wayground logo

Free Printable Worksheets

NEW

Font size

S
M
L
XL
Worksheets

10th science ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ರಸಪ್ರಶ್ನೆ

Total questions: 30

Worksheet time: 15mins

Name
Class
Date
1.

ಆಮ್ಲೀಯ ದ್ರಾವಣದಲ್ಲಿ ಕೆಂಪು ಬಣ್ಣಕ್ಕೆ ಬದಲಾಗುವ ಸೂಚಕಗಳೆಂದರೆ

a)

ಹರಿಶಿನ ಮತ್ತು ಲಿಟ್ಮಸ್

b)

ಫೀನಾಫ್ತಲೀನ್ ಮತ್ತು ಮೀಥೈಲ್ ಆರೆಂಜ್

c)

ಲಿಟ್ಮಸ್ ಮತ್ತು ಮೀಥೈಲ್ ಆರೆಂಜ್

d)

ಫೀನಾಫ್ತಲೀನ್ ಮತ್ತು ಲಿಟ್ಮಸ್

2.

ದುರ್ಬಲ ಆಮ್ಲಕ್ಕೆ ಒಂದು ಉದಾಹರಣೆ

a)

ಅಸಿಟಿಕ್ ಆಮ್ಲ

b)

ನೈಟ್ರಿಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ಸಲ್ಫ್ಯೂರಿಕ್ ಆಮ್ಲ

3.

ಪ್ರತ್ಯಾಮ್ಲೀಯ ದ್ರಾವಣವು

a)

ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ

b)

ಫೀಲಾಫ್ತಲೀನ್ ಸೂಚಕದಲ್ಲಿ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ

c)

ಮೀಥೈಲ್ ಆರೆಂಜ್ ಸೂಚಕದಲ್ಲಿ ಹಳದಿ ಬಣ್ಣಕ್ಕೆ ಬದಲಾಗುತ್ತದೆ

d)

ಮೇಲಿನ ಎಲ್ಲವೂ

4.

ಒಂದು ದ್ರಾವಣವು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ. ಹಾಗಾದರೆ ಆ ದ್ರಾವಣದ pH

a)

1

b)

4

c)

5

d)

10

5.

ಸತುವಿನ ಚೂರು ಒಂದು ದ್ರಾವಣದೊಂದಿಗೆ ವರ್ತಿಸಿ ಪಾಪ್ ಶಬ್ದದೊಂದಿಗೆ ಉರಿಯುವ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹಾಗಾದರೆ ಆ ದ್ರಾವಣ

a)

Mg(OH)2

b)

Na2CO3

c)

NaHCO3

d)

HCl

6.

ವಾಷಿಂಗ್ ಸೋಡಾದ ಸ್ಪಟಿಕದಲ್ಲಿ ಕಂಡುಬರುವ ಸ್ಪಟಿಕ ಜಲ ಅಣುಗಳ ಸಂಖ್ಯೆ

a)

5

b)

2

c)

7

d)

10

7.

ಊಟದ ಸೇವನೆ ಹೆಚ್ಚಾದಾಗ ಅಜೀರ್ಣತೆಯಿಂದ ಬಳಲುತ್ತಿರುವವರಿಗೆ ಈ ಕೆಳಗಿನ ಯಾವ ಔಷಧಿಯನ್ನು ನೀಡುವಿರಿ?

a)

ಆಂಟಿಬಯೋಟಿಕ್

b)

ಅನಾಲ್ಜೆಸಿಕ್

c)

ಆಂಟಾಸಿಡ್

d)

ಆಂಟಿಸೆಪ್ಟಿಕ್

8.

ಜೇನು ಕಡಿತವನ್ನು ಇದರಿಂದ ಉಪಶಮನಗೊಳಿಸಬಹುದು

a)

ವಿನೆಗರ್

b)

ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

c)

ಪೊಟಾಸಿಯಂ ಹೈಡ್ರಾಕ್ಸೈಡ್

d)

ನಿಂಬೆ ರಸ

9.

ತಾಜಾ ಹಾಲಿನ pH 6 ಆಗಿರುತ್ತದೆ. ಹಾಲು ಮೊಸರಾಗಿ ಪರಿವರ್ತನೆ ಹೊಂದಿದ ನಂತರ ಅದರ pH ಮೌಲ್ಯ

a)

6

b)

6 ಕ್ಕಿಂತ ಕಡಿಮೆ

c)

7 ಕ್ಕಿಂತ ಹೆಚ್ಚು

d)

ಬದಲಾಗುವುದಿಲ್ಲ

10.

ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ತಯಾರಿಸಲು ಬಳಸುವ ವಸ್ತು

a)

ಸೀಮೆಂಟ್

b)

ಜಿಪ್ಸಮ್

c)

ಪ್ಲಾಸ್ಟರ್

d)

ಪ್ರೋಟೀನ್

11.

ವಿನೆಗರ್ ಹಾಗೂ ಮೊಸರು ಇವುಗಳಿಗಿರುವ ಸಾಮಾನ್ಯ ಗುಣ

a)

ಸಿಹಿ ರುಚಿ

b)

ರುಚಿಯಿಲ್ಲ

c)

ಹುಳಿ ರುಚಿ

d)

ಕಹಿ ರುಚಿ

12.

