Worksheetsನಿಯಂತ್ರಣ ಮತ್ತು ಸಹಭಾಗಿತ್ವ-ರಚನೆ:ಖಲೀಲ್
Total questions: 36
Worksheet time: 18mins
ಪರಾವರ್ತನೆ(ಪರಾವರ್ತಿತ ಪ್ರತಿಕ್ರಿಯೆ) ಗೆ ಉದಾಹರಣೆ ಅಲ್ಲದ್ದು.....
ಬಿಸಿಯನ್ನು ಮುಟ್ಟಿದಾಗ ಕೈಯನ್ನು ಹಿಂದಕ್ಕೆ ಎಳೆಯುವುದು
ಕಸ ಬೀಳುವಾಗ ಕಣ್ಣಿನ ರೆಪ್ಪೆಗಳನ್ನು ಮುಚ್ಚಿ ಕೊಳ್ಳುವುದು
ಕಾಲಿಗೆ ಮುಳ್ಳು ಚುಚ್ಚಿದಾಗ ಕಾಲನ್ನು ಮೇಲಕ್ಕೆತ್ತುವುದು
ಚೆಂಡು ಬಂದಲ್ಲಿಗೆ ಬ್ಯಾಟ್ ಬೀಸುವುದು
ಜ್ಞಾನವಾಹಿ ನರಕೋಶವು
ಸಂದೇಶಗಳನ್ನು ಮೆದುಳು ಬಳ್ಳಿಯಿಂದ ಗ್ರಾಹಕದ ಕಡೆಗೆ ಕೊಂಡೊಯ್ಯುತ್ತದೆ
ಸಂದೇಶಗಳನ್ನು ಮೆದುಳು ಬಳ್ಳಿಯಿಂದ ಕಾರ್ಯ ನಿರ್ವಾಹಕ ಅಂಗಕ್ಕೆ ಕೊಂಡೊಯ್ಯುತ್ತದೆ
ಸಂದೇಶಗಳನ್ನು ಗ್ರಾಹಕದಿಂದ ಮೆದುಳು ಬಳ್ಳಿಗೆ ಕೊಂಡೊಯ್ಯುತ್ತದೆ
ಸಂದೇಶಗಳನ್ನು ಕಾರ್ಯನಿರ್ವಾಹಕ ಅಂಗದಿಂದ ಮೆದುಳು ಬಳ್ಳಿಗೆ ಕೊಂಡೊಯ್ಯುತ್ತದೆ
ನೇರ ರೇಖೆಯಲ್ಲಿ ನಡೆಯುವುದು, ಸೈಕಲ್ ಸವಾರಿ, ಕೈಯಲ್ಲಿ ಪೆನ್ಸಿಲ್ ನ್ನು ಎತ್ತಿ ಕೊಳ್ಳುವುದು, ದೇಹದ ಭಂಗಿ,ಐಚ್ಛಿಕ ಕ್ರಿಯೆಗಳ ನಿಖರತೆ, ದೇಹದ ಸಮತೋಲನ - ಕಾರ್ಯವನ್ನು ಮಾಡುವ ಮಾನವನ ಮೆದುಳಿನ ಭಾಗ
ಮಹಾ ಮಸ್ತಿಷ್ಕ (ಸೆರೆಬ್ರಮ್)
ಅನುಮಸ್ತಿಷ್ಕ(ಸೆರೆಬೆಲ್ಲಮ್)
ಹೈಪೋಥಲಾಮಸ್
ಮೆಡುಲ್ಲಾ ಅಬ್ಲಾಂಗೇಟಾ(ಮೆಡುಲ್ಲಾ)
ಸಸ್ಯಗಳಲ್ಲಿ ಎಲೆಗಳ ಬಾಡುವಿಕೆ, ಹೂವು, ಹಣ್ಣು ಮತ್ತು ಎಲೆಗಳ ಉದುರುವಿಕೆಗೆ ಕಾರಣವಾದ ಹಾರ್ಮೋನ್ ಗಳು....
