wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ: ಜೀವಕ್ರಿಯೆಗಳು

Total questions: 26

Worksheet time: 13mins

Name
Class
Date
1.

ಈ ಕೆಳಗಿನವುಗಳಲ್ಲಿ ಯಾವದು ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ.

a)

ಮೈಟೋಕಾಂಡ್ರಿಯಾ

b)

ಕಿರುತಟ್ಟೆ

c)

ಬಿಳಿ ರಕ್ತ ಕಣ

d)

ಹೀಮೋಗ್ಲೋಬಿನ್

2.

ದ್ಯುತಿ ಸಂಶ್ಲೇಷಣೆಗೆ ಸಹಾಯವಾದ ಕಣದಂಗ

a)

ಫ್ಲೋಯಂ

b)

ಕ್ಸೈಲಂ

c)

ಕ್ಲೋರೋಪ್ಲಾಸ್ಟ್

d)

ಪತ್ರರಂದ್ರ

3.

ಇವು ಜೀವಕೋಶದ ಎಲ್ಲಾ ಜೈವಿಕ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುತ್ತವೆ.

a)

mRNA

b)

DNA

c)

ATP

d)

Vitamins

4.

ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ನೈಟ್ರೋಜನ್ ಅನ್ನು ಈ ರೂಪದಲ್ಲಿ ಪಡೆದುಕೊಳ್ಳುತ್ತವೆ.

a)

ನೈಟ್ರಿಕ್ ಆಮ್ಲ

b)

ನೈಟ್ರೇಟು ಅಥವಾ ನೈಟ್ರೈಟು ಅಯಾನು

c)

ನೈಟ್ರೋಜನ್ ಮೋನಾಕ್ಸೈಡ್

d)

ನೈಟ್ರೋಜನ್ ಡೈ ಆಕ್ಸೈಡ್

5.

ಕಶೇರುಕಗಳಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು ಎರಡು ಬಾರಿ ಹಾದು ಹೋಗಬೇಕು, ಇದಕ್ಕೆ ___ಎಂದು ಕರೆಯುವರು.

a)

ಇಮ್ಮಡಿ ಪರಿಚಲನೆ

b)

ಪುಪ್ಪಸಕ ಪರಿಚಲನೆ

c)

ಕ್ರಿಯಾತ್ಮಕ ಪರಿಚಲನೆ

d)

ದ್ವಿ ರಕ್ತಪರಿಚಲನೆ

6.

ಶಾಸಕೋಶ ಗಳಿಂದ ಬಂದ ಶುದ್ಧರಕ್ತ ಮೊದಲಿಗೆ ಹೃದಯದ ಯಾವ ಭಾಗಕ್ಕೆ ಪ್ರವೇಶಿಸುತ್ತದೆ

a)

ಎಡ ಹೃತ್ಕುಕ್ಷಿ

b)

ಬಲ ಹೃತ್ಕರ್ಣ

c)

ಬಲಹೃತ್ಕಕ್ಷಿ

d)

ಎಡ ಹೃತ್ಕರ್ಣ

7.

ಮೂತ್ರಪಿಂಡದ ರಚನಾತ್ಮಕ ಹಾಗೂ ಕಾರ್ಯತ್ಮಕ ಘಟಕಗಳು

a)

ಗ್ಲಾಮರುಲಸ್

b)

ನೆಫ್ರಾನ್

c)

ಬೌಮನ್ನ ನ ಕೋಶ

d)

ಹೆನ್ಲೆಯ ಕುಣಿಕೆ

8.

ಹಸಿರು ಸಸ್ಯದ ಎಲೆಗಳಲ್ಲಿರುವ ಪತ್ರರಂಧ್ರದ ಮೂಲಕ ನೀರು ಆವಿ ರೂಪದಲ್ಲಿ ನಷ್ಟವಾಗುವುದನ್ನು _____ಎನ್ನುತ್ತೇವೆ.

a)

ಆವೀಕರಣ

b)

ಜಲಚಕ್ರ

c)

ಸ್ಥಾನಾಂತರ

d)

ಭಾಷ್ಪವಿಸರ್ಜನೆ

9.

ದ್ಯುತಿಸಂಶ್ಲೇಷಣೆಯು ನಡೆಯದ ರಾತ್ರಿ ಸಮಯದಲ್ಲಿ ಯಾವ ಅನಿಲದ ಬಿಡುಗಡೆ ಪ್ರಮುಖ ವಿನಿಮಯ ಆಗಿರುತ್ತದೆ?

a)

NO2

b)

CO2

c)

O2

d)

H2

10.

