Worksheetsರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Total questions: 47
Worksheet time: 18mins
ಈ ಕೆಳಗಿನವುಗಳಲ್ಲಿ ರಾಸಾಯನಿಕ ಬದಲಾವಣೆಗೆ ಉದಾಹರಣೆ
ಕಾಗದ ತುಂಡರಿಸುವುದು
ನೀರಿನಲ್ಲಿ ಉಪ್ಪು ಕರಗುವುದು
ಕಬ್ಬಿಣ ತುಕ್ಕು ಹಿಡಿಯುವುದು
ನೀರು ಕುದಿಯುವುದು
ಈ ಕೆಳಗಿನವುಗಳಲ್ಲಿ ಇದು ರಾಸಾಯನಿಕ ಕ್ರಿಯೆಯ ಲಕ್ಷಣವಲ್ಲ
ಅನಿಲ ಬಿಡುಗಡೆ
ಬಣ್ಣ ಬದಲಾವಣೆ
ಉಷ್ಣ ಬಿಡುಗಡೆ
ಆಕಾರ ಬದಲಾವಣೆ
Fe2O3 + Al -----------> Al2O3 + Fe
ಈ ಮೇಲಿನ ರಾಸಾಯನಿಕ ಕ್ರಿಯೆಯು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ ?
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಕೆಳಗಿನವುಗಳಲ್ಲಿ ಪರಸ್ಪರ ವರ್ತಿಸಿ ಅಯಾನುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಪ್ರಕ್ಷೇಪವನ್ನು
ಉಂಟುಮಾಡುವ ಪ್ರತಿವರ್ತಕಗಳ ಗುಂಪು
BaCl2 ಮತ್ತು Na2SO4
Al2O3 ಮತ್ತು HCl
NaOH ಮತ್ತು H2SO4
Na2O ಮತ್ತು CO2
ವಿದ್ಯುತ್ ವಿಭಜನೆಯಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಅನಿಲಗಳು ಉಂಟಾಗುವ ಕ್ರಿಯೆಯು
ಅಂತರುಷ್ಣಕ ಕ್ರಿಯೆ
ರೆಡಾಕ್ಸ್ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಪ್ರತಿವರ್ತಕಗಳು ತಮ್ಮ ಅಯಾನುಗಳನ್ನು ಪರಸ್ಪರ ಬದಲಾಯಿಸಿಕೊಳ್ಳುವ ರಾಸಾಯನಿಕ ಕ್ರಿಯೆ
ವಿಭಜನ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
CuO + H2 —----> Cu + H2O
ಈ ಕ್ರಿಯೆಯಲ್ಲಿ ಉತ್ಕರ್ಷಣೆ ಮತ್ತು ಅಪಕರ್ಷಣೆಗೆ ಒಳಗಾದ ಪ್ರತಿವರ್ತಕಗಳು ಕ್ರಮವಾಗಿ
CuO ಮತ್ತು H2
H2O ಮತ್ತು Cu
H2 ಮತ್ತು CuO
Cu ಮತ್ತು H2O
ಬೆಳ್ಳಿಯ ಕ್ಲೋರೈಡನ್ನು ಸೂರ್ಯನ ಬೆಳಕಿನಲ್ಲಿ ತೆರೆದಿಟ್ಟಾಗ ಬೂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ
ಬೆಳ್ಳಿಯ ಕ್ಲೋರೈಡ್ ಅಪಕರ್ಷಣೆ ಹೊಂದುತ್ತದೆ.
ಬೆಳ್ಳಿಯ ಕ್ಲೋರೈಡ್ ವಿಭಜನೆಗೊಂಡು ಬೆಳ್ಳಿ ಉಂಟಾಗುತ್ತದೆ.
ಬೆಳ್ಳಿಯ ಕ್ಲೋರೈಡ್ ಉತ್ಕರ್ಷಣೆ ಹೊಂದುತ್ತದೆ.
ಬೆಳ್ಳಿಯ ಕ್ಲೋರೈಡ್ ವಿಭಜನೆಗೊಂಡು ಕ್ಲೋರಿನ್ ಉಂಟಾಗುತ್ತದೆ.