ಆಕ್ಸಿನ್
ಜಿಬ್ಬರಲಿನ್
ಸೈಟೋ ಕೈನಿನ್
ಅಬ್ಸಿಸಿಕ್ ಆಮ್ಲ
ತುರ್ತು ಪರಿಸ್ಥಿತಿಯ ಹಾರ್ಮೋನ್ ಅಥವಾ ಹೆದರು, ಹೋರು, ಹಾರು ಹಾರ್ಮೋನ್ ಎಂದು ವಿಶೇಷವಾಗಿ ಕರೆಯಲ್ಪಡುವ ಹಾರ್ಮೋನ್.....
ಥೈರಾಕ್ಸಿನ್
ಅಡ್ರಿನಾಲಿನ್
ಇನ್ಸುಲಿನ್
ಟೆಸ್ಟೋಸ್ಟಿರಾನ್
ಸಸ್ಯಗಳ ಬೇರುಗಳು ಮಣ್ಣಿನ ಕಡೆಗೆ ಚಲಿಸುತ್ತದೆ. ಇದು.....ಗೆ ಉದಾಹರಣೆ
ಗುರುತ್ವಾನುವರ್ತನೆ
ದ್ಯುತಿ ಅನುವರ್ತನೆ
ಜಲಾನುವರ್ತನೆ
ರಾಸಾಯನಿಕ ಅನುವರ್ತನೆ
ಹೂವಿನಲ್ಲಿ ಅಂಡಾಶಯದ ಕಡೆಗೆ ಪರಾಗ ನಳಿಕೆಯ ಬೆಳವಣಿಗೆಯು....... ಉದಾಹರಣೆ.
ರಾಸಾಯನಿಕ ಅನುವರ್ತನೆ
ದ್ಯುತಿ ಅನುವರ್ತನೆ
ಜಲಾನುವರ್ತನೆ
ಸ್ಪರ್ಶ ಅನುವರ್ತನೆ
ಬೆಳಕಿನ ಕಡೆಗೆ ಕಾಂಡದ ತುದಿಗಳ ಬೆಳವಣಿಗೆಯು.... ಗೆ ಉದಾಹರಣೆ.
ರಾಸಾಯನಿಕ ಅನುವರ್ತನೆ
ಜಲಾನುವರ್ತನೆ
ದ್ಯುತಿ ಅನುವರ್ತನೆ
ಸ್ಪರ್ಶಾನುವರ್ತನೆ
ನೀರಿನ ಕಡೆಗೆ ಸಸ್ಯಗಳ ಬೇರಿನ ಚಲನೆಯು.... ಗೆ ಉದಾಹರಣೆ.
ಜಲಾನುವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವಾನುವರ್ತನೆ
ದ್ಯುತಿ ಅನುವರ್ತನೆ
ಲವಣ /ಗೊಬ್ಬರದ ಕಡೆಗೆ ಸಸ್ಯಗಳ ಬೇರಿನ ಚಲನೆಯು...
ದ್ಯುತಿ ಅನುವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವಾನುವರ್ತನೆ
ಜಲಾನುವರ್ತನೆ
ಆಹಾರ ಅಗಿಯುವುದು, ಉಸಿರಾಟ ನಿಯಂತ್ರಣ, ಮುಖದ ಭಾವ ಇತ್ಯಾದಿಗಳನ್ನು ನಿಯಂತ್ರಿಸುವ ಮೆದುಳಿನ ಭಾಗ...
ಮೆಡುಲ್ಲಾ (ಮೆಡುಲ್ಲಾ ಅಬ್ಲಾಂಗೇಟಾ)
ಪಾನ್ಸ್ (ಪಾನ್ಸ್ ವೆರೋಲಿ)
ಹೈಪೋಥಲಾಮಸ್
ಅನುಮಸ್ತಿಷ್ಕ
ರಕ್ತದ ಒತ್ತಡ, ವಾಂತಿ ಆಗುವುದು, ಹೃದಯ ಬಡಿತ ಹಾಗೂ ಇತರ ದೇಹದ ಅನೈಚ್ಛಿಕ ಕ್ರಿಯೆಗಳನ್ನು ಮಾಡುವ ಮೆದುಳಿನ ಭಾಗ...
ಮೆಡುಲ್ಲಾ
ಪಾನ್ಸ್
ಮಹಾಮಸ್ತಿಷ್ಕ
ಹೈಪೋಥಲಾಮಸ್
...... ಹಾರ್ಮೋನ್ ನಮ್ಮ ದೇಹದಲ್ಲಿ ಸಂಶ್ಲೇಷಣೆ ಆಗಬೇಕಾದರೆ ನಮ್ಮ ದೇಹಕ್ಕೆ ಅಯೋಡಿನ್ ನ ಅಗತ್ಯವಿದೆ.
