wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ-2 ( ಯುದ್ಧ)

Total questions: 50

Worksheet time: 25mins

Name
Class
Date
1.
ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿದ್ದನು?
a)
ವೈದ್ಯ ಉಡುಪು
b)
ಸೈನಿಕ ಉಡುಪು
c)
ಸಾಮಾನ್ಯ ಉಡುಪು
d)
ಪೋಲಿಸ್ ಉಡುಪು
2.
ನೀರಿನಲ್ಲಿ ಈಜ ತೊಡಗಿದಾಗ ರಾಹಿಲ್‍ನಿಗೆ ಸಮೀಪದಲ್ಲಿಯೇ ತೀರವಿರುವುದನ್ನು ಪರಿಚಯಿಸಿದ್ದು..?
a)
ಗುಡುಗು
b)
ಮಿಂಚು
c)
ಚಂದ್ರ
d)
ನಕ್ಷತ್ರ
3.
ನಿಟ್ಟುಸಿರು : ದ್ವಿರುಕ್ತಿ : : ಸುಖ ದು:ಖ :___
a)
ಜೋಡುನುಡಿ
b)
ಅನುಕರಣಾವ್ಯಯ
c)
ದ್ವಿರುಕ್ತಿ
d)
ನುಡಿಗಟ್ಟು
4.
ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ' ಎಂದು ಯಾರು ಯಾರಿಗೆ ಕೇಳಿದರು
a)
ಸೈನಿಕರು ರಾಹಿಲನಿಗೆ
b)
ಸೈನಿಕರು ಮುದುಕಿಗೆ
c)
ಸೈನಿಕರು ಸೊಸೆಗೆ
d)
ರಾಹಿಲ ಮುದುಕಿಗೆ
5.
ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು?
a)
ನಾಕ್ ಔಟ್
b)
ಬ್ಲಾಕ್ ಔಟ್
c)
ಸ್ಟಾಕ್ ಔಟ್
d)
ಹಿಟ್ ಔಟ್
6.
ಬೇಗಬೇಗನೆ : ದ್ವಿರುಕ್ತಿ : : ಟಕ್ ಟಕ್ :____
a)
ನುಡಿಗಟ್ಟು
b)
ಜೋಡುನುಡಿ
c)
ದ್ವಿರುಕ್ತಿ
d)
ಅನುಕರಣಾವ್ಯಯ
7.
ರಾಹಿಲ್‍ನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು?
a)
ಒಂದು ಬಾರಿ
b)
ಎರಡು ಬಾರಿ
c)
ಮೂರು ಬಾರಿ
d)
ನಾಲ್ಕು ಬಾರಿ
8.
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು ?
a)
ಯುದ್ಧಕ್ಕೆ
b)
ಇರಸಾಲಿಗೆ
c)
ವರುಣ ಲೋಕಕ್ಕೆ
d)
ಮತಂಗಾಶ್ರಮಕ್ಕೆ
9.
“ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬ್‍ಗಳು, ಬ್ಲಾಕ್ ಔಟ್.” - ಇಲ್ಲಿಯ ಸೂಲಗಿತ್ತಿ ಎಂಬುದು..?
a)
ಕೃದಂತನಾಮ
b)
ತದ್ಧಿತಾಂತನಾಮ
c)
ತದ್ಧಿತಾಂತಾವ್ಯಯ
d)
ತದ್ಧಿತಾಂತ ಭಾವನಾಮ
10.
“ ಯಾಕೆ ? ಎದ್ದು ನಿಲ್ಲಲಾಗುತ್ತಿಲ್ಲವೇ?” - ಈ ಮಾತನ್ನು ಯಾರು ಯಾರಿಗೆ ಹೇಳಿದರು..?
a)
ರಾಹಿಲ್‍ನು - ಮುದುಕಿಗೆ
b)
ಮುದುಕಿಯು - ರಾಹಿಲ್‍ನಿಗೆ
c)
ಮುದುಕಿಯ ಸೊಸೆ - ರಾಹಿಲ್‍ನಿಗೆ
d)
ರಾಹಿಲ್‍ನು - ಮುದುಕಿಯ ಸೊಸೆಗೆ
11.
