NEW
Font size
Worksheets10 TH GEOGRAPHY
Total questions: 30
Worksheet time: 15mins
ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲು ಕಾರಣ;
ಎ) ಹೆಚ್ಚು ಸರೋವರಗಳು ಕಂಡುಬರುತ್ತವೆ.
ಬಿ) ಸಾಫ್ಟ್ ವೇರ್ ಕೈಗಾರಿಕೆಯಲ್ಲಿ ಮುಂದುವರೆದಿದೆ.
ಸಿ) ಹೆಚ್ಚು ಉದ್ಯಾನವನಗಳನ್ನು ಹೊಂದಿದೆ.
ಡಿ) ಸಿಲಿಕಾನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ
ಡೂನ್ಸ್ ಗಳೆಂದರೆ_______
ಎ) ಹಿಮಾಲಯದ ಎತ್ತರದ ಪರ್ತಗಳು
ಬಿ) ಹಿಮಾಲಯದ ಗಿರಿಧಾಮಗಳು
ಸಿ) ನದಿಗಳ ಸಂಚಯನದ ಭಾಗ
ಡಿ) ಸಿವಾಲಿಕ್ ಬೆಟ್ಟಗಳ ಸಮತಟ್ಟಾದ ತಳವುಳ್ಳ ಕಣಿವೆಗಳು
ಭಾರತದ ಅತ್ಯಂತ ಎತ್ತರವಾದ ಶಿಖರ________
ಎ) ಹಿಮಾಲಯ
ಬಿ) ಗೌರಿಶಂಕರ
ಸಿ) ಮೌಂಟ್ ಎವರೆಸ್ಟ್
ಡಿ) ಗಾಡ್ವಿನ್ ಆಸ್ಟಿನ್ (K2)
ಭಾರತದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ;
ಎ) ದೆಹಲಿ
ಬಿ) ಮಧ್ಯಪ್ರದೇಶದ ಭೂಪಾಲ್
ಸಿ) ತಮಿಳುನಾಡಿನ ಚೆನ್ನೈ
ಡಿ) ರಾಜಸ್ಥಾನದ ಗಂಗಾನಗರ
ಭಾರತದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶ;
ಎ) ರೂಯ್ಲಿ
ಬಿ) ಡ್ರಾಸ್
ಸಿ) ಗಂಗಾನಗರ
ಡಿ) ಮಾಸಿನ್ ರಾಮ್
ನಾಗಾರ್ಜುನ ಸಾಗರ ಆಣೆಕಟ್ಟೆಯನ್ನುಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
ಎ) ರಿಹಾಂದ್ ನದಿ
ಬಿ) ಕಾವೇರಿ ನದಿ
ಸಿ) ಸಟ್ಲೇಜ್ ನದಿ
ಡಿ) ಕೃಷ್ಣಾ ನದಿ
ಎಪ್ರಿಲ್-ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಹೀಗೆಂದು ಕರೆಯುತ್ತಾರೆ;
ಎ) ಆಂಧಿಸ್
ಬಿ) ಕಾಲಬೈಸಾಕಿ
ಸಿ) ಕಾಫಿ ಹೂಮಳೆ
ಡಿ) ಮಾವಿನ ಹುಯ್ಲು
