wayground logo

Free Printable Worksheets

Font size

S
M
L
XL
Worksheets

BCM test-3

Total questions: 101

Worksheet time: 51mins

Name
Class
Date
1.

ಮೀಸಲಾತಿಯು ಈ ತತ್ವವನ್ನು ಬೆಂಬಲಿಸುತ್ತದೆ

a)

ಎಲ್ಲರನ್ನು ಒಂದೇ ರೀತಿ ಪರಿಗಣಿಸುವ ಮೂಲಕ

b)

ಹಿಂದುಳಿದವರಿಗೆ ವಿಶೇಷ ನಿಬಂಧನೆಗಳನ್ನು ಒದಗಿಸುವ ಮೂಲಕ

c)

ಸಾಮಾಜಿಕ ವ್ಯತ್ಯಾಸಗಳನ್ನು ನಿರ್ಲಕ್ಷಿಸುವ ಮೂಲಕ

d)

ಪ್ರತ್ಯೇಕತೆಯನ್ನು ಉತ್ತೇಜಿಸುವ ಮೂಲಕ

2.

ಮೀಸಲಾತಿ ವ್ಯವಸ್ಥೆಯಲ್ಲಿ ಕೋಟಾ ಪದ್ದತಿ (%) ಜಾರಿಗೆ ತಂದಿರುವ ಮಹತ್ವವೇನು

a)

ಅಸಮಾನತೆಯನ್ನು ಹೆಚ್ಚಿಸಲು

b)

ಕನಿಷ್ಠ ಪ್ರಾತಿನಿಧ್ಯವನ್ನು ಖಚಿತಪಡಿಸಲು

c)

ಗರಿಷ್ಠ ಪ್ರಾತಿನಿಧ್ಯವನ್ನು ಖಚಿತಪಡಿಸಲು

d)

ಮೇಲಿನ ಯಾವುದು ಅಲ್ಲ

3.

ಮೀಸಲಾತಿ ನೀತಿಗಳ ಮುಂದುವರಿಕೆಗೆ ಈ ಕೆಳಗಿನ ಯಾವುದು ಪ್ರಮುಖ ಕಾರಣವಾಗಿದೆ

a)

ಆರ್ಥಿಕ ಸಮಾನತೆಯನ್ನು ಕಡಿಮೆ ಮಾಡಲು

b)

ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸಾಧಿಸಲು

c)

ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು

d)

ಸ್ವಜನಪಕ್ಷಪಾತ ಪ್ರೋತ್ಸಾಹಿಸಲು

4.

ಭಾರತೀಯ ಸಮಾಜದ ಸಂದರ್ಭದಲ್ಲಿ ಮೀಸಲಾತಿ ಪದವು ಏನನ್ನು ಸೂಚಿಸುತ್ತದೆ

a)

ಮೂಲಸೌಕರ್ಯಕ್ಕಾಗಿ ಹಣವನ್ನು ಮೀಸಲಿಡುವುದು

b)

ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಪ್ರಾಥಮಿಕ ಸಂಸ್ಥೆಗಳಲ್ಲಿನ ಸ್ಥಾನಗಳ ಅನುಪಾತವನ್ನು ನಿಗದಿಪಡಿಸುವುದು

c)

ಮಿಲಿಟರಿ ವೆಚ್ಚಕ್ಕಾಗಿ ಸಂಪನ್ಮೂಲವನ್ನು ನಿಯೋಜಿಸುವುದು

d)

ಸಮಾನ ತೆರಿಗೆಗಳನ್ನು ಖಾತರಿಪಡಿಸುವುದು

5.

ಸಂವಿಧಾನದ ಯಾವ ವಿಧಿಯು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಾಡಬೇಕೆಂದು ತಿಳಿಸಿದೆ

a)

ವಿಧಿ 15 (4)

b)

ವಿಧಿ 16 (4)

c)

ವಿಧಿ 243ಡಿ

d)

ವಿಧಿ 330

6.

ನೇಮಕಾತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಎಷ್ಟು ಪ್ರತಿಶತ ವಯೋಮಿತಿಯಲ್ಲಿ ಮೀಸಲಾತಿ ನೀಡಲಾಗಿದೆ

a)

3 ವರ್ಷ

b)

5 ವರ್ಷ

c)

7 ವರ್ಷ

d)

4 ವರ್ಷ

7.

ಭಾರತ ಸಂವಿಧಾನದ 16 ನೇ ಭಾಗದಲ್ಲಿ 330 ರಿಂದ 342 ನೇ ವಿಧಿಗಳು ಯಾವುದಕ್ಕೆ ಸಂಬಂಧಿಸಿದೆ

a)

ಅಖಿಲ ಭಾರತ ಸೇವೆಗಳು

b)

ಹಣಕಾಸು ಆಯೋಗ

c)

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಲೋಕಸಭೆಯಲ್ಲಿ ಮೀಸಲಾತಿ

d)

ಕೇಂದ್ರಾಡಳಿತ ಪ್ರದೇಶಗಳು

8.

124 ನೇ ಸಂವಿಧಾನಿಕ ತಿದ್ದುಪಡಿ ಮಸೂದೆಯು ಯಾವುದಕ್ಕೆ ಸಂಬಂಧಿಸಿದೆ

a)

ಸರ್ಕಾರಿ ಸೇವೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ

b)

ದೌರ್ಜನ್ಯಗಳ ವಿರುದ್ಧ ರಕ್ಷಣೆ

c)

ದೌರ್ಜನ್ಯದಿಂದ ಮಕ್ಕಳಿಗೆ ರಕ್ಷಣೆ

d)

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ

9.

ಮಹಿಳೆಯರಿಗೆ ನೀಡಲಾದ 33% ಮೀಸಲಾತಿ ಎಲ್ಲಿ ಅನ್ವಯಿಸುತ್ತದೆ

a)

ಸಂಸತ್ತು

b)

ರಾಜ್ಯ ಶಾಸಕಾಂಗಗಳು

c)

ಸ್ಥಳೀಯ ಸಂಸ್ಥೆಗಳು

d)

ಶಿಕ್ಷಣ ಸಂಸ್ಥೆಗಳ ನೇಮಕಾತಿ

10.

ಲೋಕಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

84 ಸೀಟುಗಳು ಪರಿಶಿಷ್ಟ ಜಾತಿಗೆ ಮೀಸಲಿವೆ

b)

47 ಸೀಟುಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ

c)

ಈ ಕ್ಷೇತ್ರಗಳನ್ನು ರಾಷ್ಟ್ರೀಯ ಕ್ಷೇತ್ರ ಪುನರ್ ವಿಂಗಡನಾ ಆಯೋಗ ಶಿಫಾರಸ್ಸಿನ ಮೇರೆಗೆ ಜಾರಿಗೆ ತರಲಾಗಿದೆ

d)

ರಾಷ್ಟ್ರೀಯ ಕ್ಷೇತ್ರ ಪುನರ್ ವಿಂಗಡಣೆ ಆಯೋಗವನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ

e)

ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ

11.

