wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣಾಂಶ:- ಸಮಾಸಗಳು

Total questions: 10

Worksheet time: 2mins

Name
Class
Date
1.

ಎರಡು ಅಥವಾ ಅನೇಕ ಪದಗಳು ಪ್ರಧಾನವಾಗಿರುವ ಸಮಾಸ.

a)

ಬಹುವ್ರೀಹಿ ಸಮಾಸ

b)

ದ್ವಿಗು ಸಮಾಸ

c)

ದ್ವಂದ್ವ ಸಮಾಸ

d)

ಅಂಶಿ ಸಮಾಸ

2.

ರಾಜಪುತ್ರಿಯ ಅರಮನೆಯಲ್ಲಿ ಚಕ್ರಪಾಣಿಯ ವಿಗ್ರಹವಿದೆ. - ಇಲ್ಲಿ ಬಹುವ್ರೀಹಿ ಸಮಾಸದ ಪದ ಗುರುತಿಸಿ.

a)

ರಾಜಪುತ್ರಿ

b)

ಚಕ್ರಪಾಣಿ

c)

ಅರಮನೆ

d)

ವಿಗ್ರಹ

3.

ಪೂರ್ವಪದದಲ್ಲಿ ಸರ್ವನಾಮ ಇಲ್ಲವೆ ಕೃದಂತವನ್ನು ಹೊಂದಿರುವ ಸಮಾಸ.

a)

ಕ್ರಿಯಾ ಸಮಾಸ

b)

ತತ್ಪುರುಷ ಸಮಾಸ

c)

ಗಮಕ ಸಮಾಸ

d)

ದ್ವಂದ್ವ ಸಮಾಸ

4.

"ಮೈ ಕೊಡವಿ " - ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.

a)

ಗಮಕ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾ ಸಮಾಸ

d)

ಕರ್ಮಧಾರಯ ಸಮಾಸ

5.

ಬೇರೊಂದು ಪದದ ಅರ್ಥ ಪ್ರಧಾನವಾಗಿರುವ ಸಮಾಸವನ್ನು ಗುರುತಿಸಿ.

a)

ದ್ವಿಗು ಸಮಾಸ

b)

ಅಂಶಿ ಸಮಾಸ

c)

ಬಹುವ್ರೀಹಿ ಸಮಾಸ

d)

ಕ್ರೀಯಾ ಸಮಾಸ

6.

ವಿಶೇಷಣ - ವಿಶೇಷ್ಯ ಸಂಬಂಧದಿಂದ ಕೂಡಿದ ಪದವನ್ನುಮತ್ತು ಸಮಾಸವನ್ನು ಹೆಸರಿಸಿ.

a)

ನೆಲಮುಗಿಲು -ದ್ವಂದ್ವ ಸಮಾಸ

b)

ತಂಗಾಳಿ - ಕರ್ಮಧಾರಯ ಸಮಾಸ

c)

ಉಡಿತುಂಬು - ಕರ್ಮಧಾರಯ ಸಮಾಸ

d)

ಆ ಹುಡುಗಿ - ಗಮಕ ಸಮಾಸ

7.

ಒಗ್ಗಟ್ಟು - ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಅಂಶಿ ಸಮಾಸ

b)

ದ್ವಿಗು ಸಮಾಸ

c)

ಕ್ರಿಯಾ ಸಮಾಸ

d)

ಗಮಕ ಸಮಾಸ

8.

ಕೆಳಗಿನ ಯಾವ ಪದ ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ?

a)

ನಡುಮನೆ

b)

ಒಗ್ಗಟ್ಟು

c)

ಹೆಜ್ಜೇನು

d)

ಉಡಿತುಂಬು

9.

ಪೂರ್ವ ಪದವು ಸಂಖ್ಯಾವಾಚಕವಾಗಿರುವ ಸಮಾಸವನ್ನು ಗುರುತಿಸಿ.

a)

ಕ್ರಿಯಾ ಸಮಾಸ

b)

ದ್ವಂದ್ವ ಸಮಾಸ

c)

ದ್ವಿಗು ಸಮಾಸ

d)

ಅಂಶಿ ಸಮಾಸ

10.

ಕೆಳಗಿನ ಯಾವ ಪದ ಗಮಕ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಇಮ್ಮಡಿ

b)

ಪದ್ಮಾಸನ

c)

ಕೆಂಗುಲಾಬಿ

d)

ಮಾಡಿದಡಿಗೆ

Similar Resources on Wayground