ರಾಹಿಲ್‍ನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು..?
a)
ಸೊಸೆಯ ನೋವಿನ ಕೂಗು
b)
ವಿಮಾನದ ಶಬ್ದ
c)
ಬಾಂಬ್ ಸ್ಫೋಟ್
d)
ಮೇಲಿನ ಎಲ್ಲವೂ
12.
ಮಗು ಮತ್ತು ಸೊಸೆ ಇಬ್ಬರನ್ನೂ ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲ್‍ನು ಹೇಳಿದನು..?
a)
ಚಿಕಿತ್ಸೆ ನೀಡುವುದು
b)
ಶಸ್ತ್ರ ಚಿಕಿತ್ಸೆ ಮಾಡುವುದು
c)
ಆಸ್ಪತ್ರೆಗೆ ಸೇರಿಸುವುದು
d)
ಹಾಗೆಯೇ ಬಿಡುವುದು
13.
“ಬಾಗಿಲು ತೆರೆಯಬೇಡಿ..” -ಎಂದು ಹೇಳಿದವರು ಯಾರು..?
a)
ಹೊರಗಿನ ಸೈನಿಕರು
b)
ರಾಹಿಲ್
c)
ಮುದುಕಿ
d)
ಮುದುಕಿಯ ಸೊಸೆ
14.
ಮುದುಕಿಯು, ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹಿಲ್‍ನಿಗೆ ಹೇಳಿದಳು..?
a)
25 ವರ್ಷ
b)
50 ವರ್ಷ
c)
60 ವರ್ಷ
d)
75 ವರ್ಷ
15.
ಅಮ್ಮ 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ ' ಎಂದು ಹೇಳಿದವರು.
a)
ರಾಹಿಲ್
b)
ಸಾರಾ ಅಬೂಬಕ್ಕರ್
c)
ಅಶೋಕ ಪೈ
d)
ಶಾನುಭೋಗರು
16.
ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ..?
a)
ಬೇರೆಬೇರೆ ಧರ್ಮ
b)
ಬೇರೆಬೇರೆ ಜಾತಿ
c)
ಬೇರೆಬೇರೆ ದೇಶ
d)
ಬೇರೆಬೇರೆ ಸೀಮೆ
17.
ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ..?
a)
ಮಗನ ಸಾವು
b)
ಗಂಡನ ಸಾವು
c)
ಮೊಮ್ಮಗುವಿನ ಸಾವು
d)
ಮಗಳ ಸಾವು
18.
ಮುದುಕಿಯು, ಹೇಳಿದ ಕೊನೆಯ ಮಾತು ಯಾವುದು?
a)
ಅವನೆಷ್ಟು ಸಂಕಟ ಪಡುತ್ತಾನೋ...
b)
ಯುದ್ಧಕ್ಕೆ ಹೋಗಿದ್ದಾನೆ.
c)
ಮಗನನ್ನು ಸಾಕಿ ಸಲಹಿದೆ.
d)
ಅಷ್ಟರಲ್ಲಿ ಬಂತು ಯುದ್ಧ!
19.
ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು.. ಎಂದು ಮುದುಕಿ ಹೇಳಿಕೊಳ್ಳುತ್ತಾಳೆ..?
a)
ದೇಶ ಸ್ವಾತಂತ್ರ್ಯ
b)
ಮಗುವಿನ ಅಳು
c)
ಹೆಂಡತಿಯ ನಗು
d)
ತಾಯಿಯ ಮಾತು
20.
