Wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 32

Worksheet time: 11mins

Name
Class
Date
1.

ಮಹಾತ್ಮ ಗಾಂಧೀಜಿ ಅವರ ತಂದೆಯ ಹೆಸರೇನು ?

a)

ಕರಮಚಂದ ಗಾಂಧಿ

b)

ಜ್ಯೋತಿ ಬಾಪುಲೆ

c)

ರವೀಂದ್ರನಾಥ

d)

ಫಿರೋಜ್ ಗಾಂಧಿ

2.

ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಜನಿಸಿದ ವರ್ಷ ಇದಾಗಿದೆ.

a)

1994

b)

1904

c)

1987

d)

1896

3.

ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು ಯಾರು ?

a)

ಡಾ. ಬಿ ಆರ್ ಅಂಬೇಡ್ಕರ್

b)

ಮಹಾತ್ಮ ಗಾಂಧಿ

c)

ವಾಜಪೇಯಿ

d)

ಲಾಲ್ ಬಹದ್ದೂರ್ ಶಾಸ್ತ್ರಿ

4.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು ಯಾವುವು ?

a)

ಐ ಔ

b)

ಐ ಏ

c)

ಐ ಓ

d)

ಅಂ ಅಃ

5.

ಹುಲಿ ಎಂಬ ಪದವು ಯಾವ ಲಿಂಗ ವಾಗಿದೆ ?

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

d)

ಮಹಾಲಿಂಗ

6.

ಈ ವಾಕ್ಯಗಳಲ್ಲಿ ದೋಷಪೂರಿತ ವಲ್ಲದ ಶುದ್ಧವಾಕ್ಯ ಯಾವುದು ?

a)

ಸಂಪುಟದಲ್ಲಿ ಎಲ್ಲಾ ಜಿಲ್ಲೆಗೆ ಪ್ರಾತಿನಿಧ್ಯ

b)

ಸಂಪುಟದಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ

c)

ಸ್ವತಃ ನಾನೇ ಕಣ್ಣಿಂದ ನೋಡಿದೆನು

d)

ಮಗುವಿಗೆ ನವಮಾಸ ತುಂಬಿತು

7.

ಗಾಂಧೀಜಿಯವರ ಆತ್ಮಕಥನದ ಹೆಸರೇನು ?

a)

ನೆನಪಿನ ದೋಣಿಯಲ್ಲಿ

b)

ಹುಚ್ಚು ಮನಸ್ಸಿನ ಹತ್ತು ಮುಖಗಳು

c)

ದುಡಿತವೇ ನನ್ನ ದೇವರು

d)

ನನ್ನ ಸತ್ಯಾನ್ವೇಷಣೆ

8.

'ಎಳ್ಳು ನೀರು ಬಿಡು' ನುಡಿಗಟ್ಟಿನ ಅರ್ಥವೇನು

a)

ತಿಳಿ ನೀರು ಕುಡಿಯಿರಿ

b)

ಎಳನೀರು ಕುಡಿಯಿರಿ

c)

ಎಳ್ಳನ್ನು ನೀರನ್ನು ಬಿಟ್ಟುಬಿಡು

d)

ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳು

9.

ಸಮಯಕ್ಕೆ ಬಾರದ ಬುದ್ಧಿ --------------- ಈ ಗಾದೆಯನ್ನು ಪೂರ್ಣಗೊಳಿಸಿ.

a)

ಸಾವಿನ ನಂತರ ಬರುತ್ತದೆ

b)

ಶಿಕ್ಷಕರ ಸಿದ್ಧಿ

c)

ಸ್ನೇಹಿತರು ಕಲಿಸಿದ ಬುದ್ಧಿ

d)

ಸಾವಿರ ಇದ್ದರು ಲದ್ದಿ

10.

ವೈಜ್ಞಾನಿಕ : ವಿಜ್ಞಾನಕ್ಕೆ ಸಂಬಂಧಿಸಿದ : : ಸಾರ್ವಜನಿಕ : ____________

a)

ತಂತ್ರಜ್ಞಾನಕ್ಕೆ ಸಂಬಂಧಿಸಿದ

b)

ಸರ್ವರಿಗೂ ಸಂಬಂಧಿಸದ

c)

ಎಲ್ಲರಿಗೂ ಸಂಬಂಧಿಸಿದ

d)

ಸರ್ವೆ ಮಾಡುವ ಜನ

11.

