NEW
Font size
Worksheetsವಿಜ್ಞಾನ
Total questions: 22
Worksheet time: 11mins
ಈ ಕೆಳಗಿನ ಯಾವ ಅಂಶಗಳ ಆಧಾರ ಮೇಲೆ ರಾಸಾಯನಿಕ ಕ್ರಿಯೆ ನಡೆದಿದೆ ಎಂದು ಹೇಳಬಹುದು.
ಸ್ಥಿತಿ ಬದಲಾವಣೆ
ಅನಿಲದ ಬಿಡುಗಡೆ
ಬಣ್ಣ ಮತ್ತು ತಾಪದಲ್ಲಿ ಬದಲಾವಣೆ
ಎಲ್ಲವೂ ಸರಿ
ರಾಸಾಯನಿಕ ಕ್ರಿಯೆಯನ್ನು ಸಂಕ್ಷಿಪ್ತ ರೂಪದಲ್ಲಿ ಬರೆಯುವ ವಿಧಾನ ------
ರಾಸಾಯನಿಕ ಸಂಯೋಗ
ರಾಸಾಯನಿಕ ಸಮೀಕರಣ
ರಾಸಾಯನಿಕ ವಿಭಜನೆ
ರಾಸಾಯನಿಕ ದ್ವಿಸ್ಥಾನಪಲ್ಲತಟ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಾಗಲಿ, ಲಯಗೊಳಿಸುವುದಾಗಲಿ ಸಾಧ್ಯವಿಲ್ಲ. ಇದು ------
ರಾಶಿ ಸಂರಕ್ಷಣಾ ನಿಯಮ
ಕಮಟುವಿಕೆ
ರಾಸಾಯನಿಕ ಸಮೀಕರಣ
ಉತ್ಕರ್ಷಣ
ಎರಡು ಅಥವಾ ಹೆಚ್ಚು ವಸ್ತುಗಳು ಸಂಯೋಗವಾಗಿ ಒಂದೇ ಉತ್ಪನ್ನ ಉಂಟಾಗುವ ಕ್ರಿಯೆ --------
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ಸಂಯೋಗ
ರಾಸಾಯನಿಕ ವಿಭಜನೆ
ಉತ್ಪನ್ನಗಳೊಂದಿಗೆ ಉಷ್ಣ ಬಿಡುಗಡೆಯಾಗುವ ರಾಸಾಯನಿಕ ಕ್ರಿಯೆಗಳಿಗೆ ---------- ಎನ್ನುವರು.
ಅಂತರುಷ್ಣಕ ರಾಸಾಯನಿಕ ಕ್ರಿಯೆಗಳು
ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳು
ಉತ್ಕರ್ಷಣ ಕ್ರಿಯೆಗಳು
ಅಪಕರ್ಷಣ ಕ್ರಿಯೆಗಳು
ಈ ಕೆಳಗಿನವುಗಲ್ಲಿ ಭೌತ ಬದಲಾವಣೆಗೆ ಒಳಪಡುವ ಸನ್ನಿವೇಶ ಗುರುತಿಸಿ.
ಉಸಿರಾಟ
ದ್ರಾಕ್ಷಿಗಳು ಹುದುಗುವಿಕೆಗೆ ಒಳಗಾಗುವಿಕೆ
ಕಟ್ಟಿಗೆಯ ದಹನ
ನೀರಿನ ಘನೀಕರಣ
ರಾಸಾಯನಿಕ ವಿಭಜನೆ ಕ್ರಿಯೆ ಬೆಳಕಿನ ಸಹಾಯದಿಂದ ನಡೆದರೆ ಅದು ---------
ವಿದ್ಯುದ್ವಿಭಜನೆ
ದ್ಯುತಿ ವಿಭಜನೆ
ಉಷ್ಣ ವಿಭಜನೆ
ದ್ಯುತಿಸಂಶ್ಲೇಷಣೆ
ಸರಿದೂಗಿಸಿದ ಸಮೀಕರಣ ಗುರುತಿಸಿ
SiO2 + 2Mg --------> Si + 2MgO
SiO2 + Mg ----------> Si + MgO
2SiO2 + 2Mg -------> Si + MgO
SiO2 + 2Mg ----------> 2Si + 2MgO
ಶಕ್ತಿ ಹೀರಿಕೆಯಾಗುವ ರಾಸಾಯನಿಕ ಕ್ರಿಯೆಗಳಿಗೆ ---------- ಎನ್ನುವರು.
ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳು
ಅಂತರುಷ್ಣಕ ರಾಸಾಯನಿಕ ಕ್ರಿಯೆಗಳು
ಅಪಕರ್ಷಣ ಕ್ರಿಯೆಗಳು
ಉತ್ಕರ್ಷಣ ಕ್ರಿಯೆಗಳು
ಸೀಸದ ನೈಟ್ರೇಟನ್ನು ಒಂದು ಪ್ರನಾಳದಲ್ಲಿ ಕಾಸಿದಾಗ ಕಂದುಬಣ್ಣದ ಧೂಮ ಉಂಟಾಗುತ್ತದೆ. ಕಂದುಬಣ್ಣದ ಧೂಮಕ್ಕೆ ಕಾರಣವಾದ ಅನಿಲ ------
NO2
O2
SO2
CO2
Fe(s) + CuSO4(aq) -------------------------->FeSO4(aq) +Cu(s)
ಇದು ಯಾವ ವಿಧದ ರಾಸಾಯನಿಕ ಕ್ರಿಯೆ?