ಭಾರತ ಸಂವಿಧಾನದ ಎಷ್ಟನೇ ವಿಧಿ ಪ್ರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಗಿದೆ

a)

338ಎ

b)

338ಬಿ

c)

338ಸಿ

d)

338ಡಿ

12.

ಕರ್ನಾಟಕ ವಿಧಾನಸಭೆಗೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪರಿಶೀಲಿಸಿ

a)

ಎಸ್.ಸಿ ಪಂಗಡಕ್ಕೆ 36 ಕ್ಷೇತ್ರಗಳು ಮೀಸಲಿವೆ

b)

ಎಸ್.ಟಿ ಪಂಗಡಕ್ಕೆ 15 ಕ್ಷೇತ್ರಗಳು ಮೀಸಲಿವೆ

c)

ವಿಧಾನಸಭಾ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಮೂಲಕ ನಡೆಸುತ್ತದೆ

d)

ಮೇಲಿನ ಎರಡು ಹೇಳಿಕೆಗಳು ಮಾತ್ರ ಸರಿಯಾಗಿದೆ

13.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸಂರಚನೆ ಎಂದರೆ

a)

ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಇತರೆ ಮೂವರು ಸದಸ್ಯರು

b)

ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಇತರೆ ನಾಲ್ವರು ಸದಸ್ಯರು

c)

ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಇತರೆ ಐವರು ಸದಸ್ಯರು

d)

ಮೇಲಿನ ಯಾವುದು ಅಲ್ಲ

14.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುವರು

a)

ರಾಷ್ಟ್ರಪತಿಗಳು

b)

ಪ್ರಧಾನ ಮಂತ್ರಿಗಳು

c)

ಮಂತ್ರಿಮಂಡಲ

d)

ಸಂಸತ್ತು

15.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಯಾವುದೇ ವಿಷಯವನ್ನು ತನಿಖೆ ಮಾಡುವಾಗ ಅಥವಾ ಯಾವುದೇ ದೂರಿನ ವಿಚಾರಣೆ ನಡೆಸುವಾಗ ಈ ಅಧಿಕಾರವನ್ನು ಹೊಂದಿರುತ್ತದೆ

a)

ಸುಪ್ರೀಂ ಕೋರ್ಟ್

b)

ಉಚ್ಚ ನ್ಯಾಯಾಲಯ

c)

ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ)

d)

ಸಿವಿಲ್ ಕೋರ್ಟ್

16.

ಯಾವ ವರ್ಷ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳಿಂದ ಹೊರತುಪಡಿಸಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸ್ಥಾಪಿಸಿತು

a)

1999-2000

b)

2001-2022

c)

2000-2001

d)

1998-1999

17.

ಅಮೃತ ಮಹೋತ್ಸವ ಮುನ್ನಡೆ ಯೋಜನೆ ಅಡಿಯಲ್ಲಿ ಎಷ್ಟು ಅಲ್ಪಾವಧಿ ಕೋರ್ಸ್ ಗಳಿಗೆ ತರಬೇತಿ ನೀಡಲಾಗುತ್ತದೆ

a)

25

b)

50

c)

75

d)

88

18.

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಸ್ಥಾಪನೆಯಾದ ವರ್ಷ

a)

24-12-2017

b)

24-12-2018

c)

24-12-2019

d)

24-12-2020

19.

ಅಲೆಮಾರಿ ಅಲೆ ಅಲೆಮಾರಿ ನಿಗಮವನ್ನು 2020ರಲ್ಲಿ ಯಾವ ಆಕ್ಟ್ ಅಡಿಯಲ್ಲಿ ಸ್ಥಾಪಿಸಲಾಗಿದೆ

a)

ಕಂಪನಿ ಆಕ್ಟ್ 1956

b)

ಕಂಪನಿ ಆಕ್ಟ್ 2013

c)

ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ 1860

d)

ಇಂಡಿಯನ್ ಟ್ರಸ್ಟ್ ಆಕ್ಟ್ 1882

20.

2023-24 ನೇ ಸಾಲಿನಲ್ಲಿ ಪ್ರವರ್ಗ-2ಎ ಅಡಿಯಲ್ಲಿ ಬರುವ ಈಡಿಗ-ಬಿಲ್ಲವ ಸೇರಿದಂತೆ 26 ಉಪ ಪಂಗಡಗಳ ಸಮಗ್ರ ಸ್ಥಿತಿಗತಿಗಳ ಅಧ್ಯಯನ ಕೈಗೊಂಡವರು

a)

ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ

b)

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

c)

ಜಯಪ್ರಕಾಶ್ ಹೆಗಡೆ ನೇತೃತ್ವದ ಕಮಿಟಿ

d)

ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ

21.

ರಾಜಶ್ರೀ ಸಾಹು ಮಹಾರಾಜ್ ವಿದೇಶಿ ವ್ಯಾಸಂಗ ಯೋಜನೆಯ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ಸ್ನಾತಕೋತ್ತರ ಪದವಿದರರಿಗೆ ವಯೋಮಿತಿ 25 ವರ್ಷ ವಯೋಮಿತಿ

b)

ಪಿ.ಎಚ್.ಡಿ ವ್ಯಾಸಂಗ ಮಾಡುವವರಿಗೆ 27 ವರ್ಷ ವಯೋಮಿತಿ

c)

ಆದಾಯ ಮಿತಿ 800000 ಒಳಗಡೆ ಇರಬೇಕು

d)

ವಿಶ್ವದ ಪ್ರತಿಷ್ಠಿತ 200 ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು

22.

ಕರ್ನಾಟಕದ ಒಕ್ಕಲಿಗ ಅಭಿವೃದ್ಧಿ ನಿಗಮದ ಜಿಲ್ಲಾ ಆಯ್ಕೆ ಸಮಿತಿ ಕೆಳಗಿನ ಯಾವ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ

a)

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ

b)

ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)

c)

ಅರಿವು ಶೈಕ್ಷಣಿಕ ಕಾಲ ಯೋಜನೆ

d)

ಮೇಲಿನ ಮೂರು ಸರಿಯಾಗಿದೆ

23.

ಅರಿವು ಶೈಕ್ಷಣಿಕ ಸಾಲ ಯೋಜನೆ ಕೆಳಗಿನ ಯಾವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇದೆ

a)

ಇಂಜಿನಿಯರಿಂಗ್

b)

ವೈದ್ಯಕೀಯ

c)

ದಂತ ವೈದ್ಯಕೀಯ

d)

ಮೇಲಿನ ಮೂರು ಸರಿಯಾಗಿವೆ

24.

ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿ ಎಷ್ಟು ವೃತ್ತಿಪರ ಕೋರ್ಸ್ ಗಳಿಗೆ ಸಾಲ ಹಾಗೂ ಸಹಾಯಧನ ನೀಡಲಾಗುತ್ತದೆ

a)

18

b)

28

c)

38

d)

25

25.

ಕೇಂದ್ರ ಪುರಸ್ಕೃತ ಯೋಜನೆಯಾದ ಪಿಎಂ ಯಶಸ್ವಿ ಮಾರ್ಗಸೂಚಿ ಪ್ರಕಾರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯದ ಅನುಪಾತ

a)

60:40

b)

50:50

c)

70:30

d)

30:70

26.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಎಷ್ಟು ನವೋದಯ ಮಾದರಿ ಮೊರಾರ್ಜಿ ದೇಸಾಯಿ ಶಾಲೆಗಳು ಕಾರಣ ನಿರ್ವಹಿಸುತ್ತಿವೆ

a)

05

b)

02

c)

10

d)

07

27.

54 ಖಾಸಗಿ ಅನಾಥಾಲಯಗಳಿಗೆ ಎಷ್ಟು ತಿಂಗಳ ಅವಧಿಗೆ ಭೋಜನವೆಚ್ಚ ನೀಡಲಾಗುತ್ತದೆ

a)

950 ರೂಪಾಯಿ 12 ತಿಂಗಳು

b)

1050 ರೂಪಾಯಿ 10 ತಿಂಗಳು

c)

950 ರೂಪಾಯಿ 10 ತಿಂಗಳು

d)

1000 ರೂಪಾಯಿ 12 ತಿಂಗಳು

28.

ಕರ್ನಾಟಕ ರಾಜ್ಯದಲ್ಲಿ ಪ್ರವರ್ಗ-1 ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ

a)

33 ವರ್ಷ

b)

36 ವರ್ಷ

c)

38 ವರ್ಷ

d)

40 ವರ್ಷ

29.

ಚಪ್ಪರ ಬಂದ್ ಉಪಜಾತಿಗಳು ________ ವರ್ಗದಲ್ಲಿ ಮೀಸಲಾತಿಯನ್ನು ಪಡೆಯುತ್ತಿದೆ

a)

ಪ್ರವರ್ಗ -2 ಬಿ

b)

ಪ್ರವರ್ಗ -1

c)

ಪ್ರವರ್ಗ -2ಎ

d)

ಪರಿಶಿಷ್ಟ ಜಾತಿ

30.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಶೇರು ಬಂಡವಾಳಕ್ಕೆ ಹಣವನ್ನು ________ ಒದಗಿಸುತ್ತವೆ

a)

ಭಾರತ ಸರ್ಕಾರ

b)

ಕರ್ನಾಟಕ ಸರ್ಕಾರ

c)

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ

d)

ಮೇಲಿನ ಎಲ್ಲವೂ

31.

ಹಿಂದುಳಿದ ವರ್ಗಗಳ ಜನರ ಸ್ವಯಂ ಉದ್ಯೋಗಕ್ಕೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ನಿಗಮವು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಒದಗಿಸುವ ಸಾಲಕ್ಕೆ ಖಾತರಿ (ಗ್ಯಾರಂಟಿ) ಯಾರನ್ನು ಇವರು ನೀಡುವರು

a)

ಭಾರತ ಸರ್ಕಾರ

b)

ಕರ್ನಾಟಕ ಸರ್ಕಾರ

c)

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

d)

ರಾಷ್ಟ್ರೀಕೃತ ಬ್ಯಾಂಕುಗಳು

32.

ಡಿ.ಎಂ ನಂಜುಂಡಪ್ಪ ವರದಿಯಲ್ಲಿ ಗುರುತಿಸಲಾದ ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ

a)

39

b)

35

c)

40

d)

33

33.

ಒಂದು ಸ್ವ ಸಹಾಯ ಗುಂಪಿನಲ್ಲಿ ಗರಿಷ್ಠ _______ ಮಂದಿ ಸಹ ಸದಸ್ಯರಿರಬಹುದು ( ಸ್ವ-ಸಹಾಯ ಸಂಘಗಳಿಗೆ ಉತ್ತೆಜನ ಯೋಜನೆಯಡಿ )

a)

15

b)

25

c)

10

d)

20

34.

ನ್ಯೂ ಸ್ವರ್ಣಿಮಾ ಯೋಜನೆಯಲ್ಲಿ ಘಟಕವೆಚ್ಚದ ________ ರಷ್ಟು ಸಾಲವನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಭರಿಸುತ್ತದೆ

a)

ಶೇಕಡಾ 85

b)

ಶೇಕಡಾ 70

c)

ಶೇಕಡಾ 80

d)

ಶೇಕಡಾ 95

35.

ಕರ್ನಾಟಕದಲ್ಲಿ ವೃತ್ತಿಪರ ಶಿಕ್ಷಣ ನಿರ್ದೇಶನಾಲಯವು ಯಾವ ಸಚಿವ ಖಾತೆಯಡಿ ಕಾರ್ಯ ನಿರ್ವಹಿಸುತ್ತದೆ

a)

ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ

b)

ಉನ್ನತ ಶಿಕ್ಷಣ

c)

ಕಾರ್ಮಿಕ ಇಲಾಖೆ

d)

ಸಮಾಜ ಕಲ್ಯಾಣ ಇಲಾಖೆ

36.

ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ಪ್ರವರ್ಗ -2ಎ ಅಭ್ಯರ್ಥಿಗಳ ಆಯ್ಕೆಗೆ ಶೇಕಡಾವಾರು ಮೀಸಲಾತಿ ಇದೆ

a)

25

b)

35

c)

30

d)

45

37.

ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳಿಗೆ ಡೋಲು ಮತ್ತು ನಾದಸ್ವರ ತರಬೇತಿ ಆರಂಭಗೊಂಡ ವರ್ಷ

a)

2015-16

b)

2016-17

c)

2017-18

d)

2018-19

38.

ಪ್ರವರ್ಗ-1 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಪಡೆಯಲು ಕುಟುಂಬದ ವಾರ್ಷಿಕ ಆದಾಯ ________ ಮೀರಕೂಡದು

a)

3 ಲಕ್ಷ

b)

3.50 ಲಕ್ಷ

c)

2.50 ಲಕ್ಷ

d)

ಆದಾಯ ಮಿತಿ ಇರುವುದಿಲ್ಲ

39.

ಸ್ವಯಂ ಉದ್ಯೋಗ ಸಾಲ ಯೋಜನೆ ಅಡಿಯಲ್ಲಿ ಉಪ್ಪಾರ ಜನಾಂಗದ ಅಭ್ಯರ್ಥಿಗಳು ಶೇಕಡಾ _______ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕಾಗುತ್ತದೆ

a)

6%

b)

5%

c)

4%

d)

3%

40.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಶುಲ್ಕ ಮರುಪಾವತಿ ಯೋಜನೆಯನ್ನು ___________ ವರ್ಷದಲ್ಲಿ ಆರಂಭಿಸಿತು

a)

2011-12

b)

2012-13

c)

2013-14

d)

2014-15

41.