ಅಡ್ರಿನಾಲಿನ್
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಇನ್ಸುಲಿನ್
ಅಂಡಾಣುಗಳ ಉತ್ಪಾದನೆ, ಋತು ಚಕ್ರ ದ ನಿಯಂತ್ರಣ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನ್....
ಈಸ್ಟ್ರೋಜನ್
ಟೆಸ್ಟೋಸ್ಟಿರಾನ್
ಥೈರಾಕ್ಸಿನ್
ಅಡ್ರಿನಾಲಿನ್
ವೀರ್ಯಾಣುಗಳ ಉತ್ಪಾದನೆ, ಗಡ್ಡ ಮೀಸೆ ಗಳ ಬೆಳವಣಿಗೆಯನ್ನು ಮಾಡುವ ಹಾರ್ಮೋನ್...
ಈಸ್ಟ್ರೋಜನ್
ಪ್ರೊಜೆಸ್ಟಿರಾನ್
ಟೆಸ್ಟೋಸ್ಟಿರಾನ್
ಥೈರಾಕ್ಸಿನ್
ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಅಂಶವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಸಹಾಯಕವಾದ ಹಾರ್ಮೋನ್...
ಇನ್ಸುಲಿನ್
ಅಡ್ರಿನಾಲಿನ್
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಈ ಹಾರ್ಮೋನ್ ನ ಸ್ರವಿಕೆ (ಉತ್ಪಾದನೆ) ಕಡಿಮೆ ಆದರೆ ಸಕ್ಕರೆ ಕಾಯಿಲೆ (ಡಯಾಬಿಟೀಸ್) (ಮಧುಮೇಹ) ಬರುತ್ತದೆ.
ಥೈರಾಕ್ಸಿನ್
ಇನ್ಸುಲಿನ್
ಬೆಳವಣಿಗೆ ಹಾರ್ಮೋನ್
ಈಸ್ಟ್ರೋಜನ್
ಈ ಹಾರ್ಮೋನ್ ನ ಸ್ರವಿಕೆ ಕಡಿಮೆ ಆದರೆ ಸರಳ ಗಳಗಂಡ (ಸರಳ ಗಾಯಿಟರ್) ರೋಗ ಬರುತ್ತದೆ
ಥೈರಾಕ್ಸಿನ್
ಅಡ್ರಿನಾಲಿನ್
ಪಿಟ್ಯೂಟರಿ ಗ್ರಂಥಿ ಸ್ರವಿಸುವ ಬೆಳವಣಿಗೆಯ ಹಾರ್ಮೋನ್
ಟೆಸ್ಟೋಸ್ಟಿರಾನ್
ಒಬ್ಬಳು ಹುಡುಗಿಗೆ ಮುಖದಲ್ಲಿ ಗಡ್ಡ ಬೆಳೆದಿದೆ. ಇದಕ್ಕೆ ಕಾರಣ ಆ ಹುಡುಗಿಯಲ್ಲಿ... ಹೆಚ್ಚಾಗಿ ಇದೆ
ಈಸ್ಟ್ರೋಜನ್
ಪ್ರೊಜೆಸ್ಟಿರಾನ್
ಟೆಸ್ಟೋಸ್ಟಿರಾನ್
ಯಾವುದೂ ಅಲ್ಲ
ಒಬ್ಬ ಹುಡುಗನಿಗೆ ಪ್ರಾಯ 20 ದಾಟಿದರೂ ಗಡ್ಡ ಮೀಸೆ ಬರುತ್ತಿಲ್ಲ. ಇದಕ್ಕೆ ಕಾರಣವೇನೆಂದರೆ...
