wayground logo

Free Printable Worksheets

Font size

S
M
L
XL
Worksheets

ತನುಕನ್ನಡ- ೩: ನಿಯತಿಯನಾರ್‍ ಮೀಱಿದಪರ್‍ ಘಟಕ ಪರೀಕ್ಷೆ

Total questions: 52

Worksheet time: 31mins

Name
Class
Date
1.
ಅಭೀತೆ- ಪದದ ವಿರುದ್ಧ ಪದ
a)
ನಿರ್ಭೀತೆ
b)
ಭೀತೆ
c)
ಸಭೀತೆ
d)
ದುರ್ಭೀತೆ
2.
ತರಕ್ಷು- ಪದದ ಅರ್ಥ
a)
ಸಿಂಹ
b)
ಜಿಂಕೆ
c)
ಹುಲಿ
d)
ಕ್ರೂರಿ
3.
ನೀರಜ : ತಾವರೆ : ವನಜ : ______
a)
ಕಮಲ
b)
ವನಸುಮ
c)
ಮುತ್ತುಗ
d)
ಮಲ್ಲಿಗೆ
4.
ಚರಿಗೆ- ಪದದ ಅರ್ಥ
a)
ತಪ್ಪಲೆ
b)
ಹರಿವಾಣ
c)
ಬಂಡಿ
d)
ಭಿಕ್ಷಾಟನೆ
5.
ಅಲರ್-ಪದದ ಅರ್ಥ
a)
ಬೆಂಕಿ
b)
ಸುವಾಸನೆ
c)
ಹೂವು
d)
ಉದಕ
6.
ಮನಸಿಜ- ಎಂದರೆ
a)
ಚಂಡಕರ್ಮ
b)
ಅಭಯರುಚಿ
c)
ಮನ್ಮಥ
d)
ವಿಷ್ಣು
7.
ಜನ್ನನು ಈ ರಾಜವಂಶದ ಆಶ್ರಯದಲ್ಲಿದ್ದನು
a)
ಪಲ್ಲವ
b)
ಗಂಗ
c)
ಕದಂಬ
d)
ಹೊಯ್ಸಳ
8.
ಜನ್ನನ ಕಾಲ
a)
ಕ್ರಿ.ಶ. 1252
b)
ಕ್ರಿ.ಶ.1225
c)
ಕ್ರಿ.ಶ. 1525
d)
ಕ್ರಿ.ಶ. 1512
9.
ಇವುಗಳಲ್ಲಿ ಯಾವುದು ಜನ್ನ ಕವಿಯ ಕೃತಿಯಲ್ಲ
a)
ಜೈನಪುರಾಣ
b)
ಅನುಭವಮುಕುರ
c)
ಅನಂತನಾಥಪುರಾಣ
d)
ಯಶೋಧರ ಚರಿತೆ
10.
ಜನ್ನ ಕವಿಯು ಈ ರಾಜನ ಆಸ್ಥಾನದಲ್ಲಿದ್ದನು
a)
ವಿಷ್ಣುವರ್ಧನ
b)
ಎರೆಯಂಗ
c)
ನರಸಿಂಹಬಲ್ಲಾಳ
d)
ಉದಯಾದಿತ್ಯ
11.
ಜನ್ನನು ತನ್ನ ಕಾವ್ಯಗಳಲ್ಲಿ ಇದನ್ನು ಹೆಚ್ಚಾಗಿ ವರ್ಣಿಸಿದ್ದಾನೆ.
a)
ದೈವಭಕ್ತಿ
b)
ಅಹಿಂಸಾ ತತ್ವ
c)
ಬಲಿನಿಷೇಧ
d)
ಜನ್ಮಾಂತರ
12.