ಅಭಿಮಾನ ಪದದ ವಿರುದ್ಧ ಪದ ಇದಾಗಿದೆ

a)

ದುರಭಿಮಾನ

b)

ಸದಭಿಮಾನ

c)

ನಿರಭಿಮಾನ

d)

ಅಭಿದಾನ

12.

ಕಂಠದಲ್ಲಿ ಹುಟ್ಟುವ ಅಕ್ಷರಗಳನ್ನು ಕಂಠ್ಯಕ್ಷರಗಳು ಎನ್ನುವರು ಅವುಗಳೆಂದರೆ

a)

ಕಖಗಘಙ

b)

ಚಛಜಝಞ

c)

ಟಠಡಢಣ

d)

ತಥದಧನ

13.

ಈ ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಪದ ಯಾವುದು

a)

ಶಕ್ತಿ

b)

ಮುಕ್ತಿ

c)

ಆಪ್ತ

d)

ಬಿತ್ತಿ

14.

ಇಂಜಿನಿಯರ್ ಎಂಬುದು ಯಾವ ನಾಮವಾಗಿದೆ

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ಸರ್ವನಾಮ

15.

ತಲೆನೋವು ಪದವನ್ನು ವಿಗ್ರಹವಾಕ್ಯ ಮಾಡಿದಾಗ ಅದರ ಸರಿಯಾದ ರೂಪ ಇದು

a)

ತಲೆಯಿಂದ +ನೋವು

b)

ತಲೆಗೆ + ನೋವು

c)

ತಲೆಯಲ್ಲಿ +ನೋವು

d)

ತಲೆಯೊಳಗೆ +ನೋವು

16.

"ತಾಯಿಯಂತೆ ಮಗಳು ನೂಲಿನಂತೆ ಸೀರೆ " ಈ ಗಾದೆಯು ನೀಡುವ ಸಂದೇಶ/ ನೀತಿ ಏನು ?

a)

ಜ್ಞಾನಿಯ ದೊಡ್ಡ ಗುಣ

b)

ಹಿರಿಯರು ಕಿರಿಯರಿಗೆ ಮಾದರಿ

c)

ತಾಯಿಯ ಸೀರೆ ಮಗಳಿಗೆ ಇಷ್ಟ

d)

ನೂಲಿನಿಂದ ತಾಯಿ ಸೀರೆಯನ್ನು ಮಾಡುತ್ತಾಳೆ

17.

'ಮಹಾತ್ಮ ' ಈ ಪದಕ್ಕೆ ಹಾಕಬೇಕಾದ ಮಾತ್ರೆಗಳು

a)

U_U

b)

UUU

c)

UU_

d)

__U

18.

ಕಂದಪದ್ಯದ ಎರಡನೇ ಸಾಲಿನ ಒಟ್ಟು ಮಾತ್ರೆಗಳ ಸಂಖ್ಯೆ ಎಷ್ಟು?

a)

12

b)

20

c)

14

d)

64

19.

ಪ್ರೀತಿಯ ಹಣತೆಯ ಹಚ್ಚೋಣ ಈ ವಾಕ್ಯದಲ್ಲಿರುವ ಉಪಮೇಯ ಯಾವುದು ?

a)

ಪ್ರೀತಿ

b)

ಹಣತೆ

c)

ಹಚ್ಚೋಣ

d)

ಯಾವುದು ಅಲ್ಲ

20.

ಕನ್ನಡದ ಮೊದಲ ಲಕ್ಷಣ ಗ್ರಂಥ ಯಾವುದು

a)

ಕವಿರಾಜಮಾರ್ಗ

b)

ಆದಿಪುರಾಣ

c)

ವಡ್ಡಾರಾಧನೆ

d)

ಗದಾಯುದ್ಧ

21.

ಅಗಲವಾದ ಬಾಯಿಯುಳ್ಳ ಲೋಹದ ಪಾತ್ರೆಗೆ ಹೀಗೆನ್ನುವರು

a)

ಕೊಪ್ಪರಿಗೆ

b)

ಕಳಸ

c)

ಹಂಡೆ

d)

ಮುಂಡಾಸ್

22.

