Wayground logo

Free Printable Worksheets

Font size

S
M
L
XL
Worksheets

10th science ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ರಸಪ್ರಶ್ನೆ

Total questions: 33

Worksheet time: 17mins

Name
Class
Date
1.

ಉತ್ಕರ್ಷಣ ಕ್ರಿಯೆ ಎಂದರೆ

a)

ಆಮ್ಲಜನಕವನ್ನುಬಿಟ್ಟುಕೊಡುವುದು

b)

ಉಷ್ಣವನ್ನು ಬಿಟ್ಟುಕೊಡುವುದು

c)

ಉಷ್ಣವನ್ನು ಪಡೆದುಕೊಳ್ಳುವುದು

d)

ಆಮ್ಲಜನಕವನ್ನು ಪಡೆದುಕೊಳ್ಳುವುದು

2.

Si+C --> SiC ಈ ರಾಸಾಯನಿಕ ಸಮೀಕರಣವು

a)

ಬಹಿರುಷ್ಣಕ ಕ್ರಿಯೆ

b)

ಅಂತರುಷ್ಣಕ ಕ್ರಿಯೆ

c)

ವಿಭಜನ ಕ್ರಿಯೆ

d)

ಸ್ಥಾನಪಲ್ಲಟ ಕ್ರಿಯೆ

3.

ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡಾಗ ಅವುಗಳ ವಾಸನೆ ಮತ್ತು ರುಚಿ ಬದಲಾಗುತ್ತದೆ ಈ ವಿದ್ಯಮಾನವು

a)

ಸಂಕ್ಷಾರಣ

b)

ತುಕ್ಕು ಹಿಡಿಯುವಿಕೆ

c)

ಕಮಟುವಿಕೆ

d)

ದ್ಯುತಿ ವಿಭಜನೆ

4.

ಕಬ್ಬಿಣದ ಚೂರುಗಳಿಕೆ ಸಾರರಿಕ್ತ ಹೈಡ್ರೋಕ್ಲೋರಿಕ್‌ ಆಮ್ಲವನ್ನು ಸೇರಿಸಿದಾಗ

a)

ಕ್ಲೋರಿನ್‌ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್‌ ಉಂಟಾಗುತ್ತವೆ

b)

ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತದೆ

c)

ಯಾವುದೇ ಕ್ರಿಯೆ ನಡೆಯುವುದಿಲ್ಲ

d)

ಹೈಡ್ರೋಜನ್‌ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್‌ ಉಂಟಾಗುತ್ತದೆ

5.

ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದು

a)

ತೇವಾಂಶ ದ ಸಂಪರ್ಕ ತಡೆಯಲು

b)

ರಾಸಾಯನಿಕ ಕ್ರಿಯೆಯನ್ನು ತಡೆಗಟ್ಟಲು

c)

ತುಕ್ಕು ಹಿಡಿಯದಂತೆ ತಡೆಯಲು

d)

ಮೇಲಿನ ಎಲ್ಲವೂ

6.

Fe2O3 + 2Al --> AL2O3 + 2Fe ಈ ಕ್ರಿಯೆಯು _____________ ಕ್ರಿಯೆಗೆ ಉದಾಹರಣೆಯಾಗಿದೆ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿಸ್ಥಾನಪಲ್ಲಟ

7.

ರಾಸಾಯನಿಕ ಕ್ರಿಯೆಗಳು ನಡೆದಿರುವುದನ್ನು ನಿರ್ಧರಿಸುವ ಅಂಶಗಳು

a)

ಸ್ಥಿತಿ ಬದಲಾವಣೆ

b)

ಬಣ್ಣದಲ್ಲಿ ಬದಲಾವಣೆ

c)

ಅನಿಲ ಬಿಡುಗಡೆ

d)

ಮೇಲಿನ ಎಲ್ಲವೂ

8.

ಎಣ್ಣೆ ಪದಾರ್ಥಗಳ ಕಮಟುವಿಕೆಗೆ ಕಾರಣವಾದ ಕ್ರಿಯೆ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ರೆಡಾಕ್ಸ ಕ್ರಿಯೆ

d)

ನಿರ್ಜಲೀಕರಣ ಕ್ರಿಯೆ

9.

ಇವುಗಳಲ್ಲಿ ಯಾವುದು ರಾಸಾಯನಿಕ ಕ್ರಿಯೆಯಲ್ಲ?

a)

ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವುದು

b)

ಉಸಿರಾಟ ಕ್ರಿಯೆ

c)

ಮೇಣದ ದಹನ

d)

ಮೇಣವನ್ನು ದ್ರವಿಸುವುದು

10.

ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯ ಉಂಟಾಗುವ ರಾಸಾಯನಿಕ ಕ್ರಿಯೆ

a)

ಸಂಯೋಗ ಕ್ರಿಯೆ

b)

ವಿಭಜನೆ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿಸ್ಥಾನಪಲ್ಲಟ ಕ್ರಿಯೆ

11.

ಸುಟ್ಟ ಸುಣ್ಣವು ನೀರಿನೊಂದಿಗೆ ವರ್ತಿಸಿದಾದ

a)

ಹೈಡ್ರೋಜನ್ ಅನಿಲ ಬಿಡುಗಡೆಯಾಗುತ್ತದೆ

b)

ಮಿಶ್ರಣದ ತಾಪದಲ್ಲಿ ಬದಲಾವಣೆಯಾಗುತ್ತದೆ

c)

ಮಿಶ್ರಣವು ನೀಲಿ ಬಣ್ಣಕ್ಕೆ ತಿರುಗುತ್ತದೆ

d)

ಹಳದಿ ಪ್ರಕ್ಷೇಪ ಉಂಟಾಗುತ್ತದೆ

12.

ಫೆರಸ್ ಸಲ್ಫೇಟ್ ಹರಳುಗಳನ್ನು ಕಾಸಿದಾಗ ಅದು ರಾಸಾಯನಿಕ ಬದಲಾವಣೆ ಹೊಂದುವುದನ್ನು ಗುರುತಿಸಲು ಸಹಾಯವಾಗುವ ವೀಕ್ಷಣೆಗಳು

a)

ಬಣ್ಣ ಬದಲಾವಣೆ ಮತ್ತು ಅನಿಲ ಬಿಡುಗಡೆ

b)

ಬಣ್ಣ ಬದಲಾವಣೆ ಮತ್ತು ತಾಪದ ಉತ್ಪಾದನೆ

c)

ಸ್ಥಿತಿ ಬದಲಾವಣೆ ಮತ್ತು ತಾಪದ ಉತ್ಪಾದನೆ

d)

ಬಣ್ಣ ಬದಲಾವಣೆ ಮತ್ತು ಸ್ಥಿತಿ ಬದಲಾವಣೆ

13.

ಸೀಸದ ನೈಟ್ರೇಟ್ ಅನ್ನು ಕಾಸಿದಾಗ ಬಿಡುಗಡೆಯಾಗುವ ದಟ್ಟ ಕಂದು ಬಣ್ಣದ ಅನಿಲ

a)

ಆಕ್ಸಿಜನ್

b)

ನೈಟ್ರೋಜನ್

c)

ಸಲ್ಫರ್ ಡೈ ಆಕ್ಸೈಡ್

d)

ನೈಟ್ರೋಜನ್ ಡೈ ಆಕ್ಸೈಡ್

14.

ನಿಮಗೆ ಸೀಸದ ನೈಟ್ರೇಟ್ ದ್ರಾವಣವನ್ನು ನೀಡಲಾಗಿದೆ. ಹಳದಿ ಪ್ರಕ್ಷೇಪ ಪಡೆಯಲು ನೀವು ಇವುಗಳಲ್ಲಿ ಯಾವ ದ್ರಾವಣದೊಂದಿಗೆ ಮಿಶ್ರಣ ಮಾಡುವಿರಿ?

a)

ಪೊಟ್ಯಾಸಿಯಂ ಕ್ಲೋರೈಡ್

b)

ಪೊಟ್ಯಾಸಿಯಂ ನೈಟ್ರೈಡ್

c)

ಪೊಟ್ಯಾಸಿಯಂ ಅಯೋಡೈಡ್

d)

ಪೊಟ್ಯಾಸಿಯಂ ಸಲ್ಫೈಡ್

15.