ನಿಯತಿಯನಾರ್ ಮೀರಿದಪರ್- ಪದ್ಯ ಭಾಗದ ಮೂಲ ಕೃತಿ
a)
ಅನುಭವಮುಕುರ
b)
ಯಶೋಧರ ಚರಿತೆ
c)
ಅನಂತನಾಥಪುರಾಣ
d)
ಜೈನಪುರಾಣ
13.
ರಾಜಪುರದ ಅರಸ
a)
ಚಂಡಕರ್ಮ
b)
ಯಶೋಧರ
c)
ಮಾರಿದತ್ತ
d)
ಯಶೋಮತಿ
14.
ಚಂಡಮಾರಿಯನ್ನು ಈ ಋತುವಿನಲ್ಲಿ ಜಾತ್ರೆ ನಡೆಸುತ್ತಿದ್ದರು.
a)
ಶಿಶಿರ
b)
ವಸಂತ
c)
ಶರದ್
d)
ಗ್ರೀಷ್ಮ
15.
ಅಭಯರುಚಿ- ಅಭಯಮತಿಯರು ಇವರ ಶಿಷ್ಯರಾಗಿದ್ದರು
a)
ಯಶೋಮತಿ
b)
ಯಶೌಘ
c)
ಮಾರಿದತ್ತ
d)
ಸುದತ್ತಾಚಾರ್ಯ
16.
ಅಭಯಮತಿಯು ಹಿಂದಿನ ಜನ್ಮದಲ್ಲಿ ಈ ಹೆಸರಿನ ರಾಜನಾಗಿದ್ದನು
a)
ಯಶೋಮತಿ
b)
ಯಶೌಘ
c)
ಯಶೋಧರ
d)
ಚಂದ್ರಮತಿ
17.
ಅಭಯರುಚಿ- ಅಭಯಮತಿಯರು ಹಿಂದಿನ ಜನ್ಮದಲ್ಲಿ ಈ ಸಂಬಂಧ ಹೊಂದಿದ್ದರು
a)
ಅಣ್ಣ -ತಂಗಿ
b)
ಅಪ್ಪ-ಮಗಳು
c)
ಗಂಡ ಹೆಂಡತಿ
d)
ತಾಯಿ-ಮಗ
18.
ಯಶೋಧರನ ಹೆಂಡತಿಯ ಹೆಸರು
a)
ಕುಸುಮಾವಳಿ
b)
ಚಂದ್ರಮತಿ
c)
ಅಮೃತಮತಿ
d)
ಯಾರೂ ಇಲ್ಲ
19.
ಈ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು.
a)
ಚಂದ್ರಮತಿ
b)
ಯಶೋಮತಿ
c)
ಚಂಡಮಾರಿ
d)
ಮಾರಿ
20.
ಮಾರಿದತ್ತನ ತಳಾರನ ಹೆಸರು
a)
ಯಶೋಧರ
b)
ಅಷ್ಟಾವಂಕ
c)
ಚಂಡಕರ್ಮ
d)
ಸುದತ್ತ
21.
ಚಂಡಕರ್ಮನು ಬಲಿ ಕೊಡಲು ಇವರನ್ನು ಹಿಡಿದು ತಂದನು
a)
ಯಶೋಧರ-ಅಮೃತಮತಿ
b)
ಕೋಳಿ-ಕುರಿಗಳು
c)
ಜೋಡಿ ಜಿಂಕೆಗಳು
d)
ಅಭಯರುಚಿ-ಅಭಯಮತಿ
22.
ವನದಲ್ಲಿ ಮುತ್ತುಗದ ಹೂವುಗಳು ಹೀಗೆ ಕಾಣುತ್ತಿದ್ದವು
a)
ದೇವಿಯ ಪ್ರಸಾದ
b)
ಮಾರಿಯ ಹಾರೈಕೆ
c)
ಮಾಂಸದ ತುಂಡುಗಳು
d)
ರಕ್ತದ ಹೂವುಗಳು
23.