ನೀರಿನ ವಿದ್ಯುತ್ ವಿಭಜನೆ ಕ್ರಿಯೆಯಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಕ್ಸಿಜನ್ ಅನಿಲಗಳ ಪ್ರಮಾಣ
2 : 1
1 : 2
3 : 2
2 : 3
ಸಸ್ಯಜನ್ಯ ದ್ರವ್ಯಗಳ ವಿಘಟನೆಯಿಂದ ಕಾಂಪೋಸ್ಟ್ ಉಂಟಾಗುವುದು ಈ ಕ್ರಿಯೆಗೆ ಉದಾಹರಣೆಯಾಗಿದೆ
ಅಂತರುಷ್ಣಕ ಕ್ರಿಯೆ
ರೆಡಾಕ್ಸ್ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಅಪಕರ್ಷಣ ಕ್ರಿಯೆ
ನೀರಿನ ವಿದ್ಯುದ್ವಿಭಜನೆ ಕ್ರಿಯೆಯಲ್ಲಿ ಕ್ಯಾಥೋಡ್ ನಲ್ಲಿ ಬಿಡುಗಡೆಯಾಗುವ ಅನಿಲ
ಹೈಡ್ರೋಜನ್
ನೈಟ್ರೋಜನ್
ಕ್ಲೋರಿನ್
ಆಕ್ಸಿಜನ್
ಕೆಳಗಿನವುಗಳಲ್ಲಿ ಜರುಗಬಹುದಾದ ರಾಸಾಯನಿಕ ಕ್ರಿಯೆಯನ್ನು ಗುರುತಿಸಿ.
FeSO4 + Pb —------> PbSO4 + Fe
ZnSO4 + Fe —----> FeSO4 + Zn
AgNO3 + Cu —-----> Cu(NO3)2 + Ag
FeSO4 + Cu —-----> CuSO4 + Pb
ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ
ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್ ಉಂಟಾಗುತ್ತದೆ.
ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ.
ಯಾವುದೇ ಕ್ರಿಯೆ ನಡೆಯುವುದಿಲ್ಲ.
ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತದೆ.
ಈ ಕೆಳಗಿನವುಗಳಲ್ಲಿ ಯಾವುದು ತಾಮ್ರದ ಸಲ್ಫೇಟಿನಿಂದ ತಾಮ್ರವನ್ನು ಸ್ಥಾನಪಲ್ಲಟಗೊಳಿಸುವ ಲೋಹ
ಸತು
ಪಾದರಸ
ಚಿನ್ನ
ಬೆಳ್ಳಿ
ಕಬ್ಬಿಣದ ಸಲ್ಫೇಟ್ ಹರಳುಗಳನ್ನು ಕಾಯಿಸಿದಾಗ ಹಸಿರು ಬಣ್ಣವನ್ನು ಕಳೆದುಕೊಳ್ಳುತ್ತವೆ. ಏಕೆಂದರೆ ಈ ಸಂಯುಕ್ತವು
ಸರಳ ಸಂಯುಕ್ತಗಳಾಗಿ ವಿಭಜನೆ ಹೊಂದುತ್ತವೆ.
ಸಲ್ಫರ್ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ.
ನೀರಿನ ಅಣುಗಳನ್ನು ಕಳೆದುಕೊಳ್ಳುತ್ತದೆ.
ಕಂದು ಬಣ್ಣದ ಧೂಮವನ್ನು ಉತ್ಪತ್ತಿ ಮಾಡುತ್ತದೆ.