ಹೃತ್ಕರ್ಣ ಗಳು ಅಥವಾ ಹೃತ್ಕಕ್ಷಿಗಳು

ಸಂಕುಚಿಸಿದಾಗ ರಕ್ತವು ಹಿಮ್ಮುಖವಾಗಿ ಹರಿಯದಂತೆ ಈ ಕೆಳಗಿನವುಗಳು ನಿಯಂತ್ರಿಸುತ್ತವೆ

a)

ಅಪಧಮನಿಗಳು

b)

ಲೋಮನಾಳಗಳು

c)

ಅಭಿದಮನಿಗಳು

d)

ಕವಾಟಗಳು

11.

ಒಂದು ರಕ್ತನಾಳದ ಗೋಡೆಯ ಮೇಲೆ ಉಂಟುಮಾಡುವ ಬಲವನ್ನು ___ಎನ್ನುತ್ತೇವೆ.

a)

ಸ್ನಾಯು ಒತ್ತಡ

b)

ರಕ್ತದ ಒತ್ತಡ

c)

ಸಂಕೋಚನ ಒತ್ತಡ

d)

ವಿಕಸನ ಒತ್ತಡ

12.

ಆರೋಗ್ಯವಂತ ಮಾನವನ ರಕ್ತದ ಒತ್ತಡ_---------.mmHg

a)

110/90

b)

80/120

c)

120/80

d)

120/180

13.

ಗಾಯವಾದ ಭಾಗದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ರಕ್ತದ ಕಣದಂಗ.....

a)

RBC

b)

WBC

c)

ಪ್ಲೇಟ್ ಲೆಟ್ ಗಳು

d)

ಪ್ಲಾಸ್ಮ

14.

ಮಾನವನಲ್ಲಿರುವ ಹೃದಯ ಕೋಣೆಗಳ ಸಂಖ್ಯೆ

a)

4

b)

3

c)

6

d)

2

15.

ಜೀವಿಗಳ ಜೈವಿಕ ಪ್ರಕ್ರಿಯೆಯು ನಿರಂತರವಾಗಿರಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ _____ಎನ್ನುವರು

a)

ರಕ್ತ ಪರಿಚಲನೆ

b)

ಉಸಿರಾಟ

c)

ಪೋಷಣೆ

d)

ವಿಸರ್ಜನೆ

16.

ನೆಲವಾಸಿಗಳಿಗೆ ಹೋಲಿಸಿದರೆ ಜಲಚರ ಪ್ರಾಣಿಗಳಲ್ಲಿ ಉಸಿರಾಟದ ವೇಗವವು ಹೆಚ್ಚಾಗಿರುತ್ತದೆ, ಕಾರಣ

a)

ಅವುಗಳು ಶಾಶ್ವಕೋಶ ಗಳನ್ನು ಹೊಂದಿರುವುದಿಲ್ಲ

b)

ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣಕ್ಕಿಂತ ನೀರಲ್ಲಿ ಕಡಿಮೆ ಪ್ರಮಾಣದ ಆಮ್ಲಜನಕ ಕರಗಿರುತ್ತದೆ.

c)

ಅವುಗಳಿಗೆ ಎಲ್ಲಾ ರೀತಿಯ ಜೀವಕೋಶಗಳು ರುವುದಿಲ್ಲ

d)

ನೆಲ ವಾಸಿಗಳಿಗೆ ಹೋಲಿಸಿದರೆ ಜಲಚರಗಳ ರಕ್ತದೊತ್ತಡ ತುಂಬಾ ಹೆಚ್ಚಾಗಿರುತ್ತದೆ

17.

ಮಾನವನ ಶ್ವಾಸಕೋಶ ದಲ್ಲಿ ಕಂಡುಬರುವ ಬಲೂನಿನಂತಹ ರಚನೆ ಗಳಿಗೆ____ ಎಂದು ಹೆಸರು

a)

ಬ್ರಾಂಕೈ ಗಳು

b)

ಗಾಳಿ ಗೂಡುಗಳು

c)

ಕವಾಟಗಳು

d)

ಹೃತ್ಕರ್ಣಗಳು

18.

ಈ ಅಂಗಾಂಶವು ಸಸ್ಯದ ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರೆ ಭಾಗಗಳಿಗೆ ಸಾಗಿಸುತ್ತದೆ

a)

ಹೊರದರ್ಮ

b)

ಕ್ಸೈಲಂ

c)

ಫ್ಲೋಯಂ

d)

ವರ್ಧನ

19.