ರಾಜಪುರದ ಜನರು ದೇವಾಲಯದ ಬಳಿ ಏಕೆ ಸೇರಿದ್ದರು.
a)
ದೇವಿಗೆ ಸಂತಸವನ್ನುಂಟು ಮಾಡಲೆಂದು
b)
ದೇವಿಯಿಂದ ವರವನ್ನು ಪಡೆಯಲೆಂದು
c)
ದೇವಿಯನ್ನು ಆರಾಧಿಸಲು
d)
ದೇವಿಯನ್ನು ಒಲಿಸಿಕೊಳ್ಳಲು
24.
ಮಾರಿದತ್ತನು ತಳಾರನಿಗೆ ಹೀಗೆ ಆಜ್ಞಾಪಿಸಿದನು
a)
ಮನುಜರನ್ನು ಕರೆದು ತಾ
b)
ಮನುಜರಿಬ್ಬರನ್ನು ಕರೆದು ತಾ
c)
ಮನುಜರೆಲ್ಲರನ್ನೂ ಕರೆದು ತಾ
d)
ಮನುಷ್ಯರನ್ನು ಬಿಟ್ಟು ಬಾ
25.
ಬಲಿಗೆ ಬೇಕಾದ ಮನುಷ್ಯರ ಲಕ್ಷಣಗಳೇನು?
a)
ಕಿರು ವಯಸ್ಸಿನವರಾಗಿರಬೇಕು
b)
ಶುಭಲಕ್ಷಣದವರು ಆಗಿರಬೇಕು
c)
ಸತ್ಕುಲದವರಾಗಿರಬೇಕು
d)
ಎಲ್ಲವೂ
26.
ತರುಣ ವನಹರಿಣಯುಗಮಂ ತರಕ್ಷು ಪಿಡಿವಂತೆ- ಇಲ್ಲಿರುವ ಅಲಂಕಾರ
a)
ರೂಪಕಾಲಂಕಾರ
b)
ಉಪಮಾಲಂಕಾರ
c)
ದೃಷ್ಟಾಂತಾಲಂಕಾರ
d)
ಯಾವುದೂ ಇಲ್ಲ
27.
ಗುರುಗಳು ಶಿಷ್ಯರನ್ನು ಇದಕ್ಕಾಗಿ ಊರಿಗೆ ಕಳುಹಿಸಿದರು.
a)
ಭಿಕ್ಷಾಟನೆಗೆ
b)
ಹಣ ಬೇಡಲು
c)
ಜನರನ್ನು ಕರೆತರಲು
d)
ದುಷ್ಟರನ್ನು ಹುಡುಕಲು
28.
ಅಭಯಮತಿ-ಅಭಯರುಚಿಯರು ಚರಿಗೆಗೆ ಹೊರಡುವ ಮುನ್ನ ಹೀಗೆ ಮಾಡಿದರು.
a)
ಗುರುಗಳಿಗೆ ನಮಸ್ಕರಿಸಿದರು
b)
ತಲೆಬಾಗಿ ವರ ಬೇಡಿದರು
c)
ಹರಸಬೇಕೆಂದು ಕೇಳಿದರು
d)
ಕಾಪಾಡಬೇಕೆಂದು ಕೋರಿದರು
29.
ಅಭಯರುಚಿಯು ತನ್ನ ತಂಗಿಗೆ ಇದನ್ನು ಸಹಿಸಬೇಕೆಂದು ಹೇಳುತ್ತಾನೆ.
a)
ಬಂದುದನ್ನು ಸಹಿಸಿಕೊಳ್ಳಬೇಕು
b)
ಬಂದುದನ್ನು ಹೆದರಿಸಬೇಕು
c)
ಬಂದುದನ್ನು ವಿರೋಧಿಸಬೇಕು
d)
ಬಂದುದರಿಂದ ಪಾರಾಗಬೇಕು
30.
ಅಭಯರುಚಿಯ ಪ್ರಕಾರ ನಿಜವಾದ ತಪಸ್ಸು
a)
ಅರಿಷಡ್ವರ್ಗಗಳನ್ನು ಜಯಿಸುವುದು
b)
