Worksheetsವಾಕ್ಯ, ಪ್ರಕಾರಗಳು & ಲೇಖನ ಚಿಹ್ನೆಗಳು
Total questions: 27
Worksheet time: 14mins
ದುಷ್ಟಬುದ್ಧಿಯು ಸುಳ್ಳುಗಳನ್ನು ಹೇಳಿದನೆ ಹೊರತು ಹೊನ್ನು ಕದ್ದ ವಿಚಾರವನ್ನು ಹೇಳಲಿಲ್ಲ - ಈ ವಾಕ್ಯವು
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ಸಹ ಸಂಬಂಧಿತವಾಕ್ಯ
ಹರ್ಷ,ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಬಳಸುವ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಪೂರ್ಣ ವಿರಾಮ ಚಿಹ್ನೆ
ಅಲ್ಪವಿರಾಮ ಚಿಹ್ನೆ
ಭಾವಸೂಚಕ ಚಿಹ್ನೆ
. “ರಾಹಿಲ್‍ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ನಿಷೇಧಾರ್ಥದ ವಾಕ್ಯ
"ಕೊಲ್ಲಬೇಡ ! ನನ್ನ ಮಗಳಿಗಾಗಿ ಒಂದು ಗೊಂಚಲು ಗುಲಾಬಿ ತೆಗೆದುಕೊಂಡಿದ್ದು ಅಪರಾಧವೇ ? " - ಇಲ್ಲಿ ಬಳಕೆಯಾಗಿರುವ ಲೇಖನ ಚಿನ್ನೆ
ಉದ್ಧರಣ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ಭಾವಸೂಚಕ ಚಿಹ್ನೆ
ಈ ಎಲ್ಲವೂ ಬಳಕೆಯಾಗಿವೆ.
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣ ಅಭಿಪ್ರಾಯದ ವಾಕ್ಯವಾಗಿದ್ದರೆ ಅದು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಶ್ರೀರಾಮನ ಅಶ್ವಮೇಧಯಾಗದ ಕುದುರೆ ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು ; ಆಗ ತೋಟದ ಕಾವಲಿದ್ದ ಲವನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಅವನನ್ನು ಭಟರು ಹಿಡಿದು ಕೊಂಡು ಹೋದರು.- ಈ ವಾಕ್ಯ
ಸಂಯೋಜಿತ ವಾಕ್ಯ
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಭವನಾರ್ಥಕ ವಾಕ್ಯ
ಸುಂದರಿ ಮೃಗದ ಅರಮನೆಗೆ ಹೋಗಲು ಒಪ್ಪಿದ್ದರಿಂದ ನನಗೆ ಧೈರ್ಯ ಉಂಟಾಯಿತು. ವಾಕ್ಯವು
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಬಂಧಿತ ವಾಕ್ಯ
ಸಂಯೋಜಿತ ವಾಕ್ಯ
ಅಬ್ಬಾ ! ಅಯ್ಯೋ ! : ಭಾವಸೂಚಕ ಚಿಹ್ನೆ : : ಯಾರು ? ಏನು ? : -------
ಉದ್ಧರಣ ಚಿಹ್ನೆ
ಅರ್ಧ ವಿರಾಮ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೆ ಈಡಾದ ಮನುಷ್ಯರ ಕಡೆಯವನು ಎಂದು ರಾಹಿಲ್ ಗಂಭೀರವಾಗಿ ನುಡಿದನು - ಈ ವಾಕ್ಯದಲ್ಲಿ ಬಳಸಬೇಕಾಗಿದ್ದ ಲೇಖನ ಚಿನ್ನೆ
ಉದ್ಧರಣ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಆವರಣ ಚಿಹ್ನೆ
ಭಾವಸೂಚಕ ಚಿಹ್ನೆ
ಇರಸಾಲು : ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು - ಇಲ್ಲಿ ಬಳಸಿ ಲೇಖನ ಚಿನ್ನೆ
ವಿವರಣಾತ್ಮಕ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಉದ್ಧರಣ ಚಿಹ್ನೆ
ಅಲ್ಪವಿರಾಮ ಚಿಹ್ನೆ
ಕೋಟೆಯೊಳಗೆ ಶತ್ರುಗಳು ನುಗ್ಗಿದರು ಎಂಬ ಸುದ್ದಿಯನ್ನು ಕೇಳಿ ಜನರು ತಲ್ಲಣ ಗೊಂಡರು - ಈ ವಾಕ್ಯವು
ಸಾಮಾನ್ಯ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ಅಲಿಖಿತ ವಾಕ್ಯ
ಒಂದು ಪದವನ್ನೋ, ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದ ಅಥವಾ ವಾಕ್ಯವನ್ನು ಹೇಳುವಾಗ ಬಳಸುವ ಲೇಖನ ಚಿನ್ನೆ
ಉದ್ಧರಣ ಚಿಹ್ನೆ
ಆವರಣ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಅಲ್ಪವಿರಾಮ ಚಿಹ್ನೆ
