NEW
Font size
Worksheetsಪ್ರ. ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ
Total questions: 10
Worksheet time: 5mins
1. ಉಸಿರು + ಆಡು= ಉಸಿರಾಡು, ಊರು + ಊರು = ಊರೂರು ಈ ಸಂಧಿಗಳಲ್ಲಿ ಪೂರ್ವ ಪದದ ಕೊನೆಯ ಸ್ವರವು ಲೋಪವಾಗಿ ಪದದ ಅರ್ಥವು ಕೆಡದೇ ಇರುವುದರಿಂದ ಈ ಸಂಧಿಯು ---- ಸಂಧಿಯಾಗಿದೆ.
1. ಆಗಮ
2. ಲೋಪ
3. ಆದೇಶ
4. ಗುಣ
2. ಸ್ವರದ ಮುಂದೆ ಸ್ವರ ಬಂದು ಸಂಧಿ ಕಾರ್ಯ ನಡೆಯುವಾಗ ಪೂರ್ವಪದದ ಕೊನೆಯ ಸ್ವರ ಮತ್ತು ಉತ್ತರ ಪದದ ಮೊದಲ ಸ್ವರಗಳ ನಡುವೆ 'ಯ್' ಅಥವಾ 'ವ್'ವ್ಯಂಜನವು ಹೊಸದಾಗಿ ಆಗಮವಾದರೆ ಅದು ------------ ಸಂಧಿ.
1. ಆದೇಶ
2. ಆಗಮ
3.ಲೋಪ
4. ಯಣ್
3. ಕೈ + ಆಡಿಸು = ಕೈಯಾಡಿಸು = ------------ಸಂಧಿ
(ಕೈ+( 'ಯ್' ಆಗಮ) + ಆಡಿಸು)
1. ಲೋಪ
2. ಆಗಮ
3. ಆದೇಶ
4. ಯಣ್
4. ಗುರು + ಅನ್ನು = ಗುರುವನ್ನು = ---------- ಸಂಧಿ
(ಗುರು + ('ವ್' ಆಗಮ) + ಅನ್ನು)
1. ಆಗಮ
2. ಆದೇಶ
3. ಯಣ್
4. ಲೋಪ
5. ಸ್ವರ ಮತ್ತು ವ್ಯಂಜನ ಅಥವಾ ವ್ಯಂಜನ ಮತ್ತು ಸ್ವರ ಅಥವಾ ವ್ಯಂಜನ , ವ್ಯಂಜನಗಳು ಸೇರಿ ಆಗುವ ಸಂಧಿ ------------
1. ಸ್ವರ ಸಂಧಿ
2. ವ್ಯಂಜನ ಸಂಧಿ
3. ಕನ್ನಡ ಸ್ವರ ಸಂಧಿ
4. ಕನ್ನಡ ವ್ಯಂಜನ ಸಂಧಿ
6. ಇದು ಕನ್ನಡ ವ್ಯಂಜನ ಸಂಧಿಯಾಗಿದೆ;
1. ಜಶ್ತ್ವ ಸಂಧಿ
2. ಆಗಮ ಸಂಧಿ
3. ಲೋಪ ಸಂಧಿ
4. ಆದೇಶ ಸಂಧಿ
7. ಸ್ವರ ಮತ್ತು ವ್ಯಂಜನ ಅಥವಾ ವ್ಯಂಜನ ಮತ್ತು ಸ್ವರ ಅಥವಾ ವ್ಯಂಜನ , ವ್ಯಂಜನಗಳು ಸೇರಿ ಆಗುವ ಸಂಧಿ ------------
1. ಸ್ವರ ಸಂಧಿ
2. ವ್ಯಂಜನ ಸಂಧಿ
3. ಕನ್ನಡ ಸ್ವರ ಸಂಧಿ
4. ಕನ್ನಡ ವ್ಯಂಜನ ಸಂಧಿ
8. ಸಂಧಿಕಾರ್ಯ ನಡೆಯುವಾಗ ಪೂರ್ವಪದದ ಕೊನೆಯಲ್ಲಿ ಸ್ವರ ಅಥವಾ ವ್ಯಂಜನವಿದ್ದು ಉತ್ತರ ಪದದ ಆದಿಯಲ್ಲಿ ಬರುವ ಕ, ತ, ಪ ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗುತ್ತವೆ. ಕೆಲವೊಮ್ಮೆ ಪ, ಬ, ಮಗಳಿಗೆ 'ವ' ಕಾರವು ಆದೇಶವಾಗಿ ಬಂದರೆ ಅದು ------- ಸಂಧಿ.
1. ಆಗಮ
2. ಲೋಪ
3. ಆದೇಶ
4. ಜಶ್ತ್ವ
9. ತಲೆ + ತೂಗು = ತಲೆದೂಗು = ----------- ಸಂಧಿ
(ತಲೆ + 'ತ್' ವ್ಯಂಜನ ಹೋಗಿ (ದ್+ಊ=ದೂ)+ಗು)
1. ಜಶ್ತ್ವ
2. ಆಗಮ
3. ಲೋಪ
4. ಆದೇಶ
10. ಹುಲ್ಲು + ಕಾವಲು = ಹುಲ್ಲುಗಾವಲು = ------ ಸಂಧಿ
ಹುಲ್ಲು+( 'ಕ್' ಬದಲಿಗೆ ಗ್ +ಆ=ಗಾ)ವಲು
1. ಆದೇಶ
2. ಆಗಮ
3. ಲೋಪ
4. ಜಶ್ತ್ವ