22 ಕ್ಷೇಷಗಳಿಂದ ತಪ್ಪಿಸಿಕೊಳ್ಳುವುದು
c)
22 ಕ್ಲೇಷಗಳನ್ನು ಜಯಿಸುವುದು
d)
ಅರಿಷಡ್ವರ್ಗಗಳನ್ನು ಹೊಂದುವುದು
31.
ನಯವಿದೆ- ಪದದ ಅರ್ಥ
a)
ಅಧರ್ಮವಂತಳು
b)
ಧರ್ಮವಂತಳು
c)
ನಯವಂಚಕಳು
d)
ವಿನಯವಂತಳು
32.
ಛಂದಶ್ಯಾಸ್ತ್ರದಲ್ಲಿ ಕಾಲವನ್ನು ಅಳೆಯುವ ಮಾನ
a)
ಲಘು
b)
ಗುರು
c)
ಗಣ
d)
ಮಾತ್ರೆ
33.
ಹ್ರಸ್ವಸ್ವರವನ್ನು ಉಚ್ಚರಿಸುವ ಕಾಲ
a)
ಒಂದು ಮಾತ್ರಾ ಕಾಲ
b)
ಎರಡು ಮಾತ್ರಾಕಾಲ
c)
ಮೂರು ಮಾತ್ರಾಕಾಲ
d)
ಅರ್ಧಮಾತ್ರಾಕಾಲ
34.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಮಾತ್ರಾಗಣ
b)
ಅಂಶಗಣ
c)
ಶೂನ್ಯಗಣ
d)
ಅಕ್ಷರಗಣ
35.
ಇವುಗಳಲ್ಲಿ ಗುಂಪಿಗೆ ಸೇರದ ಛಂದಸ್ಸಿನ ವಿಧ
a)
ಕಂದ
b)
ರಗಳೆ
c)
ತ್ರಿಪದಿ
d)
ಷಟ್ಪದಿ
36.
ಕಂದ ಪದ್ಯದಲ್ಲಿ ಒಂದೊಂದು ಗಣದಲ್ಲಿರುವ ಮಾತ್ರೆಗಳ ಸಂಖ್ಯೆ
a)
2
b)
3
c)
4
d)
5
37.
ಒಂದು ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ
a)
2
b)
3
c)
4
d)
5
38.
ಇದರಲ್ಲಿ ಯಾವುದು ಕಂದ ಪದ್ಯದ ಲಕ್ಷಣವಲ್ಲ
a)
1-3ನೇ ಸಾಲುಗಳು ಸಮ
b)
2-4ನೇ ಸಾಲುಗಳು ಸಮ
c)
ಒಟ್ಟು ಮಾತ್ರೆಗಳ ಸಂಖ್ಯೆ 64
d)
ಇದು ಆರು ಸಾಲುಗಳ ಪದ್ಯ
39.
ಕನ್ನಡದೊಳ್- ಈ ಪದಕ್ಕೆ ಬರುವ ಮಾತ್ರಾ ವಿನ್ಯಾಸ
a)
UUU - -'
b)
- UU - '
c)
- UUUU'
d)
UUU - U'
40.
ಪ್ರಥಮಾ ವಿಭಕ್ತಿಯು ಸಾಧಾರಣವಾಗಿ ಇದರ ಮೇಲೆ ಮಾತ್ರ ಬರುತ್ತದೆ
a)
ಕರ್ತೃಪದ
b)
ಕರ್ಮಪದ
c)
ಕ್ರಿಯಾಪದ
d)
ಅವ್ಯಯ
41.
ಶಂಕರನಿಗೆ ಓದಿನ ಮೇಲೆ ತುಂಬಾ ಆಸೆಯಿತ್ತು. ಗೆರೆ ಎಳೆದಿರುವ ಪದದಲ್ಲಿರುವ ವಿಭಕ್ತಿ
a)
ದ್ವಿತೀಯ
b)
ಪ್ರಥಮ
c)
ತೃತೀಯ
d)
ಚತುರ್ಥಿ
42.
ತೃತೀಯ ವಿಭಕ್ತಿಯ ಕಾರಕಾರ್ಥ
a)
ಕರ್ಮಾರ್ಥ
b)
ಕ್ರಿಯಾರ್ಥ
c)
ಕರಣಾರ್ಥ
d)
ಸಂಪ್ರದಾನ
43.
ಹಳಗನ್ನಡ ಸಪ್ತಮೀ ವಿಭಕ್ತಿಯ ಪ್ರತ್ಯಯ
a)
ಇಂ
b)
ಮ್
c)
ಅಮ್
d)
ಒಳ್
44.
ರಾಮಮ್ ರಾವಣನಂ ಬಾಣದಿಂ ಕೊಂದನು. ಈ ವಾಕ್ಯದಲ್ಲಿ ತೃತೀಯಾ ವಿಭಕ್ತಿ ಹೊಂದಿರುವ ಪದ
a)
ರಾಮಮ್
b)
ರಾವಣನಂ
c)
ಬಾಣದಿಂ
d)
ಕೊಂದನು
45.
ಹೊಸಗನ್ನಡದಲ್ಲಿ ಪಂಚಮೀ ವಿಭಕ್ತಿಯ ಪ್ರತ್ಯಯ
a)
ಅತ್ತಣಿಂ
b)
ಗೆ,ಇಗೆ,ಕ್ಕೆ
c)
ಅಲ್ಲಿ
d)
ದೆಸೆಯಿಂದ
46.
ಮಹಾಭಾರತದೊಳ್ ಅರ್ಜುನನತ್ತಣಿಂ ವೀರನಾದವ ಕರ್ಣಂ ಶ್ರೇಷ್ಟನಾದನು- ವಾಕ್ಯದಲ್ಲಿರುವ ಪ್ರಥಮಾ ವಿಭಕ್ತಿ ಪ್ರತ್ಯಯ
a)
ಮಹಾಭಾರತದೊಳ್
b)
ಅರ್ಜುನನತ್ತಣಿಂ
c)
ವೀರನಾದವ
d)
ಕರ್ಣಂ
47.
ಷಷ್ಠೀ ವಿಭಕ್ತಿಯ ಕಾರಕಾರ್ಥ
a)
ಸಂಪ್ರದಾನ
b)
ಅಪಾದಾನ
c)
ಸಂಬಂಧ
d)
ಅಧಿಕರಣ
48.
ಅಧಿಕರಣ ಕಾರಕಾರ್ಥವನ್ನು ಹೊಂದಿರುವ ವಿಭಕ್ತಿ
a)
ಸಪ್ತಮಿ
b)
ಷಷ್ಠಿ
c)
ಪಂಚಮಿ
d)
ಚತುರ್ಥಿ
49.
ಇವುಗಳಲ್ಲಿ ಷಷ್ಠಿ ವಿಭಕ್ತಿ ಹೊಂದಿರುವ ಪದ
a)
ರಾಜನು
b)
ದೇವರ
c)
ರಾಗವನ್ನು
d)
ಪುಸ್ತಕದಲ್ಲಿ
50.
ಮರ- ಈ ಪದಕ್ಕೆ ಚತುರ್ಥಿ ವಿಭಕ್ತಿಯನ್ನು ಜೋಡಿಸಿ ಬರೆದಾಗ
a)
ಮರವು
b)
ಮರಕ್ಕೆ
c)
ಮರದಿಂದ
d)
ಮರದಲ್ಲಿ
51.

ನಿಮ್ಮ ಹೆಸರು ಮತ್ತು ಸೆಕ್ಷನ್‌ನ ಹೆಸರು ಬರೆಯಿರಿ

4 lines
52.

ನಿಮ್ಮ ಸ್ವಂತ ಊರಿನ ಹೆಸರು ನಮೂದಿಸಿ.

4 lines