wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-5. ಜನಪದ ಒಗಟುಗಳು

Total questions: 25

Worksheet time: 13mins

Name
Class
Date
1.
ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ, ಮೈಯೊಳಗೆ ನವಗಾಯ ಒಂಬತ್ತು ತುಂಡ ಎಂದು ಜನಪದರು ಯಾವುದಕ್ಕೆ ಕರೆದಿದ್ದಾರೆ ?
a)
ಅಂಗಿ
b)
ತಾವರೆ ಬೇರು
c)
ಉತ್ತರಾಣಿ ಗಿಡ
d)
ಬೀಸುಕಲ್ಲು
2.
ರಾಯ ರಾಯರಿಗೆಲ್ಲ ತಾನೇ ಪ್ರಚಂಡ ಎಂದು ಒಯ್ಯನೊಯ್ಯನೇ ಬಂದು ಹೆಗಲೇರಿಕೊಂಡವರು
a)
ಬೇತಾಳ
b)
ಅಂಗಿ
c)
ಉಪ್ಪು
d)
ಗರಿಕೆಯ ಹುಲ್ಲು
3.
ನೀರಲ್ಲೇ ಹುಟ್ಟೋದು ನೀರಲ್ಲಿ ಬೆಳೆಯೋದು ನೀರು ತಾಗಿದರೆ ಮಟಮಾಯವಾಗುವುದು ಯಾರು ಆಗುವುದು
a)
ಕಮಲ
b)
ತಾವರೆ ಬೇರು
c)
ಗರಿಕೆಯ ಹುಲ್ಲು
d)
ಉಪ್ಪು
4.
ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು ಅದು ಒಂದು ಗಿಡದ ಪರಿಹಾರ ಇದರರ್ಥ ಒಡದ್ಹೇಳಿ
a)
ತಾವರೆ ಬೇರು
b)
ಗರಿಕೆಯ ಹುಲ್ಲು
c)
ಉಪ್ಪು
d)
ಉತ್ತರಾಣಿ ಗಿಡ
5.
ಬದಿಯಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು ಯಾರು ?
a)
ಗರಿಕೆಯ ಹುಲ್ಲು
b)
ಹಾವು
c)
ಉತ್ತರಾಣಿ ಗಿಡ
d)
ತಾವರೆ ಬೇರು
6.
ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು ಉಳುವಾನ ಕಂಡು ನಗುವುದು
a)
ಬೇತಾಳ
b)
ಅಂಗಿ
c)
ಉಪ್ಪು
d)
ಗರಿಕೆಯ ಹುಲ್ಲು
7.
ಬಗಲಲ್ಲಿ ಕಕ್ಕುವುದು ಬಾಯಲ್ಲಿ ತಿಂಬೂದು ಎಂದು ಜನಪದರು ಯಾರಿಗೆ ಕರೆದಿದ್ದಾರೆ ?
a)
ಅಂಗಿ
b)
ತಾವರೆ ಬೇರು
c)
ಉತ್ತರಾಣಿ ಗಿಡ
d)
ಬೀಸುಕಲ್ಲು
8.
ಗರಿಕೆಯ ಹುಲ್ಲು ಯಾರಿಗೆ ತೊಂದರೆ ಕೊಡುತ್ತದೆ ?
a)
ರೈತನಿಗೆ
b)
ರಾಜನಿಗೆ
c)
ಬೀಸುಕಲ್ಲಿಗೆ
d)
ಶಿವನಿಗೆ
9.
ಗರಿಕೆಯ ಹುಲ್ಲು ಎಲ್ಲಿ ಹುಟ್ಟುತ್ತದೆ ?
a)
ಹೊಲದಲ್ಲಿ
b)
ಸಮುದ್ರದಲ್ಲಿ
c)
ಅಂಗಿಯಲ್ಲಿ
d)
ತಾವರೆ ಬೇರಿನಲ್ಲಿ
10.