ಈ ಲವಣವು ಅತಿ ಕಡಿಮೆ ಸಂಖ್ಯೆಯ ಸ್ಪಟಿಕೀಕರಣ ಜಲವನ್ನು ಹೊಂದಿದೆ

a)

ತಾಮ್ರದ ಸಲ್ಪೇಟ್

b)

ಸೋಡಿಯಂ ಕಾರ್ಬೋನೇಟ್

c)

ಪ್ಲಾಸ್ಟರ್ ಆಫ್ ಪ್ಯಾರಿಸ್

d)

ಜಿಪ್ಸಮ್

13.

A, B, C ಮತ್ತು D ದ್ರಾವಣಗಳ pH ಮೌಲ್ಯವು ಕ್ರಮವಾಗಿ 2, 3, 4 ಮತ್ತು 5. ಇವುಗಳಲ್ಲಿ ಅತಿ ಹೆಚ್ಚು ಆಮ್ಲೀಯ ಗುಣವನ್ನು ಹೊಂದಿರುವ ದ್ರಾವಣ

a)

A ದ್ರಾವಣ

b)

B ದ್ರಾವಣ

c)

C ದ್ರಾವಣ

d)

D ದ್ರಾವಣ

14.

ಈ ಲವಣವನ್ನು ಉತ್ಕರ್ಷಣಕಾರಿಯಾಗಿ ಬಳಸಬಹುದು

a)

ಪ್ಲಾಸ್ಟರ್ ಆಫ್ ಪ್ಯಾರಿಸ್

b)

ಚೆಲುವೆ ಪುಡಿ

c)

ಅಡುಗೆ ಸೋಡಾ

d)

ವಾಷಿಂಗ್ ಸೋಡಾ

15.

ಇವುಗಳಲ್ಲಿ ಯಾವುದು ಆಮ್ಲಗಳ ಗುಣವಲ್ಲ?

a)

ಹುಳಿ ರುಚಿ ಹೊಂದಿವೆ

b)

ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತವೆ

c)

pH ಮೌಲ್ಯವು 7 ಕ್ಕಿಂತ ಕಡಿಮೆ ಇರುತ್ತದೆ

d)

ಪ್ರತ್ಯಾಮ್ಲದೊಂದಿಗೆ ವರ್ತಿಸಿ ಆಲ್ಕೋಹಾಲ್ ಉಂಟಾಗುತ್ತದೆ.

16.

ಇರುವೆ ಕಡಿತದಲ್ಲಿರುವ ಆಮ್ಲ

a)

ಹೈಡ್ರೋಕ್ಲೋರಿಕ್ ಆಮ್ಲ

b)

ಮೆಥನೋಯಿಕ್ ಆಮ್ಲ

c)

ಹೈಡ್ರೋಫ್ಲೂರಿಕ್ ಆಮ್ಲ

d)

ನೈಟ್ರಿಕ್ ಆಮ್ಲ

17.

ಶುಷ್ಕ ಹೈಡ್ರೋಕ್ಲೋರಿಕ್ ಆಮ್ಲ ಅನಿಲವನ್ನು ಶುಷ್ಕ ನೀಲಿ ಹಾಗೂ ಕೆಂಪು ಲಿಟ್ಮಸ್ ಕಾಗದಕ್ಕೆ ಹಾಯಿಸಿದಾಗ ಈ ಬದಲಾವಣೆಯನ್ನು ಗಮನಿಸುವಿರಿ

a)

ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕೆ ತಿರುಗುತ್ತದೆ

b)

ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ತಿರುಗುತ್ತದೆ

c)

ಎರಡೂ ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುತ್ತದೆ

d)

ಲಿಟ್ಮಸ್ ಕಾಗದಗಳ ಬಣ್ಣ ಬದಲಾಗುವುದಿಲ್ಲ

18.

ಸತುವಿನ ಚೂರು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ನೈಟ್ರೋಜನ್ ಅನಿಲ

b)

ಕ್ಲೋರಿನ್ ಅನಿಲ

c)

ಹೈಡ್ರೋಜನ್ ಅನಿಲ

d)

ಆಕ್ಸಿಜನ್ ಅನಿಲ

19.

ನೀರಿನಲ್ಲಿ ವಿಲೀನಗೊಳಿಸಿದಾಗ ಆಮ್ಲವನ್ನು ಉಂಟುಮಾಡುವ ಆಕ್ಸೈಡ್

a)

ಕಬ್ಬಿಣದ ಆಕ್ಸೈಡ್

b)

ಮೆಗ್ನೀಸಿಯಂ ಆಕ್ಸೈಡ್

c)

ಸಲ್ಫರ್ ಡೈ ಆಕ್ಸೈಡ್

d)

ಕ್ಯಾಲ್ಸಿಯಂ ಆಕ್ಸೈಡ್

20.
a)

OH-

b)

H-

c)

H+

21.

