.

ಬಹಿಷ್ಕೃತ ಹಿತಕಾರಣಿ ಸಭಾ ಎಂಬ ಸಂಘಟನೆಯನ್ನು ಸ್ಥಾಪಿಸಿದವರು

a)

ಸುಭಾಷ್ ಚಂದ್ರ ಬೋಸ್

b)

ಮಹಾತ್ಮ ಗಾಂಧೀಜಿ

c)

ಜವಾಹರ ಲಾಲ್ ನೆಹರು

d)

ಡಾ ಬಿ ಆರ್ ಅಂಬೇಡ್ಕರ್

57.

ಸ್ವತಂತ್ರ ಕಾರ್ಮಿಕ ಪಕ್ಷ ಎಂಬ ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದವರು

a)

ನೆಹರು

b)

ಗಾಂಧೀಜಿ

c)

ಅಂಬೇಡ್ಕರ್

d)

ಸಿ ಆರ್ ದಾಸ

58.

ಪ್ರಬುದ್ಧ ಭಾರತ, ಜನತಾ, ಮೂಕನಾಯಕ ಮತ್ತು ಬಹಿಷ್ಕೃತ ಭಾರತ ಪತ್ರಿಕೆಗಳನ್ನು ಹೊರಡಿಸಿದವರು

a)

ಗಾಂಧೀಜಿ

b)

ಅಂಬೇಡ್ಕರ್

c)

ನೆಹರು

d)

ಮೋತಿಲಾಲ್ ನೆಹರು

59.

ಸಂವಿಧಾನ ಸಭೆಯ ಅಧ್ಯಕ್ಷರಾಗಿ ಡಾ ಬಾಬು ರಾಜೇಂದ್ರ ಪ್ರಸಾದ್ ರವರು ಆಯ್ಕೆಯಾದರೆ, ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದವರು

a)

ಜವಾಹರ್ ಲಾಲ್ ನೆಹರು

b)

ಸರ್ದಾರ್ ವಲ್ಲಭಬಾಯಿ ಪಟೇಲ್

c)

ಎಸ್ ರಾಧಾಕೃಷ್ಣನ್

d)

ಬಿ ಆರ್ ಅಂಬೇಡ್ಕರ್

60.

ಸ್ವತಂತ್ರ ಭಾರತದಲ್ಲಿ ಕಾನೂನು ಮಂತ್ರಿಯಾಗಿ ಕಾರ್ಯನಿರ್ವಹಿಸಿದವರು

a)

ಜವಾಹರ ಲಾಲ ನೆಹರು

b)

ಬಲದೇವ ಸಿಂಗ್

c)

ರಾಜೇಂದ್ರ ಪ್ರಸಾದ್

d)

ಅಂಬೇಡ್ಕರ್

61.

ಭಾರತದ ಮೊದಲ ಪ್ರಧಾನ ಮಂತ್ರಿ

a)

ನೆಹರು

b)

ಗಾಂಧೀಜಿ

c)

ವಲ್ಲಭಭಾಯಿ ಪಟೇಲ್

d)

ರಾಜೇಂದ್ರ ಪ್ರಸಾದ್

62.

ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾದ ಮೊದಲ ಗೃಹ ಮಂತ್ರಿ

a)

ಸುಭಾಷ್ ಚಂದ್ರ ಭೋಸ್

b)

ವಲ್ಲಭಬಾಯಿ ಪಟೇಲ್

c)

ಜವಹರಲಾಲ್ ನೆಹರು

d)

ರಾಜೇಂದ್ರ ಪ್ರಸಾದ್

63.

ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ ನೇರ ಕಾರ್ಯಾಚರಣೆ ದಿನಕ್ಕೆ ಕರೆ ನೀಡಿದ ದಿನ

a)

1946 ಆಗಸ್ಟ್ 16

b)

1946 ಆಗಸ್ಟ್ 12

c)

1946 ಆಗಸ್ಟ್ 11

d)

1946 ಆಗಸ್ಟ್ 15

64.

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಗಡಿಯನ್ನು ಗುರುತಿಸಿದ ಆಯೋಗ

a)

ಮೌಂಟ್ ಬ್ಯಾಟನ್ ಆಯೋಗ

b)

ರಾಡಕ್ಲಿಪ್ ಆಯೋಗ

c)

ಕ್ಯಾಬಿನೆಟ್ ಆಯೋಗ

d)

ನೆಹರು ಆಯೋಗ

65.