ಮಳೆಯ ಶಬ್ದವನ್ನು ಭೇದಿಸಿ ರಾಹಿಲ್‍ನ ಕಿವಿಗೆ ನುಗ್ಗಿದ ಶಬ್ದ ಯಾವುದು?
a)
ಮುದುಕಿಯ ವೇದನೆ
b)
ಮಹಿಳೆಯ ಆರ್ತನಾದ
c)
ಮಗುವಿನ ರೋದನೆ
d)
ಸೈನಿಕರ ಘರ್ಜನೆ
21.
ಪ್ರತಿ ಸಾರಿ ಮಿಂಚು ಕಾಣಿಸಿಕೊಂಡಾಗ ರಾಹಿಲ್‍ನಿಗೆ ಕಂಡ ದೃಶ್ಯಗಳು..?
a)
ಸಮುದ್ರದ ತೀರ
b)
ಒಂಟಿ ಮನೆ
c)
ಸಮೀಪದ ಮನೆ
d)
ಮೇಲಿನ ಎಲ್ಲವೂ
22.
“ನಾನೋರ್ವ ಡಾಕ್ಟರ್, ನಾನು ಆಕೆಯನ್ನು ಪರೀಕ್ಷಿಸಲೇ..?”- ಈ ವಾಕ್ಯದ ಸ್ವಾರಸ್ಯ ಹೀಗೆದೆ..
a)
ನೋವಿಗಿಂತ ಸೇವೆ ಮುಖ್ಯ
b)
ಜಗ ದುಃಖ- ನಾನು ಸೌಖ್ಯ
c)
ಸಾಯಿಸುವುದು ಮುಖ್ಯ
d)
ಜನ ಬದುಕುವುದು ಅಮುಖ್ಯ
23.
“ರಾಹಿಲ್‍ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ನಿಷೇಧಾರ್ಥದ ವಾಕ್ಯ
24.
ಸಾಂತ್ವನ : ಸಮಾಧಾನ : : ರೋದನ : ____
a)
ಅಳುವಿಕೆ
b)
ನಗುವಿಕೆ
c)
ಬಾಳುವಿಕೆ
d)
ನೋಡುವಿಕೆ
25.
ಪೈಲಟ್ : ವಿಮಾನ ಚಾಲಕ : : ಗ್ರೌಂಡ್ : ____
a)
ಸ್ವದೇಶ
b)
ವಿದೇಶ
c)
ಆಕಾಶ
d)
ಭೂಪ್ರದೇಶ
26.
ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ
a)
1926
b)
1936
c)
1904
d)
1905
27.
ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರ ಕೃತಿ ಯಾವುದು ಅಲ್ಲ
a)
ಶಬರಿ
b)
ಚಂದ್ರಗಿರಿ ತೀರದಲ್ಲಿ
c)
ತಳ ಒಡೆದ ದೋಣಿಯಲ್ಲಿ
d)
ವಜ್ರಗಳು
28.
ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ..?
a)
ನೃಪತುಂಗ ಪ್ರಶಸ್ತಿ
b)
ಪಂಪ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ
d)
ಭಾರತೀಯ ಭಾಷಾ ಪರಿಷತ್
29.
ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು
a)
ಮುದುಕಿ
b)
ಸೊಸೆ
c)
ರಾಹಿಲ
d)
ಪೈಲೆಟ್
30.
ಸಾರಾ ಅಬೂಬಕ್ಕರ ಅವರ ಜನ್ಮ ಸ್ಥಳ..?
a)
ಶಿಕಾರಿಪುರ
b)
ಕಾಸರಗೋಡ
c)
ಧಾರವಾಡ
d)
ಮೇಲುಕೋಟೆ
31.
ಯುದ್ಧ ಪಾಠದ ಮೌಲ್ಯ ಇದನ್ನು ಎತ್ತಿ ಹಿಡಿಯುತ್ತದೆ..?
a)
ಶಿಕ್ಷಣದ ಮೌಲ್ಯ
b)
ಅಜ್ಞಾನದ ಮೌಲ್ಯ
c)
ಮಾನವೀಯ ಮೌಲ್ಯ
d)
ದ್ವೇಷ
32.
