wayground logo

Free Printable Worksheets

NEW

Font size

S
M
L
XL
Worksheets

5th ಜೀವ ಪ್ರಪಂಚ ಭಾಗ 2

Total questions: 15

Worksheet time: 3mins

Name
Class
Date
1.

ಪಕ್ಷಿಗಳು ಮೊಟ್ಟೆ ಇಡುವುದು ಪ್ರಾಣಿಗಳು ಮರಿ ಹಾಕುವುದು ಬೀಜಗಳು ಮೊಳಕೆ ಒಡೆಯುವುದು........ ಇವುಗಳನ್ನು ನೋಡಿದಾಗ ಸಜೀವಿಗಳ ಯಾವ ಲಕ್ಷಣ ತಿಳಿದು ಬರುತ್ತದೆ?

a)

ಆಹಾರ ಸೇವನೆ

b)

ಸಹಜೀವನ

c)

ಸಂತಾನೋತ್ಪತ್ತಿ

d)

ವಿಸರ್ಜನೆ

2.

ಒಂದೇ ಜೀವಿಯ ಅತಿಯಾದ ಸಂತಾನೋತ್ಪತ್ತಿಯಿಂದ ಪರಿಸರದಲ್ಲಿ ಅಪಾಯವಿದೆಯೇ?

a)

ಇಲ್ಲ

b)

ಇದೆ

c)

ಗೊತ್ತಿಲ್ಲ

d)

ಯಾವುದು ಅಲ್ಲ

3.

ಸಸ್ಯದ ಆಕರ್ಷಕ ಭಾಗ ಹೂವು. ಆದರೆ, ಸಂತಾನೋತ್ಪತ್ತಿಯ ಪ್ರಮುಖ ಭಾಗ ಯಾವುದು?

a)

ಎಲೆ

b)

ಬೀಜ

c)

ಪತ್ರಹರಿತ್ತು

d)

ಬೇರು

4.

ಹಾವು ರಕ್ಷಣೆಗಾಗಿ ಬುಸ್ ಎನ್ನುವುದು

ನಾಯಿ ಹೆದರಿಕೆಯಿಂದ ಬೊಗಳುವುದು

ಚಳಿಗೆ ನಾವು ನಡುಗುವುದು........

ಇವುಗಳು ಜೀವಿಯ ಈ ಲಕ್ಷಣವನ್ನು ಸೂಚಿಸುತ್ತವೆ.

a)

ಸಂತಾನೋತ್ಪತ್ತಿ

b)

ಜೀವಿತಾವಧಿ

c)

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ

d)

ವಂಶಾಭಿವೃದ್ಧಿ

5.

ಸಾಮಾನ್ಯವಾಗಿ ಹೆಚ್ಚು ಕಡಿಮೆ ಮಾನವನಷ್ಟೇ ಜೀವಿತ ಅವಧಿಯನ್ನು ಹೊಂದಿರುವ ಪ್ರಾಣಿ ಇದಾಗಿದೆ.

a)

ಆನೆ

b)

ನಾಯಿ

c)

ಜಿರಾಫೆ

d)

ಆಮೆ

6.

ಕೆಳಗಿನ ಈ ಎರಡೂ ಪ್ರಾಣಿಗಳು ಸರಾಸರಿ ಜೀವಿತಾವಧಿಯನ್ನು ಹೊಂದಿವೆ

a)

ಹಸು ಮತ್ತು ಹದ್ದು

b)

ಆಮೆ ಮತ್ತು ಮಾನವ

c)

ಆನೆ ಮತ್ತು ಆಮೆ

d)

ಹದ್ದು ಮತ್ತು ಆನೆ

7.

ಸಸ್ಯಗಳಲ್ಲಿ ಪತ್ರ ರಂದ್ರಗಳು ಕಂಡುಬರುವುದು

a)

ಎಲೆಗಳ ಮೇಲ್ಭಾಗದಲ್ಲಿ

b)

ಎಲೆಗಳ ತಳಭಾಗದಲ್ಲಿ

c)

ಎಲೆಗಳ ತುದಿಯಲ್ಲಿ

d)

ಮಣ್ಣಿನ ಬೇರುಗಳಲ್ಲಿ

8.