ಸ್ವಯಂ ಸೇವಾ ಸಂಸ್ಥೆಗಳು ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಹೀಗೆ ಕರೆದಿವೆ

a)

ಬಳಕೆದಾರ

b)

ಪೂರೈಕೆದಾರ

c)

ವಿತರಕ

d)

ಹಂಚಿಕೆದಾರ

66.

ಬಳಕೆದಾರರಿಂದ ಹಣ ಪಡೆದು ವಸ್ತು ಅಥವಾ ಸೇವೆಗಳನ್ನು ನೀಡುವವನನ್ನು ಹೀಗೆ ಕರೆಯುತ್ತಾರೆ

a)

ಪೂರೈಕೆದಾರ

b)

ಗ್ರಾಹಕ

c)

ವ್ಯಾಪಾರಿ

d)

ಬಳಕೆದಾರ

67.

ಗ್ರಾಹಕ ಸುರಕ್ಷಣಾ ಕಾಯ್ದೆಯಲ್ಲಿ ಬಳಕೆದಾರರನ್ನು --------------‐‐-----ಎಂದು ಕರೆದಿದೆ

a)

ಪೂರೈಕೆದಾರ

b)

ವಿತರಕ

c)

ಹಂಚಿಕೆದಾರ

d)

ಗ್ರಾಹಕ

68.

ಗ್ರಾಹಕ ಸಂರಕ್ಷಣೆಯ ಆಂದೋಲನ ಮೊದಲಿಗೆ ಆರಂಭವಾದ ದೇಶ

a)

ರಷ್ಯಾ

b)

ಚೀನಾ

c)

ಜರ್ಮನಿ

d)

ಅಮೇರಿಕಾ

69.

ಭಾರತದಲ್ಲಿ ಮೊಟ್ಟ ಮೊದಲು 1965ರಲ್ಲಿ ಮುಂಬೈ ಮಹಿಳೆಯರು ಗ್ರಾಹಕರ ರಕ್ಷಣೆಗಾಗಿ ಸ್ಥಾಪಿಸಿದ ಸಂಸ್ಥೆ

a)

ಅವೇರ್

b)

ಜಾಗೋ ಗ್ರಾಹಕ

c)

ಭಾರತ್ ಜಾಗೋ

d)

ಆರಾಇಜ್

70.

ಇಂದು ಮನೆಯಲ್ಲಿ ಕುಳಿತು ವಸ್ತುಗಳನ್ನು ಕೊಳ್ಳುವುದನ್ನು ಹೀಗೆ ಕರೆಯುತ್ತಾರೆ

a)

ಶಾಪಿಂಗ್

b)

ಟೆಲಿಷಾಪಿಂಗ್

c)

ಆನ್ಲೈನ್ ಶಾಪಿಂಗ್

d)

ಅಂತರ್ಜಾಲ ವ್ಯವಹಾರ

71.

ಯಾವುದೇ ವ್ಯವಹಾರವನ್ನು ಲಾಭದ ಉದ್ದೇಶಕ್ಕಾಗಿ ಮಾಡಿದರೆ ಅದನ್ನು ಹೀಗೆ ಕರೆಯುತ್ತಾರೆ

a)

ವ್ಯಾಪಾರ

b)

ವ್ಯವಹಾರ

c)

ಲಾಭಗಳಿಕೆ

d)

ಬಡ್ಡಿ ವ್ಯವಹಾರ

72.

ಭಾರತದಲ್ಲಿ ರೂಢಿಯಲ್ಲಿರುವ ಆರ್ಥಿಕ ನೀತಿ

a)

ಮುಚ್ಚಿದ ಆರ್ಥಿಕ ನೀತಿ

b)

ಮುಕ್ತ ಆರ್ಥಿಕ ನೀತಿ

c)

ಖಾಸಗಿ ಆರ್ಥಿಕ ನೀತಿ

d)

ಬಂಡವಾಳಶಾಹಿ ಆರ್ಥಿಕ ನೀತಿ

73.

