wayground logo

Free Printable Worksheets

NEW

Font size

S
M
L
XL
Worksheets

ವೃಕ್ಷಸಾಕ್ಷಿ. ಪರಮೇಶ್ ಡಿ. GHS HONNUDIKE HANDPOST. TUMKUR

Total questions: 30

Worksheet time: 15mins

Name
Class
Date
1.

ಕರ್ನಾಟಕ ಪಂಚತಂತ್ರದ ಕರ್ತೃ ಯಾರು

a)

ನಯಸೇನ

b)

ಎರಡನೇ ನಾಗವರ್ಮ

c)

ಶ್ರೀವಿಜಯ

d)

ದುರ್ಗಸಿಂಹ

2.

ದುರ್ಗಸಿಂಹ ಜನಿಸಿದ ವರ್ಷ

a)

ಕ್ರಿಸ್ತಶಕ 1031

b)

ಕ್ರಿಸ್ತಶಕ 1032

c)

ಕ್ರಿಸ್ತಶಕ 1033

d)

ಕ್ರಿಸ್ತಶಕ 1030

3.

ಕರ್ನಾಟಕ ಪಂಚತಂತ್ರ ಈ ಸಾಹಿತ್ಯ ಪ್ರಕಾರದಲ್ಲಿದೆ

a)

ಗದ್ಯ

b)

ಪದ್ಯ

c)

ಚಂಪೂಕಾವ್ಯ

d)

ಖಂಡಕಾವ್ಯ

4.

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಸಂಪಾದಿಸಿದ ಹೊನ್ನನ್ನು ಎಲ್ಲಿ ಅವಿತಿಟ್ಟಿದ್ದರು

a)

ಮನೆಯ ಒಳಗೆ

b)

ಉದ್ಯಾನವನದ ಆಲದ ಮರದ ಮೇಲೆ

c)

ದೊಡ್ಡ ಮರದ ಪೊಟರೆಯೊಳಗೆ

d)

ಉದ್ಯಾನವನದಲ್ಲಿದ್ದ ಆಲದ ಮರದ ಕೆಳಗೆ

5.

"ತಸ್ಕರಸ್ಯಾನೃತಂ ಬಲಂ" ವಾಕ್ಯವನ್ನು ನೆನೆದವರು

a)

ಧರ್ಮಬುದ್ಧಿ

b)

ದುಷ್ಟಬುದ್ಧಿ

c)

ಧರ್ಮಾಧಿಕಾರಿಗಳು

d)

ಪ್ರೇಮ ಮತಿ

6.

ಧರ್ಮಬುದ್ಧಿಯನ್ನು ವಂಚಿಸಿದವರು ಯಾರು

a)

ಪ್ರೇಮಮತಿ

b)

ಧರ್ಮಾಧಿಕಾರಿಗಳು

c)

ದುಷ್ಟಬುದ್ಧಿ

d)

ವ್ಯಾಪಾರಿಗಳು

7.

ದುಷ್ಟಬುದ್ಧಿ ಧರ್ಮಬುದ್ಧಿ ಮೇಲೆ ಯಾವ ಆರೋಪವನ್ನು ಹೊರಿಸಿದನು

a)

ಹೊನ್ನನ್ನು ಕದ್ದ ಆರೋಪ

b)

ಹೊನ್ನನ್ನು ಬಚ್ಚಿಟ್ಟ ಆರೋಪ

c)

ಹೊನ್ನನ್ನು ಹಂಚಿಕೊಂಡ ಆರೋಪ

d)

ಹೊನ್ನನ್ನು ಬೇರೆಯವರಿಗೆ ಕೊಟ್ಟ ಆರೋಪ

8.

ದುಷ್ಟಬುದ್ಧಿಯ ಸುಳ್ಳು ತನ್ನ ಮೇಲೆ ಬರುವುದೆಂದು "ಹೊನ್ನನ್ನೆಲ್ಲವನ್ನು ನೀನೇ ಕದ್ದಿರುವೆಯೆಂದು" ಯಾರಿಗೆ ಹೇಳಿದನು

a)

ಪ್ರೇಮ ಮತಿ

b)

ಧರ್ಮಾಧಿಕಾರಿಗಳಿಗೆ

c)

ಧರ್ಮ ಬುದ್ಧಿಗೆ

d)

ಊರಿನ ಜನರಿಗೆ

9.

