Worksheetsಪ್ರಥಮ ಭಾಷೆ ಕನ್ನಡ, 8 ಮತ್ತು 9ನೇ ತರಗತಿ ಕನ್ನಡ ವ್ಯಾಕರಣ
Total questions: 10
Worksheet time: 5mins
1. ಕಣ್ + ಪನಿ = ಕಂಬನಿ = ------------ ಸಂಧಿ
(ಕಣ್+ 'ಪ್' ಬಗಲಿಗೆ (ಬ್)+ಅ=(ಬ)ನಿ)
1. ಆಗಮ
2. ಲೋಪ
3. ಆದೇಶ
4. ಜಶ್ತ್ವ
2. ಮೆಲ್ + ಮಾತು= ಮೆಲ್ವಾತು= ------------ ಸಂಧಿ
(ಮೆಲ್+'ಮ್' ಬದಲಿಗೆ (ವ್)+ಆ=(ಲ್ವಾ)ತು)
1. ಆದೇಶ
2. ಆಗಮ
3. ಲೋಪ
4. ಜಶ್ತ್ವ
3. ಕೆನೆ + ಪಾಲು = ಕೆನೆವಾಲು= ------- ಸಂಧಿ
(ಕೆನೆ +ಪ್ ಬದಲಿಗೆ (ವ್)+ಆ=ವಾಲು)
1. ಆಗಮ
2. ಆದೇಶ
3. ಜಶ್ತ್ವ
4. ಯಣ್
4. ಕಡು + ಬೆಳ್ಪು= ಕಡುವೆಳ್ಪು= ------------ ಸಂಧಿ.
( ಕಡು + ಬ್ ಬದಲಗೆ (ವ್)+ಎ= ವೆಳ್ಪು)
1. ಯಣ್
2. ಆಗಮ
3. ಗುಣ
4. ಆದೇಶ
5. ಸಂಸ್ಕೃತ ಸಂಧಿ ಎಂದರೆ;
1. ಎರಡು ಸಂಸ್ಕೃತ ಪದಗಳು ಸೇರಿ ಆಗುವ ಸಂಧಿ.
2. ಸಂಸ್ಕೃತ ಮತ್ತು ಕನ್ನಡ ಪದಗಳು ಸೇರಿ ಆಗುವ ಸಂಧಿ.
3. ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಆಗುವ ಸಂಧಿ.
4. ಎರಡು ಅಕ್ಷರಗಳು ಸೇರಿ ಆಗುವ ಸಂಧಿ.
6. ಸಂಸ್ಕೃತ ಸಂಧಿಯ ಪ್ರಕಾರಗಳು ------
1. 3
2. 2
3. 4
4. 5
7. ಸಂಸ್ಕೃತ ಸ್ವರ ಸಂಧಿ ಮತ್ತು ಸಂಸ್ಕೃತ ವ್ಯಂಜನ ಸಂಧಿ ಇವು --------ಯ 2 ಪ್ರಕಾರಗಳು.
1. ಕನ್ನಡ ಸಂಧಿ
2. ಕನ್ನಡ ವ್ಯಂಜನ ಸಂಧಿ
3. ಸಂಸ್ಕೃತ ಸಂಧಿ
4. ಕನ್ನಡ ಸ್ವರ ಸಂಧಿ
8. ಸವರ್ಣ ದೀರ್ಘ, ಗುಣ, ವೃದ್ಧಿ, ಯಣ್ ಇವು ------------ಯ 4 ಪ್ರಕಾರಗಳು.
1. ಕನ್ನಡ ಸ್ವರ ಸಂಧಿ
2. ಸಂಸ್ಕೃತ ಸ್ವರ ಸಂಧಿ
3. ಕನ್ನಡ ಸಂಧಿ
4. ಸಂಸ್ಕೃತ ಸಂಧಿ
9. ನಮ್ಮ ಅಭ್ಯಾಸಕ್ಕಿರುವ ಸಂಸ್ಕೃತ ವ್ಯಂಜನ ಸಂಧಿಗಳು ----------
1. 2
2. 4
3. 5
4. 3
10. ಜಶ್ತ್ವ, ಶ್ಚುತ್ವ, ಅನುನಾಸಿಕ ಇವು ನಮ್ಮ ಅಭ್ಯಾಸಕ್ಕಿರುವ -----------
1. ಕನ್ನಡ ವ್ಯಂಜನ ಸಂಧಿಗಳು
2. ಕನ್ನಡ ಸ್ವರ ಸಂಧಿಗಳು
3. ಕನ್ನಡ ಸಂಧಿಗಳು
4. ಸಂಸ್ಕೃತ ಸಂಧಿಗಳು
