wayground logo

Free Printable Worksheets

NEW

Font size

S
M
L
XL
Worksheets

10th Science ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು

Total questions: 19

Worksheet time: 10mins

Name
Class
Date
1.

ಮಾನವನ ಕಣ್ಣಿನ ಬಣ್ಣಕ್ಕೆ ಕಾರಣವಾದ ಭಾಗ

a)

ರೆಟಿನಾ

b)

ಐರಿಸ್

c)

ಪಾಪೆ

d)

ಕಾರ್ನಿಯಾ

2.

ಕಾಮನಬಿಲ್ಲು ಉಂಟಾಗುವಲ್ಲಿ ಜರಗುವ ಕ್ರಿಯೆಗಳು

a)

ಪ್ರತಿಫಲನ, ವಕ್ರೀಭವನ ಮತ್ತು ಬೆಳಕಿನ ವಿಭಜನೆ

b)

ವಕ್ರೀಭವನ, ಬೆಳಕಿನ ವಿಭಜನೆ ಮತ್ತು ಸಂಪೂರ್ಣ ಆಂತರಿಕ ಪ್ರತಿಫಲನ

c)

ವಕ್ರೀಭವನ, ಬೆಳಕಿನ ವಿಭಜನೆ, ಆಂತರಿಕ ಪ್ರತಿಫಲನ

d)

ಬೆಳಕಿನ ವಿಭಜನೆ, ಚದುರುವಿಕೆ ಮತ್ತು ಸಂಪೂರ್ಣ ಆಂತರಿಕ ಪ್ರತಿಫಲನ

3.

ಮಗುವಿನ ಕಣ್ಣನ್ನು ಪರೀಕ್ಷಿಸಿದ ನಂತರ, ನೇತ್ರ ತಜ್ಞರು ಈ ಕೆಳಗಿನ ಮಸೂರಗಳನ್ನು ಮಗುವಿನ ಕನ್ನಡಕ್ಕಾಗಿ ಶಿಫಾರಸ್ಸು ಮಾಡಿದರು. ಎಡ ಕಣ್ಣು: +2.00 D, ಬಲ ಕಣ್ಣು: +2.25 D. ಮಗುವು ಬಳಲುತ್ತಿರುವ ದೃಷ್ಟಿದೋಷವು

a)

ಸಮೀಪದೃಷ್ಟಿ

b)

ದೂರದೃಷ್ಟಿ

c)

ಕಣ್ಣಿನ ಪೊರೆ

d)

ಪ್ರೆಸ್ ಬಯೋಪಿಯಾ

4.

ಕಣ್ಣು ವಸ್ತುಗಳನ್ನು ಸ್ಪಷ್ಟವಾಗಿ ಸರಾಗವಾಗಿ ನೋಡಲು ಸಾಧ್ಯವಿರುವ ಕನಿಷ್ಟ ಅಂತರ

a)

25m

b)

25cm

c)

25mm

d)

25km

5.

ವ್ಯಕ್ತಿ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ ಆದರೆ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಾರ ಇದು ಯಾವ ಕಾಯಿಲೆಯ ಲಕ್ಷಣವಾಗಿದೆ.

a)

ಮಯೋಪಿಯ

b)

ಪ್ರಿಸ್ ಬಯೋಪಿಯ

c)

ಹೈಪರ್ ಮೆಟ್ರೋಪಿಯ

d)

ಡಯಾಬಿಟಿಕ್‌ ರೆಟಿನೋಪತಿ

6.

ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆಯು

a)

ಮಯೋಪಿಯಾದ ವ್ಯಕ್ತಿ ದೂರದ ವಸ್ತುಗಳನ್ನು ನೋಡಬಲ್ಲನು

b)

ಹೈಪರ್ ಮೆಟ್ರೋಪಿಯಾದ ವ್ಯಕ್ತಿ ಹತ್ತಿರದ ವಸ್ತುಗಳನ್ನು ನೋಡಬಲ್ಲನು

c)

ಮಯೋಪಿಯಾದ ವ್ಯಕ್ತಿ ಹತ್ತಿರದ ವಸ್ತುಗಳನ್ನು ಮಾತ್ರ ಸ್ಪಷ್ಟವಾಗಿ ನೋಡಬಲ್ಲನು

d)

ಹೈಪರ್ ಮೆಟ್ರೋಪಿಯಾದ ವ್ಯಕ್ತಿಯು ದೂರದ ವಸ್ತುಗಳನ್ನು ನೋಡಲಾರ

7.