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ _______ ತರಗತಿಯಿಂದ _______ ಕೋರ್ಸ್ ನವರಿಗೆ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು

a)

ಪಿಯುಸಿ ಯಿಂದ ಪಿ.ಎಚ್.ಡಿ

b)

ಪಿಯುಸಿ ಯಿಂದ ಬಿ.ಎ

c)

ಪಿ.ಯು.ಸಿ ಯಿಂದ ಸ್ನಾತಕೋತ್ತರ

d)

ಪಿಯುಸಿ ಯಿಂದ ಡಿಪ್ಲೋಮಾ

42.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ನೇರವಾಗಿ _______ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ

a)

ಜಿಲ್ಲಾಧಿಕಾರಿಗಳು

b)

ಜಿಲ್ಲಾ ಉಸ್ತುವಾರಿ ಸಚಿವರು

c)

ಜಿಲ್ಲಾ ಪಂಚಾಯತ್ ಅಧ್ಯಕ್ಷರು

d)

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು

43.

ಸ್ಪೂರ್ತಿಯ ನಡೆ ಕಾರ್ಯಕ್ರಮದ ಮಾರ್ಗಸೂಚಿಯಂತೆ ಮಾಸಿಕ 15 ಸ್ಪೋಕನ್ ಇಂಗ್ಲೀಷ್ ತರಗತಿ ತೆಗೆದುಕೊಳ್ಳುವ ಇಂಗ್ಲಿಷ್ ಉಪನ್ಯಾಸಕರಿಗೆ ನೀಡುವ ಮಾಸಿಕ ಭತ್ಯೆ

a)

2000

b)

3000

c)

4000

d)

5000

44.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ JEE/NEET ತರಬೇತಿ ಕೇಂದ್ರವನ್ನು ಯಾವ ಸ್ಥಳದಲ್ಲಿ ಪ್ರಾರಂಭಿಸಿಲ್ಲ

a)

ಬೆಂಗಳೂರು

b)

ಮೈಸೂರು

c)

ಕಲ್ಬುರ್ಗಿ

d)

ಧಾರವಾಡ

e)

ಬೆಳಗಾವಿ

45.

ಪಿ.ಯು.ಸಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ JEE/NEET ತರಬೇತಿಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ

a)

ಪ್ರಥಮ ವರ್ಷ 300 ಗಂಟೆ / ದ್ವಿತೀಯ ವರ್ಷ 300 ಗಂಟೆ

b)

ಪ್ರಥಮ ವರ್ಷ 200 ಗಂಟೆ / ದ್ವಿತೀಯ ವರ್ಷ 400 ಗಂಟೆ

c)

ಪ್ರಥಮ ವರ್ಷ 250 ಗಂಟೆ / ದ್ವಿತೀಯ ವರ್ಷ 250 ಗಂಟೆ

d)

ಪ್ರಥಮ ವರ್ಷ 200 ಗಂಟೆ / ದ್ವಿತೀಯ ವರ್ಷ 200 ಗಂಟೆ

46.

ಯಾವ ಕಾಯ್ದೆ ಪ್ರಕಾರ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು 1977ರಲ್ಲಿ ಸ್ಥಾಪಿಸಲಾಯಿತು

a)

1956ರ ಕಂಪನಿ ಕಾಯ್ದೆ

b)

2013ರ ಕಂಪನಿ ಕಾಯ್ದೆ

c)

1882ರ ಕಂಪನಿ ಕಾಯ್ದೆ

d)

ಮೇಲಿನ ಯಾವುದೂ ಅಲ್ಲ

47.

ಒಕ್ಕಲಿಗರ ಅಬಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯ ಅಧ್ಯಕ್ಷರು ಯಾರಾಗಿರುತ್ತಾರೆ

a)

ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

b)

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್

c)

ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

d)

ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ

48.

ಕಾಯಕ ಕಿರಣ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

50.000 ಘಟಕ ವೆಚ್ಚಕ್ಕೆ 30% ಸಹಾಯಧನ

b)

50.001 ರಿಂದ 1 ಲಕ್ಷ ವರೆಗಿನ ಸಾಲಕ್ಕೆ 20% ಸಹಾಯಧನ

c)

1,000,01 ರಿಂದ 2 ಲಕ್ಷ ವರೆಗಿನ ಸಾಲ 15% ಸಹಾಯಧನ

d)

ಮೇಲಿನ ಮೂರು ಸರಿಯಾಗಿದೆ

49.

ಶರಣ ಸೇನೆ ಯೋಜನೆಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ಭೂಸೇನೆ ನೌಕಾಸೇನೆ ವಾಯು ಸೇನೆ ಸೇರಲು ತರಬೇತಿ

b)

ಅರೆಸೇನಾ ಪಡೆ ತರಬೇತಿ

c)

ಸಿವಿಲ್ ಪೋಲಿಸ್ ಸೇವೆ ತರಬೇತಿ

d)

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ

50.

ಕರ್ನಾಟಕ ಸರ್ಕಾರ 50% ಮೀಸಲಾತಿಯನ್ನು ಜಾರಿಗೆ ತಂದ ವರ್ಷ (SC/ST/OBC)

a)

1995 ಡಿಸೆಂಬರ್

b)

1995 ನವೆಂಬರ್

c)

1995 ಅಕ್ಟೋಬರ್

d)

ಯಾವುದು ಅಲ್ಲ

51.

ವಿಭೂತಿ ನಿರ್ಮಾಣ ಘಟಕ ಯೋಜನೆಗೆ ಸಂಬಂಧಿಸಿ ದಂತೆ ಯಾವ ಹೇಳಿಕೆ ತಪ್ಪಾಗಿದೆ

a)

4 ಲಕ್ಷ ಘಟಕ ವೆಚ್ಚದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಬಹುದು

b)

20% ಸಹಾಯಧನ ಇರುತ್ತದೆ

c)

ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ

d)

ಮರುಪಾವತಿ 36 ತಿಂಗಳುಗಳು

e)

ಶೇಕಡಾ 03% ಬಡ್ಡಿ ದರದಲ್ಲಿ 3.60000 ಸಂದಾಯ ಮಾಡಬೇಕು

52.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾನೂನು ಪದವಿದರರಿಗೆ ತರಬೇತಿ ಯೋಜನೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ

a)

4 ವರ್ಷ ತರಬೇತಿಗೆ ಮಾಸಿಕ 4000

b)

ಪ್ರತಿ ಜಿಲ್ಲೆಗೆ ಭೌತಿಕ ಗುರಿ 10 ಕಾನೂನು ಪದವೀಧರರಿಗೆ ಮಾತ್ರ

c)

ಇದು ಜಿಲ್ಲಾ ವಲಯದ ಕಾರ್ಯಕ್ರಮವಾಗಿದೆ

d)

ಈ ಯೋಜನೆಗೆ ಕೇಂದ್ರದಿಂದ 50% ಹಣ ಸಂದಾಯವಾಗುವುದು

53.