ಇವುಗಳಲ್ಲಿ ಅಂತರುಷ್ಣಕ ಕ್ರಿಯೆ

a)

ಕಾರ್ಬನ್ ಮತ್ತು ಆಕ್ಸಿಜನ್ ಸಂಯೋಗ ಹೊಂದಿ ಕಾರ್ಬನ್ ಮಾನಾಕ್ಸೈಡ್ ಉಂಟಾಗುವುದು.

b)

ನೈಟ್ರೋಜನ್ ಮತ್ತು ಆಕ್ಸಿಜನ್ ಸಂಯೋಗ ಹೊಂದಿ ನೈಟ್ರೋಜನ್ ಮಾನಾಕ್ಸೈಡ್ ಉಂಟಾಗುವುದು.

c)

ಗ್ಲುಕೋಸ್ ಮತ್ತು ಆಕ್ಸಿಜನ್ ಗಳು ವರ್ತಿಸಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಉಂಟಾಗುತ್ತದೆ.

d)

ಸತುವು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿ ಸತುವಿನ ಕ್ಲೋರೈಡ್ ಮತ್ತು ಹೈಡ್ರೋಜನ್ ಅನಿಲ ಉಂಟಾಗುತ್ತದೆ.

16.

ಇವುಗಳಲ್ಲಿ ಬಹಿರುಷ್ಣಕ ಕ್ರಿಯೆಗೆ ಉದಾಹರಣೆ

a)

ನೀರಿನ ವಿದ್ಯುದ್ವಿಭಜನೆ

b)

ದ್ಯುತಿಸಂಶ್ಲೇಷಣೆ ಕ್ರಿಯೆ

c)

ಉಸಿರಾಟ ಕ್ರಿಯೆ

d)

ಬೆಳ್ಳಿಯ ಕ್ಲೋರೈಡ್ ವಿಭಜನೆ

17.

ರಾಸಾಯನಿಕ ಸಮೀಕರಣವನ್ನು ಸರಿದೂಗಿಸಲಾಗುತ್ತದೆ. ಇದಕ್ಕೆ ಕಾರಣವಾದ ನಿಯಮ

a)

ಸಂವೇಗ ಸಂರಕ್ಷಣಾ ನಿಯಮ

b)

ರಾಶಿ ಸಂರಕ್ಷಣಾ ನಿಯಮ

c)

ಚಲನೆ ಸಂರಕ್ಷಣಾ ನಿಯಮ

d)

ಕಾಂತೀಯತೆ ಸಂರಕ್ಷಣಾ ನಿಯಮ

18.

ಒಂದು ಪ್ರತಿವರ್ತಕದಲ್ಲಿ ಆಕ್ಸಿಜನ್ ಕಳೆದುಕೊಳ್ಳುವ ಕ್ರಿಯೆ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ರೆಡಾಕ್ಸ್ ಕ್ರಿಯೆ

d)

ನಿರ್ಜಲೀಕರಣ ಕ್ರಿಯೆ

19.

ರಾಸಾಯನಿಕ ಕ್ರಿಯೆಯಲ್ಲಿ ಹೈಡ್ರೋಜನ್ ಪಡೆದುಕೊಳ್ಳುವ ಕ್ರಿಯೆ

a)

ಉತ್ಕರ್ಷಣ ಕ್ರಿಯೆ

b)

ಅಪಕರ್ಷಣ ಕ್ರಿಯೆ

c)

ರೆಡಾಕ್ಸ್ ಕ್ರಿಯೆ

d)

ನಿರ್ಜಲೀಕರಣ ಕ್ರಿಯೆ

20.

ರೆಡಾಕ್ಸ್ ಕ್ರಿಯೆಯು ಈ ಕ್ರಿಯೆಗಳನ್ನು ಒಳಗೊಂಡಿರುತ್ತದೆ

a)

ಉತ್ಕರ್ಷಣ ಕ್ರಿಯೆ ಮತ್ತು ಅಪಕರ್ಷಣ ಕ್ರಿಯೆ

b)

ಉತ್ಕರ್ಷಣ ಕ್ರಿಯೆ ಮತ್ತು ಸಂಯೋಗ ಕ್ರಿಯೆ

c)

ಅಪಕರ್ಷಣ ಕ್ರಿಯೆ ಮತ್ತು ಹೈಡ್ರೋಜನೀಕರಣ ಕ್ರಿಯೆ

d)

ಅಪಕರ್ಷಣ ಕ್ರಿಯೆ ಮತ್ತು ಸ್ಥಾನಪಲ್ಲಟ ಕ್ರಿಯೆ

21.

ಸೋಡಿಯಂ ಸಲ್ಫೇಟ್ ದ್ರಾವಣವನ್ನು ಬೇರಿಯಂ ಕ್ಲೋರೈಡ್ ದ್ರಾವಣಕ್ಕೆ ಸೇರಿಸಿದಾಗ ಉಂಟಾಗುವ ಪ್ರಕ್ಷೇಪ

a)

ಸೋಡಿಯಂ ಕ್ಲೋರೈಡ್

b)

ಬೇರಿಯಂ ಸಲ್ಫೇಟ್

c)

ಬೇರಿಯಂ ಸೋಡಿಯಂ

d)

ಸೋಡಿಯಂ ಸಲ್ಫೈಡ್

22.

