Worksheets7 ನೇ ತರಗತಿ ವಿಜ್ಞಾನ ಕ್ವಿಜ್
Total questions: 10
Worksheet time: 5mins
1) ಸಸ್ಯಗಳಿಂದ ಸಂಶ್ಲೇಷಿಸಲ್ಪಟ್ಟ ಆಹಾರವು ಯಾವ ರೂಪದಲ್ಲಿ ಸಂಗ್ರಹವಾಗುವುದು?
ಪ್ರೋಟೀನ್
ಲಿಪಿಡ್
ವಿಟಮಿನ್
ಪಿಷ್ಟ
2) ಈ ಚಿತ್ರದಲ್ಲಿ ಕಂಡುಬರುವ ಸಸ್ಯದ ಹೆಸರು ಏನು?
ಕಸ್ಕ್ಯೂಟ
ಶೈವಲ
ಅಲ್ಗೆ
ಹೂಜಿ ಗಿಡ
3) ಕಸ್ಕ್ಯೂಟ ಇದಕ್ಕೆ ಉದಾಹರಣೆ
ಸ್ವಪೋಷಕ
ಪರಾವಲಂಬಿ
ಕೊಳೆತಿನಿ
ಆತಿಥೇಯ ಸಸ್ಯ
4) ಸಸ್ಯಗಳು ಆಹಾರ ತಯಾರಿಸುವಾಗ ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡನ್ನು ಯಾವ ಭಾಗದಿಂದ ಒಳ ತೆಗೆದುಕೊಳ್ಳುತ್ತವೆ?
ಪತ್ರ ರಂಧ್ರಗಳು
ಬೇರು ರೋಮಗಳು
ದಳಗಳು
ಎಲೆಯ ಸಿರೆಗಳು
5) ದ್ಯುತಿ ಸಂಶ್ಲೇಷಣೆಯಲ್ಲಿ ಸೌರ ಶಕ್ತಿಯು ಯಾವ ಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ?
ವಿದ್ಯುತ್
ಉಷ್ಣ
ರಾಸಾಯನಿಕ
ಪವನ
6) ಈ ಚಿತ್ರದಲ್ಲಿರುವ ಸಮುದ್ರ ಜೀವಿ ಯಾವುದು?
ಹಮ್ಮಿಂಗ್
ಅಕ್ಟೋಪಸ್
ಸ್ಟಾರ್ ಫಿಶ್
ಕ್ರೇಬ್
7) ಲಾಲಾರಸವು ಯಾವ ಪೋಷಕವನ್ನು ಸರಳವಾಗಿಸುತ್ತದೆ?
ಪಿಷ್ಟ
ಲಿಪಿಡ್
ಖನಿಜ ಲವಣಗಳು
ಕೊಬ್ಬು
8) ಜಠರದಲ್ಲಿ ಬಿಡುಗಡೆಯಾಗುವ ಜಠರ ರಸವು ಯಾವ ಪೋಷಕವನ್ನು ಸರಳವಾಗಿಸುತ್ತದೆ?
ಕೊಬ್ಬು
ಲಿಪಿಡ್
ವಿಟಮಿನ್
ಪ್ರೋಟೀನ್
9) ನಮ್ಮ ದೇಹದ ಅತ್ಯಂತ ದೊಡ್ಡ ಗ್ರಂಥಿ ಯಾವುದು?
ಜಠರ
ಯಕೃತ್
ಸಣ್ಣ ಕರುಳು
ವಿಲ್ಲೈ
10) ಹುಲ್ಲು ತಿನ್ನುವ ಪ್ರಾಣಿಗಳಲ್ಲಿ ಅದನ್ನು ಜೀರ್ಣಿಸಿಕೊಳ್ಳಲು ಜಠರದಲ್ಲಿ ಇರುವ ವಿಶೇಷ ಭಾಗ ಯಾವುದು?
ಸೆಲ್ಯುಲೋಸ್
ರುಮೆನ್
ಗ್ಲಿಸರಾಲ್
ಅಮೈನೋ ಆಮ್ಲ