ಪರಪೋಷಕ ಜೀವಿಗಳು ಎಂದರೆ

a)

ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದು

b)

ತಮ್ಮ ಆಹಾರಕ್ಕಾಗಿ ಇತರೆ ಜೀವಿಗಳನ್ನು ಅವಲಂಬಿಸುವುದು

c)

ತಮ್ಮ ಆಹಾರವನ್ನು ಇತರೆ ಜೀವಿಗಳ ಮೂಲಕ ತರಿಸಿಕೊಳ್ಳುವುದು

d)

ತಮ್ಮ ಆಹಾರವನ್ನು ಇತರರಿಗೆ ಪೂರೈಕೆ ಮಾಡುವುದು

20.

ಪರಪೋಷಕ ಜೀವಿಗಳು, ಇವುಗಳ ಸಹಾಯದಿಂದ ಆಹಾರದಲ್ಲಿನ ಸಂಕೀರ್ಣ ಘಟಕಗಳನ್ನು ಸರಳ ಘಟಕಗಳನ್ನಾಗಿ ಪರಿವರ್ತಿಸುತ್ತವೆ

a)

ವೈರಸ್

b)

ಬ್ಯಾಕ್ಟೀರಿಯಾ

c)

ಶಿಲೀಂದ್ರ

d)

ಕಿಣ್ವ

21.

ಸಸ್ಯಗಳ ಎಲೆಗಳಲ್ಲಿರುವ ಇವು,ನೀರು ಮತ್ತು ಅನಿಲಗಳ ವಿನಿಮಯಕ್ಕೆ ಸಹಾಯಕ ವಾಗಿರುವುದರಿಂದ ಇವುಗಳನ್ನು ಕಾವಲು ಜೀವಕೋಶಗಳು ಎಂತಲೂ ಕರೆಯುತ್ತಾರೆ

a)

ಕೋಶಭಿತ್ತಿ

b)

ಪತ್ರರಂದ್ರ

c)

ಪತ್ರ ಹರಿತ್ತು

d)

ಪತ್ರಶೀಲತೆ

22.

ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಾಳಗಳು ಸಸ್ಯದ ಅಂಗಾಂಶದಲ್ಲಿ ಸಂಗ್ರಹವಾಗುತ್ತವೆ.

a)

ಸಂಗಾತಿ ಜೀವಕೋಶಗಳಲ್ಲಿ

b)

ಹಳೆಯ ಕ್ಸೈಲಂ ಅಂಗಾಂಶ ದಲ್ಲಿ

c)

ಜರಡಿ ನಾಳಗಳಲ್ಲಿ

d)

ಫ್ಲೋಯಂ ಅಂಗಾಂಶದಲ್ಲಿ

23.

ಇವುಗಳಲ್ಲಿ ಯಾವ ಜೀವಿಯು ತನ್ನ ಆಹಾರವನ್ನು ತಾನೇ ತಯಾರಿಸಿ ಕೊಳ್ಳುತ್ತದೆ?

a)

ಮಿಡತೆ

b)

ಇರುವೆ

c)

ಕಪ್ಪೆ

d)

ಹುಲ್ಲು

24.

ಮಾನವನ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ನೈಟ್ರೋಜನ್ ಯುಕ್ತ____ ಎಂಬ ತ್ಯಾಜ್ಯ ಪದಾರ್ಥಗಳನ್ನು ಹೊರತೆಗೆಯಲಾಗುತ್ತದೆ.

a)

ಗಂಧಕಾಮ್ಲ

b)

ಫಾಸ್ಫಾರಿಕ್ ಆಮ್ಲ

c)

ಯೂರಿಯಾ ಮತ್ತು ಯೂರಿಕ್ ಆಮ್ಲ

d)

ಮೇಲಿನ ಯಾವುದೂ ಅಲ್ಲ

25.

ದ್ಯುತಿ ಸಂಶ್ಲೇಷಣೆ ಕ್ರಿಯೆ ಇವುಗಳಲ್ಲಿ ಕಂಡುಬರುತ್ತದೆ

a)

ಜಲಚರಗಳಲ್ಲಿ

b)

ಎಲ್ಲಾ ಹಸಿರು ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ

c)

ಎಲ್ಲಾ ಪರಾವಲಂಬಿ ಜೀವಿಗಳಲ್ಲಿ

d)

ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ

26.

ಈ ಸಮೀಕರಣವನ್ನು ಪೂರ್ಣಗೊಳಿಸಿ


6CO2 + 12H2O:->--------

a)

C6H12O6+6O2+6H2O

b)

C6H12O6+3O2+3H2O

c)

2C6H12O6+2O2+3H2O

d)

ಯಾವುದೂ ಅಲ್ಲ