ಆತನಲ್ಲಿ ಬೆಳವಣಿಗೆಯ ಹಾರ್ಮೋನ್ ಕಡಿಮೆ ಉತ್ಪಾದನೆ ಆಗುತ್ತಿದೆ
ಆತನಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಕಡಿಮೆ ಆಗಿರುವುದು
ಆತನಲ್ಲಿ ಥೈರಾಕ್ಸಿನ್ ಹಾರ್ಮೋನ್ ಕಡಿಮೆ ಆಗಿರುವುದು
ಆತನಲ್ಲಿ ಅಡ್ರಿನಾಲಿನ್ ಹಾರ್ಮೋನ್ ಕಡಿಮೆ ಆಗಿರುವುದು
ಸಸ್ಯಗಳ ಕಾಂಡದಲ್ಲಿ ಇರುವ ಆಕ್ಸಿನ್ ಎಂಬ ಹಾರ್ಮೋನ್ ಕಾಂಡದ ಮೇಲೆ ಬೆಳಕು ಬಿದ್ದಾಗ....
ಬಿಸಿಲು ಬಿದ್ದ ಪಾರ್ಶ್ವದ ವಿರುದ್ಧ ಪಾರ್ಶ್ವಕ್ಕೆ ಚಲಿಸುತ್ತದೆ
ಬಿಸಿಲು ಬಿದ್ದ ಪಾರ್ಶ್ವದಲ್ಲಿ ಸಾಂದ್ರಗೊಳ್ಳುತ್ತದೆ
ಎಲ್ಲಾ ಭಾಗದಲ್ಲಿಯೂ ಆಕ್ಸಿನ್ ಉತ್ಪಾದನೆ ಚುರುಕುಗೊಳ್ಳುತ್ತವೆ
ಮೇಲಿನ ಎಲ್ಲವೂ
ಕೋಶ ವಿಭಜನೆಯನ್ನು ಉತ್ತೇಜನ ಗೊಳಿಸುತ್ತದೆ ಹಾಗೂ ಹೂವು, ಹಣ್ಣು ನಂತಹ ತೀವ್ರ ಕೋಶ ವಿಭಜನೆ ಗೊಳ್ಳುವ ಸಸ್ಯ ಭಾಗದಲ್ಲಿ ಕಂಡು ಬರುವ ಹಾರ್ಮೋನ್.....
ಸೈಟೋ ಕೈನಿನ್
ಜಿಬ್ಬರಲಿನ್
ಆಕ್ಸಿನ್
ಅಬ್ಸಿಸಿಕ್ ಆಮ್ಲ
ಪರಾವರ್ತನೆ ಯಲ್ಲಿ ಪ್ರಚೋದನೆಯನ್ನು ಸ್ವೀಕರಿಸುವ ಭಾಗ...
ಸಂಬಂಧ ಕಲ್ಪಿಸುವ ನರಕೋಶ
ಜ್ಞಾನವಾಹಿ ನರಕೋಶ
ಗ್ರಾಹಕ
ಕಾರ್ಯ ನಿರ್ವಾಹಕ ಅಂಗ
ಸಸ್ಯಗಳ ಚಿಗುರುಗಳು ಮಣ್ಣಿನಿಂದ ಮೇಲಕ್ಕೆ ಚಲಿಸುವುದು...
ಧನ ಗುರುತ್ವಾನುವರ್ತನೆ
ಋಣ ಗುರುತ್ವಾನುವರ್ತನೆ
ಧನ ಜಲಾನುವರ್ತನೆ
ಋಣ ದ್ಯುತಿ ಅನುವರ್ತನೆ
ಒಂದು ನರಕೋಶದ ಡೆಂಡ್ರೈಟ್ ಮತ್ತು ಇನ್ನೊಂದು ನರಕೋಶದ ಆಕ್ಸಾನ್ ಗಳ ನಡುವಿನ ಖಾಲಿ ಎಡೆಯನ್ನು (ಖಾಲಿ ಅವಕಾಶ).... ಎನ್ನುವರು.
ನರ ತುದಿ
ಕೋಶಕಾಯ(ಸೈಟಾನ್)
ಸಂಸರ್ಗ(ಸಿನಾಪ್ಸ್)
ಟಿಲೋ ಡೆಂಡ್ರಾನ್
...... ನರ ಸಂದೇಶಗಳನ್ನು ಕೋಶಕಾಯದ ಕಡೆಗೆ ತರುತ್ತದೆ.