ದುಷ್ಟಬುದ್ಧಿ ಧರ್ಮಬುದ್ಧಿ ಮೇಲೆ ಹೇಗೆ ಕಳ್ಳತನದ ಆರೋಪವನ್ನು ಹೊರಿಸಿದನು

a)

ಹಾ!ಹಾ! ಕೆಟ್ಟೆನೆಂದು

b)

ಬಾಯಿಯನ್ನು ಹೊಟ್ಟೆಯನ್ನು ಬಡಿದುಕೊಳ್ಳುತ್ತಾ

c)

ಬೊಬ್ಬೆ ಹಾಕಿ ಸ್ನೇಹ ಕೆಡುವಂತೆ ನುಡಿದು

d)

ಮೇಲಿನ ಎಲ್ಲವೂ

10.

ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯು ತಮ್ಮ ನ್ಯಾಯವನ್ನು ಬಗೆಹರಿಸಿಕೊಳ್ಳಲು ಬಂದದ್ದು

a)

ಮಹಾರಾಜರ ಹತ್ತಿರ

b)

ಪ್ರೇಮ ಮತಿಯ ಹತ್ತಿರ

c)

ಸ್ನೇಹಿತರ ಬಳಿಗೆ

d)

ಧರ್ಮಾಧಿಕರಣರ ಬಳಿಗೆ

11.

ಧರ್ಮಬುದ್ಧಿ ಹೊನ್ನನ್ನು ತೆಗೆದುಕೊಂಡಿರುವುದಕ್ಕೆ ನನ್ನ ಬಳಿ ಸಾಕ್ಷಿ ಉಂಟು ಎಂದು ಯಾರು ಯಾರಿಗೆ ಹೇಳಿದರು

a)

ಧರ್ಮಾಧಿಕರಣರು ದುಷ್ಟಬುದ್ಧಿಗೆ

b)

ದುಷ್ಟಬುದ್ಧಿ ಪ್ರೇಮಮತಿಗೆ

c)

ದುಷ್ಟಬುದ್ಧಿ ಧರ್ಮಬುದ್ಧಿಗೆ

d)

ದುಷ್ಟಬುದ್ಧಿ ಧರ್ಮಧಿಕರಣರಿಗೆ

12.

ಧರ್ಮಬುದ್ಧಿ ಹೊನ್ನನ್ನು ತೆಗೆದುಕೊಂಡಿರುವುದಕ್ಕೆ ಸಾಕ್ಷಿ ಯಾವುದೆಂದು ದುಷ್ಟಬುದ್ಧಿ ಹೇಳಿದನು

a)

ಪ್ರೇಮ ಮತಿ

b)

ಸ್ನೇಹಿತರು

c)

ಆಲದ ಮರ

d)

ಉದ್ಯಾನವನ

13.

ಧರ್ಮಾಧಿಕರಣರು ಏಕೆ ವಿಸ್ಮಯಪಟ್ಟರು

a)

ಧರ್ಮಬುದ್ಧಿ ಹೊನ್ನನ್ನು ಕದ್ದಿದ್ದ ಎಂದು ಹೇಳಿದ್ದಕ್ಕೆ

b)

ಧರ್ಮಬುದ್ಧಿ ವಟವೃಕ್ಷವು ಸಾಕ್ಷಿ ಎಂದು ಹೇಳಿದ್ದಕ್ಕೆ

c)

ದುಷ್ಟಬುದ್ಧಿ ಪ್ರೇಮಮತಿಯೇ ಸಾಕ್ಷಿ ಎಂದು

d)

ದುಷ್ಟಬುದ್ಧಿ ವಟವೃಕ್ಷವೇ ಸಾಕ್ಷಿ ಎಂದು ಹೇಳಿದ್ದಕ್ಕೆ

14.

ಮನುಷ್ಯರ ಸುಕೃತ ದುಷ್ಕೃತ್ಯಗಳನ್ನು ಯಾರು ತಿಳಿಯುತ್ತಾರೆ

a)

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ

b)

ಧರ್ಮಾಧಿಕರಣರು

c)

ಆಲದ ಮರ

d)

ದೈವಗಳು

15.

ಪರಧನ ಹರಣವು, ಪರಸ್ತ್ರೀ ಗಮನವೂ ವಿಶ್ವಾಸಘಾತಕ , ಸ್ವಾಮಿದ್ರೋಹ ಇವೆಲ್ಲವೂ ಕೆಡುಕನ್ನು ಉಂಟು ಮಾಡುತ್ತವೆ ಎಂದು ಯಾರು ಯಾರಿಗೆ ಹೇಳಿದರು

a)

ಧರ್ಮಬುದ್ಧಿ ದುಷ್ಟಬುದ್ಧಿಗೆ

b)

ದುಷ್ಟಬುದ್ಧಿ ಧರ್ಮಬುದ್ಧಿಗೆ

c)

ಧರ್ಮಾಧಿಕರಣರು ದುಷ್ಟಬುದ್ದಿಗೆ

d)

ಪ್ರೇಮಮತಿ ದುಷ್ಟಬುದ್ದಿಗೆ

16.

ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ ವ್ಯಾಪಾರದಿಂದ ಹಿಂತಿರುಗಿ ಬಂದು ಎಲ್ಲಿ ಬೀಡುಬಿಟ್ಟರು

a)

ಪ್ರೇಮ ಮತಿಯ ಮನೆಯಲ್ಲಿ

b)

ಧರ್ಮಬುದ್ಧಿಯ ಮನೆಯಲ್ಲಿ

c)

ಮಧುರಾ ಪುರದ ನಗರದ ಹೊರಗಿನ ಉದ್ಯಾನವನದೊಳಗೆ

d)

ಸಯ್ಯಡಿ ನಗರದೊಳಗೆ

17.

ವೃಕ್ಷಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ

a)

ದುರ್ಗಸಿಂಹನ ಕರ್ನಾಟಕ ಪಂಚತಂತ್ರ

b)

ಗುಣಾಡ್ಯನ ಬೃಹತ್ಕತೆ

c)

ಸಂಸ್ಕೃತ ಪಂಚತಂತ್ರ

d)

ಬ್ರಹ್ಮಶಿವನ ಸಮಯ ಪರೀಕ್ಷೆ

18.

ದುಷ್ಟಬುದ್ಧಿ ಧರ್ಮಬುದ್ಧಿಗೆ ಯಾವ ಸಲಹೆನಿತ್ತನು.

a)

ನಾವು ಹೊನ್ನನ್ನು ಪಾಲು ಮಾಡಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವುದು ಸಾಧ್ಯವಿಲ್ಲ

b)

ಮತ್ತೆ ನಾವು ಮರಳಿ ವ್ಯಾಪಾರಕ್ಕೆ ಹೋಗಬೇಕು

c)

ನನಗೂ ನಿನಗೂ ಖರ್ಚಿಗೆ ಬೇಕಾದಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟು ಹೋಗೋಣ ಎಂದನು

d)

ಮೇಲಿನ ಎಲ್ಲವೂ

19.

ವೃಕ್ಷಸಾಕ್ಷಿ ಕಥೆಯಲ್ಲಿ ಬರುವ ಪಂಚತಂತ್ರಗಳು ಯಾವುವು

a)

ಭೇದ. ಪರೀಕ್ಷಾ. ವಿಶ್ವಾಸ .ವಂಚನಾ ಮತ್ತು ಮಿತ್ರಕಾರ್ಯ

b)

ಕಾಮ. ಕ್ರೋಧ. ಮದ. ಲೋಭ. ಮೋಹ

c)

ಧರ್ಮ ಅರ್ಥ ಕಾಮ ಮೋಕ್ಷ ಶಾಂತಿ

d)

ಆಚಾರ-ವಿಚಾರ ಸತ್ಯ ನ್ಯಾಯ ಅಹಿಂಸೆ

20.

ದುರ್ಗಸಿಂಹನು ಯಾರ ಆಸ್ಥಾನದಲ್ಲಿದ್ದ ದಂಡನಾಯಕ ಮತ್ತು ಸಂಧಿವಿಗ್ರಹಿ ಆಗಿದ್ದನು

a)

ಅರಿಕೇಸರಿ

b)

ನರಸಿಂಹವರ್ಮ

c)

ಸತ್ಯಾಶ್ರಯ ಇರಿವಬೆಡಂಗ

d)

ಒಂದನೇ ಜಗದೇಕಮಲ್ಲ

21.

ಈತನ ಮಾತು ಅಶ್ರುತಪೂರ್ವಮೀ ಚೋದ್ಯಮಂ ನೋಡುವಮೆಂದು ಹೇಳಿದವರು.

a)

ಧರ್ಮಾಧಿಕರಣರು

b)

ದುಷ್ಟಬುದ್ಧಿ

c)

ಧರ್ಮಬುದ್ಧಿ

d)

ದೈವಗಳು

22.

ಧರ್ಮ ಬದ್ಧಿ ಬೆಳಗಿನ ಹೊತ್ತನ್ನು ಹೇಗೆ ಕಳೆದನು

a)

ದೇವ, ಗುರು, ದ್ವಿಜ ಪೂಜೆಗಳನ್ನು ಮಾಡುತ್ತ ಕಳೆದನು

b)

ಗೊಂದಲಮಯ ಮನಸ್ಥಿತಿಯಿಂದ ಕಳೆದನು

c)

ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಳಗಿನ ಹೊತ್ತು ಮಲಗಿದ್ದನು

d)

ಮೇಲಿನ ಯಾವುದೂ ಅಲ್ಲ

23.