ರಾಹಿಲನು ಯಾರು ?
a)
ವೈದ್ಯ ಸೈನಿಕ
b)
ವಿಮಾನದ ಪೈಲೆಟ್
c)
ಮುದುಕಿಯ ಮಗ
d)
ಮುದುಕಿಯ ತಮ್ಮ
33.
ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ' ಎಂದವರು
a)
ಪೈಲೆಟ್
b)
ಮುದುಕಿ
c)
ರಾಹಿಲ್
d)
ಸೊಸೆ
34.
ದಯವಿಟ್ಟು ಬಾಗಿಲು ತೆರೆಯಿರಿ ನಾನು ಗಾಯಗೊಂಡಿದ್ದೇನೆ' ಎಂದು ಯಾರು ಯಾರಿಗೆ ಹೇಳಿದರು ?
a)
ಮುದುಕಿ ಸೊಸೆಗೆ ಹೇಳಿದಳು
b)
ಪೈಲೆಟ್ ರಾಹಿಲನಿಗೆ ಹೇಳಿದನು
c)
ಸೈನಿಕರು ಮುದುಕಿಗೆ ಹೇಳಿದರು
d)
ರಾಹಿಲ್ ಮುದುಕಿಗೆ ಹೇಳಿದನು
35.
ಈ ಮಳೆಯಲ್ಲಿ ಕತ್ತಲ ಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು
a)
ರಾಹಿಲ್
b)
ಮುದುಕಿಯ ಸೊಸೆ
c)
ಮುದುಕಿ
d)
ಸೈನಿಕರು
36.
ಬ್ಲಾಕ್ಔಟ್ ನಿಯಮವನ್ನು ಪಾಲಿಸುವುದು ಏಕೆ ?
a)
ಹುಲಿಯ ದಾಳಿಯಿಂದ ರಕ್ಷಿಸಿಕೊಳ್ಳಲು
b)
ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು
c)
ಹಕ್ಕಿಯ ದಾಳಿಯಿಂದ ತಪ್ಪಿಸಿಕೊಳ್ಳಲು
d)
ಕುದುರೆಯಿಂದ ತಪ್ಪಿಸಿಕೊಳ್ಳಲು
37.
ಮಹಿಳೆಯ ಆರ್ತನಾದ ಯಾವುದನ್ನು ಬೇಧಿಸಿ ರಾಹಿಲನ ಕಿವಿಯೊಳಗೆ ಬಿದ್ದಿತ್ತು?
a)
ಮಳೆಯ ಶಬ್ದ
b)
ಗುಡುಗಿನ ಶಬ್ದ
c)
ವಿಮಾನದ ಶಬ್ದ
d)
ಬಾಂಬ್ ಶಬ್ದ
38.
ರಾಹಿಲನ ದೇಹದಲ್ಲಿ ಹೊಸ ರಕ್ತ ಸಂಚಾರವಾದದ್ದು
a)
ಮುದುಕಿಯನ್ನು ನೋಡಿದಾಗ
b)
ಸೊಸೆಯನ್ನು ನೋಡಿದಾಗ
c)
ಒಂಟಿಮನೆ ನೋಡಿದಾಗ
d)
ಸಮುದ್ರ ತೀರ ಕಣ್ಣಿಗೆ ಬಿದ್ದಾಗ
39.
ರಾಹಿಲನಿಗೆ ಈಜಲು ಕಷ್ಟವಾಗುತ್ತಿತ್ತು ಕಾರಣವೇನೆಂದರೆ
a)
ಈಜು ಬರುತ್ತಿರಲಿಲ್ಲ
b)
ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ
c)
ಸೈನಿಕ ಉಡುಪು ಧರಿಸಿ ಕೊಂಡಿದ್ದರಿಂದ
d)
ನೀರು ಇಲ್ಲದಿದ್ದರಿಂದ
40.