ಬೆಳ್ಳಿಯ ಕ್ಲೋರೈಡ್ ಅಣುವು ಬೆಳ್ಳಿ ಮತ್ತು ಕ್ಲೋರಿನ್ ಆಗುತ್ತದೆ. ಈ ಕ್ರಿಯೆಯು

a)

ಉಷ್ಣ ವಿಭಜನೆ ಕ್ರಿಯೆಯಾಗಿದೆ

b)

ದ್ಯುತಿ ವಿಭಜನೆ ಕ್ರಿಯೆಯಾಗಿದೆ

c)

ವಿದ್ಯುತ್ ವಿಭಜನೆ ಕ್ರಿಯೆಯಾಗಿದೆ.

d)

ಈ ಮೇಲಿನ ಯಾವುದೂ ಅಲ್ಲ

23.

ಇವುಗಳಲ್ಲಿ ನಶಿಸುವಿಕೆ ಕ್ರಿಯೆಗೆ ಉದಾಹರಣೆ

a)

ಕಬ್ಬಿಣ ತುಕ್ಕು ಹಿಡಿಯುವುದು

b)

ಬೆಳ್ಳಿಯು ಕಪ್ಪು ಬಣ್ಣಕ್ಕೆ ತಿರುಗುವುದು

c)

ತಾಮ್ರದ ಮೇಲೆ ಹಸಿರು ಬಣ್ಣದ ಲೇಪನ ಉಂಟಾಗುವುದು

d)

ಈ ಮೇಲಿನ ಎಲ್ಲವೂ

24.

ಇವುಗಳಲ್ಲಿ ಯಾವುದು ಉಷ್ಣ ವಿಭಜನೆ ಕ್ರಿಯೆಗೆ ಒಳಗಾಗುತ್ತದೆ

a)

ಫೆರಸ್ ಸಲ್ಫೇಟ್

b)

ಬೆಳ್ಳಿಯ ಕ್ಲೋರೈಡ್

c)

ನೀರು

d)

ಬೆಳ್ಳಿಯ ಬ್ರೋಮೈಡ್

25.

ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣದ ಮೊಳೆಯನ್ನಿರಿಸಿದಾಗ

a)

ತಾಮ್ರದ ಕಬ್ಬಿಣ ಉಂಟಾಗುತ್ತದೆ

b)

ತಾಮ್ರದ ಸಲ್ಫೇಟ್ ಮತ್ತು ಕಬ್ಬಿಣದ ಸಲ್ಫೇಟ್ ಉಂಟಾಗುತ್ತದೆ

c)

ಕಬ್ಬಿಣದ ಸಲ್ಫೇಟ್ ಮತ್ತು ತಾಮ್ರ ಉಂಟಾಗುತ್ತದೆ

d)

ರಾಸಾಯನಿಕ ಕ್ರಿಯೆ ನಡೆಯುವುದಿಲ್ಲ.

26.

ನೀರಿನ ವಿದ್ಯುದ್ವಿಭಜನೆ ಪ್ರಯೋಗವನ್ನು ನಡೆಸಿದಾಗ

a)

ಆಕ್ಸಿಜನ್ ಅನಿಲವು ಆ್ಯನೋಡ್ ನಲ್ಲಿ ಸಂಗ್ರಹವಾಗುತ್ತದೆ ಮತ್ತು ಕ್ಯಾಥೋಡ್ ನಲ್ಲಿ ಸಂಗ್ರಹವಾಗುವ ಅನಿಲದ ಅರ್ಧದಷ್ಟಿರುತ್ತದೆ

b)

ಆಕ್ಸಿಜನ್ ಅನಿಲವು ಕ್ಯಾಥೋಡ್ ನಲ್ಲಿ ಸಂಗ್ರಹವಾಗುತ್ತದೆ ಮತ್ತು ಆ್ಯನೋಡ್ ನಲ್ಲಿ ಸಂಗ್ರಹವಾಗುವ ಅನಿಲದ ಅರ್ಧದಷ್ಟಿರುತ್ತದೆ

c)

