wayground logo

Free Printable Worksheets

Font size

S
M
L
XL
Worksheets

5th ಕುಟುಂಬ

Total questions: 12

Worksheet time: 2mins

Name
Class
Date
1.

ಒಟ್ಟಾಗಿ ವಾಸಿಸುವ ಕುಟುಂಬದ ಸದಸ್ಯರು ಸಾಮಾನ್ಯವಾಗಿ..,.,.............ಆಗಿರುತ್ತಾರೆ

a)

ಹೊರಗಿನವರು

b)

ಸಂಬಂಧಿಕರು

c)

ವಿರೋಧಿಗಳು

d)

ಒಂದೇ ಊರಿನವರು

2.

ವಂಶವೃಕ್ಷವನ್ನು ರಚಿಸುವಾಗ ಗಂಡಸರಿಗೆ ಚೌಕದ ಗುರುತಿನಿಂದ ಗುರುತಿಸಿದರೆ,, ಹೆಂಗಸರಿಗೆ ಯಾವ ಗುರುತಿನಿಂದ ಗುರುತಿಸುತ್ತಾರೆ?

a)

ಆಯತ

b)

ಚೌಕ

c)

ವೃತ್ತ

d)

ತ್ರಿಭುಜ

3.

ತಂದೆ ತಾಯಿ ಹಾಗೂ ಮಕ್ಕಳನ್ನು ಒಳಗೊಂಡ ಕುಟುಂಬ.........

a)

ವಿಭಕ್ತ ಕುಟುಂಬ

b)

ಅವಿಭಕ್ತ ಕುಟುಂಬ

c)

ದೊಡ್ಡ ಕುಟುಂಬ

d)

ವಿಶಾಲ ಕುಟುಂಬ

4.

ಎರಡಕ್ಕಿಂತ ಹೆಚ್ಚು ತಲೆಮಾರಿನವರು ಕೂಡಿ ಒಂದೇ ಮನೆಯಲ್ಲಿ ವಾಸಿಸುವ ಕುಟುಂಬವನ್ನು......................ಕುಟುಂಬ ಎನ್ನುವರು.

a)

ವಿಭಕ್ತ

b)

ಅವಿಭಕ್ತ

c)

ವಿಚಿತ್ರ

d)

ಸರಳ

5.

ವಂಶವೃಕ್ಷವನ್ನು ರಚಿಸುವಾಗ ಮಕ್ಕಳ ಹೆಸರುಗಳನ್ನು ಈ ರೀತಿಯ ಅನುಕ್ರಮವಾಗಿ ಬರೆಯಲಾಗುತ್ತದೆ.

a)

ಹಿರಿಯರಿಂದ -ಕಿರಿಯರವರೆಗೆ

b)

ಕಿರಿಯರಿಂದ -ಹಿರಿಯರವರೆಗೆ

c)

ಮಕ್ಕಳಿಂದ -ಮೊಮ್ಮಕ್ಕಳ ವರೆಗೆ

d)

ತಂದೆ -ತಾಯಿಯವರೆಗೆ

6.

ವಂಶವೃಕ್ಷವು ಮುಖ್ಯವಾಗಿ ತಿಳಿಸುವುದು.

a)

ಕುಟುಂಬದ ಉಳಿವನ್ನು

b)

ಕಿರಿಯರ ಬೆಳವಣಿಗೆಯನ್ನು

c)

ಹಿರಿಯರ ಪೀಳಿಗೆಯನ್ನು

d)

ಕುಟುಂಬ ಜೀವನವನ್ನು

7.

ವಂಶವೃಕ್ಷ ಇದೊಂದು...................... ಕಲ್ಪನೆಯಂತೆ ತಲೆಮಾರುಗಳಿಗೆ ಹರಡುತ್ತಾ ಹೋಗುತ್ತದೆ.

a)

ತಲೆಮಾರು

b)

ಮರದ

c)

ಜೀವನದ

d)

ಬದುಕಿನ

8.

ನಿಮ್ಮ ತಂದೆಯ ಅಕ್ಕ ನಿಮಗೆ ಏನು ಆಗಬೇಕು?

a)

ಅಜ್ಜಿ

b)

ಅತ್ತೆ

c)

ನಾದಿನಿ

d)

ಚಿಕ್ಕಮ್ಮ

9.

ಅಜ್ಜ ಅಜ್ಜಿ ಚಿಕ್ಕಪ್ಪ ದೊಡ್ಡಪ್ಪ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳೆಲ್ಲರೂ ಒಟ್ಟಾಗಿ ವಾಸಿಸುವ ಕುಟುಂಬ

a)

ಬಹು ಕುಟುಂಬ

b)

ಸಹಕುಟುಂಬ

c)

ವಿಭಕ್ತ ಕುಟುಂಬ

d)

ಅವಿಭಕ್ತ ಕುಟುಂಬ

10.

ಎರಡು ತಲೆಮಾರಿನ ಸದಸ್ಯರು ಮಾತ್ರ ಒಟ್ಟಿಗೆ ವಾಸಿಸುವ ಕುಟುಂಬ

a)

ಆಧುನಿಕ ಕುಟುಂಬ

b)

ವೈಯಕ್ತಿಕ ಕುಟುಂಬ

c)

ಅವಿಭಕ್ತ ಕುಟುಂಬ

d)

ವಿಭಕ್ತ ಕುಟುಂಬ

11.

ತಂದೆಯ ಅಣ್ಣನ ಮಗಳು

a)

ಅತ್ತೆ

b)

ಸಹೋದರಿ

c)

ಚಿಕ್ಕಮ್ಮ

d)

ಗೆಳತಿ

12.

ಒಂದು ಮನೆಯ ಸದಸ್ಯರನ್ನು ನಾಲ್ಕು ವೃತ್ತಗಳಿಂದ ಗುರುತಿಸಲಾಗಿದೆ. ಅಂದರೆ ಇದರ ಅರ್ಥ ಆ ಮನೆಯಲ್ಲಿ ನಾಲ್ಕು ಜನ................. ಇದ್ದಾರೆ ಎಂದು ಅರ್ಥ.

a)

ಹೆಂಗಸರು

b)

ಗಂಡಸರು

c)

ಪ್ರಾಣಿಗಳು

d)

ಮುದುಕರು