NEW
Font size
Worksheetsರಾಸಾಯನಿಕ ಸಮೀಕರಣಗಳು ಮತ್ತು ಕ್ರಿಯೆಗಳು
Total questions: 10
Worksheet time: 5mins
ನೀರಿನ ವಿದ್ಯುದ್ವಿಭಜನೆಯು ವಿಭಜನೆಯ ಪ್ರತಿಕ್ರಿಯೆಯಾಗಿದೆ. ನೀರಿನ ವಿದ್ಯುದ್ವಿಭಜನೆಯ ಸಮಯದಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಮ್ಲಜನಕ ಅನಿಲಗಳ ಮೋಲ್ ಅನುಪಾತ
1: 1
2: 1
4: 1
1: 2
ಕೆಳಗಿನವುಗಳಲ್ಲಿ ಯಾವುವು ರಾಸಾಯನಿಕ ದ್ವಿ ಸ್ಥಾನಪಲ್ಲಟನೆ ಪ್ರತಿಕ್ರಿಯೆ (ಗಳು)?
(i) Pb + CuCl2 → PbCl2 + Cu
(ii) Na2 SO4 + BaCl2 → BaSO4 + 2NaCl
(iii) C + O2 → CO2
(iv) CH4 + 2O2 → CO2 + 2H2O
(i) ಮತ್ತು (iv)
(ii) ಮಾತ್ರ
(i) ಮತ್ತು (ii)
(iii) ಮತ್ತು (iv)
ಈ ರಾಸಾಯನಿಕ ಕ್ರಿಯೆಯನ್ನು ಸಮದೂಗಿಸಿ Mg + O2 --> MgO
Mg + O2 --> MgO2
2 Mg + O2 -->2 MgO
2 Mg + 2 O2 -->2 MgO
3 Mg + O2 --> 3 MgO
ಚಿಪ್ಸ್ ತಯಾರಕರು ಚಿಪ್ಸ್ ಉತ್ಕರ್ಷಣೆ ಗೊಳ್ಳುವುದನ್ನು ತಡೆಯಲು ಚಿಪ್ಸ್ ನ ಪೊಟ್ಟಣದಲ್ಲಿ ತುಂಬುವ ಅನಿಲ
ಹೈಡ್ರೋಜನ್ ಅನಿಲ
ಕಾರ್ಬನ್ ಡೈಯಾಕ್ಸೈಡ್ ಅನಿಲ
ನೈಟ್ರೋಜೆನ್ ಅನಿಲ
ಸಲ್ಫರ್ ಡೈಆಕ್ಸೈಡ್ ಅನಿಲ
ಉತ್ಕರ್ಷಣೆ ಕ್ರಿಯೆಯೆಂದರೆ
ಆಕ್ಸಿಜನ್ ಅನ್ನು ಬಿಡುಗಡೆ ಮಾಡುವುದು ಅಥವಾ ಹೈಡ್ರೋಜನ್ ಅನ್ನು ಪಡೆಯುವುದು
ಆಕ್ಸಿಜನ್ ಅನ್ನು ಪಡೆದುಕೊಳ್ಳುವುದು ಅಥವಾ ಹೈಡ್ರೋಜನ್ ಅನ್ನು ಕಳೆದುಕೊಳ್ಳುವುದು
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು
ಗಂಧಕದ ಡೈ ಆಕ್ಸೈಡ್ ನೊಂದಿಗೆ ವರ್ತಿಸುವುದು
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ಹೀರಲ್ಪಡುತ್ತದೆಯೋ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು
ಬಹಿರುಷ್ಣಕ ಕ್ರಿಯೆ
ಅಂತರುಷ್ಣಕ ಕ್ರಿಯೆ
ಮೇಲಿನ ಎಲ್ಲವೂ ಸರಿ
ಮೇಲಿನ ಎಲ್ಲವೂ ತಪ್ಪು
ಈ ರಾಸಾಯನಿಕ ಸಮೀಕರಣವನ್ನು ಪೂರ್ಣಗೊಳಿಸಿ CaCO3 (s) →
CaCO3 (s)
CO2 (g)
CaO (s) + CO2 (g)
Ca (s) + CO3 (g)
ಒಂದು ಪ್ರತಿವರ್ತಕ ದಿಂದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಉತ್ಪನ್ನಗಳು ಉತ್ಪತ್ತಿಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆನ್ನುವರು.
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
ಒಂದು ರಾಸಾಯನಿಕ ಕ್ರಿಯೆಯಲ್ಲಿ ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ಸೇರಿ ಒಂದೇ ಉತ್ಪನ್ನ ಉಂಟಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ಹೀಗೆ ಕರೆಯುತ್ತಾರೆ?
ವಿಭಜನೆ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಸಂಯೋಗ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಒಂದು ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಅರ್ಥೈಸಬೇಕಾದರೆ ಅಲ್ಲಿ
ವಸ್ತುವಿನ ಸ್ಥಿತಿ ಬದಲಾವಣೆಯಾಗಿರಬೇಕು
ವಸ್ತುವಿನ ಬಣ್ಣದಲ್ಲಿ ಬದಲಾವಣೆಯಾಗಿರಬೇಕು
ವಸ್ತುವಿನ ತಾಪದಲ್ಲಿ ಬದಲಾವಣೆಯಾಗಿರಬೇಕು
ಈ ಮೇಲಿನ ಎಲ್ಲವೂ
