wayground logo

Free Printable Worksheets

NEW

Font size

S
M
L
XL
Worksheets

ನಮ್ಮ ಪರಿಸರ

Total questions: 15

Worksheet time: 8mins

Name
Class
Date
1.

ಪರಿಸರದಲ್ಲಿನ ಜೈವಿಕ ಘಟಕ ಯಾವುದು ?

a)

ಸಸ್ಯಗಳು

b)

ಪ್ರಾಣಿಗಳು

c)

ಸೂಕ್ಷ್ಮಾಣು ಜೀವಿಗಳು

d)

ಎಲ್ಲವೂ

2.

ಪರಿಸರದಲ್ಲಿನ ಉತ್ಪಾದಕರು ಯಾರು ?

a)

ಕಾಡು ಪ್ರಾಣಿಗಳು

b)

ಎಲ್ಲಾ ರೀತಿಯ ಪ್ರಾಣಿಗಳು

c)

ಪತ್ರಹರಿತ್ತು ಹೊಂದಿರುವ ಸಸ್ಯಗಳು

d)

ಎಲ್ಲಾ ಸಸ್ಯಗಳು

3.

ಈ ಕೆಳಗಿನ ಪ್ರಾಣಿಗಳಲ್ಲಿ ಸಸ್ಯಾಹಾರಿ ಯಾವುದು ?

a)

ಜಿಂಕೆ

b)

ನಾಯಿ

c)

ಹುಲಿ

d)

ಚಿರತೆ

4.

ಮಾಂಸಾಹಾರಿಗಳು ಎಂದರೇನು ?

a)

ಆಹಾರಕ್ಕಾಗಿ ಸಸ್ಯಗಳನ್ನು ತಿನ್ನುವ ಪ್ರಾಣಿಗಳು

b)

ಆಹಾರಕ್ಕಾಗಿ ಮತ್ತೊಂದು ಪ್ರಾಣಿಯನ್ನು ಮಾತ್ರ ತಿನ್ನುವ ಪ್ರಾಣಿಗಳು

c)

ಎರಡೂ ಹೌದು

d)

ಎರಡೂ ಅಲ್ಲ

5.

ಹುಲ್ಲು--> ಮಿಡತೆ--> ಕಪ್ಪೆ--> ಹಾವು --> ಹದ್ದು

ಇದರಲ್ಲಿ ತೃತೀಯ ಭಕ್ಷಕ ಯಾವುದು ?

a)

ಮಿಡತೆ

b)

ಕಪ್ಪೆ

c)

ಹಾವು

d)

ಹದ್ದು

6.

ಶಕ್ತಿಯ ವರ್ಗಾವಣೆ ನಿಯಮವನ್ನು ಅನುಸರಿಸಿ ಉತ್ತರಿಸಿ ಪೋಷಣಾ ಸ್ತರ 1 ---> 2 ---> 3 ---> 4

1000J ........ ........ .........

a)

10J. 1J 0.1J

b)

100J 50J 5J

c)

100J 10J 1J

d)

100J 10J 0.1J

7.

ಉನ್ನತ ಪೋಷಣಾ ಸ್ತರಕ್ಕೆ ಲಭ್ಯವಾಗುವ ಶಕ್ತಿಯ ಪ್ರಮಾಣ ಕಡಿಮೆಯಾಗಲು ಕಾರಣ

a)

ಶಕ್ತಿಯ ಹರಿವು ಏಕಮುಖವಾಗಿರುತ್ತದೆ

b)

ಶೇಕಡಾ 10 ರಷ್ಟು ಶಕ್ತಿ ಮಾತ್ರ ಮುಂದಿನ ಪೋಷಣಾ ಸ್ತರಕ್ಕೆ ವರ್ಗಾವಣೆಯಾಗುತ್ತದೆ

c)

ಪ್ರತಿ ಹಂತದಲ್ಲೂ ಅತ್ಯಧಿಕ ಶಕ್ತಿಯ ವ್ಯಯವಾಗುವಿಕೆ

d)

ಈ ಮೂರೂ ಕಾರಣಗಳು

8.

ಆಹಾರ ಸರಪಳಿಯಲ್ಲಿ ಶೇಕಡಾ 10 ರಷ್ಟು ಶಕ್ತಿ ಮಾತ್ರ ವರ್ಗಾವಣೆಯಾಗುವುದರಿಂದ ಆಗುವ ಪರಿಣಾಮಗಳು

a)

ಸಾಮಾನ್ಯವಾಗಿ ಆಹಾರ ಸರಪಳಿಗಳು 3ಅಥವಾ 4ಹಂತಗಳನ್ನು ಮಾತ್ರ ಒಳಗೊಂಡಿರುತ್ತವೆ

b)

ಪ್ರಾರಂಭಿಕ ಪೋಷಣಾ ಸ್ತರದಲ್ಲಿ ಹೆಚ್ಚಿನ ಸಂಖ್ಯೆಯ ಜೀವಿಗಳು ಇರುತ್ತವೆ .

c)

ಉನ್ನತ ಪೋಷಣಾ ಸ್ತರದಲ್ಲಿನ ಜೀವಿಗಳು ಶಕ್ತಿಯುತವಾಗಿದ್ದರೂ ಸಂಖ್ಯೆ ಮಾತ್ರ ಕಡಿಮೆ ಇರುತ್ತದೆ

d)

ಈ ಮೂರೂ ಕಾರಣಗಳು ಹೌದು

9.