ಬೀಸುಕಲ್ಲು ಎಲ್ಲಿ ಕುಕ್ಕುತ್ತದೆ ?
a)
ಬಾಯಲ್ಲಿ
b)
ಬಗಲಲ್ಲಿ
c)
ಹೊಲದಲ್ಲಿ
d)
ಕೆಸರಲ್ಲಿ
11.
ಬಿಸುಕಲ್ಲು ಬಾಯಲ್ಲಿ ಏನು ಮಾಡುತ್ತದೆ ?
a)
ಕಕ್ಕುತ್ತದೆ
b)
ತಿಂಬುತ್ತದೆ
c)
ಮಾಯವಾಗುತ್ತದೆ
d)
ಹುಟ್ಟುತ್ತದೆ
12.
ಉತ್ತರಾಣಿ ಗಿಡ ಎಲ್ಲಿ ಹುಟ್ಟುತ್ತದೆ ?
a)
ಬದಿನಲ್ಲಿ
b)
ಕೆಸರಲ್ಲಿ
c)
ನೀರಲ್ಲಿ
d)
ಹೊಲದಲ್ಲಿ
13.
ತಾವರೆ ಬೇರು ಎಲ್ಲಿ ಹುಟ್ಟುತ್ತದೆ ?
a)
ಬದಿನಲ್ಲಿ
b)
ಕೆಸರಲ್ಲಿ
c)
ನೀರಲ್ಲಿ
d)
ಹೊಲದಲ್ಲಿ
14.
ಉಪ್ಪು ಎಲ್ಲಿ ಹುಟ್ಟುತ್ತದೆ ?
a)
ಬದಿನಲ್ಲಿ
b)
ಕೆಸರಲ್ಲಿ
c)
ನೀರಲ್ಲಿ
d)
ಹೊಲದಲ್ಲಿ
15.
ಸರಿಯಾದ ಉತ್ತರವನ್ನು ಗುರುತಿಸಿ
a)
ರಾಯರಿಗೆ ಪ್ರಚಂಡ - ಅಂಗಿ
b)
ನೀರು ತಾಕಿದರೆ ಮಟ ಮಾಯ - ಉಪ್ಪು
c)
ಮುಂಜೆರಗ ಹಿಡಿಯೋದು - ಉತ್ತರಾಣಿ ಗಿಡ
d)
ಎಲ್ಲವೂ ಸರಿಯಾಗಿವೆ.
16.
ತಪ್ಪಾದ ಉತ್ತರವನ್ನು ಗುರುತಿಸಿ
a)
ಕೆಸರು - ತಾವರೆ ಬೇರು
b)
ನೀರು - ಬೀಸುಕಲ್ಲು
c)
ಹೊಲ - ಗರಿಕೆಯ ಹುಲ್ಲು
d)
ಬದುವು - ಉತ್ತರಾಣಿ ಗಿಡ
17.
ಬಿಟ್ಟ ಸ್ಥಳ ತುಂಬಿರಿ : ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ -------ಹಿಡಿಯೋದು
a)
ಮುಂಜೆರಗ
b)
ತಾವರೆ ಬೇರ
c)
ಪರಿಕಾರ
d)
ಅರಸೋರು
18.
ಬಿಟ್ಟಸ್ಥಳ ತುಂಬಿರಿ : ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು -------- ಕಂಡು ನಗುವುದು.
a)
ತಿಂಬೂದು
b)
ಉಳುವಾನ
c)
ಬೀಸುವವನ
d)
ಕಕ್ಕುವುದ
19.
ಬಿಟ್ಟಸ್ಥಳ ತುಂಬಿರಿ : ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ, ಮೈಯೊಳಗೆ -------- ಒಂಬತ್ತು ತುಂಡ ಎಂದು ಜನಪದರು ಯಾವುದಕ್ಕೆ ಕರೆದಿದ್ದಾರೆ ?
a)
ಹೂಸಗಾಯ
b)
ಐದುಗಾಯ
c)
ನವಗಾಯ
d)
ಪರಿಕಾರ
20.
