Worksheetsಧಾತುಗಳ ಆವರ್ತನೀಯ ವರ್ಗೀಕರಣ
Total questions: 10
Worksheet time: 5mins
ಮೆಂಡೆಲಿವರ ಆವರ್ತಕ ನಿಯಮವನ್ನು ಗುರ್ತಿಸಿ.
ಧಾತುಗಳ ಗುಣಗಳು ಅವಗಳ ಪರಮಾಣುರಾಶಿಯ ಆವರ್ತನೀಯ ಪುನರಾವರ್ತನೆಗಳು.
ಧಾತುಗಳ ಗುಣಗಳು ಅವಗಳ ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು.
ಧಾತುಗಳ ಗುಣಗಳು ಅವಗಳ ಪರಮಾಣುರಾಶಿಮತ್ತು ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು.
ಆಧುನಿಕ ಆವರ್ತಕ ನಿಯಮ ಯಾವುದು?
ಧಾತುಗಳ ಗುಣಗಳು ಅವಗಳ ಪರಮಾಣುರಾಶಿಯ ಆವರ್ತನೀಯ ಪುನರಾವರ್ತನೆಗಳು.
ಧಾತುಗಳ ಗುಣಗಳು ಅವಗಳ ಪರಮಾಣುಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು.
ಧಾತುಗಳ ಗುಣಗಳು ಅವಗಳ ಪರಮಾಣುರಾಶಿ ಮತ್ತು ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು.
ಪರಮಾಣು ಗಾತ್ರ ಎಂದರೇನು?
ಒಂದು ಪರಮಾಣುವಿನ ಬೀಜಕೇಂದ್ರದಿಂದ ಅತ್ಯಂತ ಹೊರಕವಚದ ನಡುವಿನ ಅಂತರವನ್ನು ಪರಮಾಣು ಗಾತ್ರ ಎನ್ನುವರು.
ಒಂದು ಪರಮಾಣುವಿನ ಬೀಜಕೇಂದ್ರದಿಂದ ಅತ್ಯಂತ ಒಳ ಕವಚದ ನಡುವಿನ ಅಂತರವನ್ನು ಪರಮಾಣು ಗಾತ್ರ ಎನ್ನುವರು.
ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ಗಾತ್ರ ಕಡಿಮೆಯಾಗುತ್ತದೆ ಏಕೆ?
ಎಡದಿಂದ ಬಲಕ್ಕೆ ಸಾಗಿದಂತೆ ಇಲೆಕ್ಟ್ರಾನುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ ನ್ಯೂಕ್ಲಿಯಸ್ನ ಆವೇಶವು ಹೆಚ್ಚಾಗಿ ನ್ಯೂಕ್ಲಿಯಸ್ ಹೊರಕವಚದಲ್ಲಿನ ಇಲೆಕ್ಟ್ರಾನುಗಳನ್ನು ತನ್ನತ್ತ ಸೆಳೆಯುವುದರಿಂದ
ಎಡದಿಂದ ಬಲಕ್ಕೆ ಸಾಗಿದಂತೆ ಕವಚಗಳ ಸಂಖ್ಯೆ ಕಡಿಮೆಯಾಗುವುದರಿಂದ.
ವರ್ಗದ ಕೆಳಗೆ ಹೋದಂತೆ ಪರಮಾಣು ಗಾತ್ರ ಕಡಿಮೆಯಾಗುವುದೇ?
ಇಲ್ಲ. ಏಕೆಂದರೆ ವರ್ಗದ ಕೆಳಗೆ ಸಾಗಿದಂತೆ ಕವಚಗಳ ಸಂಖ್ಯೆ ಹೆಚ್ಚಾಗಿ ಪರಮಾಣುಗಾತ್ರ ಹೆಚ್ಚಾಗುತ್ತದೆ.
ಹೌದು. ಏಕೆಂದರೆ ಧಾತುಗಳ ಹೊರಕವಚದಲ್ಲಿ ಒಂದೇ ಸಂಖ್ಯೆಯ ಇಲೆಕ್ಟ್ರಾನುಗಳು ಇರುವುದರಿಂದ ಪರಮಾಣು ಗಾತ್ರ ಕಡಿಮೆಯಾಗುತ್ತದೆ.
ಇಲ್ಲ. ಪರಮಾಣುಗಾತ್ರದಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ,
ಮೆಂಡೆಲಿವರ ಆವರ್ತಕೋಷ್ಟಕದ ಇತಿಮಿತಿಯನ್ನು ಗುರುತಿಸಿ?
ವರ್ಗೀಕರಣ ಮಾಡಲು ಧಾತುಗಳ ಗುಣಲಕ್ಷಣವನ್ನು ಆಧಾರವಾಗಿಟ್ಟುಕೊಂಡರು.
ಆ ಕಾಲಕ್ಕೆ ಗೊತ್ತಿಲ್ಲದ ಧಾತುಗಳಿಗೆ ಖಾಲಿ ಜಾಗ ಬಿಟ್ಟರು.
ಪರಮಾಣು ರಾಶಿಯನ್ನು ಆಧರಿಸಿ ವರ್ಗೀಕರಣ ಮಾಡಿದರು.
ಮೆಂಡೆಲಿವರು ಊಹಿಸಿದ್ದ ಏಕ ಅಲ್ಯೂಮಿನಿಯಂ ಧಾತು ಯಾವುದು?
ಸ್ಕ್ಯಾಂಡಿಯಂ
ಜರ್ಮೇನಿಯಂ
ಗ್ಯಾಲಿಯಂ
ಧಾತುವಿನ ವೇಲೆನ್ಸಿಯನ್ನು ನಿರ್ಧರಿಸುವ ಅಂಶ ಯಾವುದು?
ಪರಮಾಣುವಿನ ಅತ್ಯಂತ ಕೊರಕವಚದಲ್ಲಿತುವ ಇಲೆಕ್ಟ್ರಾನುಗಳು
ಪರಮಾಣುವಿನಲ್ಲಿರುವ ಒಟ್ಟು ಇಲೆಕ್ಟ್ರಾನುಗಳು
ಧಾತುವಿನ ಪರಮಾಣು ರಾಶಿ
ಒಂದು ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2, 8, 7 ಆದರೆ ಅದರ ಪರಮಾಣು ಸಂಖ್ಯೆ ಎಷ್ಟು?
7
2
8
17
ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಇಲೆಕ್ಟ್ರಾನುಗಳನ್ನು ಕಳೆದುಕೊಳ್ಳುವ ಗುಣ ಕಡಿಮೆಯಾಗುತ್ತದೆ ಏಕೆ?
ಅತ್ಯಂತ ಹೊರಕವಚದ ಮೇಲೆ ವರ್ತಿಸುವ ಪರಿಣಾಮಕಾರಿ ನ್ಯೂಕ್ಲಿಯಾರ್ ಆವೇಶ ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಹೆಚ್ಚಾಗುವುದರಿಂದ.
ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ಗಾತ್ರ ಕಡಿಮೆಯಾಗುವುದರಿಂದ.
