Worksheets7(Geo) INDIAN LAND RESOURCES
Total questions: 16
Worksheet time: 8mins
1. ಕಬ್ಬು ಯಾವ ದೇಶದ ಮೂಲ ಬೆಳೆ?
A) ಇಟಲಿ
B) ಜಪಾನ್
C) ಭಾರತ
D) ಈಸ್ರೇಲ್
2. 'ಪುಷ್ಪಕೃಷಿ' ಎಂದರೇನು?
A) ಗೃಹೋಪಯೋಗಕ್ಕಾಗಿ ಮಾತ್ರ ಹೂಗಳನ್ನು ಬೆಳೆಯುವದು
B) ಆರ್ಥಿಕ ಲ್ಲಾಭದ ಉದ್ದೇಶ ಇಲ್ಲದೇ ಹೂ ಬೆಳೆಯುವುದು
C) ಕೇವಲ ಆತ್ಮ ಸಂತೋಷಕ್ಕಾಗಿ ಮಾತ್ರ ಹೂ ಬೆಳೆಯುವುದು.
D) ಮಾರಾಟಕ್ಕಾಗಿ ಹೂವುಗಳನ್ನು ಸಾಗುವಳಿ ಮಾಡುವ ಕಲೆ
3. ಸಾಂದ್ರ ಬೇಸಾಯ ಎಂದರೇನು?
A) ಚಿಕ್ಕ ಭೂಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ.
B) ದೊಡ್ಡ ಭೂಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ.
C) ದೊಡ್ಡ ಭೂಹಿಡುವಳಿಯಲ್ಲಿ ಕಡಿಮೆ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ.
D) ಭೂ ಹಿಡುವಳಿಯಲ್ಲಿ ನೀರಾವರಿ ಕೈಗೊಳ್ಳುವುದು.
4. ಭಾರತವು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಹೇಗೆ?
A) ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಉತ್ತಮ ಬೀಜಗಳ ಲಭ್ಯತೆ ಇದೆ
B) ವಿವಿಧತೆಯಲ್ಲಿ ಏಕತೆ ಹೊಂದಿರುವುದರಿಂದ
C) ವೈವಿಧ್ಯಮಯವಾದ ವಾಯುಗುಣ ಮತ್ತು ಮಣ್ಣುಗಳನ್ನು ಹೊಂದಿರುವುದರಿಂದ
D) ವೈವಿಧ್ಯಮಯವಾದ ಪ್ರದೇಶ ಇರುವುದರಿಂದ
5, ಬಳಕೆಯಾಗದ ಕೃಷಿ ಭೂಮಿ ಹೇಗೆ ನಿರ್ಮಾಣವಾಗುತ್ತದೆ?
A) ನೀರಾವರಿ ಕೊರತೆಯಿಂದ
B) ಭೂ ಮೇಲ್ಪದರದ ರಚನೆ
C) ಮಾನವನ ನಿರ್ಲಕ್ಷದಿಂದ
D) ಮಣ್ಣಿನ ಸಾರದ ಕೊರತೆಯಿಂದಾಗಿ
6. ಮುಂಗಾರು ಋತು : ನೆಲಕಡಲೆ : : ಹಿಂಗಾರು ಋತು : – :
A) ಭತ್ತ
B) ಗೋಧಿ
C) ರಾಗಿ
D) ಕಬ್ಬು
7. ಜೀವನಾಧಾರ ಬೇಸಾಯ ಎಂದರೇನು?
A) ಒಂದು ಕೃಷಿ ಕ್ಷೇತ್ರದಲ್ಲಿ ಹಲವಾರು ಬೆಳೆ ಬೆಳೆಯುವುದು
B) ರೈತ ತನ್ನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ ಪದ್ದತಿಗ ಜೀವನಾಧಾರ ಬೇಸಾಯ ಎನ್ನುವರು.
C) ಆರ್ಥಿಕ ಲಾಭಕ್ಕಾಗಿ ಬೆಳೆ ಬೆಳೆಯುವುದು
D) ಮಾರುವ ಉದ್ದೇಶಕ್ಕಾಗಿ ಬೆಳೆ ಬೆಳೆಯುವುದು
8. ಮಿಶ್ರ ಬೇಸಾಯ ಎಂದರೇನು?
A) ಒಂದು ಕೃಷಿ ಕ್ಷೇತ್ರದಲ್ಲಿ ಒಂದೇ ವೇಳೆಯಲ್ಲಿ ಹಲವಾರು ಬೆಳೆ ಬೆಳೆಯುವುದು
B) ಒಂದು ಕೃಷಿ ಕ್ಷೇತ್ರದಲ್ಲಿ ಹಲವಾರು ಬೆಳೆ ಬೆಳೆಯುವುದು
C) ಬೆಳೆ ಬೆಳೆಯುವುದರ ಜೊತೆಗೆ ಪಶು ಪಾಲನೆ, ಕೋಳಿ ಸಾಕಾಣಿಕೆ ಮುಂತಾದ ಉಪ ಕಸುಬುಗಳನ್ನು ಮಾಡುವುದಕ್ಕೆ.