ಒಗಟುಗಳಿಂದಾಗುವ ಶೈಕ್ಷಣಿಕ ಲಾಭ
a)
ವಿವಿಧ ರೀತಿಯ ಆಯೋಚನಾಶಕ್ತಿ ಬೆಳೆಯುತ್ತದೆ
b)
ಚಿಂತನೆ ಮಾಡುವ ಮನೋಭಾವ ಉಂಟಾಗುತ್ತದೆ.
c)
ಮುದುಡಿದ ಮನಸ್ಸನ್ನು ಅರಳಿಸಲು ಮತ್ತು ಮನೋರಂಜನೆ ನೀಡಲು ಸಹಾಯಕವಾಗುತ್ತದೆ
d)
ಇಲ್ಲಿ ಹೇಳಿರುವ ಎಲ್ಲಾ ಲಾಭಗಳಿವೆ
21.
ಬಿಟ್ಟಸ್ಥಳ ತುಂಬಿರಿ : ಕೈಯುಂಟು ಕಾಲಿಲ್ಲ ---------- ಮುಂಡ
a)
ಶಿರಹರಿದ
b)
ನವಗಾಯ
c)
ಮೈಯೊಳಗೆ
d)
ಒಂಬತ್ತು
22.
ಬಿಟ್ಟ ಸ್ಥಳ ತುಂಬಿರಿ : ಮೈಯೊಳಗೆ ನವಗಾಯ ---------- ತುಂಡ
a)
ಶಿರಹರಿದ
b)
ಮಟಮಾಯ
c)
ರಾಯರಿಗೆಲ್ಲ
d)
ಒಂಬತ್ತು
23.
ಮುಂಜೆರಗ ಹಿಡಿಯೋದು : ಉತ್ತರಾಣಿ ಗಿಡ : : ಉಳುವಾಗ ಕಂಡು ನಗುವುದು : -------
a)
ಗರಿಕೆಯ ಹುಲ್ಲು
b)
ಬಸವನ ಹುಳು
c)
ತಾವರೆ ಬೇರು
d)
ಅಂಗಿ
24.
ನೀರು : ಉಪ್ಪು : : ಕೆಸರು : ------
a)
ಉತ್ತರಾಣಿ ಗಿಡ
b)
ತಾವರೆ ಬೇರೆ
c)
ಗರಿಕೆಯ ಹುಲ್ಲು
d)
ಬೀಸುಕಲ್ಲು
25.
ತಪ್ಪಾದ ವಾಕ್ಯ ಗುರುತಿಸಿ
a)
ಬೀಸುಕಲ್ಲು : ಬಗಲಲ್ಲಿ ಕಕ್ಕುತ್ತದೆ, ಬಾಯಿಯಲ್ಲಿ ತಿನ್ನುತ್ತದೆ.
b)
ಉಪ್ಪು : ನೀರಲ್ಲಿ ಹುಟ್ಟಿ ನೀರಲ್ಲಿ ಬೆಳೆದು ನೀರು ತಾಗಿದರೆ ಮಾಯವಾಗುತ್ತದೆ.
c)
ಗರಿಕೆಯ ಹುಲ್ಲು : ಹೊಲದಲ್ಲಿ ಹುಟ್ಟಿ, ಹೊಲದಲ್ಲಿ ಬೆಳೆದು ಉಳುಮೆ ಮಾಡುವ ರೈತನನ್ನು ಕಂಡು ನಗುತ್ತದೆ.
d)
ತಾವರೆ ಗಿಡ : ಕೆಸರಲ್ಲೇ ಹುಟ್ಟಿ ಕೆಸರಲ್ಲೇ ಬೆಳೆದು ಹೋಗುವವರ ಮುಂಜೆರಗ ಹಿಡಿಯುತ್ತದೆ.