wayground logo

Free Printable Worksheets

Font size

S
M
L
XL
Worksheets

೧೦ನೇ ತರಗತಿ, ಗದ್ಯ ಪಾಠ-೭ ವೃಕ್ಷಸಾಕ್ಷಿ ಪಾಠದ ವ್ಯಾಕರಣಾಂಶಗಳು.

Total questions: 20

Worksheet time: 15mins

Name
Class
Date
1.

1. ಪದ್ಯ ರಚನಾ ವಿನ್ಯಾಸವನ್ನು ತಿಳಿಸುವ ಶಾಸ್ತ್ರವನ್ನು ಹೀಗೆನ್ನುವರು;

a)

1. ಅಲಂಕಾರ

b)

2. ಪದ್ಯ ರಚನಾ ಶಾಸ್ತ್ರ

c)

3. ಸಾಹಿತ್ಯ ಶಾಸ್ತ್ರ

d)

4. ಛಂದಸ್ಸು

2.

2. ಛಂದಸ್ಸಿನಲ್ಲಿ ಬರುವ ನಾಲ್ಕು ಪ್ರಮುಖ ಅಂಗಗಳು;

a)

1. ಪಾದ, ಪ್ರಾಸ, ಯತಿ, ಗಣ

b)

2. ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ

c)

3. ಉತ್ಪಲ, ಚಂಪಕ, ಸೃಗ್ಧರಾ, ಮಹಾ ಸೃಗ್ಧರಾ

d)

4. ಗಣ, ಪಾದ, ಮಹಾಪಾದ, ಮಹಾ ಪದ್ಮ

3.

3. ನಾಲ್ಕು ಸಾಲಿನ ಪದ್ಯವನ್ನು ಹೀಗೆನ್ನುವರು;

a)

1. ಷಟ್ಪದಿ

b)

2. ಕಂದ

c)

3. ಚೌಪದಿ

d)

4. ವೃತ್ತ

4.

4. ಷಟ್ಪದಿ - ಎಂದರೆ;

a)

1. ಎಂಟು ಸಾಲಿನ ಪದ್ಯ

b)

2. ನಾಲ್ಕು ಸಾಲಿನ ಪದ್ಯ

c)

3. ಆರು ಸಾಲಿನ ಪದ್ಯ

d)

4. ಹನ್ನೆರಡು ಸಾಲಿನ ಪದ್ಯ

5.

5. ಪದ್ಯದ ಪ್ರತಿ ಪಾದದ ಆದಿ, ಮಧ್ಯ, ಅಂತ್ಯದಲ್ಲಿ ಒಂದು ನಿರ್ದಿಷ್ಟ ವ್ಯಂಜನವು ನಿಯತವಾಗಿ ಪುನರಾವರ್ತನೆಯಾದರೆ ಅದು;

a)

1. ಯತಿ

b)

2. ಪ್ರಾಸ

c)

3. ಗಣ

d)

4. ಅಕ್ಷರ ವಿನ್ಯಾಸ

6.

6. ಪ್ರಾಸದಲ್ಲಿ ---------- ವಿಧಗಳಿವೆ;

a)

1. 3

b)

2. 2

c)

3. 5

d)

4. 4

7.

ಆದಿಪ್ರಾಸವಂದರೆ;

a)

1. ಪದ್ಯದ ಕೊನೆಯ ಎರಡು ಸ್ವರಗಳ ನಡುವಿನ ವ್ಯಂಜನ ಒಂದೇ ಆಗಿರುವುದು.

b)

2. ಪದ್ಯದ ಪ್ರತಿ ಸಾಲಿನ ಆರಂಭದಲ್ಲಿ ಬಂದ ವ್ಯಂಜನವು ಮಧ್ಯದಲ್ಲೂ ಪುನರಾವರ್ತನೆಯಾಗುವುದು.

c)

3. ಪದ್ಯದ ಪ್ರತಿ ಸಾಲಿನ ಮೊದಲೆರಡು ವ್ಯಂಜನಗಳ ನಡುವಿನ ಸ್ವರ ಒಂದೇ ಆಗಿರುವುದು.

d)

4. ಪದ್ಯದ ಪ್ರತಿ ಸಾಲಿನ ಮೊದಲೆರಡು ಸ್ವರಗಳ ನಡುವಿನ ವ್ಯಂಜನ ಒಂದೇ ಆಗಿರುವುದು.