ರಾಸಾಯನಿಕ ದ್ವಿಸ್ಥಾನಪಲ್ಲಟ
ರಾಸಾಯನಿಕ ವಿಭಜನೆ
ರಾಸಾಯನಿಕ ಸಂಯೋಗ
ರಾಸಾಯನಿಕ ಸ್ಥಾನಪಲ್ಲಟ
ಸ್ಥಾನಪಲ್ಲಟ ಕ್ರಿಯೆಯ ನಂತರ ತಾಮ್ರದ ಸಲ್ಫೇಟ್ ದ್ರಾವಣ ಹಸಿರು ಬಣ್ಣಕ್ಕೆ ತಿರುಗಲು ಕಾರಣ ---
ತಾಮ್ರದ ಸಲ್ಫೇಟ್
ಕಬ್ಬಿಣ
ಕಬ್ಬಿಣದ ಸಲ್ಫೇಟ್
ತಾಮ್ರ
ದ್ವಿಸ್ಥಾನಪಲ್ಲಟ ಕ್ರಿಯೆಯಲ್ಲಿ ---------ಗಳ ವಿನಿಮಯ ಕ್ರಿಯೆ ನಡೆಯುತ್ತದೆ.
ಪರಮಾಣು
ಅಣು
ಅಯಾನು
ಅನಿಲ
Na2SO4(aq) + BaCl2(aq)-------------->BaSO4(s) + 2NaCl(aq). ಈ ಸಮೀಕರಣದಲ್ಲಿ ಬಿಳಿಯ ಪ್ರಕ್ಷೇಪ-------
Na2SO4(aq)
BaCl2(aq)
2NaCl(aq)
BaSO4(aq)
ಉತ್ಕರ್ಷಣ ಕ್ರಿಯೆಯಲ್ಲಿ ಒಂದು ವಸ್ತು ಪಡೆದುಕೊಳ್ಳುವ ಧಾತು------
N2
O2
Cl2
H2
CuO + H2 -----ಉಷ್ಣ ---> Cu + H2O. ಈ ಕ್ರಿಯೆಯಲ್ಲಿ ಅಪಕರ್ಷಣೆಗೊಂಡ ವಸ್ತು ಯಾವುದು?
H2
Cu
H2O
CuO
2Cu + O2 ----ಉಷ್ಣ---->2CuO. ಈ ಕ್ರಿಯೆಯಲ್ಲಿ ಉತ್ಕರ್ಷಣೆಯಾದ ವಸ್ತು ಯಾವುದು?
O2
Cu
CuO
ಎಲ್ಲವೂ ಸರಿ
ರೆಡಾಕ್ಸ್ ಕ್ರಿಯೆ ಎಂದರೆ---------
ಒಂದು ಪ್ರತಿವರ್ತಕ ಮಾತ್ರ ಉತ್ಕರ್ಷಣೆಗೊಳ್ಳುತ್ತದೆ.
ಒಂದು ಪ್ರತಿವರ್ತಕ ಉತ್ಕರ್ಷಣೆಗೊಂಡು ಮತ್ತೊಂದು ಪ್ರತಿವರ್ತಕ ಅಪಕರ್ಷಣೆಗೊಳ್ಳುತ್ತದೆ.
ಎಲ್ಲವೂ ಸರಿ
ಒಂದು ಪ್ರತಿವರ್ತಕ ಮಾತ್ರ ಅಪಕರ್ಷಣೆಗೊಳ್ಳುತ್ತದೆ.
ಆಕ್ಸಿಜನ್, ತೇವಾಂಶ ಅಥವಾ ಆಮ್ಲಗಳಿಂದ ಲೋಹದ ವಸ್ತುಗಳು ತಮ್ಮಮೇಲ್ಪದರವನ್ನು ಕಳೆದುಕೊಳ್ಳುವ ಕ್ರಿಯೆಗೆ------ಎನ್ನುವರು .
ಕಮಟುವಿಕೆ
ಉತ್ಕರ್ಷಣ
ಸಂಕ್ಷಾರಣ
ಅಪಕರ್ಷಣ
ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡು ರುಚಿ ಮತ್ತು ವಾಸನೆ ಬದಲಾಗುವ ಕ್ರಿಯೆಗೆ ------ಎನ್ನುವರು.
ಕಮಟುವಿಕೆ
ಉತ್ಕರ್ಷಣ
ಅಪಕರ್ಷಣ
ಸಂಕ್ಷಾರಣ
ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು ತಡೆಗಟ್ಟಲು ಚಿಪ್ಸ್ ಪೊಟ್ಟಣದಲ್ಲಿ ಬಳಸುವ ಅನಿಲ ------
ಆಕ್ಸಿಜನ್
ನೈಟ್ರೋಜನ್
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಈ ಕೆಳಗಿನವುಗಳಲ್ಲಿ ಸಂಕ್ಷಾರಣ ಕ್ರಿಯೆಗೆ ಸಂಬಂಧ ಪಡದ ಹೇಳಿಕೆಯನ್ನು ಗುರುತಿಸಿ.
ಕಬ್ಬಿಣ ತುಕ್ಕು ಹಿಡಿಯುವುದು.
ತಾಮ್ರದ ಮೇಲೆ ಹಸಿರು ಲೇಪನ ಉಂಟಾಗುವುದು.
ಕೊಬ್ಬು ಮತ್ತು ಎಣ್ಣೆ ಪದಾರ್ಥಗಳಲ್ಲಿ ವಾಸನೆ ಮತ್ತು ರುಚಿ ಬದಲಾವಣೆ.
ಬೆಳ್ಳಿಯ ಮೇಲೆ ಕಪ್ಪು ಲೇಪನ ಉಂಟಾಗುವುದು.
