NEW
Font size
Worksheets11(GEO)INDIAN NATURAL DISASTERS
Total questions: 15
Worksheet time: 8mins
1. ಪರ್ಯಾಯ ದ್ವೀಪ ವಲಯವು ಕನಿಷ್ಠ ಭೂಕಂಪ ತೀವ್ರತೆಯ ವಲಯವಾಗಿದೆ. ಏಕೆ?
A ) ಭೂಮಿಯ ಆಕಾರ .
B) ಚಲನವಾದ ಭೂಭಾಗವನ್ನು ಹೊಂದಿದೆ.
C) ಅಚಲವಾದ ಭೂಭಾಗವನ್ನು ಹೊಂದಿದೆ.
D) ಭೂಮಿ ಮತ್ತು ಸೂರ್ಯನ ನಡುವಿನ ಅಂತರ.
2. ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪಕ್ಕೆ ಪ್ರಮುಖ
ಕಾರಣವೇನು?
A )ಮಾನವನ ಕಾರಣದಿಂದ
B) ಭೂಫಲಕಗಳ ಚಲನೆಯಿಂದ.
C) ಭೂಮಿಯ ಗುರುತ್ವಾಕರ್ಷಣ ಕಾರಣದಿಂದ
D) ಆಣೆಕಟ್ಟೆಗಳ ನಿರ್ಮಾಣ
3. ನೈಸರ್ಗಿಕ ವಿಪತ್ತುಗಳು ಎಂದರೇನು?
A ) ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
B) ಮಾನವನ ಕಾರ್ಯದಿಂದ ಆಗುವ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
C) ನೈಸರ್ಗಿಕ ಮತ್ತು ಮಾನವನ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತು
D) ಗ್ರಹಣ ಕಾರ್ಯದಿಂದ ಆಗುವ ಅನಾಹುತಗಳು
4. ಆವರ್ತ ಮಾರುತಗಳೆಂದರೇನು?
A ) ಅಧಿಕ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
B) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಲಿಸುವ ಮಾರುತಗಳು
C) ಕಡಿಮೆ ಒತ್ತಡವು ಅಧಿಕ ಒತ್ತಡದೆಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
D) ಕಡಿಮೆ ಒತ್ತಡವು ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವ ಮಾರುತಗಳು
5. ನದಿ ಪ್ರವಾಹ ಎಂದರೇನು?
A ) ಕೆಲವೊಮ್ಮೆ ಹಳ್ಳಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
B) ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
C) ಕೆಲವೊಮ್ಮೆ ವಿವಿಧ ಕಾರಣಗಳಿಂದ ಕೆರೆಗಳು ತುಂಬಿ ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
D) ಕೆಲವೊಮ್ಮೆ ಕಾಲುವೆಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ
ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ
6. ಭೂಕುಸಿತ ಎಂದರೇನು?
A ) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಮೇಲಕ್ಕೆ ಚಲಿಸುವ ಭೂರಾಶಿ
B) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ
C) ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನ ಭೂ ಭಾಗ
D) ಭೂ ಫಲಕಗಳ ಚಲನೆ
7. ಆವರ್ತ ಮಾರುತಗಳಿಂದ ಅತಿ ಹೆಚ್ಚು ಹಾನಿಗೊಳಗಾಗುವ ಭಾರತದ ರಾಜ್ಯಗಳು ಯಾವುವು?
A ) ಪಶ್ಚಿಮ ಬಂಗಾಳ,ತಮಿಳುನಾಡು,ಕೇರಳ.
B) ಆಂಧ್ರಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ
C) ಓರಿಸ್ಸಾ, ಕರ್ನಾಟಕ, ಚತ್ತೀಸಗಡ
D) ಕರ್ನಾಟಕ, ಕೇರಳ, ತಮಿಳುನಾಡು
8. ಸುನಾಮಿ ಎಂದರೇನು?
A ) ಸಮುದ್ರ ತಳದಲ್ಲಿನ ಖಂಡಾವರಣ ಪ್ರದೇಶ.
B) ಸಮುದ್ರ ತಳದಲ್ಲಿ ಸಂಭವಿಸುವ ಪ್ರವಾಹದ ಅಲೆಗಳು
C) ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದಾಗುವ ಜ್ವಾಲಾಮುಖಿ
D) ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದಾಗುವ ದೈತ್ಯಾಕಾರದ ಅಲೆಗಳು
9. ನದಿಗಳು ನೀರಿನ ಸಂಗ್ರಹಣಾ ಸಾಮರ್ಥವನ್ನು ಕಳೆದುಕೊಳ್ಳುತ್ತಿವೆ. ಏಕೆ?
