Wayground logo

Free Printable Worksheets

Font size

S
M
L
XL
Worksheets

5th ಪ ಅ ನಮ್ಮ ಭಾರತ ಪ್ರಾಕೃತಿಕ ವೈವಿಧ್ಯ

Total questions: 27

Worksheet time: 5mins

Name
Class
Date
1.

ಭಾರತದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಎಲ್ಲಿಂದ ಎಲ್ಲಿಯವರೆಗೆ ಹಬ್ಬಿವೆ?

a)

ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ

b)

ಪಂಜಾಬ್ ನಿಂದ ಹರಿಯಾಣದವರೆಗೆ

c)

ಕಾಶ್ಮೀರದಿಂದ ಮೇಘಾಲಯದವರೆಗೆ

d)

ಪಂಜಾಬಿನಿಂದ ಬಂಗಾಳದವರೆಗೆ

2.

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹೆಚ್ಚು ಜನರು ವಾಸಿಸುವುದಿಲ್ಲ.,ಏಕೆಂದರೆ....

a)

ನೀರು ದೊರೆಯುವುದಿಲ್ಲ

b)

ಮರುಭೂಮಿ ಇರುವುದರಿಂದ

c)

ಗಿಡಮರಗಳು ಇಲ್ಲದ್ದರಿಂದ

d)

ಮೈ ಕೊರೆಯುವಷ್ಟು ಚಳಿ ಇರುವುದರಿಂದ

3.

ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು?

a)

ಕಾಂಚನಗಂಗಾ

b)

ಮೌಂಟ್ ಎವರೆಸ್ಟ್

c)

ಮುಳ್ಳಯ್ಯನಗಿರಿ

d)

ಗಾಡ್ವಿನ್ ಆಸ್ಟಿನ್

4.

ಇದು ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರವಾಗಿದೆ?

a)

ಅಣ್ಣಮಲೈ

b)

ಅನೈ ಮುಡಿ

c)

ಮುಳ್ಳಯ್ಯನಗಿರಿ

d)

ಹಿಮಾದ್ರಿ ಪರ್ವತ

5.

ಪ್ರಪಂಚದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಶಿಖರವು ಎಲ್ಲಿ ಕಂಡು ಬರುತ್ತದೆ?

a)

ಭಾರತ

b)

ಚೀನಾ

c)

ಭೂತಾನ್

d)

ನೇಪಾಳ

6.

ವಿಶ್ವದ ಅತ್ಯಂತ ಎತ್ತರದ ಶಿಖರ- ಮೌಂಟ್ ಎವರೆಸ್ಟ್ ನ ಎತ್ತರ......... ಮೀಟರ್ ಗಳು.

a)

8,661 ಮೀಟರ್

b)

8848 ಮೀಟರ್

c)

2665 ಮೀಟರ್

d)

1913 ಮೀಟರ್

7.

ಎತ್ತರದ ಪ್ರದೇಶದ ಮೇಲ್ಭಾಗಕ್ಕೆ ಹೋದಂತೆ ಗಾಳಿಯು ಕಡಿಮೆಯಾಗುತ್ತದೆ ಹಾಗೂ..............

a)

ಬಿಸಿಯಾಗುತ್ತದೆ

b)

ಧೂಳಾಗುತ್ತದೆ

c)

ಜೋರಾಗಿ ಬೀಸುತ್ತದೆ

d)

ತಂಪಾಗುತ್ತದೆ

8.

ಭಾರತದಲ್ಲಿ ಈ ನದಿ ಮುಖಜ ಭೂಮಿಗಳ ಬಯಲುಗಳನ್ನು ಭಾರತದ ಆಹಾರ ಕಣಜ ಎಂದು ಕರೆಯುತ್ತಾರೆ?

a)

ಸಿಂಧು ಗಂಗಾ ಬ್ರಹ್ಮಪುತ್ರ

b)

ಗಂಗಾ ತುಂಗಾ ಯಮುನಾ

c)

ಕೃಷ್ಣ ಗೋದಾವರಿ ತಲಕಾವೇರಿ

d)

ನರ್ಮದಾ ತಪತಿ ಕೃಷ್ಣ

9.

ನದಿ ಮುಖಜ ಭೂಮಿಗಳಲ್ಲಿ ಹೆಚ್ಚಿನ ಜನರು ತಮ್ಮ ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ವಾಸಿಸಲು ಕಾರಣ

a)

ಹಿಮಾಲಯ ಪರ್ವತಗಳು ಇಲ್ಲದಿರುವುದರಿಂದ

b)

ಕಡಿಮೆ ಮಳೆ ಮತ್ತು ಕಾಡುಗಳು

c)

ಉತ್ತಮ ವಾತಾವರಣ ಮತ್ತು ನೀರು

d)

ಮಣ್ಣಿನ ಫಲವತ್ತತೆ ಹಾಗೂ ನೀರಿನ ಲಭ್ಯತೆ

10.