8.

8. 'ಪುಟ್ಟಿದ ನೂರ್ವರುಂಮೆನ್ನೊಡ

ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ' ಕಂದಪದ್ಯದ ಈ ಎರಡು ಸಾಲುಗಳಲ್ಲಿ ಕಂಡು ಬರುವ ಪ್ರಾಸವು;

a)

1. ಅಂತ್ಯ ಪ್ರಾಸ

b)

2. ಮಧ್ಯ ಪ್ರಾಸ

c)

3. ಆದಿ ಪ್ರಾಸ

d)

4. ಗಜ ಪ್ರಾಸ

9.

9. ಸಿಂಹ, ಗಜ, ವೃಷಭ, ಅಜ, ಶರಭ, ಹಯ ಇವು ಈ ಪ್ರಾಸದ ಆರು ವಿಧಗಳು;

a)

1. ಆದಿ ಪ್ರಾಸ

b)

2. ಮಧ್ಯ ಪ್ರಾಸ

c)

3. ಅಂತ್ಯ ಪ್ರಾಸ

d)

4. ಪ್ರಾಸ

10.

10.' ಅತಿಕುಟಿಲಮನಂ ಧನಲು

ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ'

ಕಂದ ಪದ್ಯದ ಮೇಲಿನ ಎರಡು ಸಾಲುಗಳಲ್ಲಿ ಆದಿ ಪ್ರಾಸದ ಈ ವಿಧವು ಕಂಡು ಬರುತ್ತದೆ;

a)

1. ಅಜ ಪ್ರಾಸ

b)

2. ಶರಭ ಪ್ರಾಸ

c)

3. ಸಿಂಹ ಪ್ರಾಸ

d)

4. ಹಯ ಪ್ರಾಸ

11.

ಪ್ರಾಸಾಕ್ಷರದ ಹಿಂದಿನ ಸ್ವರವು ಹೃಸ್ವವಾಗಿದ್ದರೆ ಅದು;

a)

1. ಗಜ ಪ್ರಾಸ

b)

2. ವೃಷಭ ಪ್ರಾಸ

c)

3. ಶರಭ ಪ್ರಾಸ

d)

4. ಸಿಂಹ ಪ್ರಾಸ

12.

12. ಗಜ ಪ್ರಾಸವೆಂದರೆ;

a)

1. ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿರುವುದು;

b)

2. ಪ್ರಾಸಾಕ್ಷರದ ಹಿಂದಿನ ಸ್ವರವು ಹೃಸ್ವವಾಗಿರುವುದು;

c)

3. ಪ್ರಾಸಾಕ್ಷರದ ಹಿಂದೆ ಅನುಸ್ವಾರವಿರುವುದು.

d)

4. ಪ್ರಾಸಾಕ್ಷರದ ಹಿಂದೆ ವಿಸರ್ಗವಿರುವುದು.

13.

13. ' ಏನು ಹೇಳೈ ಕರ್ಣ ಚಿತ್ತ

ಗ್ಲಾನಿ ಯಾವುದು ಮನಕೆ ಕುಂತೀ

ಸೂನುಗಳ ಬೆಸಕೈಸಿಕೊಂಬುದು ಸೇರದೇ ನಿನಗೆ'- ಷಟ್ಪದಿಯ ಮೇಲಿನ ಸಾಲುಗಳಲ್ಲಿ ಕಾಣುವ ಆದಿ ಪ್ರಾಸದ ವಿಧ;

a)

1. ಅಜ ಪ್ರಾಸ

b)

2. ಗಜ ಪ್ರಾಸ

c)

3. ಸಿಂಹ ಪ್ರಾಸ

d)

4. ಹಯ ಪ್ರಾಸ

14.