ಸಮೀಪ ದೃಷ್ಟಿಗೆ ಕಾರಣ

a)

ಕಣ್ಣಿನ ಸಮೀಪ ಬಿಂದು ಹೆಚ್ಚಾಗಿರುವುದು

b)

ಕಣ್ಣಿನ ದೂರ ಬಿಂದು ಹೆಚ್ಚಾಗಿರುವುದು

c)

ಪ್ರತಿಬಿಂಬ ರೆಟಿನಾದ ಮುಂದೆ ಬೀಳುತ್ತದೆ

d)

ಪ್ರತಿಬಿಂಬ ರೆಟಿನಾದ ಮೇಲೆ ಬೀಳುತ್ತದೆ

8.

ಅಪಾಯ ಸಂಕೇತ ದೀಪಗಳನ್ನು ಎತ್ತರದ ಕಟ್ಟಡಗಳಲ್ಲಿ ಆಳವಡಿಸುವಾಗ ಕೆಂಪು ಬಣ್ಣದ್ದಾಗಿರಲು ಕಾರಣ

a)

ಕೆಂಪು ಬಣ್ಣವು ಹೊಗೆ ಅಥವಾ ಮಂಜಿನಿಂದ ಕಡಿಮೆ ಚದುರುತ್ತದೆ

b)

ಕೆಂಪು ಬಣ್ಣವು ಹೊಗೆ ಅಥವಾ ಮಂಜಿನಿಂದ ಹೆಚ್ಚು ಚದುರುತ್ತದೆ

c)

ಹೊಗೆ ಅಥವಾ ಮಂಜು ಕೆಂಪು ಬಣ್ಣವನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ

d)

ಕೆಂಪು ಬಣ್ಣವು ಅತಿ ವೇಗವಾಗಿ ಗಾಳಿಯಲ್ಲಿ ಚಲಿಸುತ್ತದೆ

9.

ವೈದ್ಯರು ಪೀನಮಸೂರವನ್ನು ವ್ಯಕಿಯೊಬ್ಬನ ದೃಷ್ಟಿದೋಷಕ್ಕೆ ಪರಿಹಾರವನ್ನಾಗಿ ನೀಡುತ್ತಾರೆ, ಆ ವ್ಯಕಿಯಲ್ಲಿರಬಹುದಾದ ದೃಷ್ಟಿದೋಷವೆಂದರೆ

a)

ಸಮೀಪದೃಷ್ಟಿ

b)

ದೂರದೃಷ್ಟಿ

c)

ಪ್ರೆಸ್‌ಬಯೋಪಿಯಾ

d)

ಕ್ಯಾಟರಾಕ್ಟ್

10.

ಕಾಮನಬಿಲ್ಲು ಮೂಡಲು ಕಾರಣ ನೀರಿನ ಹನಿಗಳು ಸೂರ್ಯನ ಬೆಳಕಿಗೆ ಹೀಗೆ ವರ್ತಿಸುತ್ತವೆ.

a)

ದರ್ಪಣಗಳಂತೆ

b)

ಮಸೂರಗಳಂತೆ

c)

ಪಟ್ಟಕಗಳಂತೆ

d)

ಅಪಾರದರ್ಶಕಗಳಂತೆ

11.

ಕಣ್ಣಿನ ಮಸೂರವು ತನ್ನ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುವುದು ಅಥವಾ ಕ್ರಮೇಣ ಸಿಲಿಯರಿ ಸ್ನಾಯುಗಳು ದುರ್ಬಲಗೊಳ್ಳುವುದರಿಂದ ಉಂಟಾಗುವ ಕಣ್ಣಿನ ದೋಷ

a)

ಕ್ಯಾಟರಾಕ್ಟ್

b)

ಸಮೀಪದೃಷ್ಟಿ

c)

ದೂರದೃಷ್ಟಿ

d)

ಪ್ರಿಸ್ಬಯೋಪಿಯಾ

12.

ಕಣ್ಣಿನ ಮಸೂರವು ತನ್ನ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುವುದು ಅಥವಾ ಕ್ರಮೇಣ ಸಿಲಿಯರಿ ಸ್ನಾಯುಗಳು ದುರ್ಬಲಗೊಳ್ಳುವುದರಿಂದ ಉಂಟಾಗುವ ಕಣ್ಣಿನ ದೋಷ

a)

ಕ್ಯಾಟರಾಕ್ಟ್

b)

ಸಮೀಪದೃಷ್ಟಿ

c)

ದೂರದೃಷ್ಟಿ

d)

ಪ್ರಿಸ್ಬಯೋಪಿಯಾ

13.