ಪ್ರತಿ ಜಿಲ್ಲೆಯಲ್ಲಿನ ದೇವರಾಜ ಅರಸು ಭವನವು _______

a)

ಜಿಲ್ಲೆಯ ಕಚೇರಿಗಳ ಎಲ್ಲಾ ಹಿಂದುಳಿದ ಇಲಾಖೆಯ ಅಧೀನ ಕಚೇರಿಗಳ ಸಂಕೀರ್ಣ

b)

ಜಿಲ್ಲಾ ಹಿಂದುಳಿದ ವರ್ಗಗಳ ಸಮುದಾಯ ಭವನ

c)

ಹಿಂದುಳಿದ ವರ್ಗಗಳ ವಿದ್ಯಾರ್ಥಿಗೆ ತರಬೇತಿ ಕೇಂದ್ರ

d)

ನಿರ್ಣಯ ಯಾವುದು ಅಲ್ಲ

54.

ದೇವರಾಜ ಅರಸು ವಿದೇಶಿ ವ್ಯಾಸಾಂಗ ಯೋಜನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನ ಪಡೆಯಲು ಹಿಂದಿನ ವರ್ಷಗಳಲ್ಲಿ _________ ಅಂಕಗಳನ್ನು ಪಡೆದಿರಬೇಕು

a)

60%

b)

70%

c)

65%

d)

55%

55.

ಜೈನ ದಿಗಂಬರ ಯಾವ ಪ್ರವರ್ಗದಡಿಯಲ್ಲಿ ಬರುತ್ತದೆ

a)

ಪ್ರವರ್ಗ -1

b)

ಪ್ರವರ್ಗ -2ಎ

c)

ಪ್ರವರ್ಗ -3ಎ

d)

ಪ್ರವರ್ಗ -3ಬಿ

56.

ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿ ಶೇಕಡಾ 04% ಮೀಸಲಾತಿಯನ್ನು ಯಾರ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ಕರ್ನಾಟಕ ಸರ್ಕಾರ ಪ್ರಾರಂಬಿಸಿತು

a)

ದೇವೆಗೌಡ (1994)

b)

ರಾಮಕೃಷ್ಣ ಹೆಗಡೆ (1985)

c)

ಜೆ.ಎಚ್.ಪಟೇಲ್ ( 1996)

d)

ಎಸ್.ಎಂ.ಕೃಷ್ಣ (1999)

57.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯ ಕುರಿತು ಯಾವುದು ತಪ್ಪಾಗಿದೆ

a)

ನಿರ್ಮಲ ಕಿಟ್ - ಬಾಲಕರಿಗೆ

b)

ಸಿರಿಗಂಧ ಕಿಟ್ - ಬಾಲಕಿಯರಿಗೆ

c)

3 ತಿಂಗಳಿಗೊಮ್ಮೆ ಟೂತ್ ಬ್ರಷ್ ನೀಡುವರು

d)

2 ತಿಂಗಳಿಗೊಮ್ಮೆ ಕ್ಷೌರದ ವೆಚ್ಚ 50 ರೂಪಾಯಿ

58.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಕುರಿತು ತಪ್ಪಾದ ಹೇಳಿಕೆ ಗುರುತಿಸಿ

a)

1277 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಕಾರ್ಯನಿರ್ವಹಿಸುತ್ತಿವೆ

b)

1189 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಕಾರ್ಯನಿರ್ವಹಿಸುತ್ತಿವೆ

c)

17 ಆಶ್ರಮ ಶಾಲೆಗಳು ಕಾರ್ಯ ನಿರ್ವಹಿಸುತ್ತವೆ

d)

20 ಖಾಸಗಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಕಾರ್ಯ ನಿರ್ವಹಿಸುತ್ತಿವೆ

59.

ಯಾವ ವರ್ಷದಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ವಿದ್ಯಾರ್ಥಿ ವೇತನವನ್ನು ಪಾವತಿ ಮಾಡಲಾಗುತ್ತಿದೆ ( ಮೆಟ್ರಿಕ್ ಪೂರ್ವ/ ಮೆಟ್ರಿಕ್ ನಂತರದ)

a)

2012-13

b)

2013-14

c)

2014-15

d)

2015-16

60.

ಪಿಎಂ ಯಶಸ್ವಿ ಮಾರ್ಗಸೂಚಿ ಪ್ರಕಾರ ಮೆಟ್ರಿಕ್ ನಂತರದ ಪಿಯುಸಿ ಡಿಪ್ಲೋಮಾ ಐಟಿಐ ವ್ಯಾಸಾಂಗ ಮಾಡುವವರಿಗೆ ನೀಡುವ ವಾರ್ಷಿಕ ವಿದ್ಯಾರ್ಥಿ ವೇತನ _______

a)

5000

b)

8000

c)

6000

d)

7000

61.

ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳಿಗೆ ನಾಲ್ಕು ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿ ಶಾಲೆಯ ಸಂಖ್ಯಾಬಲ ________

a)

100

b)

120

c)

125

d)

150

62.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಗೆ ಸಂಬಂಧಿಸಿದಂತೆ 2ಎ 3ಎ 3ಬಿ ಪ್ರವರ್ಗದವರಿಗೆ ಆದಾಯ ಮಿತಿ ________

a)

1 ಲಕ್ಷ

b)

1.50 ಲಕ್ಷ

c)

2 ಲಕ್ಷ

d)

2.50 ಲಕ್ಷ

63.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ 54 ಖಾಸಗಿ ಅನಾಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

a)

ಅನಾಥ ಮಕ್ಕಳಿಗೆ ಆದಾಯ ಮಿತಿ ಇರುವುದಿಲ್ಲ

b)

ನಿರ್ಗತಿಕ ಪ್ರವರ್ಗ -1 ವಿದ್ಯಾರ್ಥಿಗಳಿಗೆ 1 ಲಕ್ಷ ಆದಾಯ ಮಿತಿ

c)

2ಎ, 3ಎ, 3ಬಿ ವಿದ್ಯಾರ್ಥಿಗಳಿಗೆ ಆದಾಯ ಮಿತಿ 44.500

d)

ಪ್ರೌಢ ಶಿಕ್ಷಣ ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲಾಗುವುದು

e)

ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ

64.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮೊದಲ ಅಹಿಂದ ಸಮಾವೇಶ ಹುಬ್ಬಳ್ಳಿಯಲ್ಲಿ _________ ವರ್ಷದಲ್ಲಿ ನಡೆಯಿತು

a)

2004

b)

2005

c)

2006

d)

2007

65.