ಬೇಸಿಗೆಯಲ್ಲಾಗುವ ಪರಿಸರಣ ಮಳೆಯನ್ನು ‘ಆಂಧಿಸ್’ ಎಂದು ಕರೆಯಲ್ಪಡುವ ರಾಜ್ಯ;
ಎ) ಕೇರಳ
ಬಿ) ಉತ್ತರಪ್ರದೇಶ
ಸಿ) ತಮಿಳುನಾಡು
ಡಿ) ಪಶ್ಚಿಮಬಂಗಾಳ
ಮೆಕ್ಕಲು ಮಣ್ಣು ಹೀಗೆ ಉತ್ಪತ್ತಿಯಾಗುತ್ತದೆ
ಎ) ಜೈವಿಕ ವಸ್ತುಗಳ ಕೊಳೆಯುವಿಕೆಯಿಂದ
ಬಿ) ಜಲ ವಿಲೀನೀಕರಣದಿಂದ
ಸಿ) ಬಸಾಲ್ಟ್ ಶಿಲೆಗಳ ಶಿಥಿಲೀಕರಣದಿಂದ
ಡಿ) ನದಿಗಳ ಸಂಚಯನದಿಂದ
ಈ ಕೆಳಗಿನವುಗಳಲ್ಲಿ ಯಾವುದು ಮಣ್ಣಿನ ಸವೆತಕ್ಕೆ ಕಾರಣವಲ್ಲ;
ಎ) ಅವೈಜ್ಞಾನಿಕ ಬೇಸಾಯ
ಬಿ) ಸಮೋನ್ನತಿ ಬೇಸಾಯ
ಸಿ) ಪ್ರಾಣಿಗಳ ಅತಿಯಾದ ಮೇಯಿಸುವಿಕೆ
ಡಿ) ಅರಣ್ಯನಾಶ
ಮಣ್ಣಿನ ಸಂರಕ್ಷಣೆ ಎಂದರೆ;
ಎ) ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವದು
ಬಿ)ಮಣ್ಣಿನ ಸವೆತ ನಿಯಂತ್ರಣ & ಫಲವತ್ತತೆ ಕಾಪಾಡುವದು
ಸಿ) ವಿವಿಧ ಬೆಳೆಗಳನ್ನು ಬೆಳೆಯುವದು
ಡಿ) ಮೇಲ್ಪದರದ ಮಣ್ಣನ್ನು ಇಟ್ಟಿಗೆ & ಹೆಂಚುಗಳ ತಯಾರಿಕೆಗೆ ಬಳಸುವದು.
ಭಾರತದ ವಾಯುಗುಣವು ಈ ಮಾದರಿಯದ್ದಾಗಿದೆ;
ಎ) ಶೀತ ಮಾದರಿ ವಾಯುಗುಣ
ಬಿ) ಸಮಶೀತೋಷ್ಣ ಮಾದರಿ ವಾಯುಗುಣ
ಸಿ) ಅರೆ ಉಷ್ಣಮಾದರಿ ವಾಯುಗುಣ
ಡಿ) ಉಷ್ಣ ವಲಯದ ಮಾನ್ಸೂನ್ ಮಾದರಿ ವಾಯುಗುಣ
ನೈಋತ್ಯ ಮಾನ್ಸೂನ್ ಮಾರುತಗಳ ಕಾಲದ(ಮಳೆಗಾಲ) ಅವಧಿ;
ಎ) ಮಾರ್ಚ್–ಮೇ
ಬಿ) ಜೂನ್–ಸೆಪ್ಟೆಂಬರ್
ಸಿ) ಡಿಸೆಂಬರ್–ಫೆಬ್ರವರಿ
ಡಿ) ಸೆಪ್ಟೆಂಬರ್ ಮಧ್ಯ-ನವ್ಹೆಂಬರ್
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗವು ಅಧಿಕ ಮಳೆ ಪಡೆಯುತ್ತದೆ ಏಕೆಂದರೆ;
ಎ) ಸಮುದ್ರಕ್ಕೆ ಹತ್ತಿರವಾಗಿದೆ
ಬಿ) ಪಶ್ಚಿಮ ಘಟ್ಟಗಳು ಸಮತಟ್ಟಾಗಿಲ್ಲ
ಸಿ) ಎತ್ತರವಾಗಿದ್ದು ಮಾನ್ಸೂನ್ ಮಾರುತಗಳನ್ನುತಡೆಯುತ್ತವೆ.