ಒಂದು ಹನಿ ಬಣ್ಣರಹಿತ ದ್ರಾವಣವನ್ನು ನೀಲಿ ಲಿಟ್ಮಸ್ ಕಾಗದದ ಮೇಲೆ ಹಾಕಿದಾಗ ಲಿಟ್ಮಸ್ ಕಾಗದವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾದರೆ ಆ ಬಣ್ಣರಹಿತ ದ್ರಾವಣ

a)

ಸಾರರಿಕ್ತ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ

b)

ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ

c)

ಸೋಡಿಯಂ ಕಾರ್ಬೋನೇಟ್ ದ್ರಾವಣ

d)

ಅಸವಿತ ನೀರು

22.

Captionless Image

a)

OH-

b)

H-

c)

H+

d)

OH+

23.

ನಮ್ಮ ದೇಹವು _______ pH ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ

a)

7.0 ರಿಂದ 7.8

b)

6.0 ರಿಂದ 6.8

c)

6.5 ರಿಂದ 7.2

d)

8.1 ರಿಂದ 9.0

24.

ಒಂದು ಹನಿ ಬಣ್ಣರಹಿತ ದ್ರಾವಣವನ್ನು ನೀಲಿ ಲಿಟ್ಮಸ್ ಕಾಗದದ ಮೇಲೆ ಹಾಕಿದಾಗ ಲಿಟ್ಮಸ್ ಕಾಗದವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾದರೆ ಆ ಬಣ್ಣರಹಿತ ದ್ರಾವಣ

a)

ಸಾರರಿಕ್ತ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ

b)

ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ

c)

ಸೋಡಿಯಂ ಕಾರ್ಬೋನೇಟ್ ದ್ರಾವಣ

d)

ಅಸವಿತ ನೀರು

25.

ಕ್ಲೋರ್-ಅಲ್ಕಲಿ ಉತ್ಪನ್ನಗಳು

a)

NaOH+Cl2+H2

b)

NaCl+Cl2

c)

NaHCO3+Cl2+H2

d)

Cl2+H2

26.

H3O+ ಅಯಾನಿನ ಹೆಸರು

a)

ಹೈಡ್ರೋಜನ್ ಅಯಾನು

b)

ನೀರಿನ ಅಯಾನು

c)

ಆಕ್ಸಿಜನ್ ಅಯಾನು

d)

ಹೈಡ್ರೋನಿಯಂ ಅಯಾನು

27.

ಅಡುಗೆ ಸೋಡಾ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳು

a)

ಸೋಡಿಯಂ ಲೋಹ, ನೀರು ಮತ್ತು ಅಮೋನಿಯ

b)

ಸೋಡಿಯಂ ಕ್ಲೋರೈಡ್, ನೀರು, ಕಾರ್ಬನ್ ಡೈ ಆಕ್ಸೈಡ್ ಮತ್ತು ಅಮೋನಿಯಾ

c)

ಸೋಡಿಯಂ ಕಾರ್ಬೋನೇಟ್, ನೀರು ಮತ್ತು ಅಮೋನಿಯಾ

d)

ಸೋಡಿಯಂ ಕ್ಲೋರೈಡ್, ಕಾರ್ಬನ್ ಡೈ ಆಕ್ಸೈಡ್ ಮತ್ತು ಅಮೋನಿಯಾ

28.

ಇವುಗಳಲ್ಲಿ ಹೆಚ್ಚು ಹೈಡ್ರಾಕ್ಸಿಲ್ ಅಯಾನುಗಳನ್ನು ಉಂಟುಮಾಡುವ ಸಂಯುಕ್ತ

a)

ಸೋಡಿಯಂ ಹೈಡ್ರಾಕ್ಸೈಡ್

b)

ಅಸಿಟಿಕ್ ಆಮ್ಲ

c)

ಅಮೋನಿಯಂ ಹೈಡ್ರಾಕ್ಸೈಡ್

d)

ಯಾವುದೂ ಅಲ್ಲ

29.

ಈ ಸಮೀಕರಣದಲ್ಲಿ Xಅನ್ನು ಗುರುತಿಸಿ CaCO3+H2+CO2 --> X

a)

CaCO4

b)

CaO3

c)

Ca(HCO3)2

d)

CaHCO3

30.

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಸತುವಿನ ಚೂರನ್ನು ಹಾಕಿದಾಗ ದೊರೆಯುವ ಉತ್ಪನ್ನಗಳು

a)

ಸೋಡಿಯಂ ಕಾರ್ಬೋನೇಟ್ ಮತ್ತು ಹೈಡ್ರೋಜನ್ ಅನಿಲ

b)

ಸೋಡಿಯಂ ಕ್ಲೋರೈಡ್ ಮತ್ತು ಆಕ್ಸಿಜನ್ ಅನಿಲ

c)

ಸೋಡಿಯಂ ಮತ್ತು ಸತುವಿನ ಹೈಡ್ರಾಕ್ಸೈಡ್

d)

ಸೋಡಿಯಂ ಝಿಂಕೇಟ್ ಮತ್ತು ಹೈಡ್ರೋಜನ್ ಅನಿಲ