NEW
Font size
Worksheets10th Science ಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 39
Worksheet time: 20mins
ಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ ಗೆ ಉದಾಹರಣೆ
ಹೆಕ್ಸೀನ್
ಈಥೈನ್
ಪೆಂಟೇನ್
ಬ್ಯೂಟೀನ್
ಅತ್ಯಂತ ಸರಳ ಹೈಡ್ರೋಕಾರ್ಬನ್
ಈಥೀನ್
ಮೀಥೇನ್
ಬ್ಯೂಟೇನ್
ಬೆಂಜೀನ್
ಪರ್ಯಾಪ್ತ ಹೈಡ್ರೋಕಾರ್ಬನ್ ಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ಏಕಬಂಧದ ಜೊತೆ ದ್ವಿಬಂಧ ಹೊಂದಿವೆ
ಏಕಬಂಧದ ಜೊತೆ ತ್ರಿಬಂಧ ಹೊಂದಿವೆ
ಏಕಬಂಧದ ಜೊತೆ ದ್ವಿಬಂಧ ಹಾಗೂ ತ್ರಿಬಂಧ ಹೊಂದಿವೆ.
ಏಕಬಂಧ ಮಾತ್ರ ಹೊಂದಿವೆ
ಮೂರು ಕಾರ್ಬನ್ ಪರಮಾಣುಗಳನ್ನು ಹೊಂದಿದ್ದು ಒಂದು ದ್ವಿಬಂಧವನ್ನು ಹೊಂದಿರುವ ಹೈಡ್ರೋಕಾರ್ಬನ್ ಸಂಯುಕ್ತ
ಪ್ರೋಪೇನ್
ಪ್ರೋಪೀನ್
ಪ್ರೋಪೈನ್
ಪ್ರೋಪೇನಾಲ್
ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನುಂಟು ಮಾಡಿ ಬೃಹತ್ ಅಣುಗಳನ್ನು ಕೊಡುವ ವಿಶಿಷ್ಟ ಗುಣ
ಸಮಾಂಗತೆ
ಬಹುರೂಪತೆ
ಕೆಟನೀಕರಣ
ಹೈಡ್ರೋಜನೀಕರಣ
ಯಾವ ಎರಡು ರಾಸಾಯನಿಕಗಳ ನಡುವಿನ ಕ್ರಿಯೆಯಿಂದ ಸಾಮಾನ್ಯವಾಗಿ ಎಸ್ಟರ್ ಉಂಟಾಗುತ್ತದೆ
ಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಆಲ್ಕೋಹಾಲ್
ಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಪ್ರತ್ಯಾಮ್ಲ
ಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಆಲ್ಕೇನ್
ಪ್ರತ್ಯಾಮ್ಲ ಮತ್ತು ಆಲ್ಕೋಹಾಲ್
ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ, ಇದರ ಅರ್ಥ
ಆಹಾರ ಪೂರ್ಣವಾಗಿ ಬೆಂದಿಲ್ಲ
ಇಂಧನವು ಪೂರ್ಣ ದಹನವಾಗಿಲ್ಲ.