ಆಗ್ರಾದ ತಾಜ ಮಹಲ್ ಯಾವ ಶಿಲೆಯಿಂದ ರಚನೆಗೊಂಡಿದೆ?

a)

ಕಣಶಿಲೆ

b)

ಅಮೃತಶಿಲೆ

c)

ಮರಳುಗಲ್ಲು

d)

ಬಳಪದ ಕಲ್ಲು

11.

ಬೇಲೂರು ಹಳೇಬೀಡು ದೇವಾಲಯಗಳನ್ನು ಈ ಕಲ್ಲಿನಿಂದ ಕೆತ್ತಲಾಗಿದೆ.

a)

ಅಮೃತಶಿಲೆ

b)

ಕಣಶಿಲೆ

c)

ಬಳಪದ ಶಿಲೆ

d)

ಮರಳು ಶಿಲೆ

12.

ಈ ಕೆಳಗಿನ ಗುಹಾಂತರ ದೇವಾಲಯಗಳು ಮರಳುಗಲ್ಲಿನಿಂದ ನಿರ್ಮಿತವಾದವುಗಳು ಆಗಿವೆ.

a)

ಬೇಲೂರು ಹಳೇಬೀಡು

b)

ಶ್ರೀರಂಗಪಟ್ಟಣ

c)

ಚಿತ್ರದುರ್ಗ

d)

ಬಾದಾಮಿ

13.

ಭಾರತದಲ್ಲಿ ದಕ್ಷಿಣ ಭಾಗವನ್ನು ದಖನ್ ಪ್ರಸ್ಥಭೂಮಿ ಎಂದು,,, ಉತ್ತರ ಭಾಗವನ್ನು ಮಾಳ್ವ ಪ್ರಸ್ಥಭೂಮಿ ಎಂದೂ ಪ್ರತ್ಯೇಕಿಸುವ ನದಿ ಸೀಳು ಕಣಿವೆಗಳು ಯಾವುವೆಂದರೆ..........

a)

ಸಿಂಧು ಗಂಗಾ ಸೀಳುಕಣಿವೆ

b)

ತುಂಗಭದ್ರಾ ಸೀಳು ಕಣಿವೆ

c)

ನರ್ಮದಾ ಸೋನೆ ಸೀಳು ಕಣಿವೆ

d)

ನರ್ಮದಾ ಕೃಷ್ಣ ಸೀಳು ಕಣಿವೆ

14.

ಅರಾವಳಿ ಪರ್ವತ ಸರಣಿಯ ಅತಿ ಎತ್ತರದ ಶಿಖರ ಯಾವುದು?

a)

ಮುಳ್ಳಯ್ಯನಗಿರಿ

b)

ವಿಂದ್ಯಾ ಪರ್ವತ

c)

ಅಜಂತ ಶಿಖರ

d)

ಗುರುಶಿಖರ

15.

ಪಶ್ಚಿಮ ಘಟ್ಟಗಳು ಹಾಗೂ ಪೂರ್ವ ಘಟ್ಟಗಳು ಎಲ್ಲಿ ಸಂಧಿಸುತ್ತವೆ?

a)

ನೀಲಗಿರಿ ಬೆಟ್ಟಗಳಲ್ಲಿ

b)

ಅರಾವಳಿ ಬೆಟ್ಟಗಳಲ್ಲಿ

c)

ಕರ್ನಾಟಕದ ಬೆಟ್ಟಗಳಲ್ಲಿ

d)

ಮುಳ್ಳಯ್ಯನಗಿರಿ ಬೆಟ್ಟದಲ್ಲಿ

16.

ಪ್ರಸಿದ್ಧ ಗಿರಿಧಾಮ ಉದಕಮಂಡಲ ಅಥವಾ ಊಟಿ ಇರುವುದು ಯಾವ ಬೆಟ್ಟಗಳಲ್ಲಿ?

a)

ವಿಂಧ್ಯ ಪರ್ವತಗಳು

b)

ನೀಲಗಿರಿ ಬೆಟ್ಟಗಳು

c)

ಮುಳ್ಳಯ್ಯನಗಿರಿ

d)

ಹಿಮಾಲಯ ಪರ್ವತಗಳು

17.

ಭಾರತದ ಅತಿ ದೊಡ್ಡ ಪ್ರಸ್ಥಭೂಮಿ..........

a)

ಸಹರ

b)

ದಖನ್

c)

ಮಾಳ್ವ

d)

ಅರೇಬಿಯಾ

18.