ಆಲದ ಮರದ ಪೊಟರೆಯೊಳಗೆ ಅಡಗಿದ್ದು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ಯಾರು ಹೇಳಿದರು

a)

ದುಷ್ಟಬುದ್ಧಿ

b)

ಧರ್ಮಾಧಿಕರಣರು

c)

ಪ್ರೇಮಮತಿ

d)

ಯಕ್ಷಾದಿ ದೇವತೆಗಳು

24.

ಧರ್ಮಾಧಿಕರಣರು ಯಾರಿಗೆ ಅಷ್ಟವಿಧಾರ್ಚನೆಯನ್ನು ಮಾಡಿದರು

a)

ದುಷ್ಟ ಬುದ್ದಿಗೆ

b)

ಧರ್ಮ ಬುದ್ಧಿಗೆ

c)

ನಾಗರಹಾವಿಗೆ

d)

ವಟವೃಕ್ಷಕ್ಕೆ

25.

ದುಷ್ಟಬುದ್ಧಿಯ ತಂದೆ ಯಾರು

a)

ಯಶೋಧರ

b)

ಯಶೋಮತಿ

c)

ಅಮೃತಮತಿ

d)

ಪ್ರೇಮಮತಿ

26.

"ಹುಸಿಯದ ಬೇಹಾರಿಯೇ ಇಲ್ಲ" ಎಂದವರು ಯಾರು

a)

ಧರ್ಮಬುದ್ಧಿ

b)

ದುಷ್ಟಬುದ್ಧಿ

c)

ಪ್ರೇಮಮತಿ

d)

ಧರ್ಮಾಧಿಕರಣರು

27.

ನೀನಾದರೂ ಯಕ್ಷಾದಿ ದಿವ್ಯದೇವತೆಗಳು ವಾಸಮಾಡುವ ವೃಕ್ಷವಾಗಿರುವೇ. ಆದ್ದರಿಂದ ನಿನ್ನನ್ನು ಸಾಕ್ಷಿಮಾಡಿ ಕೇಳುವೆವು. ನೀನು ತಪ್ಪದೆ ನುಡಿ ಎಂದು ಯಾರು ಯಾರಿಗೆ ಹೇಳಿದರು

a)

ದುಷ್ಟಬುದ್ಧಿ ವಟವೃಕ್ಷಕ್ಕೆ

b)

ಧರ್ಮಬುದ್ಧಿ ವಟವೃಕ್ಷಕ್ಕೆ

c)

ಪ್ರೇಮಮತಿ ವಟವೃಕ್ಷಕ್ಕೆ

d)

ಧರ್ಮಾಧಿಕರಣರು ವಟವೃಕ್ಷಕ್ಕೆ

28.

ಧರ್ಮಬುದ್ಧಿ ಮರದ ಪೊಟರೆಯೊಳಗೆ ಹೇಗೆ ಕಿಚ್ಚನ್ನು ಇಕ್ಕಿದನು

a)

ವಟವೃಕ್ಷವು ಸುಡುವಂತೆ

b)

ದುಷ್ಟಬುದ್ಧಿಯ ಮನೆಗೆ ಕಿಚ್ಚನಿಕ್ಕುವಂತೆ

c)

ಆಲದ ಮರದ ಧಗಧಗನೆ ಉರಿಯುವಂತೆ

d)

ಉಸಿರುಗಟ್ಟಿ ಸಾಯುವಂತೆ

29.

ಧರ್ಮಬುದ್ಧಿ ವಟವೃಕ್ಷಕ್ಕೆ ಬಲವಂದಾಗ ಅಲ್ಲಿ ಕಂಡದ್ದೇನು

a)

ನಾಗರಹಾವು

b)

ಮನುಷ್ಯ ಸಂಚಾರ

c)

ಹೊನ್ನು

d)

ದುಷ್ಟಬುದ್ಧಿ

30.

ಪೊನ್ನನ್ನೊಂದು ಪನ್ನಗಂ ಸುತ್ತಿ ಪಟ್ಟಿಟ್ಟಿರ್ದೊಡೆ ಕೊಳಲಂಜಿ ಪೋದೆಂ " ಎಂದು ಧರ್ಮಾಧಿಕರಣರಿಗೆ ಹೇಳಿದವರು ಯಾರು

a)

ದುಷ್ಟಬುದ್ಧಿ

b)

ಧರ್ಮಬುದ್ಧಿ

c)

ಪ್ರೇಮ ಮತಿ

d)

ದುರ್ಗಸಿಂಹ