ಪ್ಲೇಗ್ ರೋಗಕ್ಕೆ ಕಾರಣವಾದ ಕೀಟ ಇದಾಗಿದೆ.

a)

ಇಲಿ

b)

ಬೆಕ್ಕು

c)

ಸೊಳ್ಳೆ

d)

ನೊಣ

9.

A) ಪ್ಲೇಗ್ - ಇಲಿ

B) ಸೊಳ್ಳೆ - ಮಲೇರಿಯಾ

C) ನಾಯಿ- ರೇಬಿಸ್

D) ನೊಣ - ಡೆಂಗ್ಯೂ

ಮೇಲಿನವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ?

a)

A

b)

B

c)

C

d)

D

10.

ಕೀಟಾಹಾರಿ ಸಸ್ಯಗಳು ನೈಟ್ರೋಜನ್ ಗಾಗಿ ಕೀಟಗಳನ್ನು ಅವಲಂಬಿಸಿದರೂ ಸಹ ಅವು................ ಜೀವಿಗಳಾಗಿವೆ.

a)

ಸ್ವಪೋಷಕ

b)

ಪರ ಪೋಷಕ

c)

ಕೀಟ ಪೋಷಕ

d)

ಸಸ್ಯ ಪೋಷಕ

11.

ಇದು ಕೀಟಾಹಾರಿ ಸಸ್ಯಗಳಿಗೆ ಉದಾಹರಣೆ ಅಲ್ಲ.

a)

ಡ್ರಾಸಿರಾ

b)

ಯೂಟ್ರಿಕ್ಯುಲೇರಿಯ

c)

ನೆಪಂತಿಸ್

d)

ಪ್ಯಾರಾ ಮಿಷಿಯಂ

12.

ದ್ಯುತಿ ಸಂಶ್ಲೇಷಣ ಕ್ರಿಯೆಯಲ್ಲಿ ಈ ಅಂಶವು ಅನ್ವಯಿಸುವುದಿಲ್ಲ.

a)

ಸೂರ್ಯನ ಬೆಳಕಿನ ಶಕ್ತಿ

b)

ಇಂಗಾಲದ ಡೈ ಆಕ್ಸೈಡ್

c)

ಖನಿಜ ಲವಣಾಂಶಗಳು ನೀರು

d)

ಮಳೆ, ಗಾಳಿ, ನೆರಳು

13.

ಗಡಿಯಾರದ ಮುಳ್ಳುಗಳು ನಿರಂತರವಾಗಿ ಚಲಿಸುತ್ತಾ ಇರುತ್ತವೆ. ಹಾಗಾದರೆ, ಗಡಿಯಾರವು ಸಜೀವಿಯೇ? ನಿರ್ಜೀವಿಯೇ?

a)

ಸಜೀವಿ

b)

ನಿರ್ಜೀವಿ

c)

ಸಮ್ಮಿಶ್ರ

d)

ಗೊತ್ತಿಲ್ಲ

14.

ಸಸ್ಯದ ಬೇರುಗಳು ನೀರು ಹಾಗೂ ಲವಣಾಂಶಗಳನ್ನು ಹೀರಿಕೊಳ್ಳಲು ಅವು ಇರುವ ಕಡೆ ಬೆಳೆಯುತ್ತವೆ.

ಇದರಲ್ಲಿ ಕಂಡುಬರುವ ಅಂಶ ಏನೆಂದರೆ.........

a)

ಚಲನೆ

b)

ಸಂತಾನವೃದ್ಧಿ

c)

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ

d)

ಆಹಾರ ತಯಾರಿಕೆ

15.

ಗಜ್ಜರಿ, ಶುಂಠಿ,ಎಲೆಕೋಸು,ಕಬ್ಬು,ಬೀಟ್ರೂಟ್............ ಇವು.............

a)

ಏಕವಾರ್ಷಿಕ ಸಸ್ಯಗಳು

b)

ದ್ವೈ ವಾರ್ಷಿಕ ಸಸ್ಯಗಳು

c)

ತ್ರೈ ವಾರ್ಷಿಕ ಸಸ್ಯಗಳು

d)

ಪಂಚವಾರ್ಷಿಕ ಸಸ್ಯಗಳು