ಕಡುವೆಳ್ಪು ಎಂಬುದು ಯಾವ ಸಂಧಿ ಆಗಿದೆ

a)

ಆದೇಶ ಸಂಧಿ

b)

ಆಗಮ ಸಂಧಿ

c)

ಲೋಪ ಸಂಧಿ

d)

ಜಶ್ತ್ವ ಸಂಧಿ

23.

ತುದಿಮೂಗು ಯಾವ ಸಮಾಸವಾಗಿದೆ

a)

ದ್ವಂದ್ವ ಸಮಾಸ

b)

ತತ್ಪುರುಷ ಸಮಾಸ

c)

ಅಂಶಿ ಸಮಾಸ

d)

ಗಮಕ ಸಮಾಸ

24.

ವೈಶಾಖ: ಬೇಸಗೆ : : ಕುಠಾರ :_______

a)

ಕುಂಬಳ

b)

ಕೊಡಲಿ

c)

ಕುಂಡಲಿ

d)

ಕಮಂಡಲ

25.

ಸೊಪ್ಪು-ಸದೆ ಎಂಬುದು ಯಾವ ವ್ಯಾಕರಣಾಂಶ

a)

ದ್ವಿರುಕ್ತಿ

b)

ಜೋಡುನುಡಿ

c)

ಅನುಕರಣಾವ್ಯಯ

d)

ನುಡಿಗಟ್ಟು

26.

ಈ ಕೆಳಗಿನವುಗಳಲ್ಲಿ ಪ್ರಥಮ ಪುರುಷ ( ಪುರುಷಾರ್ಥಕ ) ಸರ್ವನಾಮ ಯಾವುದು ?

a)

ನಾನು

b)

ನೀನು

c)

ಅವನು

d)

ಭಾನು

27.

ಚತುರ್ಥೀ ವಿಭಕ್ತಿಯ ಕಾರಕಾರ್ಥ ಯಾವುದು ?

a)

ಸಂಪ್ರದಾನ

b)

ಕರ್ಮಾರ್ಥ

c)

ಅಪದಾನ

d)

ಸಂಬಂಧ

28.

ಮಾಡು ಧಾತುವಿನ ಸಂಭವನಾರ್ಥಕ ಬಹುವಚನ ರೂಪವಿದು

a)

ಮಾಡೋರು

b)

ಮಾಡಿಯಾರು

c)

ಮಾಡರು

d)

ಮಾಡೋಣ

29.

ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ. ಈ ವಾಕ್ಯದಲ್ಲಿ ಇರಬೇಕಾದ ಲೇಖನ ಚಿಹ್ನೆ ಯಾವುದು ?

a)

ಅರ್ಧ ವಿರಾಮ ಚಿಹ್ನೆ

b)

ಆವರಣ ಚಿಹ್ನೆ

c)

ವಾಕ್ಯವೇಷ್ಟನ ಚಿಹ್ನೆ

d)

ಭಾವಸೂಚಕ ಚಿಹ್ನೆ

30.

ತಂದೆಗೆ ಪತ್ರ ಬರೆಯುವಾಗ ಈ ಸಂಭೋಧನೆಯನ್ನು ಬಳಸಲಾಗುತ್ತದೆ.

a)

ತೀರ್ಥರೂಪ ತಂದೆಯವರಿಗೆ

b)

ಪಿತೃಶ್ರೀ

c)

ಮಾತೃಶ್ರೀ

d)

ತೀರ್ಥರೂಪರಿಗೆ

31.

ಮಹಾತ್ಮ ಗಾಂಧೀಜಿ ಅವರ ತಂದೆಯ ಹೆಸರೇನು ?

a)

ಕರಮಚಂದ ಗಾಂಧಿ

b)

ಜ್ಯೋತಿ ಬಾಪುಲೆ

c)

ರವೀಂದ್ರನಾಥ

d)

ಫಿರೋಜ್ ಗಾಂಧಿ

32.

ಹುಲಿ ಎಂಬ ಪದವು ಯಾವ ಲಿಂಗ ವಾಗಿದೆ ?

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

d)

ಮಹಾಲಿಂಗ