A ) ಪ್ರವಾಹಗಳಿಂದ ನದಿಗಳು ಹೂಳು ತುಂಬುವುದರಿಂದ
B) ಮಳೆಯ ಪ್ರಮಾಣ ಕಡಿಮೆಯಾಗಿರುವದರಿಂದ
C) ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವದರಿಂದ
D) ನದಿಗಳ ದಂಡೆಯನ್ನು ಅತಿಕ್ರಮಣ ಮಾಡಿರುವದರಿಂದ
10. ಕನಿಷ್ಟ ಭೂಕಂಪ ತೀವ್ರತೆಯ ವಲಯ ಯಾವುದು?
A ) ಉತ್ತರ ಮೈದಾನ ಪ್ರದೇಶ
B) ಹಿಮಾಲಯ ಪ್ರದೇಶ
C) ಅರಾವಳಿ ಬೇಟ್ಟ ಪ್ರದೇಶ
D) ಪರ್ಯಾಯ ದ್ವೀಪವಲಯ
11. ಗರಿಷ್ಟ ಭೂಕಂಪ ತೀವ್ರತೆಯ ವಲಯ ಯಾವುದು?
A ) ಪಶ್ಚಿಮ ಘಟ್ಟ ವಲಯ
B) ಹಿಮಾಲಯ ವಲಯ
C) ಅಂಡಮಾನ್ ನಿಕೋಬಾರ್ ವಲಯ
D) ಮಲಬಾರ್ ತೀರ ವಲಯ
12. ಸಾಮಾನ್ಯವಾಗಿ ಉಷ್ಣವಲಯದ ಆವರ್ತ ಮಾರುತಗಳು ಯಾವ ತಿಂಗಳುಗಳಲ್ಲಿ ಹೆಚ್ಚಾಗಿ ಸಂಭವಿಸುತ್ತವೆ?
A ) ಮೇ-ಜೂನ್
B) ಮಾರ್ಚ್- ಎಪ್ರೀಲ್
C) ಅಕ್ಟೋಬರ್-ನವಂಬರ್
D) ನವೆಂಬರ್-ಡಿಸೆಂಬರ್
13 ಆವರ್ತ ಮಾರುತಗಳು ಅಪರೂಪಕ್ಕೊಮ್ಮೆ ಯಾವ ತಿಂಗಳುಗಳಲ್ಲಿ
ಸಂಭವಿಸುತ್ತವೆ?
A ) ಮಾರ್ಚ್ -ಎಪ್ರೀಲ್
B) ಮೇ-ಜೂನ್
C) ಜನೆವರಿ-ಫೆಬ್ರವರಿ
D) ನವೆಂಬರ್-ಡಿಸೆಂಬರ್
14. ನೈಸರ್ಗಿಕ ವಿಪತ್ತಿಗೆ ಕಾರಣವಾದ ಭೂ ಅಂತರಿಕ ಶಕ್ತಿಗಳಾವುವು?
A ) ಭೂಕಂಪ, ಜ್ವಾಲಾಮುಖಿ, ಅಗ್ನಿ ಅನಾಹುತ.
B) ಭೂಕುಸಿತ, ಸುನಾಮಿ,ಗಣಿಗಾರಿಕೆ,ಮರಮುಟ್ಟು
C) ಭೂಕಂಪ, ಜ್ವಾಲಾಮುಖಿ, ಭೂಕುಸಿತ, ಸುನಾಮಿ
D) ಜ್ವಾಲಾಮುಖಿ, ಭೂಕುಸಿತ,ಅಣೆಕಟ್ಟು,
15. ವಾಯುಗೋಳಕ್ಕೆ ಸಂಬಂಧಿಸಿದ ನೈಸರ್ಗಿಕ ವಿಪತ್ತುಗಳು ಯಾವುವು?
A ) ಮಾರುತ, ಬರಗಾಲ, ಸಾಗರ ಪ್ರವಾಹ
B) ಮಳೆ, ಹಿಮ, ಶಿಲೆ.
C) ಬರಗಾಲ, ಶುಭಗಾಲ, ಮಳೆಗಾಳ
D) ಆವರ್ತ ಮಾರುತ, ಬರಗಾಲ, ಪ್ರವಾಹ
