wayground logo

Free Printable Worksheets

NEW

Font size

S
M
L
XL
Worksheets

10th ವಿದ್ಯುಚ್ಛಕ್ತಿ Prashantha.SB

Total questions: 20

Worksheet time: 10mins

Name
Class
Date
1.

ಸಾಂಪ್ರದಾಯಿಕವಾಗಿ, ವಿದ್ಯುತ್ ಮಂಡಲದಲ್ಲಿ ವಿದ್ಯುತ್ಪ್ರವಾಹದ ದಿಕ್ಕನ್ನು, ಇವುಗಳ ಹರಿವಿನ ದಿಕ್ಕಿಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತದೆ.

a)

ಪ್ರೋಟಾನ್

b)

ಇಲೆಕ್ಟ್ರಾನ್

c)

ನ್ಯೂಟ್ರಾನ್

d)

ಫೋಟಾನ್

2.

ವಿದ್ಯುತ್‌ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಸಾಧನ.

a)

ಅಮ್ಮೀಟರ್

b)

ವೋಲ್ಟಾಮೀಟರ್

c)

ರಿಯೋಸ್ಟಾಟ್

d)

ರೋಧಕ

3.

ಈ ಕೆಳಗಿನವುಗಳಲ್ಲಿ ಓಮನ ನಿಯಮವನ್ನು ಪ್ರತಿನಿಧಿಸದೇ ಇರುವುದು,

a)

V = RI

b)

R = V/I

c)

I = V/R

d)

I = VR

4.

ರೋಧದ ಕುರಿತಂತೆ ಸರಿಯಾದ ಹೇಳಿಕೆಯೆಂದರೆ_

a)

ರೋಧವು ವಾಹಕದ ಉದ್ದಕ್ಕೆ ವಿಲೋಮಾನುಪಾತದಲ್ಲಿರುತ್ತದೆ.

b)

ರೋಧವು ವಾಹಕದ ಅಡ್ಡಕೊಯ್ತಕ್ಕೆ ನೇರ ಅನುಪಾತದಲ್ಲಿದೆ.

c)

ವಾಹಕದ ರೋಧವು ತಾಪದೊಂದಿಗೆ ಬದಲಾಗುತ್ತದೆ.

d)

ರೋಧವು ವಸ್ತುವಿನ ಪ್ರಾಕೃತಿಕ ಗುಣವನ್ನು ಅವಲಂಬಿಸಿಲ್ಲ.

5.

ಈ ವಿದ್ಯುನ್ಮಂಡಲದಲ್ಲಿ I, A, K ಗಳು ಕ್ರಮವಾಗಿ ಸೂಚಿಸುವುದು.

a)

ಅಮ್ಮೀಟರ್, ಪ್ಲಗ್ ಕೀ, ವಿದ್ಯುತ್ಪ್ರವಾಹ

b)

ವಿದ್ಯುತ್ಪ್ರವಾಹ, ಅಮ್ಮೀಟರ್, ಪ್ಲಗ್ ಕೀ

c)

ವಿದ್ಯುತ್ಪ್ರವಾಹ, ಅಮ್ಮೀಟರ್, ರೋಧಕ

d)

ವಿದ್ಯುತ್ಪ್ರವಾಹ ,ಪ್ಲಗ್ ಕೀ, ಅಮ್ಮೀಟರ್

6.

ವಿದ್ಯುದಾವೇಶದ SI ಏಕಮಾನ

a)

ಓಮ್

b)

ವೋಲ್ಟ್

c)

ಆಂಪಿಯರ್

d)

ಕೂಲಮ್

7.

ರೋಧದ SI ಏಕಮಾನ

a)

ಓಮ್

b)

ವೋಲ್ಟ್

c)

ಆಂಪಿಯರ್

d)

ಕೂಲಮ್

8.

ವಿಭವಾಂತರದ SI ಏಕಮಾನ

a)

ಓಮ್

b)

ವೋಲ್ಟ್

c)

ಆಂಪಿಯರ್

d)

ಕೂಲಮ್

9.