ರಾಹಿಲ ಮನದಲ್ಲಿ ಮೂಡಿದ ಭಾವನೆ
a)
ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ.
b)
ಮನೆಯೊಳಗೆ ಏನು ಸಂಭವಿಸುತ್ತಿದೆ.
c)
ಕದ ತಟ್ಟಿದರೆ ಪರಿಣಾಮ ಏನಾಗಬಹುದು.
d)
ಈ ಮೇಲಿನ ಎಲ್ಲವೂ
41.
ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು
a)
ಸೈನಿಕರು
b)
ರಾಹಿಲ್
c)
ಮುದುಕಿ
d)
ಮುದುಕಿಯ ಸೊಸೆ
42.
ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು
a)
ಮುದುಕಿ
b)
ಪೈಲೆಟ್
c)
ಮುದುಕಿಯ ಸೊಸೆ
d)
ಸೈನಿಕರು
43.
ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು ?
a)
ಉದ್ದವಾದ ಕೋಲು
b)
ಬಂದೂಕು
c)
ಚಿಕ್ಕ ದೀಪ
d)
ಖಿರ್ದಿ ಪುಸ್ತಕ
44.
ಇದು ಸಾರಾ ಅಬೂಬಕ್ಕರ್ ಅವರ ಕಥ ಸಂಕಲನವಲ್ಲ...?
a)
ಪಯಣ ಮತ್ತು ಗಗನಸಖಿ
b)
ಮೊಸರಿನ ಮಂಗಮ್ಮ
c)
ಖೆಡ್ಡಾ
d)
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
45.
“ನನ್ನನ್ನು ರಕ್ಷಿಸಿ, ನಾನಿನ್ನೂ ತಾಳಲಾರೆ..” - ಎಂದವರು ಯಾರು?
a)
ರಾಹಿಲ್
b)
ಮುದುಕಿ
c)
ಮುದುಕಿಯ ಸೊಸೆ
d)
ಹೊರಗಿನ ಸೈನಿಕರು
46.
ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು ?
a)
ಎಲೆ
b)
ಬಟ್ಟೆ
c)
ಬಣ್ಣ
d)
ಕಾಗದ
47.
“ತಲೆಗೂದಲು ಬೆಳ್ಳಗಾದ ಮುದುಕಿ..” - ಇಲ್ಲಿನ ತಲೆಗೂದಲು ಎಂಬುವುದು..?
a)
ಆದೇಶ ಸಂಧಿ
b)
ಜಶ್ತ್ವ ಸಂಧಿ
c)
ಶ್ಚುತ್ವ ಸಂಧಿ
d)
ಲೋಪ ಸಂಧಿ
48.
ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆ ಯಾಗುತ್ತಿದೆ ?
a)
ಕರೋನದ ಹೆಸರಿನಲ್ಲಿ
b)
ಯುದ್ಧದ ಹೆಸರಿನಲ್ಲಿ
c)
ಆಹಾರದ ನೆವದಲ್ಲಿ
d)
ಸಂಪತ್ತಿನ ವಿಚಾರದಲ್ಲಿ
49.
ಯುದ್ಧ ಪಾಠದ ಆಕರ ಗ್ರಂಥ ಯಾವುದು...?
a)
ಪಯಣ
b)
ಖೆಡ್ಡಾ
c)
ಚಪ್ಪಲಿಗಳು
d)
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
50.
ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು ?
a)
ಔಷಧ ಮತ್ತು ಶಸ್ತ್ರ ಚಿಕಿತ್ಸಾ ಪೆಟ್ಟಿಗೆ
b)
ಬಂದೂಕುಗಳು
c)
ಮದ್ದು ಗುಂಡುಗಳು
d)
ಸೈನಿಕರ ಉಡುಪುಗಳು