ಆಕ್ಸಿಜನ್ ಅನಿಲವು ಆ್ಯನೋಡ್ ನಲ್ಲಿ ಸಂಗ್ರಹವಾಗುತ್ತದೆ ಮತ್ತು ಕ್ಯಾಥೋಡ್ ನಲ್ಲಿ ಸಂಗ್ರಹವಾಗುವ ಅನಿಲದ ಎರಡಷ್ಟಿರುತ್ತದೆ

d)

ಆಕ್ಸಿಜನ್ ಅನಿಲವು ಕ್ಯಾಥೋಡ್ ನಲ್ಲಿ ಸಂಗ್ರಹವಾಗುತ್ತದೆ ಮತ್ತು ಆ್ಯನೋಡ್ ನಲ್ಲಿ ಸಂಗ್ರಹವಾಗುವ ಅನಿಲದ ಎರಡಷ್ಟಿರುತ್ತದೆ

27.

ಸತುವು ನೀಲಿ ಬಣ್ಣದ ದ್ರಾವಣದೊಂದಿಗೆ ವರ್ತಿಸಿ ಸತುವಿನ ಸಲ್ಪೇಟ್ ಮತ್ತು ತಾಮ್ರ ಉಂಟಾಗುತ್ತದೆ. ಹಾಗಾದರೆ ನೀಲಿ ಬಣ್ಣದ ದ್ರಾವಣದ ಹೆಸರು

a)

ಸತುವಿನ ಸಲ್ಫೇಟ್

b)

ಫೆರಸ್ ಸಲ್ಪೇಟ್

c)

ತಾಮ್ರದ ಸಲ್ಫೇಟ್

d)

ತಾಮ್ರದ ಕ್ಲೋರೈಡ್

28.

ಈ ಕೆಳಗಿನವುಗಳಲ್ಲಿ ಅಪಕರ್ಷಣೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ/ಗಳು (ಎ) ಆಕ್ಸಿಜನ್ ಅನ್ನು ಕಳೆದುಕೊಳ್ಳುತ್ತದೆ. (ಬಿ) ಹೈಡ್ರೋಜನ್ ಅನ್ನು ಪಡೆದುಕೊಳ್ಳುತ್ತದೆ. (ಸಿ) ಇಲೆಕ್ಟ್ರಾನ್ ಅನ್ನು ಪಡೆದುಕೊಳ್ಳುತ್ತದೆ.

a)

(ಎ) ಮತ್ತು (ಬಿ) ಮಾತ್ರ

b)

(ಬಿ) ಮತ್ತು (ಸಿ) ಮಾತ್ರ

c)

(ಎ) ಮಾತ್ರ

d)

(ಎ), (ಬಿ) ಮತ್ತು (ಸಿ) ಎಲ್ಲವೂ

29.

CuO + H2 --> Cu + H2O ಈ ಕ್ರಿಯೆಯಲ್ಲಿ ಉತ್ಕರ್ಷಣೆಗೊಂಡ ವಸ್ತು

a)

H2O

b)

Cu

c)

CuO

d)

H2

30.

ಕಮಟುವಿಕೆ ತಡೆಗಟ್ಟಲು ಚಿಪ್ಸ್ ಪೊಟ್ಟಣದೊಳಗೆ ಈ ಅನಿಲ ತುಂಬಿರುತ್ತಾರೆ

a)

O2

b)

N2

c)

H2

d)

Cl2

31.
a)

ಸಂಯೋಗ ಕ್ರಿಯೆ ಮತ್ತು ಉತ್ಕರ್ಷಣ ಕ್ರಿಯೆಯಾಗಿದೆ

b)

ವಿಭಜನೆ ಕ್ರಿಯೆ ಮತ್ತು ಅಪಕರ್ಷಣ ಕ್ರಿಯೆಯಾಗಿದೆ

c)

ಸಂಯೋಗ ಕ್ರಿಯೆ ಮತ್ತು ಅಪಕರ್ಷಣ ಕ್ರಿಯೆಯಾಗಿದೆ

d)

ಸ್ಥಾನಪಲ್ಲಟ ಕ್ರಿಯೆ ಮತ್ತು ಉತ್ಕರ್ಷಣ ಕ್ರಿಯೆಯಾಗಿದೆ

32.

ಮ್ಯಾಂಗನೀಸ್ ಆಕ್ಸೈಡ್ ನೊಂದಿಗೆ ಹೈಡ್ರೋಕ್ಲೋರಿಕ್ ಆಮ್ಲ ವರ್ತಿಸಿದಾಗ ದೊರೆಯುವ ಉತ್ಪನ್ನಗಳು

a)
b)
c)
d)
33.
a)
b)
c)
d)