ಮೀಸಲಾತಿಯಲ್ಲಿ ಕೆಳಗಿನ ಯಾವ ಪ್ರವರ್ಗ ಅತಿಹೆಚ್ಚಿನ ಲಾಭ ಪಡೆಯುತ್ತಿದೆ

a)

ಪ್ರವರ್ಗ -1

b)

ಪ್ರವರ್ಗ 2ಎ

c)

ಪ್ರವರ್ಗ -3ಬಿ

d)

ಪ್ರವರ್ಗ -3ಎ

66.

ಸಂವಿಧಾನದ ಯಾವ ಭಾಗದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷ ಮೀಸಲಾತಿ ಸೌಲಭ್ಯವನ್ನು ಘೋಷಿಸಲಾಗಿದೆ

a)

ಭಾಗ-16

b)

ಭಾಗ-10

c)

ಭಾಗ-13

d)

ಭಾಗ-15

67.

ಯಾವ ಸಂವಿಧಾನ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸಮಾನ ನ್ಯಾಯ ಮತ್ತು ಉಚಿತ ಕಾನೂನು ಸಹಕಾರವನ್ನು ಘೋಷಿಸಲಾಗಿದೆ

a)

17 ನೇ

b)

27 ನೇ

c)

42 ನೇ

d)

49 ನೇ

68.

ಕೆಳಗಿನ ಯಾವ ಸಂವಿಧಾನ ತಿದ್ದುಪಡಿ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ದೃಡಪಡಿಸಿದೆ

a)

01 ನೇ ತಿದ್ದುಪಡಿ

b)

07 ನೇ ತಿದ್ದುಪಡಿ

c)

29 ನೇ ತಿದ್ದುಪಡಿ

d)

6 ನೇ ತಿದ್ದುಪಡಿ

69.

ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾತಿ ಪಡೆಯಲು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ಯಾವ ಸಂವಿಧಾನ ತಿದ್ದುಪಡಿ ಅವಕಾಶ ಕಲ್ಪಿಸಿದೆ

a)

95ನೇ

b)

93ನೇ

c)

71ನೇ

d)

92ನೇ

70.

ಆದಾಯ ಮಿತಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ವಿದೇಶಿ ವ್ಯಾಸಾಂಗ -- 8 ಲಕ್ಷ

b)

ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ --2.50 ಲಕ್ಷ

c)

ಹೊಲಿಗೆ ತರಬೇತಿ -- 2.50 ಲಕ್ಷ

d)

ಅಲೆಮಾರಿ ಜನಾಂಗದವರಿಗೆ ವಸತಿ ಯೋಜನೆ - 1ಲಕ್ಷ

e)

ಹೊಲಿಗೆ ವಿತರಣೆ 98000

71.

ಆದಾಯ ಮಿತಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ವಿದೇಶಿ ವ್ಯಾಸಾಂಗ -- 8 ಲಕ್ಷ

b)

ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ --2.50 ಲಕ್ಷ

c)

ಹೊಲಿಗೆ ತರಬೇತಿ -- 2.50 ಲಕ್ಷ

d)

ಅಲೆಮಾರಿ ಜನಾಂಗದವರಿಗೆ ವಸತಿ ಯೋಜನೆ - 1ಲಕ್ಷ

e)

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ -2.50 ಲಕ್ಷ

72.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳನ್ನು ಪರಿಶೀಲಿಸಿ

a)

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ -- ಕೇಂದ್ರ ಪುರಸ್ಕೃತ ಯೋಜನೆ

b)

ಕಾನೂನು ಪದವೀಧರರಿಗೆ ತರಬೇತಿ -- ಜಿಲ್ಲಾ ವಲಯದ ಕಾರ್ಯಕ್ರಮ

c)

ವಿದ್ಯಾಸಿರಿ ಊಟ ವಸತಿ ಯೋಜನೆ -- ರಾಜ್ಯ ವಲಯದ ಕಾರ್ಯಕ್ರಮ

d)

ಮೇಲಿನ ಮೂರು ಹೇಳಿಕೆಗಳು ಸರಿಯಾಗಿದೆ

73.

1977 ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಾರಂಭವಾದಾಗ ಮುಖ್ಯಮಂತ್ರಿ ಆಗಿದ್ದವರು

a)

ದೇವರಾಜ ಅರಸು

b)

ರಾಮಕೃಷ್ಣ ಹೆಗಡೆ

c)

ನಿಜಲಿಂಗಪ್ಪ

d)

ದೇವೆಗೌಡ

74.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಕಾರ್ಯವಿಧಾನ

a)

ವಿದ್ಯಾರ್ಥಿ--ಶಾಲೆ --ಕ್ಷೇತ್ರ ಶಿಕ್ಷಣಾಧಿಕಾರಿ --ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

b)

ವಿದ್ಯಾರ್ಥಿ-- ಶಾಲೆ-- ಉಪ ನಿರ್ದೇಶಕರ ಕಚೇರಿ-- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

c)

ವಿದ್ಯಾರ್ಥಿ-- ಶಾಲೆ --ಕ್ಷೇತ್ರ ಶಿಕ್ಷಣಾಧಿಕಾರಿ --ಉಪ ನಿರ್ದೇಶಕರ ಕಚೇರಿ --ಸಾರ್ವಜನಿಕ ಶಿಕ್ಷಣ ಇಲಾಖೆ --ರಾಜ್ಯ-- ಕೇಂದ್ರ ಸರ್ಕಾರ

d)

ವಿದ್ಯಾರ್ಥಿ-- ಶಾಲೆ --ಕ್ಷೇತ್ರ ಶಿಕ್ಷಣಾಧಿಕಾರಿ-- ಹಿಂದುಳಿದ ವರ್ಗಗಳ ಆಯುಕ್ತರ ಕಚೇರಿ-- ಕೇಂದ್ರ ಸರ್ಕಾರ

75.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕ್ರೈಸ್ ಅಡಿ ಕಾರ್ಯ ನಿರ್ವಹಿಸುತ್ತಿರುವ 174 ವಸತಿ ಶಾಲೆಗಳು /ಕಾಲೇಜ್ ಗಳು ಕಾರ್ಯನಿರ್ವಹಿಸುತ್ತಿರುವುದು

a)

6-12 ತರಗತಿ

b)

6-10 ತರಗತಿ

c)

6-8 ತರಗತಿ

d)

6- ರಿಂದ ಪದವಿ

76.

ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನದಡಿ ಆಯ್ಕೆ ಮಾಡಲು ಈ ಕೆಳಕಂಡ ಯಾವ ಮಾನದಂಡ ಅನುಸರಿಸಲಾಗುವುದು

a)

ವಿದ್ಯಾರ್ಥಿಯ ಕಡಿಮೆ ಆದಾಯ ಮಿತಿ ಆರೋಹಣ ಕ್ರಮ

b)

ವಿದ್ಯಾರ್ಥಿಯ ಕಡಿಮೆ ಆದಾಯ ಮಿತಿ ಅವರೋಹಣ ಕ್ರಮ

c)

ವಿದ್ಯಾರ್ಥಿಯ ಶೇಕಡವಾರು ( ಹಿಂದಿನ ವರ್ಷದ )

d)

ಮೇಲಿನ ಯಾವುದು ಅಲ್ಲ

77.