ಚಿಪ್ಸ್ ತಯಾರಕರು ಚಿಪ್ಸ್ ಪಟ್ಟಣಗಳಲ್ಲಿ ನೈಟ್ರೋಜನ್ ನಂತಹ ಅನಿಲ ಹಾಯಿಸಲು ಕಾರಣ ಚಿಪ್ಸ್ ನ
ಕಮಟುವಿಕೆ ಮಾಡಲು
ಸಂಕ್ಷಾರಣ ತಡೆಗಟ್ಟಲು
ಅಪಕರ್ಷಣೆ ತಡೆಗಟ್ಟಲು
ಉತ್ಕರ್ಷಣೆ ತಡೆಗಟ್ಟಲು
ಈ ಕೆಳಗಿನವುಗಳಲ್ಲಿ ರಾಸಾಯನಿಕ ಕ್ರಿಯೆಗೆ ಉದಾಹರಣೆ
ಕಟ್ಟಿಗೆಯನ್ನು ತುಂಡರಿಸುವುದು
ಮಂಜುಗಡ್ಡೆ ಕರಗುವುದು
ದಹನಕ್ರಿಯೆ
ಸಾಂದ್ರೀಕರಣ
ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ವಸ್ತುಗಳ ರಾಸಾಯನಿಕ ಸಂಕೇತ ಮತ್ತು ಸೂತ್ರಗಳನ್ನು ಬಳಸಿ ಸಂಕ್ಷಿಪ್ತವಾಗಿ ಬರೆಯುವ ವಿಧಾನ
ರಾಸಾಯನಿಕ ಸಮೀಕರಣ
ಬಹಿರುಷ್ಣಕ ಕ್ರಿಯೆ
ರಾಸಾಯನಿಕ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಮೆಗ್ನೀಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮುನ್ನ ಮರಳು ಕಾಗದದಿಂದ ಸ್ವಚ್ಛಗೊಳಿಸಬೇಕು ಏಕೆಂದರೆ
ಮೆಗ್ನೀಷಿಯಂ ಪಟ್ಟಿಯನ್ನು ಹೊಳೆಯುವಂತೆ ಮಾಡಲು
ಶುದ್ಧ ಉತ್ಪನ್ನವನ್ನು ಪಡೆಯಲು
ಮೆಗ್ನೀಷಿಯಂ ಪಟ್ಟಿಯನ್ನು ಪುಡಿ ಮಾಡಿ ಉರಿಸಲು
ಆಕ್ಸೈಡ್ ಪದರವು ಮೆಗ್ನೀಷಿಯಂ ಪಟ್ಟಿ ದಹಿಸಲು ಅಡ್ಡಿ ಉಂಟು ಮಾಡುತ್ತದೆ.
ಬೆಳ್ಳಿಯ ಕ್ಲೋರೈಡನ್ನು ಸೂರ್ಯನ ಬೆಳಕಿನಲ್ಲಿ ತೆರೆದಿಟ್ಟಾಗ ಬೂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ
ಬೆಳ್ಳಿಯ ಕ್ಲೋರೈಡ್ ವಿಭಜನೆಗೊಂಡು ಬೆಳ್ಳಿ ಉಂಟಾಗುತ್ತದೆ.
ಬೆಳ್ಳಿಯ ಕ್ಲೋರೈಡ್ ಉತ್ಕರ್ಷಣೆ ಹೊಂದುತ್ತದೆ.
ಬೆಳ್ಳಿಯ ಕ್ಲೋರೈಡ್ ವಿಭಜನೆಗೊಂಡು ಕ್ಲೋರಿನ್ ಉಂಟಾಗುತ್ತದೆ.
ಬೆಳ್ಳಿಯ ಕ್ಲೋರೈಡ್ ಅಪಕರ್ಷಣೆ ಹೊಂದುತ್ತದೆ
ಈ ನಿಯಮದ ಪ್ರಕಾರ ಪ್ರತಿವರ್ತಕಗಳ ಒಟ್ಟು ರಾಶಿಯು ಉತ್ಪನ್ನಗಳ ಒಟ್ಟು ರಾಶಿಗೆ ಸಮವಾಗಿರಬೇಕು.
ಸಂವೇಗ ಸಂರಕ್ಷಣಾ ನಿಯಮ
ರಾಶಿ ಸಂರಕ್ಷಣಾ ನಿಯಮ
ಶಕ್ತಿ ಸಂರಕ್ಷಣಾ ನಿಯಮ
ಇಲ್ಲಿನ ಎಲ್ಲವೂ
ಈ ಕೆಳಗಿನವುಗಳಲ್ಲಿ ಬಹಿರುಷ್ಣಕ ಕ್ರಿಯೆಗೆ ಉದಾಹರಣೆ
ಉಸಿರಾಟ ಕ್ರಿಯೆ
ಸಸ್ಯಜನ್ಯ ವಸ್ತುಗಳಿಂದ ಕಾಂಪೋಸ್ಟ್ ಉಂಟಾಗುವಿಕೆ
ನೀರನ್ನು ಆಮ್ಲಕ್ಕೆ ಸೇರಿಸುವುದು.