15. ವೃಷಭ ಪ್ರಾಸವೆಂದರೆ;

a)

1. ಪ್ರಾಸಾಕ್ಷರದ ಹಿಂದಿನ ಅಕ್ಷರವು ಹೃಸ್ವವಾಗಿರುವುದು.

b)

2. ಪ್ರಾಸಾಕ್ಷರದ ಹಿಂದೆ ವಿಸರ್ಗವಿರುವುದು.

c)

3. ಪ್ರಾಸಾಕ್ಷರದ ಹಿಂದಿನ ಸ್ವರವು ದೀರ್ಘವಾಗಿರುವುದು.

d)

ಪ್ರಾಸಾಕ್ಷರದ ಹಿಂದಿನ ಅಕ್ಷರವು ಅನುಸ್ವಾರದಿಂದ ಕೂಡಿರುವುದು.

15.

15.' ಅಂತೆಂಬನಾರ್ಗೆ ಪಿರಿದುಂ

ಬ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ'- ಈ ಮೇಲಿನ ಕಂದ ಪದ್ಯದ ಸಾಲುಗಳಲ್ಲಿ ಕಾಣುವ ಆದಿ ಪ್ರಾಸದ ವಿಧ;

a)

1. ವೃಷಭ ಪ್ರಾಸ

b)

2. ಶರಭ ಪ್ರಾಸ

c)

3. ಸಿಂಹ ಪ್ರಾಸ

d)

4. ಗಜ ಪ್ರಾಸ

16.

16. ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ ಅದು;

a)

1. ಸಿಂಹ ಪ್ರಾಸ

b)

2. ಅಜ ಪ್ರಾಸ

c)

3. ಶರಭ ಪ್ರಾಸ

d)

4. ಹಯ ಪ್ರಾಸ

17.

17. ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು;

a)

1. ಶರಭ ಪ್ರಾಸ

b)

2. ಹಯ ಪ್ರಾಸ

c)

3. ಅಜ ಪ್ರಾಸ

d)

4. ವೃಷಭ ಪ್ರಾಸ

18.

18. ' ಪುಟ್ಟಿ ಪೊದಳ್ದುದು ಸತ್ತರ್

ಪುಟ್ಟರೆ ಪಾಂಡವರೊಳಿರಿದು ಛಲಮನೆ ಮೆರೆವೆಂ'- ಕಂದ ಪದ್ಯದ ಈ ಮೇಲಿನ ಸಾಲುಗಳು ಆದಿಪ್ರಾಸದ ಈ ವಿಧಕ್ಕೆ ಉದಾ: ;

a)

1. ಹಯ ಪ್ರಾಸ

b)

2. ಶರಭ ಪ್ರಾಸ

c)

3. ಅಜ ಪ್ರಾಸ

d)

4. ವೃಷಭ ಪ್ರಾಸ

19.

19. ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರವಾಗಿದ್ದರೆ ಅದು;

a)

1. ಸಿಂಹ ಪ್ರಾಸ

b)

2. ವೃಷಭ ಪ್ರಾಸ

c)

3. ಶರಭ ಪ್ರಾಸ

d)

4. ಹಯ ಪ್ರಾಸ

20.

20. ಯತಿ- ಎಂದರೆ;

a)

1. ಉಸಿರು ತೆಗೆದುಕೊಳ್ಳಲು ಇರುವ ಸ್ಥಾನ.

b)

2. ಹಾಡುವಾಗ ಧ್ವನಿ ಏರಿಳಿತಕ್ಕೆ ಇರುವ ಸ್ಥಾನ.

c)

3. ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ಸ್ಥಾನ.

d)

4. ಪದಗಳ ನಿಲುಗಡೆಯ ಸ್ಥಾನ.