ವಿದ್ಯಾರ್ಥಿ ನಿಲಯಗಳಲ್ಲಿ ಯಾವುದಕ್ಕೆ ಪ್ರತ್ಯೇಕ ಕೊಠಡಿಯುವುದು ಅಪೇಕ್ಷಣೀಯ

a)

ಗ್ರಂಥಾಲಯ ಮತ್ತು ಕಂಪ್ಯೂಟರ್ ಕೊಠಡಿ

b)

ಪ್ರತಿ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿ

c)

ಗ್ರಂಥಾಲಯ ಕೊಠಡಿ

d)

ಪ್ರಯೋಗಾಲಯ ಕೊಠಡಿ

78.

ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅರ್ಜಿಗಳನ್ನು ಈ ಕೆಳಗಿನ ಯಾವ ತಿಂಗಳಿನಲ್ಲಿ ಪಡೆಯುತ್ತಾರೆ

a)

ಮೇ ತಿಂಗಳ ಎರಡನೇ ವಾರ

b)

ಮೇ ತಿಂಗಳ ಮೊದಲ ವಾರ

c)

ಮೇ ತಿಂಗಳ ಕೊನೆಯ ವಾರ

d)

ಜೂನ್ ತಿಂಗಳ ಮೊದಲ ವಾರ

79.

ವಸತಿ ನಿಲಯಗಳಲ್ಲಿ ಯಾವ ತಿಂಗಳಿನಲ್ಲಿ ಆರೋಗ್ಯ ತಪಾಸನೆ ನಡೆಸುವುದಿಲ್ಲ

a)

ಜುಲೈ

b)

ಸೆಪ್ಟಂಬರ್

c)

ಆಗಸ್ಟ್

d)

ಡಿಸೆಂಬರ್

80.

ವಿದ್ಯಾರ್ಥಿನಿಲಯಗಳಲ್ಲಿ ಅನುಸರಿಸುವ ಅನುಬಂಧಗಳಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ

a)

ವಿದ್ಯಾರ್ಥಿಗಳ ಪ್ರವೇಶ ರಿಜಿಸ್ಟರ್ -- ಅನುಬಂಧ 02

b)

ಎಚ್ಚರಿಕೆ ಹಣದ ರಿಜಿಸ್ಟರ್ --ಅನುಬಂಧ 03

c)

ಆಹಾರ ಪದಾರ್ಥ ವಿತರಣಾ ವಹಿ -- ಅನುಬಂಧ 07

d)

ಆರೋಗ್ಯ ತಪಾಸನಾ ರಿಜಿಸ್ಟರ್ -- ಅನುಬಂಧ 08

81.

ಉದ್ಘಾಟನೆಗೊಂಡ ಹೊಸ ಕಟ್ಟಡವನ್ನು ಯಾರು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುತ್ತಾರೆ

a)

ನಿಲಯದ ಮೇಲ್ವಿಚಾರಕರು

b)

ಜಿಲ್ಲಾಧಿಕಾರಿ

c)

ತಹಸೀಲ್ದಾರ್

d)

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

82.

ನಾಗನಗೌಡ ಸಮಿತಿ ರಚನೆಯಾದ ವರ್ಷ

a)

1960

b)

1961

c)

1962

d)

1963

83.

ಜಾತಿ ಆಧಾರಿತವಾಗಿ ಮೀಸಲಾತಿಯ ವಿರುದ್ಧ ವಿಶ್ವೇಶ್ವರಯ್ಯನವರು ರಾಜೀನಾಮೆ ನೀಡಿದ್ದಾಗ ಮೈಸೂರಿನ ಅರಸರು ಯಾರಾಗಿದ್ದರು

a)

ಜಯ ಚಾಮರಾಜ ಒಡೆಯರ್

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ರಾಜ್ ಒಡೆಯರ್

d)

ಕಂಠೀರವ ನರಸರಾಜ ಒಡೆಯರ್

84.

ಲೆಸ್ಲಿ ಮಿಲ್ಲರ್ ಸಮಿತಿ ತನ್ನ ವರದಿಯನ್ನು ಕೊಟ್ಟಿದ್ದು ಯಾವ ವರ್ಷ

a)

1916

b)

1917

c)

1918

d)

1919

85.

ಚಿನ್ನಪ್ಪ ರೆಡ್ಡಿ ಆಯೋಗದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದವರು

a)

ಲಿಂಗಾಯಿತರು

b)

ಒಕ್ಕಲಿಗರು

c)

ಮರಾಠರು

d)

ಪರಿಶಿಷ್ಟ ಜಾತಿಯವರು

86.

ಭಾರತ ಸಂವಿಧಾನದ ಯಾವ ಅನುಚ್ಛೇದ ಪ್ರಕಾರ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯತೆಯನ್ನು ಯಾವುದೇ ಹಿಂದುಳಿದ ಜಾತಿ ಹೊಂದಿಲ್ಲವೆಂದು ಅಭಿಪ್ರಾಯಪಟ್ಟಲ್ಲಿ ಅಂತವರಿಗಾಗಿ ನೇಮಕಾತಿಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡಬಹುದು

a)

15 (4) ವಿಧಿ

b)

16 ( 4) ವಿಧಿ

c)

13 (4) ವಿಧಿ

d)

ಮೇಲಿನ ಯಾವುದು ಅಲ್ಲ

87.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಕಿರು ಹಣಕಾಸು ಅಗತ್ಯತೆಗಳನ್ನು ಒದಗಿಸಲು ಮಹಿಳಾ ಸಮೃದ್ಧಿ ಯೋಜನೆಗೆ ಸಹಾಯ ಪಡೆಯಲು ನೀಡುವ ಗರಿಷ್ಠ ಸಾಲ

a)

1 ಲಕ್ಷ

b)

1.25 ಲಕ್ಷ

c)

2 ಲಕ್ಷ

d)

2.50 ಲಕ್ಷ

88.

NBCFDC ಯೋಜನೆಗಳ ಅಡಿ ವ್ಯಕ್ತಿಗಳಿಗೆ ಸಣ್ಣ ಸಾಲ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಪಾಲು ಎಷ್ಟು

a)

85%

b)

90%

c)

80%

d)

75%

89.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇರುವ ಪೋರ್ಟಲ್

a)

ವಿಶ್ವಾಸ ಪೋರ್ಟಲ್

b)

ಕೌಶಲ್ಕರ್

c)

NSP

d)

ಪಡಸಾಲೆ

90.