ಆಕ್ಸಾನ್
ಡೆಂಡ್ರೈಟ್
ಟಿಲೋ ಡೆಂಡ್ರಾನ್
ಸಂಸರ್ಗ
..... ನರ ಸಂದೇಶಗಳನ್ನು ಕೋಶಕಾಯದಿಂದ ದೂರಕ್ಕೆ ಕೊಂಡೊಯ್ಯುತ್ತದೆ
ಡೆಂಡ್ರೈಟ್
ಆಕ್ಸಾನ್
ಟಿಲೋ ಡೆಂಡ್ರಾನ್
ಮಯಲಿನ್ ಹೊದಿಕೆ
ಕಣ್ಣಿನ ಪಾಪೆಯ ಸಂಕುಚನ ಮತ್ತು ವಿಕಸನ, ಹೃದಯ ಬಡಿತದ ಹೆಚ್ಚು ಆಗುವುದು ಮತ್ತು ಕಡಿಮೆ ಆಗುವುದು, ಉಸಿರಾಟದ ವೇಗದ ಹೆಚ್ಚು ಆಗುವುದು ಮತ್ತು ಕಡಿಮೆ ಆಗುವುದು... ಈ ಹಾರ್ಮೋನ್ ನ ಪಾತ್ರವಿದೆ
ಥೈರಾಕ್ಸಿನ್
ಅಡ್ರಿನಾಲಿನ್
ಇನ್ಸುಲಿನ್
ಬೆಳವಣಿಗೆಯ ಹಾರ್ಮೋನ್
15 ವರ್ಷ ಪ್ರಾಯದ ಒಬ್ಬ ಹುಡುಗನಲ್ಲಿ ಬೆಳವಣಿಗೆಯ ಹಾರ್ಮೋನ್ ಸರಿಯಾಗಿ ಉತ್ಪಾದನೆ ಆಗುತ್ತಿಲ್ಲ.. ಇದರಿಂದ ಉಂಟಾಗುವ ಸಮಸ್ಯೆ...
ಬಂಜೆತನ(ಮಕ್ಕಳು ಆಗದಿರುವುದು)
ಕುಬ್ಜತೆ
ದೈತ್ಯತೆ
ಅಕ್ರೋಮೆಗಾಲಿ
ಕೆಳಗಿನವುಗಳಲ್ಲಿ ಅಂತಃಸ್ರಾವಕ ಗ್ರಂಥಿ ಅಲ್ಲದ್ದು..
ಥೈಮಸ್ ಗ್ರಂಥಿ
ಥೈರಾಯ್ಡ್ ಗ್ರಂಥಿ
ಪಾರಾ ಥೈರಾಯ್ಡ್ ಗ್ರಂಥಿ
ಲಾಲಾರಸ ಗ್ರಂಥಿ
ಚಿತ್ರದಲ್ಲಿ ಕೊಟ್ಟಿರುವ ಹಿಮ್ಮೆದುಳಿನ ಭಾಗಗಳು........
A, B ಮತ್ತು C
A, H ಮತ್ತು C
E, F, ಮತ್ತು H
E, F ಮತ್ತು G
ಚಿತ್ರವನ್ನು ಗಮನಿಸಿ. ನರಾವೇಗ (ನರ ಸಂದೇಶ) ಗಳು ಸಾಗುವ ದಾರಿ (ಪಥ)....
A->B->C->D
B->A->D->E
E->D->A->B
E->B->A->C
ಕೊಟ್ಟಿರುವ ಚಿತ್ರದಲ್ಲಿ ದೇಹದ ಸಮತೋಲನವನ್ನು ನಿಯಂತ್ರಿಸುವ ಮೆದುಳಿನ ಭಾಗ......
A
H
G
E
ಚಿತ್ರದಲ್ಲಿ..... ಭಾಗವು ನರಾವೇಗ(ನರ ಸಂದೇಶ) ಗಳನ್ನು ಕೋಶಕಾಯ(ಸೈಟಾನ್) ದಿಂದ ದೂರಕ್ಕೆ ಕೊಂಡೊಯ್ಯುತ್ತದೆ.
A
B
C
D
ಚಿತ್ರವನ್ನು ಗಮನಿಸಿ. ಅಡ್ರಿನಲ್ ಗ್ರಂಥಿ ಇರುವ ಸ್ಥಾನವನ್ನು ಗುರುತಿಸಿ...
A
C
E
G
ಚಿತ್ರವನ್ನು ಗಮನಿಸಿ. ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯಾಗುವ ಭಾಗ..
H
G
F
E