ಇಂಧನವು ಒದ್ದೆಯಾಗಿದೆ
ಇಂಧನವು ಪೂರ್ಣ ದಹನವಾಗಿದೆ
ಕಾರ್ಬನ್ ನ ವೇಲೆನ್ಸಿ
6
4
2
3
C₃H₇OH ಈ ಕಾರ್ಬಾನಿಕ ಸಂಯುಕ್ತದಲ್ಲಿರುವ ಕ್ರಿಯಾಗುಂಪು
ಆಲ್ಕೋಹಾಲ್
ಕೀಟೋನ್
ಆಲ್ಡಿಹೈಡ್
ಕಾರ್ಬಾಕ್ಸಿಲಿಕ್ ಆಮ್ಲ
ಕೆಳಗಿನವುಗಳಲ್ಲಿ ಸೈಕ್ಲೋಬ್ಯೂಟೇನ್ ನ ಅಣುಸೂತ್ರ
C₄H₁₀
C₄H₆
C₄H₄
C₄H₈
ಕಾರ್ಬನ್ ಸರಪಳಿಯಲ್ಲಿ ಒಂದು ಕಡೆ ದ್ವಿಬಂಧವನ್ನು ಹೊಂದಿದ್ದು, ನಾಲ್ಕು ಕಾರ್ಬನ್ ಗಳನ್ನು ಹೊಂದಿರುವ ಹೈಡ್ರೋಕಾರ್ಬನ್ ಸಂಯುಕ್ತ
ಬ್ಯೂಟೀನ್
ಪೆಂಟೀನ್
ಬ್ಯೂಟೇನ್
ಬ್ಯೂಟೈನ್
ಇವುಗಳಲ್ಲಿ ಸಂಕಲನ ಕ್ರಿಯೆಗೆ ಒಳಪಡುವ ಹೈಡ್ರೋಕಾರ್ಬನ್
C₂H₄
C₂H₆
C₃H₈
CH₄
ಪ್ರೋಪೇನೋಯಿಕ್ ಆಮ್ಲದ ಸೂತ್ರ
CH₃-CH₂-CH₂-COOH
CH₃-CH₂-COOH
CH₃-CH₂-CHO
CH₃-CH₂-CH₂--CH₂-COO
CH₃-CO-CH₃ ಈ ಸಂಯುಕ್ತದಲ್ಲಿರುವ ಕ್ರಿಯಾಗುಂಪು
ಕಾರ್ಬಾಕ್ಸಿಲಿಕ್ ಆಮ್ಲ
ಆಲ್ಡಿಹೈಡ್
ಆಲ್ಕೋಹಾಲ್
ಕೀಟೋನ್
ಸಂಕಲನ ಕ್ರಿಯೆಗೆ ಒಳಪಡುವ ಹೈಡ್ರೋಕಾರ್ಬನ್ ಗಳು
ಆಲ್ಕೀನ್ ಗಳು ಮಾತ್ರ
ಆಲ್ಕೈನ್ ಗಳು ಮಾತ್ರ
ಆಲ್ಕೀನ್ ಮತ್ತು ಆಲ್ಕೈನ್ ಗಳು
ಆಲ್ಕೇನ್ ಗಳು
C₃H₈ ಈ ಕೆಳಗಿನ ಯಾವ ಅನುರೂಪ ಶ್ರೇಣಿಗೆ ಸೇರಿದೆ?
ಆಲ್ಕೀನ್
ಆಲ್ಕೇನ್
ಆಲ್ಕೈನ್
ಸೈಕ್ಲೋ ಆಲ್ಕೇನ್
ಸಮೀಕರಣ ಪೂರ್ಣಗೊಳಿಸಿ. CH₃-COOH + CH₃-CH₂-OH → _____
CH₃-COO-CH₂-CH₃
CH₃-CH₂-OH
CH₃-CH₂-CHO
CH₃-CO-CH₃
ಎಥನಾಲನ್ನು 443K ತಾಪದಲ್ಲಿ ಹೆಚ್ಚಿನ ಪ್ರಮಾಣದ ಸಾರೀಕೃತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಸಿದಾಗ ಸಿಗುವ ಉತ್ಪನ್ನ
ಈಥೀನ್
ಮೀಥೇನ್
ಬ್ಯೂಟೇನ್
ಈಥೈನ್
ಉದ್ದ ಸರಪಳಿಯನ್ನು ಹೊಂದಿರುವ ಕಾರ್ಬಾಕ್ಸಿಲಿಕ್ ಆಮ್ಲದ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣಗಳನ್ನು ಹೀಗೆನ್ನುತ್ತಾರೆ
ಮಾರ್ಜಕ
ಸಾಬೂನು
ಅಡುಗೆ ಸೋಡಾ
ಅಡುಗೆ ಉಪ್ಪು
5-8% ಅಸಿಟಿಕ್ ಆಮ್ಲದ ದ್ರಾವಣವನ್ನು ಹೀಗೆನ್ನುವರು
ಬೇಕಿಂಗ್ ಸೋಡಾ
ವಿನೆಗರ್
ಸೋಡಿಯಂ ಅಸಿಟೇಟ್
ಪ್ರೋಪನೋಯಿಕ್ ಆಮ್ಲ
-COOH ಇದು ಯಾವ ಕ್ರಿಯಾಗುಂಪಿನ ಅಣುಸೂತ್ರವನ್ನು ಪ್ರತಿನಿಧಿಸುತ್ತದೆ?