ಜೈವಿಕ ಸಂವರ್ಧನೆಯಲ್ಲಿ ಈ ಪರಿಣಾಮವನ್ನು ಗಮನಿಸಬಹುದು

a)

ಒoದು ಪೋಷಣಾ ಸ್ತರದಿಂದ ಮತ್ತೊಂದು ಸ್ತರಕ್ಕೆ ಚಲಿಸಿದಂತೆ ರಾಸಾಯನಿಕಗಳ ಸಾಂದ್ರತೆ ಹೆಚ್ಚಾಗುತ್ತಾ ಹೋಗುತ್ತದೆ

b)

ಒoದು ಪೋಷಣಾ ಸ್ಥಾನದಿಂದ ಮತ್ತೊಂದು ಸ್ತರಕ್ಕೆ ಚಲಿಸಿದಂತೆ ರಾಸಾಯನಿಕಗಳ ಸಾಂದ್ರತೆ ಕಡಿಮೆಯಾಗುತ್ತಾ ಹೋಗುತ್ತದೆ

c)

ಜೈವಿಕ ಸಂವರ್ಧನೆಯ ರಾಸಾಯನಿಕಗಳನ್ನು ತೊಳೆಯುವುದರಿಂದ ಹೋಗಲಾಡಿಸಬಹುದು

d)

ಜೈವಿಕ ಸಂವರ್ಧನೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ

10.

ವಿಘಟಕರ ಕಾರ್ಯವೇನು ?

a)

ಸತ್ತ ಜೀವಿಗಳು ಕೊಳೆಯುವಂತೆ ಮಾಡಿ ಮಣ್ಣಿಗೆ ಸೇರಿಸುತ್ತವೆ

b)

ಪರಿಸರವನ್ನು ಸ್ವಚ್ಚವಾಗಿಡಲು ಸಹಕರಿಸುತ್ತವೆ

c)

ಸತ್ತ ಜೀವಿಗಳಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತವೆ

d)

ಈ ಮೂರು ಕಾರ್ಯಗಳನ್ನು ವಿಘಟಕರು ಮಾಡುತ್ತಾರೆ

11.

ಓಝೋನ್ ಪರಮಾಣು ಹೇಗೆ ಉಂಟಾಗುತ್ತದೆ ?

a)

O2 ------UV---> O + O

O2 + O ---------> O3

b)

O2 ------UV---> O + O2

O2 + O ---------> O3

c)

O2 ------UV---> O + O

O + O ---------> O3

d)

O2 ------UV---> O + O

O2 + O ---------> O2

12.

ಓಝೋನ್ ನ ಶಿಥಿಲೀಕರಣಕ್ಕೆ ಕಾರಣವಾದ ಕ್ಲೋರೋಫ್ಲೋರೋ ಕಾರ್ಬನ್ ಗಳು (CFCS) ಯಾವ ಕ್ಷೇತ್ರಗಳಿಂದ ಉತ್ಪತ್ತಿಯಾಗುತ್ತಿವೆ ?

a)

ಶೈತ್ಯಾಗಾರಗಳಲ್ಲಿ

b)

ಅಗ್ನಿಶಾಮಕ ಗಳಲ್ಲಿ

c)

ಕಂಪ್ಯೂಟರ್ ಏರೋಸಾಲ್ ಗಳಲ್ಲಿ

d)

ಈ ಮೂರೂ ಕ್ಷೇತ್ರಗಳಲ್ಲೂ ಉತ್ಪತ್ತಿಯಾಗುತ್ತಿವೆ

13.

ಓಝೋನ್ ಭೂಮಿಯ ಮೇಲಿರುವ ಜೀವಿಗಳನ್ನು ಈ ಕಿರಣಗಳಿಂದ ರಕ್ಷಣೆ ಮಾಡುತ್ತದೆ

a)

ಅವಕೆಂಪು ಕಿರಣಗಳು

b)

ಅತಿನೇರಳೆ (UV) ಕಿರಣಗಳು

c)

X - ಕಿರಣಗಳು

d)

ರೇಡಿಯೋ ಕಿರಣಗಳು

14.

ಜೈವಿಕ ವಿಘಟನೆಗೆ ಒಳಪಡುವ ವಸ್ತುಗಳನ್ನು ಗುರುತಿಸಿ

a)

ಹುಲ್ಲು ,ಹೂವುಗಳು ಮತ್ತು ಚರ್ಮ

b)

ಹುಲ್ಲು ,ಮರ ಮತ್ತು ಪ್ಲಾಸ್ಟಿಕ್ ಗಳು

c)

ಹಣ್ಣಿನ ಸಿಪ್ಪೆ ,ಕೇಕ್ ಮತ್ತು ನಿಂಬೆ ರಸ

d)

ಕೇಕ್, ಮರ ಮತ್ತು ಹುಲ್ಲು

15.

ಈ ಕೆಳಗಿನವುಗಳಲ್ಲಿ ಯಾವುದರಿಂದ ಒoದು ಆಹಾರ ಸರಪಳಿಯನ್ನು ರಚಿಸಬಹುದು ?

a)

ಹುಲ್ಲು, ಗೋಧಿ ,ಮಾವು

b)

ಹುಲ್ಲು, ಮೇಕೆ, ಮಾನವ

c)

ಮೇಕೆ, ಹಸು, ಆನೆ

d)

ಹುಲ್ಲು, ಮೀನು, ಮೇಕೆ