ಧರ್ಮ ಜನಾಂಗ ಜಾತಿ ಅಥವಾ ಲಿಂಗವನ್ನು ಆಧರಿಸಿ ಪ್ರಜೆಗಳಲ್ಲಿ ತಾರತಮ್ಯ ವ್ಯಸಗುವುದನ್ನು ನಿವೇದಿಸುವ ಭಾರತ ಸಂವಿಧಾನದ ವಿಧಿ

a)

15

b)

16

c)

17

d)

18

91.

ಏಕರೂಪ ಸಿವಿಲ್ ಸಂಹಿತೆ ಕುರಿತು ಸಂವಿಧಾನದ ವಿಧಿ

a)

44

b)

45

c)

46

d)

47

92.

ಆಶ್ರಮ ಶಾಲೆಗಳ ಪ್ರವೇಶಕ್ಕಾಗಿ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ

a)

75% ಪ್ರವರ್ಗ -1 ವಿದ್ಯಾರ್ಥಿಗಳಿಗೆ

b)

25% SC/ST ವಿದ್ಯಾರ್ಥಿಗಳಿಗೆ

c)

ಆಶ್ರಮ ಶಾಲೆಯು ಕಾರ್ಯನಿರ್ವಹಿಸುತ್ತಿರುವುದು 1-4

d)

ಮೇಲಿನ ಎಲ್ಲವೂ ಸರಿಯಾಗಿವೆ

93.

ಐಎಎಸ್ ಕೆಎಎಸ್ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಕನಿಷ್ಠ ವಯೋಮಿತಿ

a)

18

b)

21

c)

25

d)

30

94.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತದೆ

a)

ರಾಜ್ಯ ಜಿಲ್ಲಾ ಮತ್ತು ತಾಲೂಕು ಮಟ್ಟ

b)

ಜಿಲ್ಲಾ ಮಟ್ಟ

c)

ತಾಲೂಕು ಮಟ್ಟ

d)

ರಾಜ್ಯ ಮಟ್ಟ

95.

ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆ ಅಡಿ ಯಾವ ಎರಡು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ

a)

ಸಮುದಾಯ ಭವನ ಕಟ್ಟಲು ಹಣಕಾಸಿನ ನೆರವು

b)

ಹಾಸ್ಟೆಲ್ ಕಟ್ಟಡಗಳು ಕಟ್ಟಲು ಆರ್ಥಿಕ ನೆರವು

c)

ಮೇಲಿನ ಎರಡು ಸರಿಯಾಗಿದೆ

d)

ಮೇಲಿನ ಎರಡು ತಪ್ಪಾಗಿದೆ

96.

ಶಿಕ್ಷಣ ಸಂಸ್ಥೆ ಎಂದರೆ

a)

ರಾಜ್ಯದಿಂದ ನಿರ್ವಹಿಸಲ್ಪಡುವ ಯಾವುದೇ ಕಾಲೇಜು ಶಿಕ್ಷಣ ಸಂಸ್ಥೆ

b)

ಮಾನ್ಯತೆ ಪಡೆದ ಅಥವಾ ನಮೂದಿಸಿದ ಶಿಕ್ಷಣ ಸಂಸ್ಥೆ

c)

ರಾಜ್ಯದ ನಿಧಿಯಿಂದ ಹಣಕಾಸು ಸಹಾಯ ಪಡೆದ ಸಂಸ್ಥೆ

d)

ಮೇಲಿನ ಎಲ್ಲ ಸರಿಯಾಗಿದೆ

97.

ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಎಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ

a)

ದೆಹಲಿ

b)

ಹೈದರಾಬಾದ್

c)

ಬೆಂಗಳೂರು

d)

ಧಾರವಾಡ

e)

ಮೇಲಿನ ಎಲ್ಲ ಸರಿಯಾಗಿದೆ

98.

ಆಶ್ರಮ ಶಾಲೆಗಳ ಪ್ರವೇಶಕ್ಕಾಗಿ ಪ್ರವರ್ಗ -1 ವರ್ಗದ ಅಭ್ಯರ್ಥಿಗಳು ಸಿಗದೇ ಇದ್ದಲ್ಲಿ ಮೀಸಲಾತಿ ಪ್ರಮಾಣ

a)

2ಎ -54%

b)

2-ಬಿ 14%

c)

3ಎ -14%

d)

3ಬಿ-18%

e)

ಮೇಲಿನ ಎಲ್ಲವೂ ಸರಿಯಾಗಿದೆ

99.

ಆಶ್ರಮ ಶಾಲೆಗಳ ವಿದ್ಯಾರ್ಥಿಗಳ ಆಯ್ಕೆ ಮಾಡಲು ಆಯ್ಕೆ ಸಮಿತಿಯ ಅಧ್ಯಕ್ಷರು ಯಾರಾಗಿರುತ್ತಾರೆ

a)

ಸಂಬಂಧಿಸಿದ ವಿಧಾನಸಭಾ ಸದಸ್ಯರು

b)

ತಾಲೂಕಿನ ವಿಸ್ತರಣಾಧಿಕಾರಿಗಳು

c)

ವ್ಯವಸ್ಥಾಪಕ ನಿರ್ದೇಶಕರು ದೇವರಾಜ ಅರಸ್ ಅಭಿವೃದ್ಧಿ ನಿಗಮ

d)

ಜಿಲ್ಲೆಯ ಜಿಲ್ಲಾಧಿಕಾರಿಗಳು

100.

ಬಾಲಕರಿಗೆ ( ನಿರ್ಮಲ ಕಿಟ್ ) ಹಾಗೂ ಬಾಲಕಿಯರಿಗೆ ( ಸಿರಿಗಂಧ ಕಿಟ್ ) ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ ಲಿಮಿಟೆಡ್ ಸಂಸ್ಥೆ ವಿತರಿಸುತ್ತಿದ್ದು ಅವುಗಳ ವೆಚ್ಚ ಅನುಕ್ರಮವಾಗಿ

a)

126 ಮತ್ತು 144

b)

110 ಮತ್ತು 138

c)

100 ಮತ್ತು 120

d)

100 ಮತ್ತು 130

101.

ಉತ್ತರ ಕರ್ನಾಟಕದ ಯಾವ ಎರಡು ಸ್ಥಳಗಳಲ್ಲಿ ಸೈನಿಕ ತರಬೇತಿ ಕೇಂದ್ರ ಸ್ಥಾಪಿಸಲು ತಿರ್ಮಾನ ಮಾಡಲಾಗಿದೆ

a)

ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಗುಲ್ಬರ್ಗ

b)

ರಾಯಚೂರು ಮತ್ತು ಬಳ್ಳಾರಿ

c)

ಬಾಗಲಕೋಟೆ ಮತ್ತು ವಿಜಯಪುರ

d)

ಯಾದಗಿರಿ ಮತ್ತು ಸಿಂಧನೂರು