ಆಲ್ಕೋಹಾಲ್
ಆಲ್ಡಿಹೈಡ್
ಕಾರ್ಬಾಕ್ಸಿಲಿಕ್ ಆಮ್ಲ
ಕೀಟೋನ್
ಎಥನಾಲ್ ಸೋಡಿಯಂನೊಂದಿಗೆ ವರ್ತಿಸಿ ಉಂಟುಮಾಡುವ ಉತ್ಪನ್ನ
ಸೋಡಿಯಂ ಎಥಾಕ್ಸೈಡ್
ಸೋಡಿಯಂ ಅಸಿಟೇಟ್
ಸೋಡಿಯಂ ಪಾಮಿಟೇಟ್
ಎಸ್ಟರ್
ಸಸ್ಯಜನ್ಯ ಎಣ್ಣೆಗಳ ಹೈಡ್ರೋಜನೀಕರಣದಲ್ಲಿ ಈ ಧಾತುವನ್ನು ಕ್ರಿಯಾವರ್ಧಕವಾಗಿ ಬಳಸುತ್ತಾರೆ.
ಕೋಬಾಲ್ಟ್
ಕಬ್ಬಿಣ
ನಿಕ್ಕಲ್
ಅಯೋಡಿನ್
ಎಥನೋಯಿಕ್ ಆಮ್ಲವು ಕಾರ್ಬೋನೇಟ್ ಅಥವಾ ಹೈಡ್ರೋಜನ್ ಕಾರ್ಬೋನೇಟ್ ನೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಕ್ಲೋರಿನ್
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ನೈಟ್ರೋಜನ್
ಅಮೋನಿಯಾ ಅಣುವಿನಲ್ಲಿ ಈ ವಿಧದ ಬಂಧವಿದೆ
ಕೇವಲ ದ್ವಿಬಂಧ
ಕೇವಲ ತ್ರಿಬಂಧ
ದ್ವಿಬಂಧ ಮತ್ತು ತ್ರಿಬಂಧ
ಕೇವಲ ಏಕಬಂಧ
ಆಲ್ಕೋಹಾಲ್ ಸೋಡಿಯಂನೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ
ಆಕ್ಸಿಜನ್
ಕ್ಲೋರಿನ್
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್
ಸೈಕ್ಲೋಆಲ್ಕೇನ್ ಗಳ ಮೊದಲ ಸದಸ್ಯ
ಮೀಥೇನ್
ಈಥೈನ್
ಪ್ರೋಪೇನ್
ಸೈಕ್ಲೋಪ್ರೋಪೇನ್
ಮೆಥನೋಯಿಕ್ ಆಮ್ಲದ ಅಣುಸೂತ್ರ
CH₃-COOH
H-COOH
CH₃-CH₂-COOH
H-CHO
C₄H₁₀ ಇದರಲ್ಲಿರುವ ಸಹವೇಲೆನ್ಸೀಯ ಬಂಧಗಳ ಸಂಖ್ಯೆ
13
10
12
14
ಎಥನಾಲ್ ಅನ್ನು ಎಥನೋಯಿಕ್ ಆಮ್ಲವಾಗಿ ಪರಿವರ್ತಿಸುವುದು ಈ ಕ್ರಿಯೆಯಾಗಿದೆ
ಅಪಕರ್ಷಣ
ಉತ್ಕರ್ಷಣ
ನಿರ್ಜಲೀಕರಣ
ಎಸ್ಟರೀಕರಣ
ಆಲ್ಕೈನ್ ಗಳ ಸಾಮಾನ್ಯ ಅಣುಸೂತ್ರ
CnH2n+2
CnH2n-2
CnH2n
CH2n+2
ಒಂದು ಪ್ರನಾಳದಲ್ಲಿ 1ml ಶುದ್ದ ಎಥನಾಲ್ ಹಾಗೂ 1ml ಗ್ಲೇಷಿಯಲ್ ಅಸಿಟಿಕ್ ಆಮ್ಲವನ್ನು ತೆಗೆದುಕೊಂದು ಕೆಲವು ಹನಿ ಸಾರಿಕೃತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಜಲತಪ್ತಕದಲ್ಲಿ ಕಾಯಿಸಿ, ನಂತರ 10-20ml ನೀರಿರುವ ಬೀಕರಿಗೆ ಹಾಕಿದಾಗ ಸುವಾಸನೆಯುಕ್ತ ವಸ್ತು ಉಂಟಾಗುತ್ತದೆ. ಅದು ಯಾವುದು?