ಇಲ್ಲಿನ ಎಲ್ಲವೂ
ನೀರಿನಲ್ಲಿ ಕರಗದ ಉತ್ಪನ್ನಗಳನ್ನು ಉಂಟುಮಾಡುವ ರಾಸಾಯನಿಕ ಕ್ರಿಯೆ
ಸಂಕ್ಷಾರಣ ಕ್ರಿಯೆ
ಪ್ರಕ್ಷೇಪನ ಕ್ರಿಯೆ
ಅಪಕರ್ಷಣ ಕ್ರಿಯೆ
ಉತ್ಕರ್ಷಣ ಕ್ರಿಯೆ
ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಯಲು ಬಳಸುವ ವಿಧಾನ
ಬಣ್ಣ ಬಳಿಯುವುದು
ಗ್ರೀಸ್ ಹಚ್ಚುವುದು
ದ್ರವ ಡಾಂಬರಿನಲ್ಲಿ ಅದ್ದುವುದು
ಇಲ್ಲಿನ ಎಲ್ಲವೂ
ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳು ಉತ್ಕರ್ಷಣೆಗೊಂಡು ತಮ್ಮ ವಾಸನೆ ಮತ್ತು ರುಚಿಯನ್ನು ಬದಲಿಸಿಕೊಳ್ಳುವ ಪ್ರಕ್ರಿಯೆ
ಸಂಕ್ಷಾರಣ
ಕಮಟುವಿಕೆ
ಪ್ರಕ್ಷೇಪನ
ನಶಿಸುವಿಕೆ
ಕೆಳಗಿನವುಗಳಲ್ಲಿ ಕಮಟುವಿಕೆಯನ್ನು ತಡೆಗಟ್ಟುವ ವಿಧಾನ
ಪ್ರತಿ ಅಪಕರ್ಷಣಕಾರಿಗಳ ಬಳಕೆ
ಗಾಳಿಯಾಡುವ ಡಬ್ಬಿಗಳಲ್ಲಿ ಸಂಗ್ರಹಿಸುವುದು
ಪ್ರತಿ ಉತ್ಕರ್ಷಣಕಾರಿಗಳ ಬಳಕೆ
ಬಣ್ಣ ಬಳಿಯುವುದು
ಸೋಡಿಯಂ ಸಲ್ಫೇಟ್ ಮತ್ತು ಬೇರಿಯಂ ಕ್ಲೋರೈಡ್ ಪರಸ್ಪರ ವರ್ತಿಸಿದಾಗ ಬೇರಿಯಂ ಸಲ್ಫೇಟ್ ಎಂಬ ಬಿಳಿ ಪ್ರಕ್ಷೇಪ ಉಂಟಾಗುತ್ತದೆ. ಈ ಪ್ರಕ್ಷೇಪ ಉಂಟಾಗಲು ಕಾರಣವಾದ ಅಯಾನುಗಳು
ಸಲ್ಫೇಟ್ ಮತ್ತು ಬೇರಿಯಂ
ಸೋಡಿಯಂ ಮತ್ತು ಬೇರಿಯಂ
ಸಲ್ಫೇಟ್ ಮತ್ತು ಕ್ಲೋರಿನ್
ಸೋಡಿಯಂ ಮತ್ತು ಸಲ್ಫೇಟ್
ಸುಟ್ಟ ಸುಣ್ಣ ಇದರ ರಾಸಾಯನಿಕ ಹೆಸರು
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಕ್ಯಾಲ್ಸಿಯಂ ಆಕ್ಸೈಡ್
ಕ್ಯಾಲ್ಸಿಯಂ ಕಾರ್ಬೊನೇಟ್
ಕ್ಯಾಲ್ಸಿಯಂ ಹೈಡ್ರೋಜನ್ ಕಾರ್ಬೊನೇಟ್
ಈ ಕೆಳಗಿನವುಗಳಲ್ಲಿ ರಾಸಾಯನಿಕ ಸಂಯೋಗ ಕ್ರಿಯೆಗೆ ಉದಾಹರಣೆ
ಕ್ಯಾಲ್ಸಿಯಂ ಕಾರ್ಬೊನೇಟ್ ಅನ್ನು ಕಾಯಿಸುವುದು
ಮೆಗ್ನೀಷಿಯಂ ತಂತಿಯನ್ನು ಗಾಳಿಯಲ್ಲಿ ಉರಿಸುವುದು
ಬೆಳ್ಳಿಯ ಕ್ಲೋರೈಡನ್ನು ಬೆಳಕಿಗೆ ಇಡುವುದು
ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಇಡುವುದು
ರಾಸಾಯನಿಕ ಕ್ರಿಯೆ ನಡೆದಿದೆ ಎಂಬುದನ್ನು ನಿರ್ಧರಿಸುವ ಅಂಶಗಳು
ತಾಪ ಬದಲಾವಣೆ
ಅನಿಲ ಬಿಡುಗಡೆ
ಬಣ್ಣ ಬದಲಾವಣೆ
ಇಲ್ಲಿನ ಎಲ್ಲವೂ
ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ವರ್ತಿಸಿ ಒಂದೇ ಉತ್ಪನ್ನ ಉಂಟು ಮಾಡುವ ರಾಸಾಯನಿಕ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ಉಂಟಾಗುವ ಕಬ್ಬಿಣದ ಸಲ್ಫೇಟ್ ದ್ರಾವಣದ ಬಣ್ಣ
ತಿಳಿ ನೀಲಿ
ತಿಳಿ ಹಳದಿ
ತಿಳಿ ಕೆಂಪು
ತಿಳಿ ಹಸಿರು
ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ಉಂಟಾಗುವ ಕಬ್ಬಿಣದ ಸಲ್ಫೇಟ್ ದ್ರಾವಣ ಉಂಟಾಗುತ್ತದೆ. ಇಲ್ಲಿ ದ್ರಾವಣದ ಬಣ್ಣದ ಬದಲಾವಣೆ
ಗಾಢ ನೀಲಿಯಿಂದ
ತಿಳಿ ಹಸಿರು
ತಿಳಿ ಹಸಿರು ಬಣ್ಣದಿಂದ ತಿಳಿ ನೀಲಿ
ಹಳದಿಯಿಂದ
ತಿಳಿ ಹಸಿರು
ಗಾಢ ಕೆಂಪು ಬಣ್ಣದಿಂದ ತಿಳಿ ನೀಲಿ
ಸೀಸದ ನೈಟ್ರೇಟ್ ದ್ರಾವಣಕ್ಕೆ ಪೊಟ್ಯಾಶಿಯಂ ಅಯೋಡೈಡ್ ದ್ರಾವಣವನ್ನು ಸೇರಿಸಿದಾಗ ಉಂಟಾಗುವ ಹಳದಿ ಬಣ್ಣದ ಪ್ರಕ್ಷೇಪ
ಪೊಟ್ಯಾಷಿಯಂ ನೈಟ್ರೇಟ್
ಸೀಸದ ಅಯೋಡೈಡ್
ಸೀಸದ ನೈಟ್ರೇಟ್
ಪೊಟ್ಯಾಷಿಯಂ ಅಯೋಡೈಡ್
ಸೀಸದ ನೈಟ್ರೇಟ್ ಕಾಯಿಸಿದಾಗ ಬಿಡುಗಡೆಯಾಗುವ ಕಂದು ಬಣ್ಣದ ಧೂಮ
ಸೀಸದ
ಆಕ್ಸೈಡ್
ನೈಟ್ರೋಜನ್
ಆಕ್ಸೈಡ್
ಕಾರ್ಬನ್
ಡೈ ಆಕ್ಸೈಡ್
ನೈಟ್ರೋಜನ್
ಡೈ ಆಕ್ಸೈಡ್
ಒಂದು ಪ್ರತಿವರ್ತಕದಿಂದ ಎರಡು ಅಥವಾ ಹೆಚ್ಚು ಉತ್ಪನ್ನಗಳು ಉಂಟಾಗುವ ರಾಸಾಯನಿಕ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಹೆಚ್ಚು ಕ್ರಿಯಾಶೀಲ ಧಾತು ತನಗಿಂತ ಕಡಿಮೆ ಕ್ರಿಯಾಶೀಲ ಧಾತುವನ್ನು ಸಂಯುಕ್ತದಿಂದ ಪಲ್ಲಟಗೊಳಿಸುವ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
NaSO4 + BaCl2 —--------> BaSO4 + NaCl
ಇದು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ನಡೆಯುವ ರಾಸಾಯನಿಕ ಕ್ರಿಯೆಯ ವಿಧ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಕಾಯಿಸಿದಾಗ ಬಿಡುಗಡೆಯಾಗುವ ಅನಿಲ
ಹೈಡ್ರೋಜನ್
ಕಾರ್ಬನ್ ಮೋನಾಕ್ಸೈಡ್
ಕಾರ್ಬನ್
ಡೈ ಆಕ್ಸೈಡ್
ಕ್ಲೋರಿನ್
X ಎಂಬ ಧಾತುವನ್ನು ಗಾಳಿಯಲ್ಲಿ ಕಾಯಿಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಾಗಾದರೆ X ಧಾತು ಮತ್ತು ಕಪ್ಪು ಬಣ್ಣದ ವಸ್ತು ಯಾವುದು ?
