wayground logo

Free Printable Worksheets

NEW

Font size

S
M
L
XL
Worksheets

ಕ್ರಿಯಾಪದಗಳು

Total questions: 30

Worksheet time: 15mins

Name
Class
Date
1.

3. ಧಾತು + ಕಾಲಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ= ?

a)

1. ಸಕರ್ಮಕ ಧಾತು

b)

2. ವರ್ತಮಾನ ಕಾಲ

c)

3. ಭೂತ ಕಾಲ

d)

4. ಕ್ರಿಯಾಪದ

2.

4. ಧಾತು (ಕ್ರಿಯಾ ಪ್ರಕೃತಿ) ಎಂದರೆ;

a)

1. ಕ್ರಿಯಾಪದದ ಮೂಲ ರೂಪ.

b)

2. ನಾಮಪದದ ಮೂಲ ರೂಪ.

c)

3. ವಿಭಕ್ತಿ ಪ್ರತ್ಯಯದ ಮೂಲ ರೂಪ..

d)

4. ಪ್ರತ್ಯಯ

3.

6. ಸಹಜ ಧಾತು ಮತ್ತು ಸಾಧಿತ ಧಾತು ಇವು -------- ವಿನ 2 ವಿಧಗಳು.

a)

1. ನಾಮ ಪ್ರಕೃತಿ

b)

2. ಅಕರ್ಮಕ ಧಾತು

c)

3. ಧಾತು

d)

4. ಸಕರ್ಮಕ ಧಾತು

4.

12. ಮನ್ನಿಸು, ಪ್ರಾರ್ಥಿಸು, ನಿಶ್ಚಯಿಸು ಇಲ್ಲಿ ನಾಮ ಪ್ರಕೃತಿಗೆ ------- ಪ್ರತ್ಯಯವು ಸೇರಿ ಸಾಧಿತ ಧಾತುವಾಗಿದೆ.

a)

1.ಯಿಸು

b)

2. ಸು

c)

3. ಇಸು

d)

4. ಈಸು

5.
ಕರ್ಮ ಪದವನ್ನು ಬಯಸುವ ಧಾತು
a)
ಸಕರ್ಮಕ ಧಾತು
b)
ಅಕರ್ಮಕ ಧಾತು
c)
ಕರ್ತೃ ಧಾತು
d)
ಸಾಧಿತ ಧಾತು
6.
ಕರ್ಮ ಪದವನ್ನು ಬಯಸದ ಧಾತು
a)
ಸಕರ್ಮಕ ಧಾತು
b)
ಅಕರ್ಮಕ ಧಾತು
c)
ಕರ್ತೃ ಧಾತು
d)
ಸಾಧಿತ ಧಾತು
7.
ಸಕರ್ಮಕ ಧಾತುವಿಗೆ ಉದಾಹರಣೆ
a)
ಕೊಡು
b)
ಬಿಡು
c)
ಉಣ್ಣು
d)
ಇವೆಲ್ಲವೂ ಸಕರ್ಮಕ ಧಾತುಗಳು
8.
ಸಕರ್ಮಕ ಧಾತುವಲ್ಲದ ಪದ
a)
ಉಜ್ಜು
b)
ತಿದ್ದು
c)
ಮುಚ್ಚು
d)
ನಾಚು
9.

ಗುಂಪಿಗೆ ಸೇರದ ಪದ ಗುರುತಿಸಿ.

a)

ಮಲಗು

b)

ಬರೆ

c)

ತಿನ್ನು

d)

ಮಾಡು

10.
ಅಕರ್ಮಕ ಧಾತುವಿಗೆ ಉದಾಹರಣೆ
a)
ಬರೆ
b)
ನೋಡು
c)
ಹೋಗು
d)
ಬಿಡು
11.
'ಅಲ್ಪಡು ' - ಎಂಬ ಪ್ರತ್ಯಯ ಸೇರುವುದು
a)
ಕರ್ತರಿ ಪ್ರಯೋಗದಲ್ಲಿ
b)
ಕರ್ಮಣಿ ಪ್ರಯೋಗದಲ್ಲಿ
c)
ಕೃದಂತದಲ್ಲಿ
d)
ತದ್ದಿತಾಂತದಲ್ಲಿ
12.
ಕರ್ಮಣಿ ಪ್ರಯೋಗವಿರುವ ವಾಕ್ಯ
a)
ಭೀಮನು ಅನ್ನವನ್ನು ಉಂಡನು.
b)
ರಾಮನು ಸೀತೆಯನ್ನು ಹುಡುಕಿದನು.
c)
ಭೀಮನಿಂದ ಅನ್ನವು ಉಣ್ಣಲ್ಪಟ್ಟಿತು.
d)
ಹುಲಿಯು ಶಾನುಭೋಗರಿಂದ ತಪ್ಪಿಸಿಕೊಂಡಿತು.
13.
ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ತೋರುವಾಗ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿದರೆ ಅವು
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಪ್ರಶ್ನಾರ್ಥಕ ಕ್ರಿಯಾಪದ
14.
ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿದರೆ ಅವು
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಪ್ರಶ್ನಾರ್ಥಕ ಕ್ರಿಯಾಪದ
15.
ಕ್ರಿಯೆಯೂ ನಡೆಯುವಲ್ಲಿ ಸಂಶಯ ಅಥವಾ ಊಹೆ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿದಾಗ ಅವು
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಸಾಪೇಕ್ಷ ಕ್ರಿಯಾಪದ
16.
ಮಾಡಲಿ : ವಿದ್ಯರ್ಥಕ : : ಮಾಡನು : ------
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಪ್ರಶ್ನಾರ್ಥಕ ಕ್ರಿಯಾಪದ
17.
ಮಾಡರು : ನಿಷೇಧಾರ್ಥಕ : : ಮಾಡಿಯಾರು : ----------
a)
ವಿದ್ಯರ್ಥಕ ಕ್ರಿಯಾಪದ
b)
ನಿಷೇಧಾರ್ಥಕ ಕ್ರಿಯಾಪದ
c)
ಸಂಭವನಾರ್ಥಕ ಕ್ರಿಯಾಪದ
d)
ಭಾವನಾತ್ಮಕ ಕ್ರಿಯಾಪದ
18.
ಬರೆದೀರಿ : ಸಂಭಾವನಾರ್ಥಕ :: ಓದಿರಿ : ............
a)
ಸಂಬಂಧಾರ್ಥಕ
b)
ನಿಷೇಧಾರ್ಥಕ
c)
ಸಂಭಾವನಾರ್ಥಕ
d)
ವಿದ್ಯಾರ್ಥಕ
19.

ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ

a)
ಮಾಡೀರಿ
b)
ಮಾಡರಿ
c)
ಮಾಡಿರಿ
d)
ಮಾಡೆನು
20.
ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಹೀಗೆನ್ನುವರು;
a)
ಅನುಕರಣಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಸಂಬಂಧಾರ್ಥಕಾವ್ಯಯ
d)
ಸಾಮಾನ್ಯಾವ್ಯಯ
21.
ಕೋಪ, ಹರ್ಷ, ದುಃಖ ಮೆಚ್ಚುಗೆ, ಆಕ್ಷೇಪ ತಿರಸ್ಕಾರ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸುವ ಬಳಸುವ ಅವ್ಯಯ;
a)
ಕ್ರಿಯಾರ್ಥಕಾವ್ಯಯ
b)
ಸಾಮಾನ್ಯಾವ್ಯಯ
c)
ಭಾವಸೂಚಕಾವ್ಯಯ
d)
ಅನುಕರಣಾವ್ಯಯ
22.
ಅಯ್ಯೋ : ಭಾವಸೂಚಕಾವ್ಯಯ :: ರೊಯ್ಯನೆ : ...........
a)
ಅವಧಾರಣಾರ್ಥಕಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅನುಕರಣಾವ್ಯಯ
d)
ಸಾಮಾನ್ಯಾವ್ಯಯ
23.
ಕ್ರಿಯೆ ನಡೆಯಲಿಲ್ಲ : ನಿಷೇಧಾರ್ಥಕ :: ಆಶೀರ್ವಾದ : .................
a)
ಗುಣಾತ್ಮಕ
b)
ಸಂಭಾವನಾರ್ಥಕ
c)

ವಿದ್ಯರ್ಥಕ

d)
ನಿಷೇಧಾರ್ಥಕ
24.
ಅನುಕರಣಾವ್ಯಯ ಪದಕ್ಕೆ ಉದಾಹರಣೆ;
a)
ದಮನ
b)
ದಡದಡ
c)
ಹೆಚ್ಚಾಗಿ
d)
ಕೂಡಲೆ
25.

ಕೊರೋನ ವೈರಸ್ ಜಗತ್ತಿನಿಂದ ದೂರವಾಗಲಿ. - ಇಲ್ಲಿ ಕ್ರಿಯಾಪದದ ಕ್ರಿಯಾರೂಪ

a)
ನಿಷೇಧಾರ್ಥಕ
b)
ಕ್ರಿಯಾರ್ಥಕಾವ್ಯಯ
c)
ಸಂಭಾವನಾರ್ಥಕ
d)

ವಿದ್ಯರ್ಥಕ

26.

ಧಾತು ಮತ್ತು ಅಖ್ಯಾತ ಪ್ರತ್ಯಯಗಳ ಮಧ್ಯದಲ್ಲಿ ಸೇರುವ ಪ್ರತ್ಯಯ?

a)

ಕಾಲ ಸೂಚಕ ಪ್ರತ್ಯಯ

b)

ವಿಭಕ್ತಿ ಪ್ರತ್ಯಯ

c)

ಅಖ್ಯಾತ ಪ್ರತ್ಯಯ

d)

ಎಲ್ಲವೂ

27.

ಇದು ವರ್ತಮಾನ ಕಾಲದ ಕಾಲಸೂಚಕ ಪ್ರತ್ಯಯ?

a)

b)

c)

ಉತ್ತ

d)

ಉವ

28.

ಇದು ಭವಿಷ್ಯತ್ಕಾಲದ ಕಾಲಸೂಚಕ ಪದ?

a)

b)

c)

ಉತ್ತ

d)

ಉವ

29.

ʼರಾಮನು ಪುಸ್ತಕ ಓದುವನು" ಈ ವಾಕ್ಯದಲ್ಲಿನ ಕಾಲ?

a)

ಭೂತಕಾಲ

b)

ವರ್ತಮಾನಕಾಲ

c)

ಭವಿಷ್ಯತ್ಕಾಲ

d)

ವಿಧ್ಯರ್ಥಕ

30.

ʼಸೀತೆ ಅಡುಗೆ ಮಾಡುವಳುʼ ಈ ವಾಕ್ಯದಲ್ಲಿರುವ ಅಖ್ಯಾತ ಪ್ರತ್ಯಯ?

a)

ಮಾಡು

b)

c)

ಅಳು

d)

ಉವ