ಭಾರತದ ಪ್ರಮುಖ ಬಂದರುಗಳಲ್ಲಿ ಒಂಬತ್ತನೆಯ ಸ್ಥಾನವನ್ನು ಪಡೆದ ಹಾಗೂ🌹 ಕರ್ನಾಟಕದ ಹೆಬ್ಬಾಗಿಲು 🌹ಎಂದು ಕರೆಸಿಕೊಳ್ಳುವ ಬಂದರು ಯಾವುದು?

a)

ಕಾರವಾರ

b)

ಮಂಗಳೂರು

c)

ಉಡುಪಿ

d)

ಮುರುಡೇಶ್ವರ

19.

ಮರಳುಗಾಡಿನಲ್ಲಿ ಕಂಡುಬರುವ ಅಂತರ್ಜಲದ ಒರತೆಯ ಚಿಲುಮೆಗಳನ್ನು................... ಎನ್ನುವರು.

a)

ಓ ಎಸ್ ಎಸ್

b)

ಪ್ಲಾಯ

c)

ಒಯಸಿಸ್

d)

ಮರುಭೂಮಿ

20.

ಮರುಭೂಮಿಗಳು ಯಾವಾಗಲೂ

a)

ತಂಪಾಗಿರುತ್ತದೆ

b)

ಹೊಳೆಯುತ್ತಿರುತ್ತವೆ

c)

ತೇವವಾಗಿರುತ್ತವೆ

d)

ಶುಷ್ಕವಾಗಿರುತ್ತವೆ

21.

ಒಂಟೆಯು ತನ್ನ ಬೆನ್ನಿನ ಮೇಲಿನ ಡುಬ್ಬದಲ್ಲಿ ಅನೇಕ ದಿನಗಳ ವರೆಗೆ ಬೇಕಾಗುವಷ್ಟು.............. ಮತ್ತು............. ನ್ನು ಸಂಗ್ರಹಣೆ ಮಾಡಿಕೊಂಡಿರುತ್ತದೆ.

a)

ನೀರು ಮತ್ತು ಆಹಾರ

b)

ನೀರು ಮತ್ತು ಮೇದಸ್ಸು

c)

ಆಹಾರ ಮತ್ತು ಶಕ್ತಿ

d)

ಯಾವುದು ಅಲ್ಲ

22.

ಡೆಸರ್ಟ್ ಶಿಪ್ ಎಂದು ಕರೆಯಲ್ಪಡುವ ಪ್ರಾಣಿ ಯಾವುದು?

a)

ಆನೆ

b)

ತಿಮಿಂಗಲ

c)

ನಾಯಿ

d)

ಒಂಟೆ

23.

ಪ್ಲಾಯಗಳು ಎಂದರೆ.................

a)

ಸಿಹಿ ನೀರಿನ ಸರೋವರಗಳು

b)

ಮರುಭೂಮಿಯ ಮನೆಗಳು

c)

ಉಪ್ಪು ನೀರಿನ ಸರೋವರಗಳು

d)

ಮರುಭೂಮಿಯ ಪ್ರಾಣಿಗಳು

24.

ಭಾರತದಲ್ಲಿ ಪ್ಲಾಯಗಳು ಎಲ್ಲಿ ಕಂಡುಬರುತ್ತವೆ?

a)

ಗುಜರಾತ್ ಪ್ರದೇಶದಲ್ಲಿ

b)

ಥಾರ್ ಮರುಭೂಮಿಯಲ್ಲಿ

c)

ಹಿಮಾಲಯ ಶ್ರೇಣಿಗಳಲ್ಲಿ

d)

ನೀಲಗಿರಿ ಬೆಟ್ಟಗಳಲ್ಲಿ

25.

ಭಾರತದ ಅತಿ ವಿಸ್ತಾರವಾದ ಉಪ್ಪಿನ ಸರೋವರ ಯಾವುದು?

a)

ಸಾಂಬಾರ್

b)

ಮಾಳ್ವ

c)

ಪೆಸಿಪಿಕ್

d)

ಕಾಂತೂರ್

26.

ಅರಬ್ ಭಾಷೆಯ ಮೌಸಿಮ್ ಎಂದರೆ......

a)

ಮುಂಗಾರು ಮಳೆ ಎಂದರ್ಥ

b)

ಋತುಕಾಲಿಕ ಎಂದರ್ಥ

c)

ಎತ್ತರದ ಬೆಟ್ಟ ಎಂದರ್ಥ

d)

ಪರ್ವತದ ಹೆಸರು

27.

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

a)

ಚಿರಾಪುಂಜಿ

b)

ಮೌಸಿನ್ ರಾಮ್

c)

ಆಗುಂಬೆ

d)

ಮಣಿಪುರ