ತಾಮ್ರ ಮತ್ತು ತಾಮ್ರದ ಹೈಡ್ರಾಕ್ಸೈಡ್
ತಾಮ್ರ ಮತ್ತು ತಾಮ್ರದ ಆಕ್ಸೈಡ್
ಬೆಳ್ಳಿ ಮತ್ತು ಬೆಳ್ಳಿಯ ಸೆಲ್ಫೇಟ್
ತಾಮ್ರ ಮತ್ತು ತಾಮ್ರದ ಕಾರ್ಬೊನೇಟ್
ಕ್ಯಾಲ್ಸಿಯಂ ಆಕ್ಸೈಡ್ ನೀರಿನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನ
CaCO3
CaO
Ca(HCO3)2
Ca(OH)2
ತಾಮ್ರ ಮತ್ತು X ಧಾತುವಿನ ಪ್ರತಿವರ್ತನೆಯನ್ನು ನೀಡಲಾಗಿದೆ. X ಮತ್ತು Y ಗಳು ಕ್ರಮವಾಗಿ
CuSO4 + X -----------> Cu + Y
Ag ಮತ್ತು AgSO4
Fe ಮತ್ತು FeSO4
Ag ಮತ್ತು FeSO4
Fe ಮತ್ತು Fe(NO3)2
ಈ ಕೆಳಗಿನ ಯಾವ ವಸ್ತುಗಳನ್ನು ಸೇರಿಸಿದಾಗ ಜಲವಿಲೀನಗೊಳ್ಳದ ಬಿಳಿ ಪ್ರಕ್ಷೇಪ ಉಂಟಾಗುತ್ತದೆ
ಸತು ಮತ್ತು
ತಾಮ್ರದ ಸೆಲ್ಫೇಟ್
ಸತು ಮತ್ತು
ಸಲ್ಫ್ಯೂರಿಕ್ ಆಮ್ಲ
ಸೋಡಿಯಂ ಹೈಡ್ರಾಕ್ಸೈಡ್
ಮತ್ತು ಹೈಡ್ರೋಕ್ಲೋರಿಕ್ ಆಮ್ಲ
ಸೋಡಿಯಂ ಸಲ್ಫೇಟ್ ಮತ್ತು
ಬೇರಿಯಂ ಕ್ಲೋರೈಡ್
ಗೋಡೆಗೆ ಬಣ್ಣ ಬಳಿಯಲು ಬಳಸುವ ವಸ್ತುವಿನ ದ್ರಾವಣ
Ca(OH)2
CaO
MgO
Mg(OH)2
ಚಿಪ್ಸ್ ಪೊಟ್ಟಣಗಳಲ್ಲಿ ತುಂಬುವ ಅನಿಲ
ಕ್ಲೋರಿನ್
ಕಾರ್ಬನ್ ಡೈ ಆಕ್ಸೈಡ್
ಆಕ್ಸಿಜನ್
ನೈಟ್ರೋಜನ್
ಕಪ್ಪು ಮತ್ತು ಬಿಳುಪು ಛಾಯಾಗ್ರಹಣದಲ್ಲಿ ಬಳಸುವ ಲವಣ
ಕಬ್ಬಿಣದ ಸಲ್ಫೇಟ್
ಬೆಳ್ಳಿಯ ಬ್ರೊಮೈಡ್
ಸತುವಿನ ಕ್ಲೋರೈಡ್
ಮೆಗ್ನೀಷಿಯಂ ಕ್ಲೋರೈಡ್