ಡಿ) ಪಶ್ಚಿಮ ಘಟ್ಟಗಳು ನಿರಂತರವಾಗಿವೆ
ಪೂರ್ವ ಮತ್ತು ಪಶ್ಚಿಮ ಘಟ್ಟಗಳು ----ಬೆಟ್ಟಗಳಲ್ಲಿ ಸಂಧಿಸುತ್ತವೆ;
ಎ) ರಾಜಮಹಲ್ ಬೆಟ್ಟಗಳಲ್ಲಿ
ಬಿ) ನೀಲಗಿರಿ ಬೆಟ್ಟಗಳಲ್ಲಿ
ಸಿ) ಅರಾವಳಿ ಬೆಟ್ಟಗಳಲ್ಲಿ
ಡಿ) ವಿಂಧ್ಯ ಶ್ರೇಣಿಗಳಲ್ಲಿ
ಭಾರತದಲ್ಲಿಯೇ ಅತೀ ಉದ್ದವಾದ ಅಣೇಕಟ್ಟು;
ಎ) ನಾಗಾರ್ಜುನ ಸಾಗರ-ಕೃಷ್ಣಾನದಿ
ಬಿ) ಹಿರಾಕುಡ್-ಮಹಾನದಿ
ಸಿ) ತಿಲೈಯಾ-ದಾಮೋದರ ನದಿ
ಡಿ) ಭಾಕ್ರಾ-ಸಟ್ಲೇಜ್ ನದಿ
ಭಾರತ ಮತ್ತು ನೇಪಾಳ ದೇಶಗಳ ಜಂಟಿ ನದಿಕಣಿವೆ ಯೋಜನೆ;
ಎ) ಕೋಸಿ ಯೋಜನೆ
ಬಿ) ರಿಹಾಂದ್ ಯೋಜನೆ
ಸಿ) ನಾಗಾರ್ಜುನಸಾಗರ ಯೋಜನೆ
ಡಿ) ಚಂಬಲ್ ಯೋಜನೆ
ಈ ಕೆಳಗಿನವುಗಳಲ್ಲಿ ಯಾವುದು ಅರಣ್ಯ ಆಧಾರಿತ ಕೈಗಾರಿಕೆಯಾಗಿದೆ;
ಎ) ಹತ್ತಿಬಟ್ಟೆ ಕೈಗಾರಿಕೆ
ಬಿ) ಕಾಗದ ಕೈಗಾರಿಕೆ
ಸಿ) ಅಲ್ಯೂಮಿನಿಯಂ ಕೈಗಾರಿಕೆ
ಡಿ) ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ
ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆಯನ್ನು ಗುರ್ತಿಸಿ;
ಎ) ಕಾಫಿ ಹೂಮಳೆ- ಆಸ್ಸಾಂ
ಬಿ) ಆಂಧಿಸ್- ಪಶ್ಚಿಮಬಂಗಾಳ
ಸಿ) ಕಾಲ ಬೈಸಾಕಿ-ಉತ್ತರಪ್ರದೇಶ
ಡಿ) ಮಾವಿನ ಹುಯ್ಲು-ಕೇರಳ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು;
ಎ) ಲಾಲ್ ಬಹಾದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ
ಬಿ) ಇಂದಿರಾಗಾಂಧಿ ವಿಮಾನ ನಿಲ್ದಾಣ
ಸಿ) ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ
ಡಿ) ಕೆಂಪೇಗೌಡ ವಿಮಾನ ನಿಲ್ದಾಣ
ಮುಂಬಯಿ ಬಂದರನ್ನು ಹೀಗೆ ಕರೆಯುತ್ತಾರೆ;
ಎ) ಅರಬ್ಬೀ ಸಮುದ್ರದ ರಾಣಿ
ಬಿ) ಭಾರತದ ಹೆಬ್ಬಾಗಿಲು
ಸಿ) ನವ್ಹಾಶೇವಾ ಬಂದರು
ಡಿ) ಕರ್ನಾಟಕದ ಹೆಬ್ಬಾಗಿಲು
ಭಾರತದಲ್ಲಿ ಅತೀ ಹೆಚ್ಚು ಗೋಧಿ ಬೆಳೆಯುವ ರಾಜ್ಯ;
ಎ) ಪಂಜಾಬ್
ಬಿ) ಕರ್ನಾಟಕ
ಸಿ) ಉತ್ತರಪ್ರದೇಶ
ಡಿ) ಹರಿಯಾಣ
ಕೃಷ್ಣಾ ನದಿಗೆ ನಿರ್ಮಿಸಲಾದ ಆಲಮಟ್ಟಿ ಅಣೇಕಟ್ಟನ್ನು ಈ ಹೆಸರಿನಿಂದ ಕರೆಯುತ್ತಾರೆ;
ಎ) ಜವಾಹರಲಾಲ ನೆಹರು ಜಲಾಶಯ
ಬಿ) ಮೊರಾರ್ಜಿ ದೇಸಾಯಿ ಜಲಾಶಯ
ಸಿ) ಅಟಲ್ ಬಿಹಾರಿ ವಾಜಪೇಯಿ ಜಲಾಶಯ
ಡಿ) ಲಾಲ ಬಹಾದ್ದೂರ್ ಶಾಸ್ತ್ರಿ ಜಲಾಶಯ
ಸಮುದ್ರ ತೀರದ ಸವೆತಕ್ಕೆ ಕಾರಣವಾಗಿರುವ ಮಾನವನ ಕೃತ್ಯ;
ಎ) ರಸ್ತೆ ನಿರ್ಮಾಣ ಮಾಡುವದು.