ಮಾರುಕಟ್ಟೆಯ ರಾಜ ಎಂದು ಕರೆಯಲ್ಪಡುವವರು

a)

ವ್ಯಾಪಾರಿ

b)

ಉತ್ಪಾದಕ

c)

ಪೂರೈಕೆದಾರ

d)

ಗ್ರಾಹಕ

74.

ವಿಶ್ವ ಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಮಾರ್ಚ್ 15, 1962 ಒಂದು ಮಹತ್ವದ ದಿನವಾಗಿದೆ. ಏಕೆಂದರೆ

a)

ಜಾನ್ ಎಫ್ ಕೆನಡಿಯವರು ಅಮೇರಿಕಾದ ನಾಗರಿಕರಿಗೆ ನಾಲ್ಕು ಹಕ್ಕುಗಳು ನೀಡುವ ವಿಧೇಯಕವನ್ನು ಅಂಗೀಕರಿಸಿದರು

b)

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ದಿನವಾಗಿದೆ

c)

ಗ್ರಾಹಕರು ತಮ್ಮ ಹಕ್ಕುಗಳನ್ನು ಪಡೆದುಕೊಂಡ ದಿನವಾಗಿದೆ

d)

ಗ್ರಾಹಕರು ಸರ್ಕಾರದ ವಿರುದ್ಧ ಹೋರಾಟ ಆರಂಭ ಮಾಡಿದ ದಿನವಾಗಿದೆ

75.

ಪ್ರತಿ ವರ್ಷ ಮಾರ್ಚ್ 15ನ್ನು ಹೀಗೆ ಆಚರಿಸುತ್ತಾರೆ

a)

ವಿಶ್ವ ಮಾನವ ಹಕ್ಕುಗಳ ದಿನ

b)

ವಿಶ್ವಸಂಸ್ಥೆ ಸ್ಥಾಪನೆಯಾದ ದಿನ

c)

ವಿಶ್ವ ಮಕ್ಕಳ ಹಕ್ಕುಗಳ ದಿನ

d)

ವಿಶ್ವ ಗ್ರಾಹಕರ ಹಕ್ಕುಗಳ ದಿನ

76.

ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು ಕೈಗೊಂಡಿರುವ ಕಾರ್ಯಗಳನ್ನು ಹೀಗೆ ಕರೆಯುವರು

a)

ಗ್ರಾಹಕ ಶೋಷಣೆ

b)

ಗ್ರಾಹಕ ರಕ್ಷಣೆ

c)

ಗ್ರಾಹಕರ ಏಳಿಗೆ

d)

ಗ್ರಾಹಕ ಶಿಕ್ಷಣ

77.

ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಅನೇಕ ಹಕ್ಕುಗಳು ಮತ್ತು ಭರವಸೆಗಳನ್ನು ಕೊಡಲಾಗಿದೆ ಈ ಭರವಸೆಗಳನ್ನು ------------- ಎನ್ನುತ್ತೇವೆ

a)

ಗ್ರಾಹಕರ ಶಿಕ್ಷಣ

b)

ಗ್ರಾಹಕರ ರಕ್ಷಣೆ

c)

ಗ್ರಾಹಕರ ಹಕ್ಕುಗಳು

d)

ಗ್ರಾಹಕರ ಶೋಷಣೆ

78.

ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ

a)

1981

b)

1988

c)

1985

d)

1986

79.

ಗ್ರಾಹಕ ಸಂರಕ್ಷಣಾ ಕಾಯ್ದೆಯು -------------- ಹಾಗೂ----------- ಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.

a)

ಸುರಕ್ಷತೆ ಹಾಗೂ ಮಾಪನ

b)

ಸುರಕ್ಷತೆ ಹಾಗೂ ಗುಣಮಟ್ಟ

c)

ಸುರಕ್ಷತೆ ಹಾಗೂ ತೂಕ

d)

ಅಳತೆ ಹಾಗೂ ಗುಣಮಟ್ಟ

80.

ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು

a)

ರಾಷ್ಟ್ರಪತಿ

b)

ಪ್ರಧಾನ ಮಂತ್ರಿ

c)

ಉಪರಾಷ್ಟ್ರಪತಿ

d)

ಕೇಂದ್ರ ಸರ್ಕಾರದ ಗ್ರಾಹಕರ ಕಲ್ಯಾಣ ಇಲಾಖೆಯ ಮಂತ್ರಿಗಳು

81.

ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು

a)

ರಾಜ್ಯ ಸರ್ಕಾರದ ಗ್ರಾಹಕ ಸಂಬಂಧಿ ಇಲಾಖೆಯ ಮಂತ್ರಿಗಳು

b)

ರಾಜ್ಯಪಾಲರು

c)

ಮುಖ್ಯಮಂತ್ರಿ

d)

ಉಪಮುಖ್ಯಮಂತ್ರಿ

82.

ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿಗೆ ಅಧ್ಯಕ್ಷರಾಗಿರುವವರು

a)

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

b)

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು

c)

ಜಿಲ್ಲಾಧಿಕಾರಿಗಳು

d)

ಜಿಲ್ಲಾ ಉಸ್ತುವಾರಿ ಸಚಿವರು

83.

20 ಲಕ್ಷಗಳಿಗಿಂತ ಕಡಿಮೆ ಮೊತ್ತದ ಗ್ರಾಹಕರ ದೂರುಗಳನ್ನು ಪರಿಹರಿಸುವ ವೇದಿಕೆ

a)

ರಾಷ್ಟ್ರೀಯ ಆಯೋಗ

b)

ರಾಜ್ಯ ಆಯೋಗ

c)

ಜಿಲ್ಲಾ ವೇದಿಕೆ

d)

ವಿಭಾಗಿಯ ಆಯೋಗ

84.

ರಮೇಶನ 26 ಲಕ್ಷದ ಕಾರನ್ನು ಕೊಂಡುಕೊಂಡಿದ್ದಾನೆ. ಕಾರಿನಲ್ಲಿ ಚಿಕ್ಕಪುಟ್ಟ ತೊಂದರೆಗಳು ಉಂಟಾದರೆ ದೂರು ಕೊಡಬೇಕಾದ ವೇದಿಕೆ

a)

ಜಿಲ್ಲಾ ವೇದಿಕೆ

b)

ರಾಜ್ಯ ಆಯೋಗ

c)

ರಾಷ್ಟ್ರೀಯ ಆಯೋಗ

d)

ಅಂತರಾಷ್ಟ್ರೀಯ ಆಯೋಗ

85.

20 ಲಕ್ಷಗಳಿಗಿಂತ ಅಧಿಕ ಹಾಗೂ ಒಂದು ಕೋಟಿ ರೂಪಾಯಿಗಳವರೆಗಿನ ಗ್ರಾಹಕರ ದೂರುಗಳನ್ನು ವಿಚಾರಣೆ ನಡೆಸುವ ಆಯೋಗ

a)

ರಾಷ್ಟ್ರೀಯ ಆಯೋಗ

b)

ಕೇಂದ್ರೀಯ ಆಯೋಗ

c)

ರಾಜ್ಯ ಆಯೋಗ

d)

ಜಿಲ್ಲಾ ವೇದಿಕೆ

86.

ಒಂದು ಕೋಟಿಗಿಂತ ಅಧಿಕ ಮತ್ತದ ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸುವ ಆಯೋಗ

a)

ಅಂತರಾಷ್ಟ್ರೀಯ ಆಯೋಗ

b)

ಜಿಲ್ಲಾ ವೇದಿಕೆ

c)

ರಾಷ್ಟ್ರೀಯ ಆಯೋಗ

d)

ರಾಜ್ಯ ಆಯೋಗ

87.

ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಗ್ರಾಹಕರು ನೀಡಬೇಕಾದ ಶುಲ್ಕದ ಮೊತ್ತ

a)

ಒಂದು ಸಾವಿರ ರೂಪಾಯಿಗಳು

b)

500 ರೂಪಾಯಿಗಳು

c)

ಯಾವುದೇ ಶುಲ್ಕವಿಲ್ಲ

d)

ನೂರು ರೂಪಾಯಿಗಳು

88.

ಹಣ ಪಡೆದು ವಸ್ತು ಅಥವಾ ಸೇವೆಯನ್ನು ನೀಡುವವರು

a)

ಗ್ರಾಹಕ

b)

ಏಜೆಂಟ್

c)

ವ್ಯಾಪಾರಿ

d)

ಉದ್ಯೋಗಿ