ಸೋಡಿಯಂ ಅಸಿಟೇಟ್
ಎಸ್ಟರ್
ಸೋಡಿಯಂ ಎಥಾಕ್ಸೈಡ್
ಈಥೀನ್
ನೀರಿನ ಗಡಸುತನಕ್ಕೆ ಕಾರಣವಾದ ಲೋಹೀಯ ಅಯಾನುಗಳು
ಸೋಡಿಯಂ ಮತ್ತು ಪೊಟ್ಯಾಸಿಯಂ
ಕ್ಲೋರೈಡ್ ಮತ್ತು ಬ್ರೋಮೈಡ್
ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ
ಬ್ರೋಮಿನ್ ಮತ್ತು ಅಯೋಡಿನ್
'ಅನುರೂಪ ಶ್ರೇಣಿಗಳ ಸದಸ್ಯರ ನಡುವಿನ ಸಾಮಾನ್ಯ ವ್ಯತ್ಯಾಸ
CH2
CH3
C2H2
CH4
CH₃OH, C₂H₅OH, C₃H₇OH, …...... ಈ ಅನುರೂಪ ಶ್ರೇಣಿಗೆ ಸೇರಿರುವ ಸಂಯುಕ್ತ
C₄H₈OH
C₄H₉OH
C₄H₉CHO
C₄H₈COOH
ಈ ಕೆಳಗಿನವುಗಳಲ್ಲಿ ಉತ್ಕರ್ಷಣಕಾರಿಗೆ ಒಂದು ಉದಾಹರಣೆ
ಪೆಲೆಡಿಯಂ
ನಿಕ್ಕಲ್
ಸಲ್ಫ್ಯೂರಿಕ್ ಆಮ್ಲ
ಆಮ್ಲೀಯ ಪೊಟ್ಯಾಸಿಯಂ ಡೈಕ್ರೋಮೇಟ್
ಸೈಕ್ಲೋಆಲ್ಕೇನ್ ಗಳ ಸಾಮಾನ್ಯ ಅಣುಸೂತ್ರ
C2nH2n
CnH2n-2
CnH2n
CnH2n+2
ಬೆಂಜೀನ್ ನ ಅಣುಸೂತ್ರ
C₆H₁₂
C₆H₆
C₆H₇
C₃H₆
ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ದಹನ ಕ್ರಿಯೆಯಿಂದ ಬಿಡುಗಡೆಯಾಗುವ ಮಾಲಿನ್ಯಕಾರಕಗಳು
ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳು
ಕ್ಲೋರಿನ್ ಮತ್ತು ಫಾಸ್ಫರಸ್
ಆಕ್ಸಿಜನ್ ಮತ್ತು ಕ್ಲೋರಿನ್
ಹೈಡ್ರೋಜನ್ ಮತ್ತು ಕ್ಲೋರಿನ್