ವಿದ್ಯುತ್ ಬಲ್ಬ್‌ನಲ್ಲಿ ಟಂಗ್‌ಸ್ಟನ್ ತಂತಿಯ ದೀರ್ಘ ಬಾಳಿಕೆಗೆ ಬಿರುಡೆಯೊಳಗೆ ತುಂಬುವ ಕಡಿಮೆ ಕ್ರಿಯಾಶೀಲ ಅನಿಲಗಳು_

a)

ಆರ್ಗಾನ್ ಮತ್ತು ನೈಟ್ರೋಜನ್

b)

ನೈಟ್ರೋಜನ್ ಮತ್ತು ಹೈಡ್ರೋಜನ್

c)

ಆಕ್ಸಿಜನ್ ಮತ್ತು ನಿಯಾನ್

d)

ನೈಟ್ರೋಜನ್ ಮತ್ತು ಆಕ್ಸಿಜನ್

10.

ಈ ಚಿತ್ರದಲ್ಲಿ ನೀಡಿರುವ ವಿದ್ಯುತ್ ಮಂಡಲದಲ್ಲಿ ಬಳಸುವ ಸಾಂಪ್ರದಾಯಿಕ ಚಿಹ್ನೆಯನ್ನು ಗುರುತಿಸಿ.

a)

ವಿದ್ಯುತ್ ಕೋಶ

b)

ಮುಚ್ಚಿದ ಸ್ವಿಚ್

c)

ರೋಧಕದ ರೋಧ

d)

ಪರಿವರ್ತಿತ ರೋಧ

11.

ವಿಭವಾಂತರವನ್ನು ಅಳೆಯಲು ಬಳಸುವ ಸಾಧನ_

a)

ಅಮ್ಮೀಟರ್

b)

ವೋಲ್ಟಾಮೀಟರ್

c)

ರಿಯೋಸ್ಟಾಟ್

d)

ಟೋಸ್ಟರ್

12.

ವಿದ್ಯುತ್ ಸಾಮರ್ಥ್ಯದ SI ಏಕಮಾನ

a)

ವ್ಯಾಟ್

b)

ಕೆಲ್ವಿನ್

c)

ಆಂಪೀಯರ್

d)

ವೋಲ್ಟ್

13.

ವಿದ್ಯುತ್ ದೀಪಗಳ ತಂತುಗಳಲ್ಲಿ ಟಂಗ್‌ಸ್ಟನ್ ನನ್ನು ಹೆಚ್ಚಾಗಿ ಬಳಸಲಾಗುತ್ತದೆ. ಏಕೆಂದರೆ_

a)

ಟಂಗ್‌ಸ್ಟನ್ ಕಡಿಮೆ ರೋಧವನ್ನು ಹೊಂದಿದೆ.

b)

ಟಂಗ್‌ಸ್ಟನ್ ಹೆಚ್ಚಿನ ತಾಪಕ್ಕೆ ಕಾಯ್ದಾಗ ದ್ರವಿಸುತ್ತದೆ.

c)

ಟಂಗ್‌ಸ್ಟನ್ ಹೆಚ್ಚಿನ ದ್ರವನ ಬಿಂದು ಹೊಂದಿದೆ.

d)

ಟಂಗ್‌ಸ್ಟನ್ ಕಡಿಮೆ ದ್ರವನ ಬಿಂದು ಹೊಂದಿದೆ.

14.

ವಾಹಕ ತಂತಿಯ ಉದ್ದವನ್ನು ದ್ವಿಗುಣಗೊಳಿಸಿದರೆ ವಿದ್ಯುತ್ಪ್ರವಾಹವು_

a)

ಎರಡರಷ್ಟಾಗುತ್ತದೆ.

b)

ನಾಲ್ಕರಷ್ಟಾಗುತ್ತದೆ.

c)

ಸ್ಥಿರವಾಗಿರುತ್ತದೆ.

d)

ಅರ್ಧದಷ್ಟಾಗುತ್ತದೆ.

15.

ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೇ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಬದಲಾಯಿಸಬಹುದಾದ ರೋಧದ ಸಾಂಪ್ರದಾಯಿಕ ಚಿಹ್ನೆಯು_

a)
b)
c)
d)
16.

ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ.

a)

ವೋಲ್ಟಾಮೀಟರನ್ನು ಸರಣಿಕ್ರದಲ್ಲೂ, ಅಮ್ಮೀಟರ್‌ನ್ನು ಸಮಾಂತರ ಕ್ರಮದಲ್ಲಿ ಜೋಡಿಸುತ್ತಾರೆ.

b)

ಫ್ಯೂಸ್‌ನ್ನು ವಿದ್ಯುತ್ ಮಂಡಲದಲ್ಲಿ ಸಮಾಂತರ ಕ್ರಮದಲ್ಲಿ ಜೋಡಿಸುತ್ತಾರೆ.

c)

ವೋಲ್ಟಾಮೀಟರನ್ನು ಸಮಾಂತರ ಕ್ರಮದಲ್ಲಿ ಜೋಡಿಸುತ್ತಾರೆ.

d)

ಅಮ್ಮೀಟರ್‌ ಮತ್ತು ವೋಲ್ಟಾಮೀಟರ್‌ಗಳೆರಡನ್ನೂ ಸರಣಿಕ್ರಮದಲ್ಲಿ ಜೋಡಿಸುತ್ತಾರೆ.

17.

ವಾಹಕದ ರೋಧವು ಅವಲಂಬಿಸಿರುವ ಅಂಶಗಳು_

a)

ವಾಹಕದ ಉದ್ದ.

b)

ವಾಹಕದ ಅಡ್ಡಕೊಯ್ತ

c)

ವಸ್ತುವಿನ ಪ್ರಾಕೃತಿಕ ಗುಣ

d)

ಎಲ್ಲಾ ಆಯ್ಕೆಗಳೂ ಸರಿ

18.

ಹೀಟರ್‌ನ ಸುರುಳಿಯ ರೋಧವು 20 Ω ಆಗಿದ್ದು, 220V ಮೂಲದಿಂದ ವಿದ್ಯುತ್ ಹೀಟರ್‌ನ ಸುರುಳಿಯು ಸೆಳೆಯುವ ವಿದ್ಯುತ್ ಪ್ರವಾಹ ಎಷ್ಟು ?

a)

11 A

b)

2.2 A

c)

0.09 A

d)

4400 A

19.

ರೋಧಕಗಳ ಸಮಾಂತರ ಜೋಡಣೆಯ ಒಂದು ಅನಾನುಕೂಲವೆಂದರೆ_

a)

ಒಂದು ಉಪಕರಣವು ಹಾಳಾದರೆ ಅಥವಾ ಬಂದಾದರೆ ಎಲ್ಲಾ ಉಪಕರಣಗಳೂ ಸ್ಥಗಿತಗೊಳ್ಳುತ್ತವೆ.

b)

ಬೇರೆ ಬೇರೆ ಉಪಕರಣಗಳಿಗೆ ಬೇರೆ ಪ್ರಮಾಣದ ವಿದ್ಯುತ್ ಬೇಕಾಗಿದ್ದರೂ, ಎಲ್ಲಾ ಉಪಕರಣಗಳಿಗೂ ಒಂದೇ ಪ್ರಮಾಣದ ವಿದ್ಯುತ್ ಪ್ರವಾಹ ಹರಿಯುತ್ತದೆ.

c)

ಇಡೀ ಮಂಡಲದಲ್ಲಿನ ಎಲ್ಲಾ ಉಪಕರಣಗಳನ್ನು ಒಮ್ಮೆಲೇ ಬಂದ್ ಮಾಡಲಾಗುವುದಿಲ್ಲ.

d)

ಇಡೀ ಮಂಡಲಕ್ಕೆ ಅಗತ್ಯಕ್ಕೆ ತಕ್ಕಂತೆ ಸ್ವಿಚ್‌ಗಳನ್ನು ಬಳಸಲು ಸಾಧ್ಯವಿಲ್ಲ.

20.

ಜೌಲ್‌ನ ಉಷ್ಣೋತ್ಪಾದಮ ನಿಯಮದ ಪ್ರಕಾರ, ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿಲ್ಲ.

a)

ಉಷ್ಣವು ರೋಧಕ್ಕೆ ನೇರಾನುಪಾತದಲ್ಲಿರುತ್ತದೆ.

b)

ಉಷ್ಣವು ರೋಧದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹಕ್ಕೆ ನೇರಾನುಪಾತದಲ್ಲಿರುತ್ತದೆ.

c)

ಉಷ್ಣವು ರೋಧಕಗಳ ಮೂಲಕ ಹರಿಯುವ ವಿದ್ಯುತ್ ಪ್ರವಾಹದ ಕಾಲಕ್ಕೆ ನೇರ ಅನುಪಾತದಲ್ಲಿರುತ್ತದೆ.

d)

ಉಷ್ಣವು ರೋಧದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹದ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ.