Worksheetsನೀತಿ ಮಾತು ಮತ್ತು ನಾನು ಕನ್ನಡ ಕವಿಯಾದೆ
Total questions: 50
Worksheet time: 25mins
೧.ನೀತಿ ಮಾತು ಪದ್ಯ ಬರೆದವರು..
ಅ. ಕುವೆಂಪು
ಆ.ಬೇಂದ್ರೆ
ಇ.ಕನಕದಾಸರು
ಈ.ಪುರಂದರದಾಸರು
೨.ಓಲಗ ಪದದ ಅರ್ಥ
ಅ.ಅನ್ನ
ಆ.ಸಭೆ
ಇ.ರಾಜ
ಈ.ಭಿಕ್ಷೆ
೩.ಕನಕದಾಸರು ಜನಿಸಿದ ಸ್ಥಳ..
ಅ. ಬೆಳಗಾವಿ
ಆ.ಬೆಂಗಳೂರು
ಇ.ಹಾವೇರಿ
ಈ.ಶಿವಮೊಗ್ಗ
೪.ವಸುಮತಿ ಪದದ ಅರ್ಥ..
ಅ.ಗಾಳಿ
ಆ.ಆಕಾಶ
ಇ.ಭೂಮಿ
ಈ.ನೀರು
೫.ಚೀಟಿಯನ್ನು ಪದದಲ್ಲಿರುವ ಸಂಧಿ
ಅ.ಯಕಾರಾಗಮ ಸಂಧಿ
ಆ.ವಕಾರಾಗಮ ಸಂಧಿ
ಇ.ಆದೇಶ ಸಂಧಿ
ಈ.ಲೋಪ ಸಂಧಿ
೬.ವಿವೇಕ ಪದದ ವಿರುದ್ಧ ಪದ
ಅ.ಅನೇಕ
ಆ.ವಿನಾಯಕ
ಇ.ಅವಿವೇಕ
ಈ.ವಿಕ
೭.ವಾಗ್ದೇವಿ ಪದವನ್ನು ಬಿಡಿಸಿ ಬರೆದಾಗ .....
ಅ.ವಾಗ್ದೇ+ವಿ
ಆ.ವಾಗ್+ದೇವಿ
ಇ.ವಾಕ್+ದೇವಿ
ಈ.ವಾಕ+ದೇವಿ
೮.ಮೆಲು ಮಾತಿನ ಪಕ್ಷಿ ಯಾವುದು?
ಅ.ಕೋಗಿಲೆ
ಆ.ಗಿಳಿ
ಇ.ಕಾಗೆ
ಈ.ನವಿಲು
೯.ಸುಧೆ ಪದದ ಅರ್ಥ...
ಅ.ಹಾಲು
ಆ.ಅಮೃತ
ಇ.ಪಾಯಸ
ಈ.ದುಂಬಿ
೧೦.ಮಧುರ ಧ್ವನಿಯ ಪಕ್ಷಿ ಯಾವುದು?
ಅ.ಗಿಳಿ
ಆ.ಕಾಗೆ
ಇ.ಕೋಗಿಲೆ
ಈ.ನವಿಲು
೧೧.ಮನಸ್ಸನ್ನು ತಣಿಸುವ ಮೋಹನ ಸುಧೆ ಯಾವುದು?
ಅ.ಕೋಗಿಲೆ ನುಡಿ
ಆ.ಗಿಳಿ ನುಡಿ
ಇ.ಕನ್ನಡ ನುಡಿ
ಈ.ಸಂಸ್ಕೃತ ನುಡಿ
೧೨.ಕನ್ನಡ ನುಡಿಯನ್ನು ಯಾವ ಯಾವ ಧ್ವನಿಗಳಿಗೆ ಹೋಲಿಸಲಾಗಿದೆ?
ಅ.ಕೋಗಿಲೆ
ಆ.ಗಿಳಿ
ಇ.ವೀಣೆ
ಈ.ಮೇಲಿನ ಎಲ್ಲವೂ
೧೩.ಕಳಕಂಠ ಎಂದರೇನು?
ಅ.ಕರಡಿ
ಆ.ಹಂದಿ
ಇ.ಕಾರ್ಕೋಟಕ
ಈ.ಕೋಗಿಲೆ
೧೪.ನುಡಿಯು ಪದದ ಪ್ರಾಸ ಪದ.....
ಅ.ದನಿಯೊಳು
ಆ.ಸುಧೆಯು
ಇ.ರವವೊ
ಈ.ಕುಕಿಲೋ
೧೫.ಮತ್ಸರ ಪದದ ಅರ್ಥ ....
ಅ.ಕೆಟ್ಟ
ಆ.ಜ್ಞಾನಿ
ಇ.ಭಿಕ್ಷೆ
ಈ.ಹೊಟ್ಟೆಕಿಚ್ಚು
೧೬.ಬಿಸಜಾಕ್ಷ ಎಂದರೆ....
ಅ.ಕಮಲದಂತೆ ಕಣ್ಣುಳ್ಳವನು
ಆ.ಮೂರು ಕಣ್ಣುಳ್ಳವನು
ಇ.ನಾಲ್ಕು ತಲೆಯುಳ್ಳವನು
ಈ.ಮೇಲಿನ ಎಲ್ಲವೂ
೧೭.ಸಜ್ಜನರ ಸಂಗ.,...,..,....
ಅ.ಹಾವಿನ ವಿಷದಂತೆ
ಆ.ಹೆಜ್ಜೇನು ಸವಿದಂತೆ
ಇ.ಬಚ್ಚಲ ರೊಚ್ಚಿನಂತೆ
ಈ.ಗೂಬೆಯು ಕೂಗಿದಂತೆ
೧೮.ದಾಸರನ್ನು ಪದದಲ್ಲಿರುವ ವಿಭಕ್ತಿ ಪ್ರತ್ಯಯ...
ಅ.ಪ್ರಥಮ
ಆ.ದ್ವಿತೀಯ
ಇ.ತೃತೀಯ
ಈ.ಚತುರ್ಥಿ
೧೯.ಬಿಸಜಾಕ್ಷ: ವಿಷ್ಣು::ಹಣೆಗಣ್ಣ:.....
ಅ.ಬ್ರಹ್ಮ
ಆ.ಶಿವ
ಇ.ಕನಕ
ಈ.ಪುರಂದರ
೨೦.ಗೆಳೆಯ:ಗೆಳೆತನ::ಹಗೆ: .........
ಅ.ಹಗೆತನ
ಆ.ಹೇಡಿತನ
ಇ.ಮುದಿತನ
ಈ.ಮಿತ್ರತ್ವ
೨೧.ಅಜ್ಞಾನಿಯಿಂದ ಪದದಲ್ಲಿರುವ ವಿಭಕ್ತಿ ಪ್ರತ್ಯಯ.....
ಅ.ಚತುರ್ಥಿ
ಆ.ತೃತೀಯ
ಇ.ದ್ವಿತೀಯ
ಈ.ಪ್ರಥಮ
೨೨.ಅಡವಿ ಪದದ ಅರ್ಥ ಇದಲ್ಲ...
ಅ.ಕಾಡು
ಆ.ಅರಣ್ಯ
ಇ.ವನ
ಈ.ಅಜ್ಞಾನ
೨೩.ಅರಸ ಪದದ ಅರ್ಥ......
ಅ.ಸೇವಕ
ಆ.ಸೈನಿಕ
ಇ.ನೃಪ
ಈ.ಮಂತ್ರಿ
೨೪.ನೀರು ಪದದ ಸಮಾನಾರ್ಥಕ ಪದ.....
ಅ.ಉದಕ
ಆ.ಕ್ಷೀರ
ಇ.ಸುಧೆ
ಈ.ಶಶಿ
೨೫.ಕನಕದಾಸರ ಕಾಲ .....
ಅ.೧೦_೧೧ ನೇ ಶತಮಾನ
ಆ.೧೨ ನೇ ಶತಮಾನ
ಇ.೧೫_೧೬ನೇ ಶತಮಾನ
ಈ.೨೦ನೇ ಶತಮಾನ
೨೬.ಕನಕದಾಸರು ರಚಿಸಿರುವ ಕೃತಿಗಳು...
ಅ.ರಾಮಧಾನ್ಯಚರಿತೆ
ಆ.ಮೋಹನ ತರಂಗಿಣಿ
ಇ.ನಳಚರಿತ್ರೆ
ಈ.ಮೇಲಿನ ಎಲ್ಲಾ
೨೭.ಕನಕದಾಸರ ಅಂಕಿತ ನಾಮ....
ಅ.ವಿಠ್ಠಲರಾಮ
ಆ.ಕಾಗಿನೆಲೆ ಆದಿಕೇಶವ
ಇ.ಗುಹೇಶ್ವರ
ಈ.ಚನ್ನಮಲ್ಲಿಕಾರ್ಜುನ
೨೮.ಅರಸನೋಲಗಕ್ಕಿಂತ ಉತ್ತಮವಾದುದು....
ಅ.ಹಾಳು ಗುಡಿ
ಆ.ಅಜ್ಞಾತವಾಸ
ಇ.ತಿರಿದುಂಬುದು
ಈ.ಕುಡಿನೀರು ಕುಡಿವುದು
೨೯.ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳು ಯಾರು?
ಅ.ಕನಕದಾಸ/ಪುರಂದರದಾಸ
ಆ.ಬಸವಣ್ಣ/ಅಲ್ಲಮಪ್ರಭು
ಇ.ವ್ಯಾಸ/ವಾಲ್ಮೀಕಿ
ಈ.ರವಿ/ಶಶಿ
೩೦.ಹಾಳು ಹರಟೆಗಿಂತ ಮೇಲಾದುದದು.....
ಅ.ತಿರಿದುಂಬುದು
ಆ.ದಾಸರ ಕೂಡೆ ಸಂಭಾಷಣೆ
ಇ.ಅಡವಿ ವಾಸ
ಈ.ಹಾಳು ಗುಡಿ
೩೧.ಸಗಣಿಯವನೊಡನೆ ಸರಸಕ್ಕಿಂತ ಗಂಧದವನೊಡನೆ ........ಲೇಸು
ಅ.ಆಟವೇ
ಆ.ಹುಡುಗಾಟವೇ
ಇ.ಪಾಠವೇ
ಈ.ಗುದ್ದಾಟವೇ
೩೨.ಕೆ.ವಿ ಪುಟ್ಟಪ್ಪನವರ ಕಾವ್ಯ ನಾಮ
ಅ.ಅಂಬಿಕಾತನೆಯದತ್ತ
ಆ.ಕುವೆಂಪು
ಇ.ಚಂಪಾ
ಈ.ಶ್ರೀನಿವಾಸ
೩೪.ಕವನಗಳನ್ನು ಕಸಿನ್ಸ್ ರವರಿಗೆ ತೋರಿಸುವಂತೆ ಕುವೆಂಪುರವರಿಗೆ ತಿಳಿಸಿದವರು......
ಅ.ಕೃಷ್ಣ ಭಟ್
ಆ.ಎಂ.ಎಚ್.ಕೃಷ್ಣ ಅಯ್ಯಂಗಾರ್
ಇ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್
೩೪.ಕುವೆಂಪುರವರ ಕೃತಿಗಳು...
ಅ.ಶ್ರೀರಾಮಾಯಣ ದರ್ಶನಂ
ಆ.ಮಲೆಗಳಲ್ಲಿ ಮದುಮಗಳು
ಇ.ಬೆರಳ್ಗೆ ಕೊರಳ್
ಈ.ಮೇಲಿನ ಎಲ್ಲಾ
೩೫.ಮಿತ್ರ ಪದದ ಸಮಾನಾರ್ಥಕ ಪದ.
ಅ.ಗೆಳೆಯರು
ಆ.ಸ್ನೇಹಿತ
ಇ.ಗೆಳತಿ
ಈ. ಮೇಲಿನ ಎಲ್ಲ
೩೬.ತಲೆಯೆತ್ತು ಪದದಲ್ಲಿರುವ ಸಂಧಿ...
ಅ.ಆಗಮ ಸಂಧಿ
ಆ.ಆದೇಶ ಸಂಧಿ
ಇ.ಲೋಪ ಸಂಧಿ
ಈ.ಗುಣ ಸಂಧಿ
೩೭.ಹಾಸ್ಯಾಸ್ಪದ ಪದವನ್ನು ಬಿಡಿಸಿ ಬರೆದಾಗ.....
ಅ.ಹಾಸ್ಯ+ಆಪದ
ಆ.ಹಾಸ್ಯ+ಪದ
ಇ.ಹಾಸ್ಸ+ಆಸ್ಪದ
ಈ.ಹಾಸ್ಯ+ಆಸ್ಪದ
೩೮.ಕುವೆಂಪು: ಕನ್ನಡ ಕವಿ:: ಜೇಮ್ಸ್ ಕಸಿನ್ಸ್:_______
ಅ.ಫ್ರಾನ್ಸ್
ಆ.ಇಂಗ್ಲೆಂಡ್
ಇ.ಐರಿಷ್
ಈ.ಜಪಾನ್
೩೯."ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?"ಈ ಸಾಲನ್ನು ಹೇಳಿದವರು...
ಅ.ಕುವೆಂಪು
ಆ.ಕಸಿನ್ಸ್
ಇ.ಕೃಷ್ಣಅಯ್ಯಂಗಾರ್
ಈ.ಕಂಬಾರರು
೪೦.ಅತ್ಯಲ್ಪ ಪದದಲ್ಲಿರುವ ಸಂಧಿ....
ಅ.ಗುಣ
ಆ.ಜಶ್ತ್ವ
ಇ.ಯಣ್
ಈ.ಲೋಪ
೪೧.ಜಾತ್ರೆ ಪದದ ತತ್ಭವ......
ಅ.ಸಂತೆ
ಆ.ಯಾತ್ರೆ
ಇ.ಯಮ
ಈ.ಪಾತ್ರೆ
೪೨.ಜೇಮ್ಸ್ ಕಸಿನ್ಸ್ ಮೈಸೂರಿಗೆ ಏಕೆ ಬಂದಿದ್ದರು?
ಅ.ಉಪನ್ಯಾಸ ನೀಡಲು
ಆ.ಅಧ್ಯಯನ ಮಾಡಲು
ಇ.ತರಬೇತಿ ನೀಡಲು
ಈ.ಕೃತಿ ರಚನೆ ಮಾಡಲು
೪೩.ಕುವೆಂಪು ರವರು ಕಸಿನ್ಸ್ ಅವರನ್ನು ಭೇಟಿ ಮಾಡಲು ಹೋದಾಗ ವೇಷ ಭೂಷಣ ಹೇಗಿತ್ತು?
ಅ.ಅಂಗಿ ಚಡ್ಡಿ
ಆ.ಪ್ಯಾಂಟು ಶರ್ಟ್
ಇ.ಸೂಟು ಬೂಟು
ಈ.ಖಾದಿ ಟೋಪಿ, ಶರ್ಟು, ಪಂಚೆ
೪೪.ರವಿಂದ್ರನಾಥ ಠಾಕೂರರು ಈ ಭಾಷೆಯ ಕವಿ....
ಅ.ಕನ್ನಡ
ಆ.ಇಂಗ್ಲಿಷ್
ಇ.ಬೆಂಗಾಳಿ
ಈ.ಸಂಸ್ಕೃತ
೪೫.ಕುವೆಂಪು ಅವರ ಕಾಲ.....
ಅ.೧೯೦೪-೧೯೯೪
ಆ.೧೯೧೦-೧೯೫೬
ಇ.೧೯೧೯-೧೯೪೫
ಈ.೧೯೧೨-೧೯೬೭
೪೬.ಕುವೆಂಪುರವರ ಸ್ಥಳ....
ಅ.ಹಾವೇರಿ ಜಿಲ್ಲೆ ಬಂಕಾಪುರ
ಆ.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ
ಇ.ಬಿಜಾಪುರ ಜಿಲ್ಲೆ ಕೂಡ್ಲಿಗಿ
ಈ.ಮೈಸೂರು ಜಿಲ್ಲೆ ತೀರ್ಥಹಳ್ಳಿ
೪೭.ಕುವೆಂಪುರವರ ಆತ್ಮಕಥೆ...
ಅ.ಶ್ರೀರಾಮಾಯಣದರ್ಶನಂ
ಆ.ಮಲೆಗಳಲ್ಲಿ ಮದುಮಗಳು
ಇ.ನೆನಪಿನ ದೋಣಿಯಲ್ಲಿ
ಈ.ಶೂದ್ರತಪಸ್ವಿ
೪೮.ತೇಜೋವಧೆ ಪದದ ಅರ್ಥ....
ಅ.ಸನ್ಮಾನ
ಆ.ಅವಮಾನ
ಇ.ಪರಿಣಾಮ
ಈ.ಬಳಲಿದ
೪೯.ತಿರೋಹಿತ ಪದದ ಅರ್ಥ....
ಅ.ಮಾತನಾಡು
ಆ.ಮರೆಯಾಗು
ಇ.ಶ್ರೇಷ್ಠವಾಗು
ಈ.ಸವ್ಯಸಾಚಿ
೫೦.ಕುವೆಂಪುರವರಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ...
ಅ.ಕಾನೂರು ಹೆಗ್ಗಡತಿ
ಆ.ಮಲೆಗಳಲ್ಲಿ ಮದುಮಗಳು
ಇ.ಶ್ರೀರಾಮಾಯಣ ದರ್ಶನಂ
ಈ.ನೆನಪಿನ ದೋಣಿಯಲ್ಲಿ