D)ಬೆಳೆಗಳನ್ನು ಬೆಳೆಯುವುದು
9. ಪಶ್ಚಿಮ ಕರಾವಳಿಯ ಉದ್ದಕ್ಕೂ ಆರ್ದ್ರ ಬೇಸಾಯ ಕಂಡುಬರುತ್ತದೆ. ಏಕೆ?
A) ಉತ್ತಮ ಹವಾಮಾನ.
B) ಹೆಚ್ಚು ಮಳೆ ಬೀಳುವುದರಿಂದ,
C) ಮಣ್ಣು ಉತ್ತಮ ಇದೆ
D) ನೀರಾವರಿಗೆ ಅನುಕೂಲ
10. 'ತೋಟಗಾರಿಕೆ ಬೇಸಾಯ' ಎಂದರೇನು?
A) ಹಣ್ಣು, ತರಕಾರಿ,ಹೂವು,ಔಷದಿಯ&ಅಲಂಕಾರಿಕ ಬೆಳೆಗಳನ್ನು ತೋಟಗಳಲ್ಲಿ ಕ್ರಮಬದ್ಧವಾಗಿ ಬೆಳೆಯುವುದು
B) ಹಣ್ಣು, ತರಕಾರಿ, ಹೂವು, ಔಷದಿಯ & ಅಲಂಕಾರಿಕ ಬೆಳೆಗಳನ್ನು ತೋಟಗಳಲ್ಲಿ ಕ್ರಮಬದ್ಧವಾಗಿ ಬೆಳೆಯದಿರುವುದು
C) ಹೈನುಗಾರಿಕೆಯ ಜೊತೆಗೆ ಕೃಷಿ ಮಾಡುವುದು
D) ಮಾರಾಟ ಮಾಡುವ ಉದ್ದೇಶದಿಂದ ಬೆಳೆಗಳನ್ನು ಬೆಳೆಯುವ ಪದ್ಧತಿ
12. ದೇಶದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಯಾವುದು?
A) ಉತ್ತರ ಪ್ರದೇಶ
B) ಪಶ್ಚಿಮ ಬಂಗಾಳ
C) ಪಂಜಾಬ್
D) ಮಧ್ಯಪ್ರದೇಶ
13. ದೇಶದಲ್ಲಿ ಅತಿ ಹೆಚ್ಚು ಗೋದಿ ಉತ್ಪಾದಿಸುವ ರಾಜ್ಯ ಯಾವುದು?
A) ಪಂಜಾಬ್
B) ಕರ್ನಾಟಕ
C) ಮಹಾರಾಷ್ಟ್ರ
D) ಉತ್ತರ ಪ್ರದೇಶ
14. ಕಬ್ಬಿನ ಉತ್ಪಾದನೆಯಲ್ಲಿ ಯಾವ ದೇಶ ಮುಂಚೂಣಿಯಲ್ಲಿದೆ?
A) ರಷ್ಯ
B) ಚೀನಾ
C) ಬ್ರೆಜಿಲ್
D) ಭಾರತ
14) ನಾರು ಬೇಳೆ ಎಂದರೇನು?
A) ಜವಳಿ ಉದ್ಯಮಗಳಿಗೆ ಅಗತ್ಯವಾದ ಕಚ್ಚಾ ಪದಾರ್ಥ ಪೂರೈಸುವ ಬೆಳೆಗಳು
B) ಪ್ಲಾಸ್ಟಿಕ್ ಉದ್ಯಮಗಳಿಗೆ ಅಗತ್ಯವಾದ ಕಚ್ಚಾ ಪದಾರ್ಥ ಪೂರೈಸುವ ಬೆಳೆಗಳು
C) ತರಕಾರಿ ಬೇಳೆಯುವುದು.
D) ಸೆಣಬು ತಯಾರಿಕೆ
16. ಭಾರತದಲ್ಲಿ ರೂಢಿಯಲ್ಲಿರುವ ಈ ಬೇಸಾಯ ಪದ್ಧತಿಯು ವರ್ಷವಿಡೀ ಸಾಗುವಳಿಗಾಗಿ ಭೂಮಿ ಬಳಕೆ ಮಾಡಿಕೊಳ್ಳುವ ಲಕ್ಷಣವನ್ನು ಹೊಂದಿದೆ.
A) ಸಾಂದ್ರ ಬೇಸಾಯ
B) ಸ್ಥಳಾಂತರ ಬೇಸಾಯ
C) ಸ್ಥಿರ ಬೇಸಾಯ
D) ಜೀವನಾಧಾರ ಬೇಸಾಯ
16, ಚಹಾ ಉತ್ಪಾದನೆಯಲ್ಲಿ ವಿಶ್ವದ ಯಾವ ದೇಶ ಪ್ರಥಮ ಸ್ಥಾನ ಪಡೆದಿದೆ?
A) ದಕ್ಷಿಣ ಆಪ್ರೀಕಾ
B) ಭಾರತ
C) ಚೀನಾ
D) ಬ್ರೆಜಿಲ್