ಬಿ) ಹೆಚ್ಚಾಗಿ ಮೀನುಗಾರಿಕೆಮಾಡುವದು.
ಸಿ) ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸುವದು.
ಡಿ) ಮಿತಿ ಮೀರಿದ ಮರಳು & ಕಲ್ಲು ಗಣಿಗಾರಿಕೆ
ಭಾರತದಲ್ಲಿ ಅತೀ ಎತ್ತರವಾದ ಅಣೇಕಟ್ಟು ಭಾಕ್ರಾ-ನಂಗಲ್; ಈ ಜಲಾಶಯಕ್ಕಿರುವ ಹೆಸರು;
ಎ) ಗೋವಿಂದ ಸಾಗರ
ಬಿ) ನಾಗಾರ್ಜುನ ಸಾಗರ
ಸಿ) ಪಂಪ ಸಾಗರ
ಡಿ) ಗೋವಿಂದ ವಲ್ಲಭಪಂತ ಸಾಗರ
ಪಶ್ಚಿಮ ಘಟ್ಟಗಳ ಪೂರ್ವ ಭಾಗವು ಪಶ್ಚಿಮ ಭಾಗದಷ್ಟು ಮಳೆ ಪಡೆಯುವದಿಲ್ಲ,ಏಕೆಂದರೆ;
ಎ) ಅದು ದಕ್ಷಿಣ ಭಾಗದಲ್ಲಿದೆ.
ಬಿ) ಮಳೆ ನೆರಳಿನ ಪ್ರದೇಶವಾಗಿದೆ.
ಸಿ) ಹೆಚ್ಚು ಹಿಮಪಾತವಾಗುತ್ತದೆ.
ಡಿ) ಅಲ್ಲಿ ಹೆಚ್ಚು ದಟ್ಟ ಅರಣ್ಯವಿದೆ.
ಭಾರತದ ಅತೀ ಪ್ರಮುಖವಾದ ನೀರಾವರಿ ವಿಧಾನ;
ಎ) ಬಾವಿ ನೀರಾವರಿ
ಬಿ) ಕಾಲುವೆ ನೀರಾವರಿ
ಸಿ) ಕೆರೆ ನೀರಾವರಿ
ಡಿ) ಹನಿ ನೀರಾವರಿ
“ಬಿಳಿಲುಗಳು” ಈ ಕಾಡುಗಳ ಲಕ್ಷಣಗಳಾಗಿವೆ;
ಎ) ನಿತ್ಯಹರಿದ್ವರ್ಣ ಕಾಡುಗಳು
ಬಿ) ಎಲೆ ಉದುರಿಸುವ ಮಾನ್ಸೂನ್ ಕಾಡುಗಳು
ಸಿ) ಮ್ಯಾಂಗ್ರೋವ್ ಕಾಡುಗಳು
ಡಿ) ಪರ್ವತ ಕಾಡುಗಳು
ಪೂರ್ವಘಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ;
ಎ) ಅರ್ಮಕೊಂಡ
ಬಿ) ಅಣೈಮುಡಿ
ಸಿ) ಗಾಡ್ವಿನ್ ಆಸ್ಟಿನ್
ಡಿ) ಮೌಂಟ್ ಎವರೆಸ್ಟ್
ಉಷ್ಣವಲಯದ ಆವರ್ತ ಮಾರುತಗಳ ಪ್ರಭಾವಕ್ಕೊಳಪಡದ ರಾಜ್ಯ;
ಎ) ತಮಿಳುನಾಡು
ಬಿ) ಕೇರಳ
ಸಿ) ಆಂಧ್ರಪ್ರದೇಶ
ಡಿ) ಓಡಿಸ್ಸಾ
