Wayground logo

Free Printable Worksheets

Font size

S
M
L
XL
Worksheets

ಯುದ್ಧ ಭಾಗ-3

Total questions: 15

Worksheet time: 8mins

Name
Class
Date
1.

"ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದಾನೆ ಪ್ಲೀಸ್" ಈ ಮಾತನ್ನು ಹೇಳಿದವರು...

a)

ಹೆಂಗಸು

b)

ರಾಹಿಲ್

c)

ಪೈಲೆಟ್

d)

ಸಾರಾ ಅಬೂಬಕರ್

2.

"ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ ತಾನೇ?" ಈ ಮಾತನ್ನು ಹೇಳಿದವರು....

a)

ಮುದುಕಿ

b)

ರಾಹಿಲ್

c)

ಸಾರಾ ಅಬೂಬಕರ್

d)

ವಿಮಾನ ಪೈಲಟ್

3.

ಯಾರಪ್ಪ ನೀನು ನಮ್ಮ ಕಡೆಯವನು ತಾನೆ- ಈ ವಾಕ್ಯದಲ್ಲಿ ಬಳಸಲಾದ ಲೇಖನ ಚಿಹ್ನೆ

a)

ಭಾವಸೂಚಕ ಚಿಹ್ನೆ

b)

ಉದ್ಧರಣ ಚಿಹ್ನೆ

c)

ಪ್ರಶ್ನಾರ್ಥಕ ಚಿಹ್ನೆ

d)

ವಾಕ್ಯವೇಷ್ಟನ ಚಿಹ್ನೆ

4.

"ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" ಈ ಮಾತನ್ನು ಯಾರು ಯಾರಿಗೆ ಹೇಳಿದ್ದಾರೆ ?

a)

ಮುದುಕಿ ರಾಹೀಲನಿಗೆ ಹೇಳಿದಳು

b)

ರಾಹಿಲ್ ಮುದುಕಿಗೆ ಹೇಳಿದನು

c)

ರಾಹಿಲ್ ಪೈಲೆಟ್ ಗೆ ಹೇಳಿದನು

d)

ಮುದುಕಿ ತನ್ನ ಸೊಸೆಗೆ ಹೇಳಿದಳು

5.

"ಅಮ್ಮಾ ನಾನೋರ್ವ ಡಾಕ್ಟರ್. ನಾನು ಆಕೆಯನ್ನು ಪರೀಕ್ಷಿಸಲೇ?" ರಾಹುಲ್ ಈ ಮಾತನ್ನು ಯಾರಿಗೆ ಹೇಳಿದನು.?

a)

ಮುದುಕಿಗೆ ಹೇಳಿದನು

b)

ಮುದುಕಿಯ ಸೊಸೆಗೆ ಹೇಳಿದನು

c)

ಪೈಲೆಟ್ ಗೆ ಹೇಳಿದನು

d)

ಯಾವುದು ಅಲ್ಲ

6.

"ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ" ಈ ಮಾತನ್ನು ಹೇಳಿದವರು

a)

ಮುದುಕಿ

b)

ಮುದುಕಿಯ ಸೊಸೆ

c)

ಪೈಲೆಟ್

d)

ರಾಹಿಲ್

7.

ರಾಹಿಲ್ ತನ್ನ ಕಾಲಿನ ಎರಡು ಭಾಗಗಳಿಗೆ ಏನನ್ನು ಇಟ್ಟುಕೊಂಡು ಬಿಗಿದು ಕೊಂಡನು?

a)

ಹಗ್ಗವನ್ನು

b)

ಬಟ್ಟೆಯನ್ನು

c)

ಹಲಗೆ ತುಂಡುಗಳನ್ನು

d)

ಮರವನ್ನು

8.

ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿದ್ದು ಏನು?

a)

ಮುದುಕಿ ಮತ್ತು ಸೊಸೆಯ ರೋಧನ

b)

ಮುದುಕಿ ಮತ್ತು ರಾಹೀಲನ ರೋಧನ

c)

ಮುದುಕಿಯೊಬ್ಬಳ ರೋಧನ

d)

ಎಲ್ಲವೂ ಸರಿ

9.

ಮನೆಯೊಳಗೆ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪ ಸಂಧಿ

b)

ವಕಾರಾಗಮ ಸಂಧಿ

c)

ಯಕಾರಾಗಮ ಸಂಧಿ

d)

ಯಣ್ ಸಂಧಿ

10.

ದೃಷ್ಟಿ ಪದದ ತದ್ಭವ ರೂಪ

a)

ಸೃಷ್ಟಿ

b)

ದಿಟ್ಟಿ

c)

ಷಷ್ಠಿ

d)

ಯಾವುದು ಅಲ್ಲ

11.

ಸೂಲಗಿತ್ತಿ ಪದದ ಅರ್ಥ

a)

ಸಾಲ ವಸೂಲಿ ಮಾಡುವವಳು

b)

ಹೂವನ್ನು ಮಾರುವವಳು

c)

ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು

d)

ಎಲ್ಲವೂ ಸರಿ

12.

ಸಾಂತ್ವಾನ ಪದದ ಅರ್ಥ

a)

ಅಳುವಿಕೆ

b)

ಸಮಾಧಾನ ಪಡಿಸುವುದು

c)

ನಿರಾಸೆ ಗೊಳ್ಳುವುದು

d)

ಕರುಣೆ ಇಲ್ಲದಿರುವುದು

13.

ಡಾಕ್ಟರ್ ಈ ಪದವು ಯಾವ ಭಾಷೆಯಿಂದ ಬಂದಿದೆ ?

a)

ಉರ್ದು

b)

ಪೋರ್ಚುಗೀಸ್

c)

ಪರ್ಷಿಯನ್

d)

ಇಂಗ್ಲಿಷ್

14.

ನೀರಲ್ಲಿ ಈ ಪದವನ್ನು ಬಿಡಿಸಿ ಬರೆದಾಗ ಬರುವ ರೂಪ

a)

ನೀ+ ಅಲ್ಲಿ

b)

ನೀರಿಗೆ + ಅಲ್ಲಿ

c)

ನೀರಿನ + ಅಲ್ಲಿ

d)

ನೀರು + ಅಲ್ಲಿ

15.

ಬಿಸಿನೀರು ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ ?

a)

ತತ್ಪುರುಷ

b)

ದ್ವಂದ್ವ

c)

ಕರ್ಮಧಾರೆಯ

d)

ಕ್ರಿಯಾ