ಕಣ್ಣಿನೊಳಗೆ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಕಣ್ಣಿನ ಭಾಗ

a)

ಐರಿಸ್

b)

ಪಾಪೆ

c)

ಕಾರ್ನಿಯಾ

d)

ರೆಟಿನಾ

14.

ಕಾಮನಬಿಲ್ಲಿನ ರೋಹಿತದಲ್ಲಿ ಅತ್ಯಂತ ಕಡಿಮೆ ತರಗಾಂತರ

a)

ಹಸಿರು

b)

ನೀಲಿ

c)

ಕೆಂಪು

d)

ನೇರಳೆ

15.

ದೂರದೃಷ್ಟಿ ಹೊಂದಿದ ವ್ಯಕ್ತಿ ಎಂದರೆ ಈ ಕೆಳಗಿನ ಯಾವುದು ಸರಿ ಅಲ್ಲ

a)

ದೂರದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತದೆ

b)

ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತದೆ

c)

ಕಣ್ಣಿನ ಮಸೂರದ ಸಂಗಮ ದೂರ ಉದ್ದ

d)

ಕಣ್ಣುಗುಡ್ಡೆ ಅತಿ ಚಿಕ್ಕದಾಗಿರುವುದು

16.

ವಯಸ್ಸಾದಂತೆ ಕಣ್ಣಿನ ಹೊಂದಾಣಿಕೆ ಸಾಮರ್ಥ್ಯ ಕಡಿಮೆಯಾಗುವುದು ಈ ಕೆಳಗಿನ ದೋಷದ ಲಕ್ಷಣ

a)

ಮಯೋಪಿಯ

b)

ಹೈಪರ್ ಮೆಟ್ರೋಪಿಯ

c)

ಮೆಟ್ರೋಪಿಯ

d)

ಪ್ರಿಸ್ಬಯೋಪಿಯಾ

17.

ನಿನ್ನ ತರಗತಿಯಲ್ಲಿ ಮೊದಲ ಬೆಂಚಿನಲ್ಲಿರುವ ನಿನ್ನ ಸ್ನೇಹಿತನಿಗೆ ಕಪ್ಪು ಹಲಗೆಯ ಬರಹ ಓದಲು ಕಷ್ಟವಾಗುತ್ತದೆ. ಅವನು ಬಳಲುತ್ತಿರುವ ತೊಂದರೆ

a)

ಮಯೋಪಿಯ

b)

ಹೈಪರ್ ಮೆಟ್ರೋಪಿಯ

c)

ಮಧುಮೇಹ ಅಕ್ಷಿಪಟಲ

18.

ಸಮೀಪ ದೃಷ್ಟಿ ಹೊಂದಿರುವ ವ್ಯಕ್ತಿ

a)

ಸಮೀಪದ ವಸ್ತುಗಳನ್ನು ಸ್ಪಷ್ಟ ಹಾಗೂ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ

b)

ಸಮೀಪದ ವಸ್ತುಗಳನ್ನು ಅಸ್ಪಷ್ಟ ಹಾಗೂ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ.

c)

ಸಮೀಪದ ವಸ್ತುಗಳನ್ನು ಸ್ಪಷ್ಟ ಹಾಗೂ ದೂರದ ವಸ್ತುಗಳನ್ನು ಅಸ್ಪಷ್ಟವಾಗಿ ನೋಡಬಲ್ಲ

d)

ಸಮೀಪದ ವಸ್ತುಗಳನ್ನು ಹಾಗೂ ದೂರದ ವಸ್ತುಗಳನ್ನು ಅಸ್ಪಷ್ಟವಾಗಿ ನೋಡಬಲ್ಲ

19.

ಕಣ್ಣಿನ ಮಸೂರವು ಅಕ್ಷಿಪಟಲದ ಮೇಲೆ ಉಂಟುಮಾಡುವ ವಸ್ತುವಿನ ಪ್ರತಿಬಿಂಬ

a)

ನೈಜ, ತಲೆಕೆಳಕಾದ

b)

ನೈಜ, ನೇರ

c)

ಮಿಥ್ಯ, ನೇರ

d)

ಮಿಥ್ಯ, ತಲೆಕೆಳಕಾದ