ರಾಹಿಲನು ನನ್ನ ಸೊಸೆಗೆ ಪರೀಕ್ಷೆ ಮಾಡಲು ಒಪ್ಪಿಕೊಂಡನು, ಆದ್ದರಿಂದ ನನಗೆ ದೈರ್ಯ ಉಂಟಾಯಿತು - ಈ ವಾಕ್ಯವು
ಮಿಶ್ರ ವಾಕ್ಯ
ಸಾಮಾನ್ಯ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಸಂಯೋಜಿತ ವಾಕ್ಯ
ತನ್ನ ಹಡಗು ಬಂಡೆಗೆ ತಗುಲಿ ಒಡೆಯಿತೆಂದು ವರ್ತಕನಿಗೆ ತಿಳಿಯಿತು. - ಈ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಸಂಬೋಧನಾ ವಾಕ್ಯ
ಬೆನ್ನು ತಿರುಗಿಸಿದಾಗ ಕೊಲ್ಲುವುದು ಧರ್ಮವಲ್ಲ ; ಆದ್ದರಿಂದ ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು - ಈ ವಾಕ್ಯವು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಕರ್ತೃ, ಕರ್ಮ, ಕ್ರಿಯಾ ಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿನ್ನೆ
ಪೂರ್ಣವಿರಾಮ
ಅರ್ಧ ವಿರಾಮ
ಅಲ್ಪವಿರಾಮ
ಭಾವಸೂಚಕ
ಶಬರಿಯು ರಾಮ ಲಕ್ಷ್ಮಣರಿಗೆ ಆತಿಥ್ಯವನ್ನು ಮಾಡಿದಳು ಆದ್ದರಿಂದ ಅವರು ಸಂತೋಷಿಗಳಾದರು - ಈ ವಾಕ್ಯವು
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಭಾವ ನಾರ್ಥಕ ವಾಕ್ಯ
ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ
ಸಾಮಾನ್ಯ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದು ಪೂಜಿಸಲಾಗುತ್ತಿದ್ದಾಳೆ. - ಇದೊಂದು
ಸಂಯೋಜಿತ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಭಾವನಾರ್ಥಕ ವಾಕ್ಯ
ಸಾಮಾನ್ಯ ವಾಕ್ಯ
ಪಾರಿಭಾಷಿಕ ಮತ್ತು ಅನ್ಯಭಾಷೆಯ ಪದಗಳನ್ನು ಬಳಸುವಾಗ ಉಪಯೋಗಿಸುವ ಲೇಖನ ಚಿಹ್ನೆ
ಅರ್ಧ ವಿರಾಮ
ಅಲ್ಪವಿರಾಮ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ವಿವರಣಾತ್ಮಕ ಚಿಹ್ನೆ
"ಆವುದೀ ಮರಳು ? ನಮ್ಮೆಡೆಗೆ ಬರುತಿಹದು" - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆಗಳು
ಉದ್ಧರಣ ಮತ್ತು ಪ್ರಶ್ನಾರ್ಥಕ
ಉದ್ಧರಣ ಮತ್ತು ಅರ್ಧ ವಿರಾಮ
ವಾಕ್ಯವೇಷ್ಟನ ಮತ್ತು ಉದ್ಧರಣ
ವಾಕ್ಯವೇಷ್ಟನ ಮತ್ತು ಪ್ರಶ್ನಾರ್ಥಕ
ತಾಯಿ ದಾರಿಗರಿಗೆ ಬೀಡಿಲಿ ದೊರೆಯುವುದೇ ? - ಇಲ್ಲಿ ಬಳಕೆಯಾಗಿರುವ ಲೇಖನ ಚಿನ್ನೆ
ಭಾವಸೂಚಕ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ಉದ್ಧರಣ ಚಿಹ್ನೆ
ಅರ್ಧ ವಿರಾಮ ಚಿಹ್ನೆ
ಅಯ್ಯೋ ! ಹೀಗಾಗಬಾರದಿತ್ತು ! - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿನ್ನೆ
ಉದ್ಧರಣ ಚಿಹ್ನೆ
ಭಾವಸೂಚಕ ಚಿಹ್ನೆ
ಅಲ್ಪವಿರಾಮ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್)ಉತ್ಪತ್ತಿಯಾಗುತ್ತದೆ - ಈ ವಾಕ್ಯದಲ್ಲಿ ಬಳಸಿದ ಲೇಖನ ಚಿನ್ನೆ
ವಾಕ್ಯವೇಷ್ಟನ ಚಿಹ್ನೆ
ಆವರಣ ಚಿಹ್ನೆ
ಅರ್ಧ ವಿರಾಮ ಚಿಹ್ನೆ
ಉದ್ಧರಣ ಚಿಹ್ನೆ
ಶಾನುಭೋಗರು ಉಳಿದಿದ್ದು ಕೀರ್ತಿ ಪುಸ್ತಕದಿಂದಲ್ಲ ; ಹುಲಿಯ ಧರ್ಮಶ್ರದ್ಧೆಯಿಂದ - ಈ ವಾಕ್ಯದಲ್ಲಿ ಇರುವ ಲೇಖನ ಚಿನ್ನೆ
ಭಾವಸೂಚಕ ಚಿಹ್ನೆ
ಅರ್ಧ ವಿರಾಮ ಚಿಹ್ನೆ
ಅಲ್ಪವಿರಾಮ ಚಿಹ್ನೆ
ಪ್ರಶ್ನಾರ್ಥಕ ಚಿಹ್ನೆ
ಈ ಕಾರ್ಯಕ್ರಮ ದ ಬಗ್ಗೆ ನಿಮ್ಮ ಅಭಿಪ್ರಾಯ
ಸರಿಯಿಲ್ಲ - ನಿಲ್ಲಿಸಿ
ಸರಿಯಿಲ್ಲ - ಸರಿಪಡಿಸಿ
ಚೆನ್ನಾಗಿದೆ - ನಿಲ್ಲಿಸಿ
ಚೆನ್ನಾಗಿದೆ - ಮುಂದುವರೆಸಿ
‘ಪ್ರ.ಭಾ.ಕನ್ನಡ’ ಕಲಿಕೆ ಸುಲಭಾವಗುತ್ತಿದೆ
100%
75%
50%
25%
ಏನೂ ಉಪಯೋಗವಿಲ್ಲ 0%
